Cash Transfer: ಮನೆಯಲ್ಲಿ ಯಾರು ಯಾರಿಗೆ ಹೆಚ್ಚು ಹಣ ಕಳುಹಿಸುತ್ತಾರೆ? ಸಮೀಕ್ಷೆ ರಟ್ಟು ಮಾಡಿದೆ ಗುಟ್ಟು!

ಭಾರತದ ಬದಲಾದ ಕುಟುಂಬ ವ್ಯವಸ್ಥೆಯಲ್ಲಿ ಹಣ ವರ್ಗಾವಣೆ ಪ್ರಕ್ರಿಯೆ ಕೂಡ ಹೇಗೆ ಬದಲಾಗಿದೆ? ಒಂದು ಮನೆಯಲ್ಲಿ ಯಾರು ಯಾರಿಗೆ ಹೆಚ್ಚು ಹಣ ಕಳುಹಿಸುತ್ತಾರೆ? ಸಮೀಕ್ಷೆಯೊಂದು ಬಯಲಿಗೆಳೆದ ವಿವರ ಇಲ್ಲಿದೆ ನೋಡಿ.

Cash Transfer: ಮನೆಯಲ್ಲಿ ಯಾರು ಯಾರಿಗೆ ಹೆಚ್ಚು ಹಣ ಕಳುಹಿಸುತ್ತಾರೆ? ಸಮೀಕ್ಷೆ ರಟ್ಟು ಮಾಡಿದೆ ಗುಟ್ಟು!
ಸಾಂದರ್ಭಿಕ ಚಿತ್ರ
Follow us
Ganapathi Sharma
|

Updated on:Feb 02, 2023 | 1:17 PM

ಒಂದು ಮನೆ ಅಥವಾ ಕುಟುಂಬ ಅಂದ ಮೇಲೆ ಇತರೆಲ್ಲ ಚಟುವಟಿಕೆಗಳಂತೆಯೇ ಹಣಕಾಸಿನ ವ್ಯವಹಾರ (Financial Activities) ಕೂಡ ಬಹು ಮುಖ್ಯ ಪಾತ್ರ ವಹಿಸುತ್ತದೆ. ತಂದೆ-ತಾಯಿ ಮಕ್ಕಳ ಶಿಕ್ಷಣ, ಖರ್ಚಿಗೆ ಹಣ (Money) ನಿಡುತ್ತಾರೆ ಎಂಬುದು ಸಾಮಾನ್ಯ ನಂಬಿಕೆ. ಆದರೆ ಬದಲಾದ ಪರಿಸ್ಥಿತಿ, ಕಾಲಘಟ್ಟ, ಕುಟುಂಬ ವ್ಯವಸ್ಥೆಯಲ್ಲಿನ ಪರಿವರ್ತನೆ, ವಿವಿಧ ಕಾರಣಗಳಿಗಾಗಿ ವಲಸೆ ತೆರಳುವ ಪ್ರಕ್ರಿಯೆಯು ಕುಟುಂಬದ ಸದಸ್ಯರ ನಡುವಣ ಹಣ ವರ್ಗವಾಣೆಯ (Cash Transfer) ಸ್ವರೂಪವನ್ನೇ ಬದಲಾಯಿಸಿದೆ ಎಂದು ಸಮೀಕ್ಷಾ ವರದಿಯೊಂದು ತಿಳಿಸಿದೆ. ಸಾಮಾಜಿಕ ಸ್ಥಾನಮಾನ, ಸಂಪತ್ತು, ಭೂ ಮಾಲೀಕತ್ವ ಕೂಡ ಪಾಲಕರು ಮತ್ತು ಮಕ್ಕಳ ನಡುವಣ ಹಣ ವರ್ಗಾವಣೆಯಲ್ಲಿ ಪ್ರಮುಖ ಪಾತ್ರ ವಹಿಸುತ್ತವೆ ಎಂದು ಬೆಂಗಳೂರಿನ ‘ಇನ್​ಸ್ಟಿಟ್ಯೂಟ್ ಆಫ್ ಸೋಷಿಯಲ್ ಆ್ಯಂಡ್ ಎಕನಾಮಿಕ್ ಚೇಂಜ್ (ISEC)’ ನಡೆಸಿದ ಸಮೀಕ್ಷೆಯಿಂದ ತಿಳಿದುಬಂದಿದೆ.

ತಲೆಮಾರುಗಳಿಂದ ಬದಲಾಗುತ್ತಿರುವ ಹಣ ವರ್ಗಾವಣೆ ಪ್ರಕ್ರಿಯೆಯ ಬಗ್ಗೆ ಸಮೀಕ್ಷೆ ನಡೆಸಿರುವ ಸಂಸ್ಥೆ, ‘ಇಂಟಿಗ್ರೇಷನಲ್ ಟ್ರಾನ್ಸ್​ಫರ್ಸ್ ಇನ್ ಇಂಡಿಯಾ: ಹೂ ರಿಸೀವ್ಸ್ ಮನಿ ಆ್ಯಂಡ್ ಹೂ ಗಿವ್ಸ್ ಮನಿ’ ಎಂಬ ವರದಿ ಪ್ರಕಟಿಸಿದೆ. ಸಂಶೋಧನಾ ತಜ್ಞ ಕಿಂಕರ್ ಮಂಡಲ್ ಹಾಗೂ ಐಎಸ್​ಇಸಿಯ ಜನಸಂಖ್ಯಾ ಸಂಶೋಧನಾ ಕೇಂದ್ರದ ಸಹಾಯಕ ಪ್ರಾಧ್ಯಾಪಕರಾದ ಲೇಖಾ ಸುಬ್ಬಯ್ಯ ಸಮೀಕ್ಷೆಯ ನೇತೃತ್ವ ವಹಿಸಿದ್ದರು. ಲಿಂಗ, ಶಿಕ್ಷಣ, ಸಾಮಾಜಿಕ-ಆರ್ಥಿಕ ಸ್ಥಾನಮಾನ, ವಾಸಿಸುವ ಪ್ರದೇಶ, ಶಿಕ್ಷಣ ಇತ್ಯಾದಿಗಳ ಆಧಾರದಲ್ಲಿ ಸಮೀಕ್ಷೆ ನಡೆಸಲಾಗಿದ್ದು, ತಲೆಮಾರುಗಳಿಂದ ಹಣ ನೀಡಿಕೆ ಪ್ರಕ್ರಿಯೆಯಲ್ಲಿ ಯಾವ ರೀತಿಯ ಬದಲಾವಣೆಯಾಗಿದೆ ಎಂಬುದರ ಬಗ್ಗೆ ಅಧ್ಯಯನ ನಡೆಸಲಾಗಿದೆ. 2017-18ರ ಅವಧಿಯಲ್ಲಿ ನಡೆಸಲಾಗಿದ್ದ ‘ಲಾಂಗಿಟ್ಯೂಡಿನಲ್ ಏಜಿಂಗ್ ಸ್ಟಡಿ ಇನ್ ಇಂಡಿಯಾ ವೇವ್-1’ (60 ಮತ್ತು ಅದಕ್ಕಿಂತ ಹೆಚ್ಚು ವಯಸ್ಸಾದ 31,464 ಮಂದಿಯನ್ನು ಅಧ್ಯಯನಕ್ಕೆ ಒಳಪಡಿಸಲಾಗಿತ್ತು) ದತ್ತಾಂಶಗಳನ್ನೂ ಸಮೀಕ್ಷೆ ಬಳಸಿಕೊಂಡಿದೆ.

ಸಂಪತ್ತು ಹೊಂದಿರುವ ಪಾಲಕರೂ ಪಡೆಯುತ್ತಾರೆ ಹಣ!

ಸಂಪನ್ಮೂಲ ಹೊಂದಿರುವ ಪಾಲಕರೂ ಹಣ ಸ್ವೀಕರಿಸುತ್ತಾರೆ ಎಂದು ಸಮೀಕ್ಷಾ ವರದಿ ತಿಳಿಸಿದೆ. ಭೂಮಿ ಅಥವಾ ಇತರ ಮಾದರಿಯ ಸಂಪತ್ತು ಹೊಂದಿರುವ ಪಾಲಕರು ಹಣ ಪಡೆಯುವುದು, ಕಳುಹಿಸುವುದನ್ನು ಮಾಡುತ್ತಾರೆ ಎಂದು ಸಮೀಕ್ಷಾ ವರದಿಯನ್ನು ಉಲ್ಲೇಖಿಸಿ ಕಿಂಕರ್ ಮಂಡಲ್ ತಿಳಿಸಿರುವುದಾಗಿ ‘ಡೆಕ್ಕನ್ ಹೆರಾಲ್ಡ್’ ವರದಿ ಮಾಡಿದೆ. ಸಮೀಕ್ಷೆಯಲ್ಲಿ 60-69, 70-79 ಹಾಗೂ 80 ವರ್ಷ ಮೇಲ್ಪಟ್ಟವರು ಭಾಗವಹಿಸಿದ್ದರು ಎಂದು ಅವರು ಹೇಳಿದ್ದಾರೆ.

ಇದನ್ನೂ ಓದಿ: Insurance Policy Tax: ವಿಮಾದಾರರಿಗೆ ಶಾಕ್ ನೀಡಿದ ಬಜೆಟ್; 5 ಲಕ್ಷ ರೂ.ಗಿಂತ ಹೆಚ್ಚಿನ ವಿಮೆಗೆ ಸಿಗಲ್ಲ ತೆರಿಗೆ ವಿನಾಯಿತಿ

ಮಹಿಳೆಯರಿಗಿಂತಲೂ (ಶೇ 11) ಪುರುಷರೇ (ಶೇ 13.2) ಹೆಚ್ಚು ಹಣ ಪಡೆಯುತ್ತಾರೆ. ಮಹಿಳೆಯರು ಪುರುಷರಿಗೆ (ಶೇ 2.8) ಹಣ ಕಳುಹಿಸುವುದಕ್ಕಿಂತಲೂ ಮಕ್ಕಳಿಗೆ (ಶೇ 4.4) ಹೆಚ್ಚು ಹಣ ಕಳುಹಿಸುತ್ತಾರೆ ಎಂದು ಸಮೀಕ್ಷೆ ತಿಳಿಸಿದೆ.

ಗ್ರಾಮೀಣ ನಿವಾಸಿಗಳಿಗೆ (ಶೇ 9.3) ಹೋಲಿಸಿದರೆ ನಗರ ನಿವಾಸಿ ಹಿರಿಯ ನಾಗರಿಕರು (ಶೇ 13.4) ಕುಟುಂಬದವರಿಂದ ಹೆಚ್ಚು ಹಣ ಸ್ವೀಕರಿಸುತ್ತಾರೆ. ಗ್ರಾಮೀಣ ಪ್ರದೇಶದ ಹಿರಿಯ ನಾಗರಿಕರು ಮಕ್ಕಳಿಗೆ ಹಣ (ಶೇ 3.4) ಕಳುಹಿಸುವುದು ನಗರ ಪ್ರದೇಶದ ಹಿರಿಯ ನಾಗರಿಕರಿಗಿಂತ (ಶೇ 3.6) ಕಡಿಮೆಯಾಗಿದೆ. ತಂದೆ-ತಾಯಿ ಹೊಂದಿರುವ ಸಂಪತ್ತು, ಕೆಲಸ ಇತ್ಯಾದಿಗಳು ಕೂಡ ಮಕ್ಕಳಿಗೆ ಹಣ ವರ್ಗಾವಣೆ ಮಾಡುವುದರ ಮೇಲೆ ಪ್ರಭಾವ ಬೀರುತ್ತದೆ ಎಂದು ಸಮೀಕ್ಷೆ ತಿಳಿಸಿದೆ.

ಇನ್ನಷ್ಟು ವಾಣಿಜ್ಯ ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ

Published On - 1:11 pm, Thu, 2 February 23

ವಕ್ಫ್ ವಿರುದ್ಧ ಹೋರಾಟದ ರೂವಾರಿ ಯತ್ನಾಳ್ ಹೆಸರು ಪ್ರಸ್ತಾಪಿಸದ ವಿಜಯೇಂದ್ರ
ವಕ್ಫ್ ವಿರುದ್ಧ ಹೋರಾಟದ ರೂವಾರಿ ಯತ್ನಾಳ್ ಹೆಸರು ಪ್ರಸ್ತಾಪಿಸದ ವಿಜಯೇಂದ್ರ
ಹರಿದು ಚಿಂದಿಯಾಗಿರುವ ಈ ಶರ್ಟ್​​​ ಬೆಲೆ 2.14 ಲಕ್ಷ ರೂ.
ಹರಿದು ಚಿಂದಿಯಾಗಿರುವ ಈ ಶರ್ಟ್​​​ ಬೆಲೆ 2.14 ಲಕ್ಷ ರೂ.
ಪ್ರತಿಭಟನೆ ಮಾಡಿ ನ್ಯಾಯ ಕೇಳುವವರಿಗೆ ಎಳನೀರು, ಕಾಫಿಯೇ? ಕುಮಾರಸ್ವಾಮಿ
ಪ್ರತಿಭಟನೆ ಮಾಡಿ ನ್ಯಾಯ ಕೇಳುವವರಿಗೆ ಎಳನೀರು, ಕಾಫಿಯೇ? ಕುಮಾರಸ್ವಾಮಿ
ಸಚಿನ್ ಕುಟುಂಬಕ್ಕೆ ರಾಜ್ಯ ಸರ್ಕಾರದ ಮೇಲೆ ನಂಬಿಕೆ ಇಲ್ಲ: ಆರ್ ಅಶೋಕ
ಸಚಿನ್ ಕುಟುಂಬಕ್ಕೆ ರಾಜ್ಯ ಸರ್ಕಾರದ ಮೇಲೆ ನಂಬಿಕೆ ಇಲ್ಲ: ಆರ್ ಅಶೋಕ
ಆದರೆ ಕಾಂಗ್ರೆಸ್ ಕಾರ್ಯಕರ್ತರ ಪಾನೀಯಗಳು ಯಾರಿಗಾಗಿ? ಕನ್ನಡಿಗರ ಪ್ರಶ್ನೆ
ಆದರೆ ಕಾಂಗ್ರೆಸ್ ಕಾರ್ಯಕರ್ತರ ಪಾನೀಯಗಳು ಯಾರಿಗಾಗಿ? ಕನ್ನಡಿಗರ ಪ್ರಶ್ನೆ
ಕಲಬುರಗಿಯ ಮುಖ್ಯರಸ್ತೆಯಲ್ಲಿ ಸಂಚಾರ ನಿಷೇಧಿಸಿ ಪೊಲೀಸ್ ಕಮೀಶನರ್ ಆದೇಶ
ಕಲಬುರಗಿಯ ಮುಖ್ಯರಸ್ತೆಯಲ್ಲಿ ಸಂಚಾರ ನಿಷೇಧಿಸಿ ಪೊಲೀಸ್ ಕಮೀಶನರ್ ಆದೇಶ
ಮೊದಲ ಓವರ್​ನಲ್ಲೇ ಸ್ಟಾರ್ಕ್ ಬೆಂಡೆತ್ತಿ ದಾಖಲೆ ಬರೆದ ಯಶಸ್ವಿ ಜೈಸ್ವಾಲ್
ಮೊದಲ ಓವರ್​ನಲ್ಲೇ ಸ್ಟಾರ್ಕ್ ಬೆಂಡೆತ್ತಿ ದಾಖಲೆ ಬರೆದ ಯಶಸ್ವಿ ಜೈಸ್ವಾಲ್
ಹತ್ಯೆ ಹಿಂದಿನ ಉದ್ದೇಶ ಇನ್ನೂ ಗೊತ್ತಾಗಿಲ್ಲವೆಂದ ಚಿಕ್ಕಬಳ್ಳಾಪುರ ಎಸ್​ಪಿ
ಹತ್ಯೆ ಹಿಂದಿನ ಉದ್ದೇಶ ಇನ್ನೂ ಗೊತ್ತಾಗಿಲ್ಲವೆಂದ ಚಿಕ್ಕಬಳ್ಳಾಪುರ ಎಸ್​ಪಿ
ಟೆಸ್ಟ್ ಸ್ಪೆಷಲಿಸ್ಟ್​​ನ ಔಟ್ ಮಾಡಿದ ಕನ್ನಡಿಗ ಪ್ರಸಿದ್ಧ್ ಕೃಷ್ಣ
ಟೆಸ್ಟ್ ಸ್ಪೆಷಲಿಸ್ಟ್​​ನ ಔಟ್ ಮಾಡಿದ ಕನ್ನಡಿಗ ಪ್ರಸಿದ್ಧ್ ಕೃಷ್ಣ
ದೇವಾಲಯಗಳಲ್ಲಿ ಮುಡಿ ಕೊಡುವುದರ ಹಿಂದಿನ ರಹಸ್ಯ ತಿಳಿಯಿರಿ
ದೇವಾಲಯಗಳಲ್ಲಿ ಮುಡಿ ಕೊಡುವುದರ ಹಿಂದಿನ ರಹಸ್ಯ ತಿಳಿಯಿರಿ