AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Google Layoffs: ಮಾನಸಿಕ ಅನಾರೋಗ್ಯ ರಜೆಯಲ್ಲಿದ್ದ ಉದ್ಯೋಗಿಯನ್ನು ಶಾಶ್ವತವಾಗಿ ಮನೆಗೆ ಕಳುಹಿಸಿದ ಗೂಗಲ್!

ತಾಯಿ ನಿಧನರಾದರೆಂದು ರಜೆ ಹಾಕಿ ಹೋಗಿದ್ದ ವ್ಯಕ್ತಿ ವಾಪಸ್ ಬರುವಾಗ ಕೆಲಸ ಇಲ್ಲ ಎಂಬುದು ಗೊತ್ತಾದದ್ದು, ಕಂಪನಿಗೆ ಉದ್ಯೋಗಿಯ ನೇಮಕಾತಿಗಾಗಿ ಅಭ್ಯರ್ಥಿಯ ಸಂದರ್ಶನ ನಡೆಸುತ್ತಿದ್ದಾಗಲೇ ನೌಕರರೊಬ್ಬರು ಕೆಲಸ ಕಳೆದುಕೊಂಡಿದ್ದು ಇತ್ತೀಚೆಗೆ ಸುದ್ದಿಯಾಗಿತ್ತು. ಇದೀಗ ಆ ಸಾಲಿಗೆ ಮತ್ತೊಂದು ಸೇರ್ಪಡೆಯಾಗಿದೆ.

Google Layoffs: ಮಾನಸಿಕ ಅನಾರೋಗ್ಯ ರಜೆಯಲ್ಲಿದ್ದ ಉದ್ಯೋಗಿಯನ್ನು ಶಾಶ್ವತವಾಗಿ ಮನೆಗೆ ಕಳುಹಿಸಿದ ಗೂಗಲ್!
ಗೂಗಲ್
Ganapathi Sharma
|

Updated on: Feb 02, 2023 | 2:52 PM

Share

ತಂತ್ರಜ್ಞಾನ ದೈತ್ಯ ಗೂಗಲ್ (Google) ಕಂಪನಿಯು 12,000 ಮಂದಿ ಉದ್ಯೋಗಿಗಳನ್ನು ಇತ್ತೀಚೆಗೆ ವಜಾಗೊಳಿಸಿದ್ದು (Layoff) ಭಾರೀ ಸುದ್ದಿಯಾಗಿತ್ತು. ಹಲವಾರು ಉದ್ಯೋಗಿಗಳು ಉದ್ಯೋಗ ಕಡಿತದಿಂದ ತೊಂದರೆಗೊಳಗಾಗಿರುವ ಬಗ್ಗೆ ನಿರಂತರ ವರದಿಗಳಾಗುತ್ತಲೇ ಇದೆ. ತಾಯಿ ನಿಧನರಾದರೆಂದು ರಜೆ ಹಾಕಿ ಹೋಗಿದ್ದ ವ್ಯಕ್ತಿ ವಾಪಸ್ ಬರುವಾಗ ಕೆಲಸ ಇಲ್ಲ ಎಂಬುದು ಗೊತ್ತಾದದ್ದು, ಕಂಪನಿಗೆ ಉದ್ಯೋಗಿಯ ನೇಮಕಾತಿಗಾಗಿ ಅಭ್ಯರ್ಥಿಯ ಸಂದರ್ಶನ ನಡೆಸುತ್ತಿದ್ದಾಗಲೇ ನೌಕರರೊಬ್ಬರು ಕೆಲಸ ಕಳೆದುಕೊಂಡಿದ್ದು ಇತ್ತೀಚೆಗೆ ಸುದ್ದಿಯಾಗಿತ್ತು. ಇದೀಗ ಅಂಥದ್ದೇ ಮತ್ತೊಂದು ವಿದ್ಯಮಾನ ‘ಲಿಂಕ್ಡ್ಇನ್’ ಸಂದೇಶದಿಂದ ಬೆಳಕಿಗೆ ಬಂದಿದೆ. ಮಾನಸಿಕ ಅನಾರೋಗ್ಯದ ಕಾರಣ ರಜೆಯಲ್ಲಿದ್ದ ಉದ್ಯೋಗಿ ಅಲಿ ನೀಲ್ ಎಂಬವರನ್ನು ಗೂಗಲ್ ವಜಾಗೊಳಿಸಿದ್ದು, ತಮ್ಮ ವೇದನೆಯ ಕಥೆಯನ್ನು ಅವರು ‘ಲಿಂಕ್ಡ್ಇನ್’ನಲ್ಲಿ ಪೋಸ್ಟ್ ಮಾಡಿದ್ದಾರೆ.

‘ಕಠಿಣ ಪರಿಸ್ಥಿತಿಯಲ್ಲೂ ಕುಂದದ ಆಶಾಭಾವ’

ಉದ್ಯೋಗದಿಂದ ವಜಾಗೊಳಿಸಿದ ಸುದ್ದಿ ತಿಳಿದುಬಂದಾಗ ರಜೆಯಲ್ಲಿದ್ದ ಕಾರಣ ಅದ್ಹೇಗೋ ಅದನ್ನು ಎದುರಿಸಲು ಸಾಧ್ಯವಾಯಿತು. ಆದರೆ, ಅದನ್ನು ಪೂರ್ಣವಾಗಿ ಒಪ್ಪಿಕೊಳ್ಳಲು ಕೆಲವು ದಿನಗಳೇ ಬೇಕಾದವು ಎಂದು ಅಲಿ ನೀಲ್ ಹೇಳಿದ್ದಾರೆ. ಕಳೆದ ಶುಕ್ರವಾರ ಬೆಳಗ್ಗೆ ನಾನು ನಿದ್ದೆ ಮಾಡಲು ಸಾಧ್ಯವಾಗದೆ ಹಂಚಿಕೊಂಡ ಸಂದೇಶದ ನಂತರ ಎಲ್ಲವರೂ ಸರಿಯಾಗಬೇಕಿದ್ದರೆ ನನಗೆ ಕೆಲವು ಸಮಯ ಬೇಕಾಯಿತು. ಆ ಇ-ಮೇಲ್ ಅನ್ನು ಓದಲು ತಡರಾತ್ರಿ 2:06ರ ವರೆಗೂ ಎಚ್ಚರದಿಂದ ಇರುವುದು ಅಷ್ಟು ಸುಲಭವಾಗಿರಲಿಲ್ಲ ಎಂದು ಗೂಗಲ್​ ಉದ್ಯೋಗ ಕಡಿತಕ್ಕೆ ಸಂಬಂಧಿಸಿ ಈ ಹಿಂದೆ ಮಾಡಿದ್ದ ಪೋಸ್ಟ್ ಅನ್ನು ಉಲ್ಲೇಖಿಸಿ ಅಲಿ ನೀಲ್ ಬರೆದುಕೊಂಡಿದ್ದಾರೆ.

ಗೂಗಲ್​ ನಂತರ ಮುಂದೇನು ಎಂಬ ಬಗ್ಗೆ ನಿಜವಾಗಿಯೂ ಯೋಚಿಸಿಲ್ಲ. ಆದರೆ ವಾಸ್ತವವು ಅಂದುಕೊಂಡದ್ದಕ್ಕಿಂತ ಸರಳವಾಗಿರಲಿದೆ ಎಂದು ಅವರು ಆಶಾವಾದ ವ್ಯಕ್ತಪಡಿಸಿದ್ದಾರೆ.

‘ನನ್ನ ಮೊದಲ ಉದ್ಯೋಗವನ್ನು 14ನೇ ವಯಸ್ಸಿನಲ್ಲಿ ಆರಂಭಿಸಿದ್ದೆ. ಆದರೆ ಆ ಉದ್ಯೋಗಕ್ಕೆ ವೇತನ ಇರಲಿಲ್ಲ. 16 ವರ್ಷ ವಯಸ್ಸಾದ ಮೇಲೆ ವೇತನ ದೊರೆಯಲು ಆರಂಭವಾಯಿತು. ಹೀಗಾಗಿ ನಾನೀಗ ಮತ್ತಷ್ಟು ಚಿಕ್ಕವಳಾಗಿದ್ದೇನೆ! ನಾನು ಹೊಂದಿದ್ದ ಉದ್ಯೋಗಗಳೆಲ್ಲವನ್ನೂ ನಾನು ಪ್ರೀತಿಸಿದ್ದೆ’ ಎಂದು ಅವರು ಉಲ್ಲೇಖಿಸಿದ್ದಾರೆ.

ಇದನ್ನೂ ಓದಿ: Google Layoffs: ಇದು ನೋಡಿ ದುರದೃಷ್ಟ; ಬೇರೊಬ್ಬರಿಗೆ ಕೆಲಸ ಕೊಡಿಸಲು ಸಂದರ್ಶನ ಮಾಡುತ್ತಿದ್ದಾಗಲೇ ಬಂತು ವಜಾ ಸಂದೇಶ

ತಮ್ಮ ಮುಂದಿರುವ ಅನಿಶ್ಚಿತತೆಯ ಬಗ್ಗೆ ಉಲ್ಲೇಖಿಸಿರುವ ಅವರು, ಗೂಗಲ್ ನಂತರ ಮುಂದೇನು ಎಂಬುದನ್ನು ಯೋಚಿಸಬೇಕಾಗಿದೆ. ಆದಾಗ್ಯೂ, ಕಂಪನಿ ಎಂಬುದು ಒಂದು ಘಟಕವಷ್ಟೇ ವಿನಃ ಗುರುತಿನ ಭಾಗವಲ್ಲ. ಜೀವನದಲ್ಲಿ ತಿಳಿಯಬೇಕಾದ ವಿಚಾರಗಳು ಇನ್ನಷ್ಟಿವೆ. ನಾನು ಇಂದು ಯಾವ ಹಂತದಲ್ಲಿದ್ದೇನೆ ಮತ್ತು ಮುಂದೆ ಏನಾಗಲಿದ್ದೇನೆ ಎಂಬುದರ ಬಗ್ಗೆ ಹೆಮ್ಮೆಯಿದೆ’ ಎಂದು ಅವರು ಬರೆದುಕೊಂಡಿದ್ದಾರೆ.

ತಾಯಿ ನಿಧನರಾಗಿದ್ದಾರೆಂದು 10 ದಿನಗಳ ಕಾಲ ರಜೆಯಲ್ಲಿ ತೆರಳಿದ್ದ ಉದ್ಯೋಗಿಯೊಬ್ಬರು ಇತ್ತೀಚೆಗೆ ಕರ್ತವ್ಯಕ್ಕೆ ಮರಳಿದಾಗ ಗೂಗಲ್ ಅವರನ್ನು ವಜಾಗೊಳಿಸಿರುವ ಬಗ್ಗೆ ಇತ್ತೀಚೆಗೆ ವರದಿಯಾಗಿತ್ತು. ಅದೇ ರೀತಿ ಗೂಗಲ್​ನ ನೇಮಕಾತಿ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದ ಉದ್ಯೋಗಿ ಡಾನ್​ ಲಾನಿಗನ್ ಯಾನ್ ಎಂಬವರು ಅಭ್ಯರ್ಥಿಯೊಬ್ಬರ ಸಂದರ್ಶನ ನಡೆಸುತ್ತಿದ್ದಾಗಲೇ, ‘ನಿಮ್ಮನ್ನು ಕೆಲಸದಿಂದ ವಜಾಗೊಳಿಸಲಾಗಿದೆ’ ಎಂಬ ಇ-ಮೇಲ್ ಸಂದೇಶ ಬಂದ ಬಗ್ಗೆ ಇತ್ತೀಚೆಗೆ ವರದಿಯಾಗಿತ್ತು.

ಇನ್ನಷ್ಟು ವಾಣಿಜ್ಯ ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ

ನನ್ನ ಹಿಂದೆ ಯಾರೂ ಬರೋದು ಬೇಡ: ಡಿಕೆ ಶಿವಕುಮಾರ್​​ ಹೀಗಂದಿದ್ದೇಕೆ?
ನನ್ನ ಹಿಂದೆ ಯಾರೂ ಬರೋದು ಬೇಡ: ಡಿಕೆ ಶಿವಕುಮಾರ್​​ ಹೀಗಂದಿದ್ದೇಕೆ?
ಆಂಧ್ರದಲ್ಲಿ ಬಸ್ ಅಪಘಾತ; ಪ್ರಧಾನಿಯಿಂದ 2 ಲಕ್ಷ ರೂ. ಪರಿಹಾರ ಘೋಷಣೆ
ಆಂಧ್ರದಲ್ಲಿ ಬಸ್ ಅಪಘಾತ; ಪ್ರಧಾನಿಯಿಂದ 2 ಲಕ್ಷ ರೂ. ಪರಿಹಾರ ಘೋಷಣೆ
ಮೈಸೂರಿನ ಅಭಿಮಾನಿಗಳಿಗೆ ‘ದಿ ಡೆವಿಲ್’ ಸಿನಿಮಾ ಇಷ್ಟ ಆಯ್ತಾ? ವಿಡಿಯೋ ನೋಡಿ..
ಮೈಸೂರಿನ ಅಭಿಮಾನಿಗಳಿಗೆ ‘ದಿ ಡೆವಿಲ್’ ಸಿನಿಮಾ ಇಷ್ಟ ಆಯ್ತಾ? ವಿಡಿಯೋ ನೋಡಿ..
ರೈತರಿಗೆ ಕನ್ಯಾ ಕೊಡುತ್ತಿಲ್ಲ ಎಂದು ಡಿಸಿ ಮುಂದೆ ಅಳಲು ತೋಡಿಕೊಂಡ ಯುವಕ
ರೈತರಿಗೆ ಕನ್ಯಾ ಕೊಡುತ್ತಿಲ್ಲ ಎಂದು ಡಿಸಿ ಮುಂದೆ ಅಳಲು ತೋಡಿಕೊಂಡ ಯುವಕ
ಇನ್ಸ್​​ಸ್ಟಾದಲ್ಲಿ ನೋಡಿ ಓಡೋಡಿ ಬಂದು ಪ್ರಿಯಕರನ ಮದ್ವೆ ತಡೆದ ಪ್ರೇಯಿಸಿ
ಇನ್ಸ್​​ಸ್ಟಾದಲ್ಲಿ ನೋಡಿ ಓಡೋಡಿ ಬಂದು ಪ್ರಿಯಕರನ ಮದ್ವೆ ತಡೆದ ಪ್ರೇಯಿಸಿ
ದರ್ಶನ್ ಪತ್ನಿ ವಿಜಯಲಕ್ಷ್ಮಿಗೆ ಧನ್ಯವಾದ ಹೇಳಿದ ‘ಡೆವಿಲ್’ ನಟಿ ರಚನಾ
ದರ್ಶನ್ ಪತ್ನಿ ವಿಜಯಲಕ್ಷ್ಮಿಗೆ ಧನ್ಯವಾದ ಹೇಳಿದ ‘ಡೆವಿಲ್’ ನಟಿ ರಚನಾ
ದುರಹಂಕಾರದ ಫೈಟ್: ಬಿಗ್ ಬಾಸ್ ಮನೆಯಲ್ಲಿ ರಜತ್, ಅಶ್ವಿನಿ ಗೌಡ, ಚೈತ್ರಾ ಜಗಳ
ದುರಹಂಕಾರದ ಫೈಟ್: ಬಿಗ್ ಬಾಸ್ ಮನೆಯಲ್ಲಿ ರಜತ್, ಅಶ್ವಿನಿ ಗೌಡ, ಚೈತ್ರಾ ಜಗಳ
ಭಾರತದಲ್ಲಿ ಇದೇ ಮೊದಲ ಬಾರಿಗೆ ಡಿಜಿಟಲ್ ಜನಗಣತಿ
ಭಾರತದಲ್ಲಿ ಇದೇ ಮೊದಲ ಬಾರಿಗೆ ಡಿಜಿಟಲ್ ಜನಗಣತಿ
ಬಿಜೆಪಿಗೆ ವಾಪಸ್ ಆಗಲು ಎರಡ್ಮೂರು ಪ್ರಮುಖ ಬೇಡಿಕೆ ಇಟ್ಟ ಯತ್ನಾಳ್
ಬಿಜೆಪಿಗೆ ವಾಪಸ್ ಆಗಲು ಎರಡ್ಮೂರು ಪ್ರಮುಖ ಬೇಡಿಕೆ ಇಟ್ಟ ಯತ್ನಾಳ್
ಡಿಕೆ ಸಿಎಂ, ವಿಜಯೇಂದ್ರ ಡಿಸಿಎಂ ಪ್ಲ್ಯಾನ್:ಅಮಿತ್ ಶಾ ಮುಂದೇನಾಗಿತ್ತು?
ಡಿಕೆ ಸಿಎಂ, ವಿಜಯೇಂದ್ರ ಡಿಸಿಎಂ ಪ್ಲ್ಯಾನ್:ಅಮಿತ್ ಶಾ ಮುಂದೇನಾಗಿತ್ತು?