Air India: ಏರ್​ ಇಂಡಿಯಾದ ಬಾಕಿ ಬಿಲ್​ ಮೊತ್ತ 16 ಸಾವಿರ ಕೋಟಿ ರೂಪಾಯಿ AIAHLಗೆ ವರ್ಗಾಯಿಸಬೇಕಿದೆ ಸರ್ಕಾರ

ಏರ್​ ಇಂಡಿಯಾದ ಖಾಸಗೀಕರಣ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರವು ಬಾಕಿ ಉಳಿದಿರುವ ಬಿಲ್​ಗಳಿಗಾಗಿ 16000 ಕೋಟಿ ರೂಪಾಯಿಯನ್ನು ಎಐಎಎಚ್​ಎಲ್​ಗೆ ವರ್ಗಾವಣೆ ಮಾಡಬೇಕಾಗುತ್ತದೆ.

Air India: ಏರ್​ ಇಂಡಿಯಾದ ಬಾಕಿ ಬಿಲ್​ ಮೊತ್ತ 16 ಸಾವಿರ ಕೋಟಿ ರೂಪಾಯಿ AIAHLಗೆ ವರ್ಗಾಯಿಸಬೇಕಿದೆ ಸರ್ಕಾರ
ಏರ್​ ಇಂಡಿಯಾ ವಿಮಾನ (ಸಾಂದರ್ಭಿಕ ಚಿತ್ರ)
Follow us
TV9 Web
| Updated By: Srinivas Mata

Updated on:Oct 11, 2021 | 8:22 PM

ಏರ್​ ಇಂಡಿಯಾದಿಂದ ಬಾಕಿ ಉಳಿದಿರುವ 16,000 ಕೋಟಿ ರೂಪಾಯಿಯಷ್ಟು ಇಂಧನ ಬಿಲ್​ಗಳು ಮತ್ತು ಪೂರೈಕೆದಾರರಿಗೆ ಪಾವತಿ ಮಾಡಬೇಕಿರುವ ಇತರ ಬಾಕಿಯನ್ನು ಸರ್ಕಾರವು ವರ್ಗಾವಣೆ ಮಾಡಲಿದೆ. ನಷ್ಟ ಅನುಭವಿಸುತ್ತಿರುವ ಏರ್​ ಇಂಡಿಯಾವನ್ನು ಸ್ಪೆಷಲ್ ಪರ್ಪಸ್ ವೆಹಿಕಲ್​ನಲ್ಲಿ ಟಾಟಾ ಸಮೂಹಕ್ಕೆ ಹಸ್ತಾಂತರ ಮಾಡುವ ಮುನ್ನ ಸರ್ಕಾರದಿಂದ ಈ ವರ್ಗಾವಣೆಯನ್ನು ಮಾಡಲಾಗುವುದು ಎಂದು ಪಿಟಿಐ ಸುದ್ದಿ ಸಂಸ್ಥೆಗೆ ಹಿರಿಯ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಕಳೆದ ಶುಕ್ರವಾರದಂದು ಸರ್ಕಾರವು ಘೋಷಣೆ ಮಾಡಿದ ಪ್ರಕಾರ, ಟಾಟಾ ಸಮೂಹವು ಏರ್​ ಇಂಡಿಯಾಗಾಗಿ 18,000 ಕೋಟಿ ರೂಪಾಯಿಗೆ ಬಿಡ್ ಮಾಡಿತ್ತು. ಆಗಸ್ಟ್ 31ಕ್ಕೆ ಏರ್​ ಇಂಡಿಯಾಗೆ ಒಟ್ಟಾರೆ ಸಾಲ 61,562 ಕೋಟಿ ರೂಪಾಯಿ ಇತ್ತು. ಟಾಟಾ ಸಮೂಹವು ಏರ್​ ಇಂಡಿಯಾದ 15,300 ಕೋಟಿ ರೂಪಾಯಿ ಸಾಲವನ್ನು ತೆಗೆದುಕೊಳ್ಳಲಿದೆ. ಬಾಕಿ 46,262 ಕೋಟಿ ರೂಪಾಯಿಯನ್ನು ಸರ್ಕಾರದ ಏರ್​ ಇಂಡಿಯಾ ಅಸೆಟ್ ಹೋಲ್ಡಿಂಗ್ ಲಿಮಿಟೆಡ್ (AIAHL) ತೆಗೆದುಕೊಳ್ಳಲಿದೆ. ಏರ್​ಲೈನ್ಸ್​ನ ಅರ್ಧದ ತನಕ ಸಾಲವನ್ನು ಹೋಲ್ಡ್ ಮಾಡಲು ವಿಶೇಷ ಕಂಪೆನಿ ಸ್ಥಾಪನೆ ಮಾಡಲಾಗುವುದು. ಇದರಲ್ಲಿ ನಾಲ್ಕು ಘಟಕ ಮತ್ತು ನಾನ್-ಕೋರ್ ಆಸ್ತಿಯು ಇದೆ. ಟಾಟಾ ಸಮೂಹದಿಂದ ಸರ್ಕಾರಕ್ಕೆ 2700 ಕೋಟಿ ರೂಪಾಯಿ ನಗದಾಗಿ ಪಾವತಿಸಬೇಕಾಗುತ್ತದೆ.

2019ರಲ್ಲಿ ಏರ್​ ಇಂಡಿಯಾ ಮಾರಾಟಕ್ಕಾಗಿ ಸರ್ಕಾರದಿಂದ ಸ್ಪೆಷಲ್ ಪರ್ಪಸ್ ವೆಹಿಕಲ್- AIAHL ಸ್ಥಾಪಿಸಲಾಯಿತು. ಸಾಲವನ್ನು ತೆಗೆದುಕೊಳ್ಳುವುದಕ್ಕೆ ಮತ್ತು ಏರ್​ ಇಂಡಿಯಾ ಸಮೂಹದ ನಾನ್ ಕೋರ್ ಆಸ್ತಿಗಾಗಿ ಇದರ ಸ್ಥಾಪನೆಯಾಯಿತು. AIAHLದಿಂದ ಟಾಟಾ ಸಮೂಹ ಪಾವತಿಸದ ಸಾಲದ ಶೇ 75ರಷ್ಟು ಪಡೆದುಕೊಳ್ಳಲಿದೆ. ಸಾಲದ ಹೊರತಾಗಿ ಏರ್​ ಇಂಡಿಯಾಗೆ ಸೇರಿದ ಭೂಮಿ, ಕಟ್ಟಡ 14,718 ರೂಪಾಯಿ ಮೌಲ್ಯದ ನಾನ್-ಕೋರ್​ ಆಸ್ತಿಗಳನ್ನು AIAHLಗೆ ವರ್ಗಾವಣೆ ಮಾಡಲಾಗಯತ್ತದೆ. ಹೆಚ್ಚುವರಿಯಾದ ಸಾಲ AIAHLಗೆ ವರ್ಗಾವಣೆ ಆಗುತ್ತದೆ. ಅದರಲ್ಲಿ ತೈಲ ಕಂಪೆನಿಗಳಿಗೆ ಬಾಕಿ ಉಳಿಸಿಕೊಂಡ ಇಂಧನ ಬಿಲ್​ಗಳು, ವಿಮಾನ ನಿಲ್ದಾಣ ಆಪರೇಟರ್​ಗಳು ಮತ್ತು ಪೂರೈಕೆದಾರರಿಗೆ ಬಾಕಿ ಇರುವುದನ್ನು ಪಾವತಿಸಬೇಕಾಗುತ್ತದೆ, ಎಂದು ಕೇಂದ್ರ ಸರ್ಕಾರ ಖಾಸಗೀಕರಣ ಕಾರ್ಯಕ್ರಮದ ಪ್ರಮುಖ ಇಲಾಖೆ ಕಾರ್ಯದರ್ಶಿ ತುಹಿನ್ ಕಾಂತ ಪಾಂಡೆ ಹೇಳಿದ್ದಾರೆ.

ಪಾಂಡೆ ಅವರು ಮಾತನಾಡಿ, ಈ ಬಾಕಿಯು ಡಿಸೆಂಬರ್​ ಕೊನೆಗೆ ಜಾಸ್ತಿಯಾಗುವ ಯಾವ ನಿರೀಕ್ಷೆಯೂ ಇಲ್ಲ. ಏರ್​ಲೈನ್ಸ್ ಕಾರ್ಯ ನಿರ್ವಹಣೆಗೆ ಅಗತ್ಯ ಇರುವಂತೆ ದಿನಕ್ಕೆ 20 ಕೋಟಿ ರೂಪಾಯಿಯನ್ನು ಸರ್ಕಾರ ಪಾವತಿ ಮಾಡಲಿದೆ ಎಂದಿದ್ದಾರೆ. ಏರ್​ಇಂಡಿಯಾವನ್ನು ಟಾಟಾಗೆ ಹಸ್ತಾಂತರವನ್ನು ಮಾಡುವ ಮುನ್ನ ಬ್ಯಾಲೆನ್ಸ್ ಶೀಟ್​ ಮೇಲೆ ಸೆಪ್ಟೆಂಬರ್​ನಿಂದ ಡಿಸೆಂಬರ್ ತನಕ ಮತ್ತೆ ಕೆಲಸ ಮಾಡಬೇಕಿದೆ. ಈ ಸಂದರ್ಭದಲ್ಲಿ ಉದ್ಭವಿಸುವ ಸಾಲವನ್ನು AIAHLಗೆ ವರ್ಗಾವಣೆ ಮಾಡಲಾಗುವುದು. ಇಂಧನ ಖರೀದಿ ಮತ್ತು ಇತರ ದೈನಂದಿನ ಕಾರ್ಯ ಚಟುವಟಿಕೆಗಳಿಗಾಗಿ ಆಗಸ್ಟ್ 31ಕ್ಕೆ ಕೊನೆಯಾದ ಅವಧೀಗೆ 15,834 ಕೋಟಿ ರೂಪಾಯಿ ಆಪರೇಷನಲ್ ಕ್ರೆಡಿಟರ್ಸ್​ಗೆ ಪಾವತಿಸಬೇಕಾಗುತ್ತದೆ. ಅದು ಕೂಡ AIAHLಗೆ ವರ್ಗಾವಣೆ ಆಗುತ್ತದೆ ಎಂದಿದ್ದಾರೆ ಪಾಂಡೆ.

ಏರ್​ಇಂಡಿಯಾ ಹಾರಾಟಕ್ಕಾಗಿ ಸರ್ಕಾರವು ನಿತ್ಯ ರೂ. 20 ಕೋಟಿ ಖರ್ಚು ಮಾಡುತ್ತಿದೆ. ಹೆಚ್ಚುವರಿಯಾಗಿ ಬ್ಯಾಲೆನ್ಸ್​ಶೀಟ್​ನಲ್ಲಿ ಇರುವ ಸಾಲವು ಏರ್​ಇಂಡಿಯಾದ ಈಕ್ವಿಟಿ ಮೌಲ್ಯವನ್ನು (-) 32,000 ಕೋಟಿ ರೂಪಾಯಿ ಮಾಡಿದೆ. ಈ ಕಾರಣಕ್ಕೆ ಸರ್ಕಾರವು ಒಂದೋ ಏರ್​ಇಂಡಿಯಾವನ್ನು ಖಾಸಗೀಕರಣ ಮಾಡಬೇಕಾಗಿತ್ತು ಅಥವಾ ಮುಚ್ಚಬೇಕಿತ್ತು. 2009-10ರಿಂದ ಇಲ್ಲಿಯ ತನಕ ಸರ್ಕಾರವು ಏರ್​ಲೈನ್​ಗೆ 1.10 ಲಕ್ಷ ಕೋಟಿ ರೂಪಾಯಿಯಷ್ಟು ಪೂರೈಸಿದೆ. ಇದರಲ್ಲಿ 54,584 ಕೋಟಿ ರೂ. ನಗದು ಬೆಂಬಲ ಮತ್ತು 55,692 ಕೋಟಿ ರೂ. ಸಾಲದ ಖಾತ್ರಿ ಒಳಗೊಂಡಿದೆ.

ಇದನ್ನೂ ಓದಿ: Air India Bid Winner: ವೆಲ್​ಕಮ್ ಬ್ಯಾಕ್ ಏರ್​ ಇಂಡಿಯಾ: ಬಿಡ್ ವಿಜೇತ ಟಾಟಾ ಸಮೂಹದ ಮುಖ್ಯಸ್ಥ ರತನ್ ಟಾಟಾ ಭಾವುಕ ಪತ್ರ

Published On - 8:21 pm, Mon, 11 October 21

ಭವ್ಯಾ-ತ್ರಿವಿಕ್ರಮ್ ಪ್ರೇಮಕತೆ, ಬಹಿರಂಗ ಮಾಡಿದ ಸುದೀಪ್
ಭವ್ಯಾ-ತ್ರಿವಿಕ್ರಮ್ ಪ್ರೇಮಕತೆ, ಬಹಿರಂಗ ಮಾಡಿದ ಸುದೀಪ್
ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್