
ನವದೆಹಲಿ, ಫೆಬ್ರುವರಿ 2: ಈ ಬಾರಿಯ ಕೇಂದ್ರ ಬಜೆಟ್ (Union Budget) ಬಗ್ಗೆ ಹೆಲ್ತ್ಕೇರ್ ಉದ್ಯಮ ಸಮಾಧಾನಪಟ್ಟಿದೆ. ದೇಶದ ಆರೋಗ್ಯ ವ್ಯವಸ್ಥೆಗೆ ಪುಷ್ಟಿ ಕೊಡಲು ಬಜೆಟ್ನಲ್ಲಿ ತೆಗೆದುಕೊಳ್ಳಲಾದ ಕ್ರಮಗಳನ್ನು ಈ ಉದ್ಯಮದ ನಾಯಕರು ಸ್ವಾಗತಿಸಿದ್ದಾರೆ. ಹೆಚ್ಚು ಜನರಿಗೆ ಚಿಕಿತ್ಸಾ ವ್ಯವಸ್ಥೆ ಮುಟ್ಟಲು ಅನುವು ಮಾಡಿಕೊಂಡುವಂತಹ ಕ್ರಮಗಳನ್ನು ಬಜೆಟ್ನಲ್ಲಿ ತೆಗೆದುಕೊಳ್ಳಲಾಗಿದೆ ಎಂಬುದು ಇವರ ಅನಿಸಿಕೆ. ಅಪೋಲೋ ಹಾಸ್ಪಿಟಲ್ಸ್ನ ಸಂಸ್ಥಾಪಕ ಅಧ್ಯಕ್ಷ ಡಾ. ಪ್ರತಾಪ್ ಸಿ ರೆಡ್ಡಿ (Dr Pratap C Reddy) ಅವರು ಸಕಾರಾತ್ಮಕ ಬಜೆಟ್ ಎಂದು ಅಭಿಪ್ರಾಯಪಟ್ಟಿದ್ಧಾರೆ. ವಿಕಸಿತ ಭಾರತದ ಆಶಯದಂತೆ ಆರೋಗ್ಯಕರ ಜನರ ನಿರ್ಮಾಣಕ್ಕೆ ಪುಷ್ಟಿ ಕೊಡುತ್ತದೆ ಈ ಬಜೆಟ್. ಪಬ್ಲಿಕ್ ಹೆಲ್ತ್ ಕೆಪಾಸಿಟಿ, ವೈದ್ಯಕೀಯ ಶಿಕ್ಷಣ, ನಾವೀನ್ಯತೆ ಮತ್ತು ಅಗ್ಗದ ಚಿಕಿತ್ಸೆ ಲಭ್ಯವಾಗುವತ್ತ ಈ ಬಜೆಟ್ ಒತ್ತು ಕೊಡುತ್ತದೆ ಎಂದು ಡಾ. ಪ್ರತಾಪ್ ರೆಡ್ಡಿ ಅಭಿಪ್ರಾಯಪಟ್ಟಿದ್ದಾರೆ.
‘ಭಾರತದ ಪ್ರಗತಿಯು ಆರೋಗ್ಯಕರ ಜನರು ಹಾಗೂ ಪ್ರಬಲ ಆರೋಗ್ಯ ವ್ಯವಸ್ಥೆಯ ಜೊತೆಗೆ ಭಾರತದ ಪ್ರಗತಿಯು ಇರುತ್ತದೆ ಎನ್ನುವ ಭರವಸೆಯನ್ನು 2026-27ರ ಬಜೆಟ್ನಲ್ಲಿ ನೀಡಲಾಗಿದೆ. ಪಬ್ಲಿಕ್ ಹೆಲ್ತ್ ಕೆಪಾಸಿಟಿಯನ್ನು ಹೆಚ್ಚಿಸುವುದು, ರೋಗ ನಿಯಂತ್ರಣ ಕಾರ್ಯವನ್ನು ಬಲಪಡಿಸುವುದು, ಎರಡನೇ ಮತ್ತು ಮೂರನೇ ಸ್ತರದ ಪ್ರದೇಶಗಳಲ್ಲಿ ಹೆಲ್ತ್ ಸಿಸ್ಟಂಗಳು ಮತ್ತಷ್ಟು ತಲುಪುವುದು ಇವುಗಳತ್ತ ಗಮನ ಇಡಲಾಗಿದೆ’ ಎಂದು ಅಪೋಲೋ ಹಾಸ್ಪಿಟಲ್ಸ್ನ ಛೇರ್ಮನ್ ಹೇಳಿದ್ದಾರೆ.
ಇದನ್ನೂ ಓದಿ: ಅಪೋಲೋ ಆಸ್ಪತ್ರೆಗಳು 24×7 ಆರೋಗ್ಯ ಸೇವೆಗೆ ಬದ್ಧ: ಐಎಚ್ಡಿ ಸಮಾವೇಶದಲ್ಲಿ ಘೋಷಣೆ
‘ಶಿಕ್ಷಣ ಮತ್ತು ಸಂಶೋಧನಾ ಸಂಸ್ಥೆಗಳನ್ನು ಬಲಪಡಿಸುವುದು, 1,000 ಅನುಮೋದಿತ ಕ್ಲಿನಿಕಲ್ ಟ್ರಯಲ್ ಸೈಟ್ಳ ಜಾಲ ನಿರ್ಮಿಸುವುದೂ ಒಳಗೊಂಡಂತೆ ಬಯೋಫಾರ್ಮಾ ಶಕ್ತಿ ಯೋಜನೆ ಮೂಲಕ ಜೀವ ವಿಜ್ಞಾನಗಳು (ಲೈಫ್ ಸೈನ್ಸಸ್) ಮತ್ತು ಇನ್ನೋವೇಶನ್ ಇಕೋಸಿಸ್ಟಂ ಅನ್ನು ಈ ಬಜೆಟ್ನಲ್ಲಿ ಬಲಪಡಿಸಲಾಗುತ್ತಿರುವುದು ಸ್ವಾಗತಾರ್ಹ. ಈ ಕ್ರಮಗಳು ಸುಧಾರಿತ ಥೆರಪಿಗಳ ಅಭಿವೃದ್ಧಿಯ ವೇಗ ಹೆಚ್ಚಿಸುತ್ತವೆ. ಹೆಲ್ತ್ಕೇರ್ ಮತ್ತು ಲೈಫ್ ಸೈನ್ಸ್ ಕ್ಷೇತ್ರದಲ್ಲಿ ಭಾರತದ ಮೇಲೆ ಜಾಗತಿಕ ವಿಶ್ವಾಸ ಹೆಚ್ಚಿಸುತ್ತವೆ’ ಎಂದು ಡಾ. ಪ್ರತಾಪ್ ಸಿ. ರೆಡ್ಡಿ ಹೇಳಿದ್ದಾರೆ.
‘ಜನರತ್ತ ಗಮನ ನೆಟ್ಟಿರುವುದು ಬಹಳ ಖುಷಿಯ ಸಂಗತಿ. ಮುಂಬರುವ ವರ್ಷದಲ್ಲಿ 10,000 ಮೆಡಿಲ್ ಸೀಟ್ಗಳನ್ನು ಸೇರಿಸುವದು, ಒಂದೂವರೆ ಲಕ್ಷ ಕೇರ್ಗಿವರ್ಗಳಿಗೆ (ಆರೋಗ್ಯ ಕಾಳಜಿ ಸಹಾಯಕ) ತರಬೇತಿ ಕೊಡುವುದು, ಸಂಬಂಧಿತ ಆರೋಗ್ಯ ವಿಭಾಗಗಳನ್ನು ಬಲಪಡಿಸುವುದು, ಇವುಗಳಿಂದ ಪ್ರಧಾನಿಗಳ ಹೀಲ್ ಇನ್ ಇಂಡಿಯಾ, ಹೀಲ್ ಬೈ ಇಂಡಿಯಾ ಆಶಯ ಮತ್ತಷ್ಟು ಬಲಗೊಳ್ಳುತ್ತದೆ’ ಎಂದು ಅಪೋಲೋ ಹಾಸ್ಪಿಟಲ್ಸ್ನ ಛೇರ್ಮನ್ ತಿಳಿಸಿದ್ದಾರೆ.
‘ನಿಮ್ಹಾನ್ಸ್-2 ಸ್ಥಾಪಿಸುವುದು, ರಾಂಚಿ ಮತ್ತು ತೇಜ್ಪುರ್ನಲ್ಲಿರುವ ಮಾನಸಿಕ ಆರೋಗ್ಯ ಸಂಸ್ಥೆಗಳನ್ನು ಬಲಪಡಿಸುವುದು, ಜಿಲ್ಲಾಸ್ಪತ್ರೆಗಳಲ್ಲಿ ಎಮರ್ಜೆನ್ಸಿ ಮತ್ತು ಟ್ರೌಮಾ ಕೇರ್ ಸಾಮರ್ಥ್ಯವನ್ನು ಶೇ. 50ರಷ್ಟು ಹೆಚ್ಚಿಸುವುದು, ಇತ್ಯಾದಿ ಕ್ರಮಗಳನ್ನು ಬಜೆಟ್ನಲ್ಲಿ ಪ್ರಸ್ತಾಪಿಸಲಾಗಿದೆ. ಮಾನಸಿಕ ಆರೋಗ್ಯ ಮತ್ತು ಟ್ರೌಮಾ ಕೇರ್ ಬಗ್ಗೆ ಸರ್ಕಾರಕ್ಕೆ ಬದ್ಧತೆ ಇರುವುದನ್ನು ನಾವು ಪ್ರಶಂಸಿಸುತ್ತೇವೆ’ ಎಂದಿದ್ದಾರೆ.
ಇದನ್ನೂ ಓದಿ: ಜೀವ ರಕ್ಷಕ ಔಷಧಿಗಳ ದರ ಇಳಿಕೆ, 3 ಹೊಸ ಏಮ್ಸ್ ಆಸ್ಪತ್ರೆ: ಬಜೆಟ್ನಲ್ಲಿ ಆರೋಗ್ಯ ಕ್ಷೇತ್ರಕ್ಕೆ ಭರಪೂರ ಕೊಡುಗೆ
36 ಜೀವರಕ್ಷಕ ಔಷಧಿಗಳಿಗೆಗೆ ಸುಂಕ ತೆಗೆದುಹಾಕಿರುವುದೂ ಸೇರಿದಂತೆ ಔಷಧಗಳು ಅಗ್ಗದ ಬೆಲೆಗೆ ಲಭ್ಯವಾಗುವಂತೆ ಕ್ರಮ ತೆಗೆದುಕೊಂಡಿರುವುದರಿಂದ ರೋಗಿಗಳಿಗೆ ಹಣದ ಹೊರೆ ಕಡಿಮೆ ಆಗಬಲ್ಲುದು ಎಂದು ಡಾ. ಪ್ರತಾಪ್ ಸಿ ರೆಡ್ಡಿ ಹೇಳಿದ್ದಾರೆ.
‘ಈ ಆದ್ಯತೆಗಳು ಪ್ರತಿಯೊಬ್ಬ ಭಾರತೀಯನ ಆರೋಗ್ಯದ ಮೇಲೆ ಪರಿಣಾಮ ಬೀರಲಾಗುವಂತೆ ಸರ್ಕಾರ ಹಾಗೂ ಎಲ್ಲಾ ಭಾಗಿದಾರರ ಜೊತೆ ನಿಕವಾಗಿ ಕೆಲಸ ಮಾಡಲು ಅಪೋಲೋ ಹಾಸ್ಪಿಟಲ್ಸ್ ಬದ್ಧವಾಗಿರುತ್ತದೆ’ ಎಂದೂ ಈ ಸಂಸ್ಥೆಯ ಸಂಸ್ಥಾಪಕರು ತಿಳಿಸಿದ್ದಾರೆ.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ