Wipro Layoff: ವಿಪ್ರೋದಿಂದ 450 ಮಂದಿ ಹೊಸ ಉದ್ಯೋಗಿಗಳ ವಜಾ; ವರದಿ

ಆದಾಯ ಮತ್ತು ಲಾಭದಲ್ಲಿ ಹೆಚ್ಚಳ ದಾಖಲಾದ ಬೆನ್ನಲ್ಲೇ ವಿಪ್ರೋ ಉದ್ಯೋಗಿಗಳನ್ನು ವಜಾಗೊಳಿಸಿರುವುದು ಅಚ್ಚರಿಗೆ ಕಾರಣವಾಗಿದೆ.

Wipro Layoff: ವಿಪ್ರೋದಿಂದ 450 ಮಂದಿ ಹೊಸ ಉದ್ಯೋಗಿಗಳ ವಜಾ; ವರದಿ
ವಿಪ್ರೋ (ಸಾಂದರ್ಭಿಕ ಚಿತ್ರ)
Follow us
Ganapathi Sharma
|

Updated on:Jan 21, 2023 | 6:21 PM

ಬೆಂಗಳೂರು: ಬೆಂಗಳೂರಿನಲ್ಲಿ ಪ್ರಧಾನ ಕಚೇರಿ ಹೊಂದಿರುವ ವಿಪ್ರೋ (Wipro) ಸುಮಾರು 450 ಮಂದಿ ಹೊಸ ಉದ್ಯೋಗಿಗಳನ್ನು ಕೆಲಸದಿಂದ ವಜಾಗೊಳಿಸಿದೆ (Layoff) ಎಂದು ವರದಿಯಾಗಿದೆ. ಆಂತರಿಕ ಪರೀಕ್ಷೆ ನಡೆಸಿದ ಬಳಿಕ ಕಳಪೆ ಕಾರ್ಯಕ್ಷಮತೆಯ ಕಾರಣ ನೀಡಿ ಉದ್ಯೋಗಿಗಳನ್ನು ವಜಾಗೊಳಿಸಿರುವುದು ತಿಳಿದುಬಂದಿದೆ. ನಾವು ಅತ್ಯುನ್ನತ ಗುಣಮಟ್ಟವನ್ನು ಬಯಸುತ್ತೇವೆ. ನಾವು ನಿಗದಿಪಡಿಸಿರುವ ಗುರಿಯ ಮಾನದಂಡಗಳಿಗೆ ಅನುಗುಣವಾಗಿ, ಪ್ರತಿಯೊಬ್ಬ ಹೊಸ ಉದ್ಯೋಗಿ ಕೂಡ ಅವರಿಗೆ ನೀಡಲಾದ ಕೆಲಸದ ಕ್ಷೇತ್ರದಲ್ಲಿ ನಿರ್ದಿಷ್ಟ ಮಟ್ಟದ ಪ್ರಾವೀಣ್ಯತೆಯನ್ನು ಹೊಂದಿರಬೇಕೆಂದು ನಾವು ನಿರೀಕ್ಷಿಸುತ್ತೇವೆ. ಸಂಸ್ಥೆಯ ವ್ಯವಹಾರ ಉದ್ದೇಶಗಳು ಮತ್ತು ನಮ್ಮ ಗ್ರಾಹಕರ ಅಗತ್ಯತೆಗಳನ್ನು ಗಣನೆಗೆ ತೆಗೆದುಕೊಂಡು ಮೌಲ್ಯಮಾಪನ ಪ್ರಕ್ರಿಯೆ ರೂಪಿಸಲಾಗಿದೆ. ಮೌಲ್ಯಮಾಪನದ ಆಧಾರದಲ್ಲಿ ತರಬೇತಿ ಸೇರಿದಂತೆ ಹಲವು ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ ಎಂದು ವಿಪ್ರೋ ಪ್ರತಿಕ್ರಿಯೆ ನೀಡಿರುವುದಾಗಿ ‘ಬ್ಯುಸಿನೆಸ್ ಟುಡೇ’ ವರದಿ ಮಾಡಿದೆ. 450 ಮಂದಿ ಹೊಸ ಉದ್ಯೋಗಿಗಳನ್ನು ವಜಾಗೊಳಿಸಿರುವ ಬಗ್ಗೆ ಮೂಲಗಳು ಆರೋಪಿಸಿವೆ ಎಂದೂ ವರದಿ ಉಲ್ಲೇಖಿಸಿದೆ.

ವಜಾಗೊಂಡ ಉದ್ಯೋಗಿಗಳ ಟರ್ಮಿನೇಷನ್ ಪತ್ರದ ಪ್ರತಿ ಲಭ್ಯವಾಗಿದೆ. ಅದರಲ್ಲಿ, ‘ನಿಮ್ಮ ತರಬೇತಿಗಾಗಿ ವ್ಯಯಿಸಿದ 75,000 ರೂ. ಭರ್ತಿಗೆ ನೀವು ಹೊಣೆಗಾರರಾಗಿದ್ದೀರಿ. ಆದರೆ ಈ ಮೊತ್ತವನ್ನು ಮನ್ನಾ ಮಾಡಿದ್ದೇವೆ’ ಎಂದು ವಿಪ್ರೋ ಉಲ್ಲೇಖಿಸಿದೆ ಎಂದು ‘ಬ್ಯುಸಿನೆಸ್​ ಟುಡೇ’ ವರದಿ ಹೇಳಿದೆ.

‘ನನಗೆ 2022ರ ಜನವರಿಯಲ್ಲಿ ಆಫರ್ ಲೆಟರ್ ದೊರೆತಿತ್ತು. ಸುಮಾರು ತಿಂಗಳು ವಿಳಂಬ ನೀತಿ ಅನುಸರಿಸಿದ ಬಳಿಕ ನೇಮಕ ಮಾಡಿಕೊಳ್ಳಲಾಯಿತು. ಇದೀಗ ಪರೀಕ್ಷೆಯ ನೆಪ ಹೇಳಿ ವಜಾಗೊಳಿಸಿದ್ದಾರೆ’ ಎಂದು ಉದ್ಯೋಗಿಯೊಬ್ಬರು ಅಳಲು ತೋಡಿಕೊಂಡಿದ್ದಾರೆ. ‘ಉದ್ಯೋಗಿಗಳನ್ನು ವಜಾಗೊಳಿಸಲು ಇದು ಅವರಿಗೊಂದು ನೆಪವಷ್ಟೇ’ ಎಂದು ಮತ್ತೊಬ್ಬರು ಹೇಳಿದ್ದಾರೆ.

ಇದನ್ನೂ ಓದಿ: Wipro Q3 Result: ವಿಪ್ರೋ ಆದಾಯ ಶೇ 14.3 ಹೆಚ್ಚಳ; ಲಾಭವೂ ಏರಿಕೆ

ಜಾಗತಿಕವಾಗಿ ಐಟಿ ಕಂಪನಿಗಳು ಆರ್ಥಿಕ ಸಂಕಷ್ಟ ಎದುರಿಸುತ್ತಿರುವ ನಡುವೆಯೂ ವಿಪ್ರೋ ಲಾಭದಲ್ಲಿ ಹೆಚ್ಚಳ ಕಂಡುಬಂದಿತ್ತು. ಡಿಸೆಂಬರ್​​ಗೆ ಕೊನೆಗೊಂಡ ತ್ರೈಮಾಸಿಕ ಅವಧಿಯ ಫಲಿತಾಂಶವನ್ನು ಇತ್ತೀಚೆಗಷ್ಟೇ ಪ್ರಕಟಿಸಿದ್ದ ವಿಪ್ರೋ ಆದಾಯ ಗಳಿಕೆಯಲ್ಲಿ ಶೇಕಡಾ 14.3ರಷ್ಟು ಹೆಚ್ಚಳವಾಗಿದ್ದು, 23,229 ಕೋಟಿ ರೂ. ಆಗಿತ್ತು. ಕ್ರೂಡೀಕೃತ ನಿವ್ವಳ ಲಾಭದ ಪ್ರಮಾಣ ಶೇಕಡಾ 2.8ರಷ್ಟು ಹೆಚ್ಚಳವಾಗಿದ್ದು, 3,053 ಕೋಟಿ ರೂ. ಆಗಿದೆ. ನಿವ್ವಳ ಲಾಭ 2,969 ಕೋಟಿ ರೂ. ಆಗಿದೆ ಎಂದು ತಿಳಿಸಿತ್ತು. ಆದಾಯ ಮತ್ತು ಲಾಭದಲ್ಲಿ ಹೆಚ್ಚಳ ದಾಖಲಾದ ಬೆನ್ನಲ್ಲೇ ಉದ್ಯೋಗಿಗಳನ್ನು ವಜಾಗೊಳಿಸಿರುವುದು ಅಚ್ಚರಿಗೆ ಕಾರಣವಾಗಿದೆ.

ಇನ್ನಷ್ಟು ವಾಣಿಜ್ಯ ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ

Published On - 5:59 pm, Fri, 20 January 23

ಭಾರತೀಯ ಕಂಪನಿಗಳ ಅಭಿವೃದ್ಧಿಯಲ್ಲಿ ಬೆಂಜ್ ಪಾತ್ರ ಮಹತ್ವದ್ದು; ಬಾಬಾ ಕಲ್ಯಾಣಿ
ಭಾರತೀಯ ಕಂಪನಿಗಳ ಅಭಿವೃದ್ಧಿಯಲ್ಲಿ ಬೆಂಜ್ ಪಾತ್ರ ಮಹತ್ವದ್ದು; ಬಾಬಾ ಕಲ್ಯಾಣಿ
‘ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ’ ನೋಡಲು ಜನ ಬರಲಿಲ್ಲ: ಕಾರಣ ತಿಳಿಸಿದ ವಿತರಕ
‘ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ’ ನೋಡಲು ಜನ ಬರಲಿಲ್ಲ: ಕಾರಣ ತಿಳಿಸಿದ ವಿತರಕ
ಸತ್ತವನು ದಿಢೀರನೆ ಎದ್ದು ಕೂತ ಕತೆ; ಶಾಕಿಂಗ್ ವಿಡಿಯೋ ವೈರಲ್
ಸತ್ತವನು ದಿಢೀರನೆ ಎದ್ದು ಕೂತ ಕತೆ; ಶಾಕಿಂಗ್ ವಿಡಿಯೋ ವೈರಲ್
ಭಾರತದ ಸ್ಟೀಲ್ ಉದ್ಯಮದಲ್ಲಿ ಹೆಚ್ಚು ಇಂಗಾಲದ ಡೈ ಆಕ್ಸೈಡ್ ಉತ್ಪತ್ತಿ: ಗೋಯಲ್
ಭಾರತದ ಸ್ಟೀಲ್ ಉದ್ಯಮದಲ್ಲಿ ಹೆಚ್ಚು ಇಂಗಾಲದ ಡೈ ಆಕ್ಸೈಡ್ ಉತ್ಪತ್ತಿ: ಗೋಯಲ್
5 ಲಕ್ಷ ರೂಪಾಯಿ ಪಡೆದು ಮೋಸ ಮಾಡಿದ ಸ್ಟಾರ್​ ನಟಿ; ನಿರ್ಮಾಪಕಿ ಆರೋಪ
5 ಲಕ್ಷ ರೂಪಾಯಿ ಪಡೆದು ಮೋಸ ಮಾಡಿದ ಸ್ಟಾರ್​ ನಟಿ; ನಿರ್ಮಾಪಕಿ ಆರೋಪ
ಶಿಕ್ಷಣ ಸಾರ್ಥಕವಾಗಲು ಮೂರು ಅಂಶಗಳ ಮನನವಾಗಬೇಕು: ಸಿದ್ದರಾಮಯ್ಯ
ಶಿಕ್ಷಣ ಸಾರ್ಥಕವಾಗಲು ಮೂರು ಅಂಶಗಳ ಮನನವಾಗಬೇಕು: ಸಿದ್ದರಾಮಯ್ಯ
ಸ್ಕೂಟಿಗೆ ಡಿಕ್ಕಿ ಹೊಡೆದು 1 ಕಿ.ಮೀ ಎಳೆದೊಯ್ದ ಕಾರು; ಚಿಮ್ಮಿದ ಬೆಂಕಿ ಕಿಡಿ
ಸ್ಕೂಟಿಗೆ ಡಿಕ್ಕಿ ಹೊಡೆದು 1 ಕಿ.ಮೀ ಎಳೆದೊಯ್ದ ಕಾರು; ಚಿಮ್ಮಿದ ಬೆಂಕಿ ಕಿಡಿ
ನ್ಯೂಸ್​​9 ಗ್ಲೋಬಲ್​ ಸಮಿಟ್​ನಲ್ಲಿ ಕರ್ನಾಟಕ-ಜರ್ಮನಿ ನಂಟು: ಸಿಎಂ ಮಾತು
ನ್ಯೂಸ್​​9 ಗ್ಲೋಬಲ್​ ಸಮಿಟ್​ನಲ್ಲಿ ಕರ್ನಾಟಕ-ಜರ್ಮನಿ ನಂಟು: ಸಿಎಂ ಮಾತು
ಧಾರವಾಡದಲ್ಲಿ ರೈತರೊಂದಿಗೆ ವಿತಂಡವಾದಕ್ಕಿಳಿದ ಸಚಿವ ಸಂತೋಷ್ ಲಾಡ್
ಧಾರವಾಡದಲ್ಲಿ ರೈತರೊಂದಿಗೆ ವಿತಂಡವಾದಕ್ಕಿಳಿದ ಸಚಿವ ಸಂತೋಷ್ ಲಾಡ್
ನೋಟೀಸ್ ಹಿಂಪಡೆಯಲು ಸಿದ್ದರಾಮಯ್ಯ ಮೌಖಿಕ ಆದೇಶ ನೀಡಿದ್ದಾರೆ: ರೆಡ್ಡಿ
ನೋಟೀಸ್ ಹಿಂಪಡೆಯಲು ಸಿದ್ದರಾಮಯ್ಯ ಮೌಖಿಕ ಆದೇಶ ನೀಡಿದ್ದಾರೆ: ರೆಡ್ಡಿ