Wipro Q3 Result: ವಿಪ್ರೋ ಆದಾಯ ಶೇ 14.3 ಹೆಚ್ಚಳ; ಲಾಭವೂ ಏರಿಕೆ
ಬೆಂಗಳೂರಿನಲ್ಲಿ ಪ್ರಧಾನ ಕಚೇರಿ ಹೊಂದಿರುವ ವಿಪ್ರೋ ಆದಾಯದಲ್ಲಿ ಶೇಕಡಾ 14.3ರ ಹೆಚ್ಚಳ ಕಂಡುಬಂದಿದ್ದು, 23,229 ಕೋಟಿ ರೂ. ಆಗಿದೆ. ಒಟ್ಟಾರೆಯಾಗಿ ವಾರ್ಷಿಕ ಶೇಕಡಾ 11.5ರಿಂದ 12ರಷ್ಟು ಆದಾಯ ಹೆಚ್ಚಳವನ್ನು ನಿರೀಕ್ಷಿಸಲಾಗುತ್ತಿದೆ ಎಂದು ಕಂಪನಿ ತಿಳಿಸಿದೆ.
ಬೆಂಗಳೂರು: ಜಾಗತಿಕವಾಗಿ ಐಟಿ ಕಂಪನಿಗಳು (IT Companies) ಆರ್ಥಿಕ ಸಂಕಷ್ಟ ಎದುರಿಸುತ್ತಿರುವ ಮಧ್ಯೆಯೇ ಭಾರತದ ಕಂಪನಿಗಳು ಉತ್ತಮ ಬೆಳವಣಿಗೆ ಸಾಧಿಸುತ್ತಿದ್ದು ಭರವಸೆ ಮೂಡಿಸಿವೆ. ಇನ್ಫೋಸಿಸ್ ತ್ರೈಮಾಸಿಕ ಫಲಿತಾಂಶ ಫಲಿತಾಂಶವು ಲಾಭ ಗಳಿಕೆ ದಾಖಲಿಸಿದ ಬೆನ್ನಲ್ಲೇ ಇದೀಗ ಟೆಕ್ ಕಂಪನಿ ವಿಪ್ರೋದ (Wipro) ಲಾಭದಲ್ಲಿಯೂ ಏರಿಕೆ ಕಂಡುಬಂದಿದೆ. ಡಿಸೆಂಬರ್ಗೆ ಕೊನೆಗೊಂಡ ತ್ರೈಮಾಸಿಕ ಅವಧಿಯ ಫಲಿತಾಂಶವನ್ನು ವಿಪ್ರೋ ಶುಕ್ರವಾರ ಬಿಡುಗಡೆ ಮಾಡಿದೆ. ಹಿಂದಿನ ವರ್ಷಕ್ಕೆ ಹೋಲಿಸಿದರೆ ಕಂಪನಿಯ ಆದಾಯ ಗಳಿಕೆಯಲ್ಲಿ ಶೇಕಡಾ 14.3ರಷ್ಟು ಹೆಚ್ಚಳವಾಗಿರುವುದು ಕಂಡುಬಂದಿದೆ. ಕ್ರೂಡೀಕೃತ ನಿವ್ವಳ ಲಾಭದ ಪ್ರಮಾಣ ಶೇಕಡಾ 2.8ರಷ್ಟು ಹೆಚ್ಚಳವಾಗಿದ್ದು, 3,053 ಕೋಟಿ ರೂ. ಆಗಿದೆ. ನಿವ್ವಳ ಲಾಭ 2,969 ಕೋಟಿ ರೂ. ಆಗಿದೆ.
ಬೆಂಗಳೂರಿನಲ್ಲಿ ಪ್ರಧಾನ ಕಚೇರಿ ಹೊಂದಿರುವ ವಿಪ್ರೋ ಆದಾಯದಲ್ಲಿ ಶೇಕಡಾ 14.3ರ ಹೆಚ್ಚಳ ಕಂಡುಬಂದಿದ್ದು, 23,229 ಕೋಟಿ ರೂ. ಆಗಿದೆ. ಒಟ್ಟಾರೆಯಾಗಿ ವಾರ್ಷಿಕ ಶೇಕಡಾ 11.5ರಿಂದ 12ರಷ್ಟು ಆದಾಯ ಹೆಚ್ಚಳವನ್ನು ನಿರೀಕ್ಷಿಸಲಾಗುತ್ತಿದೆ. ಇದರಿಂದ 2023ರ ಮಾರ್ಚ್ 31ಕ್ಕೆ ಕೊನೆಗೊಳ್ಳಲಿರುವ ಹಣಕಾಸು ವರ್ಷದ ಬೆಳವಣಿಗೆ ದರ ಶೇ -0.6ರಿಂದ ಶೇ 1ಕ್ಕೆ ಹೆಚ್ಚಳವಾಗಲಿದೆ ಎಂದು ಕಂಪನಿ ತಿಳಿಸಿದೆ.
ಇದನ್ನೂ ಓದಿ: Infosys Hiring: ಮೂರನೇ ತ್ರೈಮಾಸಿಕದಲ್ಲಿ ಇನ್ಫೋಸಿಸ್ನಿಂದ 6,000 ಮಂದಿಯ ನೇಮಕ; 50,000 ಉದ್ಯೋಗದ ಗುರಿ
ಒಟ್ಟಾರೆಯಾಗಿ 4.3 ಶತಕೋಟಿ ಡಾಲರ್ ಮೌಲ್ಯದ ವ್ಯಾಪಾರ ಒಪ್ಪಂದ ಮಾಡಕೊಳ್ಳಲಾಗಿದೆ. 1 ಶತಕೋಟಿ ಡಾಲರ್ ಮೊತ್ತದ ದೊಡ್ಡ ಒಪ್ಪಂದ ಮಾಡಿಕೊಳ್ಳಲಾಗಿದೆ ಎಂದು ಕಂಪನಿಯ ಸಿಇಒ ಮತ್ತು ವ್ಯವಸ್ಥಾಪಕ ನಿರ್ದೇಶಕ ಥಿಯೆರಿ ಡೆಲಾಪೋರ್ಟೆ ತಿಳಿಸಿದ್ದಾರೆ.
ಇನ್ಫೋಸಿಸ್ ತ್ರೈಮಾಸಿಕ ಫಲಿತಾಂಶ ಗುರುವಾರ ಪ್ರಕಟಗೊಂಡಿತ್ತು. ಕಂಪನಿಯು ವಾರ್ಷಿಕ ಶೇಕಡಾ 13ರಷ್ಟು ನಿವ್ವಳ ಲಾಭ ಹೆಚ್ಚಳ ದಾಖಲಿಸಿದೆ. ವಾರ್ಷಿಕ ಕ್ರೋಡೀಕೃತ ಆದಾಯ ಪ್ರಮಾಣ ಶೇ 20.2 ಹೆಚ್ಚಳವಾಗಿದ್ದು, 38,318 ಕೋಟಿ ರೂ. ಆಗಿದೆ. ಕ್ರೋಡೀಕೃತ ನಿವ್ವಳ ಲಾಭ ಶೇ 13.4 ಹೆಚ್ಚಾಗಿ 6,586 ಕೋಟಿ ರೂ. ಆಗಿದೆ. ಜಗತ್ತಿನಾದ್ಯಂತ ಟೆಕ್ ಕಂಪನಿಗಳು ಉದ್ಯೋಗ ಕಡಿತದ ಮೊರೆ ಹೋಗಿರುವ ಸಂದರ್ಭದಲ್ಲಿ ಇನ್ಫೋಸಿಸ್ ಮೂರನೇ ತ್ರೈಮಾಸಿಕ ಅವಧಿಯಲ್ಲಿ ಇನ್ಫೋಸಿಸ್ 6,000 ಮಂದಿ ಹೊಸಬರನ್ನು ನೇಮಕ ಮಾಡಿಕೊಂಡಿದೆ. ಒಟ್ಟಾರೆಯಾಗಿ 23ನೇ ಹಣಕಾಸು ವರ್ಷದಲ್ಲಿ 50,000 ಮಂದಿಯ ನೇಮಕ ಮಾಡಿಕೊಳ್ಳುವ ಗುರಿಯನ್ನು ಕಂಪನಿ ಹಾಕಿಕೊಂಡಿದೆ. ಇದರೊಂದಿಗೆ, ಜಾಗತಿಕ ಮಟ್ಟದಲ್ಲಿ ಐಟಿ ಕಂಪನಿಗಳ ಆದಾಯ ಕುಸಿತದ ಹೊರತಾಗಿಯೂ ಭಾರತದ ಕಂಪನಿಗಳು ಉತ್ತಮ ಸಾಧನೆ ತೋರಿವೆ.
ಇನ್ನಷ್ಟು ವಾಣಿಜ್ಯ ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ