Sign In

By signing in or creating an account, you agree with Associated Broadcasting Company's Terms & Conditions and Privacy Policy.

Tirupati Temple: ವಿಪ್ರೋ, ನೆಸ್ಲೆಗಿಂತಲೂ ಶ್ರೀಮಂತವಾಗಿದೆ ತಿರುಪತಿ ದೇವಸ್ಥಾನ; ತಿಮ್ಮಪ್ಪನ ಆಸ್ತಿ ಎಷ್ಟು ಗೊತ್ತಾ?

ಬೆಂಗಳೂರು ಮೂಲದ ವಿಪ್ರೋ 2.14 ಲಕ್ಷ ಕೋಟಿ ರೂ. ಮಾರುಕಟ್ಟೆ ಮೌಲ್ಯವನ್ನು ಹೊಂದಿದ್ದು, ಅಲ್ಟ್ರಾಟೆಕ್ ಸಿಮೆಂಟ್ 1.99 ಲಕ್ಷ ಕೋಟಿ ರೂ. ಮಾರುಕಟ್ಟೆ ಮೌಲ್ಯವನ್ನು ಹೊಂದಿದೆ. ಅದಕ್ಕಿಂತಲೂ ತಿರುಪತಿ ದೇವಸ್ಥಾನದ ಆಸ್ತಿ ಹೆಚ್ಚಾಗಿದೆ.

Tirupati Temple: ವಿಪ್ರೋ, ನೆಸ್ಲೆಗಿಂತಲೂ ಶ್ರೀಮಂತವಾಗಿದೆ ತಿರುಪತಿ ದೇವಸ್ಥಾನ; ತಿಮ್ಮಪ್ಪನ ಆಸ್ತಿ ಎಷ್ಟು ಗೊತ್ತಾ?
ತಿರುಪತಿ ದೇವಸ್ಥಾನ
Follow us
TV9 Web
| Updated By: ಸುಷ್ಮಾ ಚಕ್ರೆ

Updated on: Nov 07, 2022 | 8:55 AM

ನವದೆಹಲಿ: ಭಾರತದ ಪ್ರಸಿದ್ಧ ದೇವಸ್ಥಾನಗಳಲ್ಲಿ ಒಂದಾಗಿರುವ ತಿರುಪತಿಯ ವೆಂಕಟೇಶ್ವರ ದೇವಸ್ಥಾನ (Tirupati Venkateshwara Temple) ಐಟಿ ಕಂಪನಿಯಾದ ವಿಪ್ರೋ (Wipro), ಫುಡ್ ಕಂಪನಿಯಾದ ನೆಸ್ಲೆ (Nestle), ಸರ್ಕಾರಿ ಸ್ವಾಮ್ಯದ ತೈಲ ಕಂಪನಿಯಾದ ಓಎನ್​ಜಿಸಿ (ONGC) ಮತ್ತು ಐಒಸಿ (IOC)ಗಿಂತಲೂ ಶ್ರೀಮಂತವಾಗಿದೆ! ತಿರುಪತಿ ತಿಮ್ಮಪ್ಪನ ದೇವಸ್ಥಾನದ ನಿವ್ವಳ ಮೌಲ್ಯ 2.5 ಲಕ್ಷ ಕೋಟಿ ರೂ. ಎಂದು ಘೋಷಿಸಲಾಗಿದೆ.

1933ರಲ್ಲಿ ಸ್ಥಾಪನೆಯಾದ ನಂತರ ಮೊದಲ ಬಾರಿಗೆ ತಿರುಮಲ ತಿರುಪತಿ ದೇವಸ್ಥಾನಮ್ಸ್ ತನ್ನ ನಿವ್ವಳ ಮೌಲ್ಯವನ್ನು ಘೋಷಿಸಿದೆ. ಇದರ ಆಸ್ತಿಯಲ್ಲಿ ಬ್ಯಾಂಕ್‌ಗಳಲ್ಲಿ 10.25 ಟನ್ ಚಿನ್ನದ ಠೇವಣಿ, 2.5 ಟನ್ ಚಿನ್ನಾಭರಣ, ಬ್ಯಾಂಕ್‌ಗಳಲ್ಲಿ ಸುಮಾರು 16,000 ಕೋಟಿ ರೂ. ಠೇವಣಿ ಮತ್ತು ಭಾರತದಾದ್ಯಂತ 960 ಆಸ್ತಿಗಳು ಇರುವುದಾಗಿ ಘೋಷಿಸಲಾಗಿದೆ. ಇವೆಲ್ಲವೂ ಸೇರಿ ಒಟ್ಟು 2.5 ಲಕ್ಷ ಕೋಟಿ ರೂ.ಗೂ ಹೆಚ್ಚು ಮೌಲ್ಯವಾಗಲಿದೆ. ಈ ಆಸ್ತಿ ಭಾರತದ ಬಹುತೇಕ ಬಹುರಾಷ್ಟ್ರೀಯ ಕಂಪನಿಗಳ ಬಂಡವಾಳಕ್ಕಿಂತಲೂ ಹೆಚ್ಚಿನದ್ದಾಗಿದೆ.

ಬೆಂಗಳೂರು ಮೂಲದ ವಿಪ್ರೋ 2.14 ಲಕ್ಷ ಕೋಟಿ ರೂ. ಮಾರುಕಟ್ಟೆ ಮೌಲ್ಯವನ್ನು ಹೊಂದಿದ್ದು, ಅಲ್ಟ್ರಾಟೆಕ್ ಸಿಮೆಂಟ್ 1.99 ಲಕ್ಷ ಕೋಟಿ ರೂ. ಮಾರುಕಟ್ಟೆ ಮೌಲ್ಯವನ್ನು ಹೊಂದಿದೆ. ಸ್ವಿಸ್ ಬಹುರಾಷ್ಟ್ರೀಯ ಆಹಾರ ಮತ್ತು ಪಾನೀಯದ ಪ್ರಮುಖ ನೆಸ್ಲೆಯ 1.96 ಲಕ್ಷ ಕೋಟಿ ರೂ. ಮಾರುಕಟ್ಟೆ ಮೌಲ್ಯವನ್ನು ಹೊಂದಿದೆ.

ಇದನ್ನೂ ಓದಿ: TTD: ಹಿರಿಯ ನಾಗರಿಕರಿಗೆ ಟಿಟಿಡಿ ಗುಡ್ ನ್ಯೂಸ್! ಉಚಿತ ದರ್ಶನ ಟಿಕೆಟ್ ಆನ್‌ಲೈನ್ ನಲ್ಲಿ ಬಿಡುಗಡೆ ಬಗ್ಗೆ ಪ್ರಮುಖ ಘೋಷಣೆ

ಸರ್ಕಾರಿ ಸ್ವಾಮ್ಯದ ತೈಲ ಬೆಹೆಮೊಥ್‌ಗಳಾದ ತೈಲ ಮತ್ತು ನೈಸರ್ಗಿಕ ಅನಿಲ ನಿಗಮ (ONGC) ಮತ್ತು ಇಂಡಿಯನ್ ಆಯಿಲ್ ಕಾರ್ಪೊರೇಷನ್ (IOC) ಸಹ ತಿರುಪತಿ ದೇವಾಲಯದ ಟ್ರಸ್ಟ್‌ಗಿಂತ ಕಡಿಮೆ ಮೌಲ್ಯವನ್ನು ಹೊಂದಿದ್ದವು. ಕೇವಲ 2 ಡಜನ್ ಕಂಪನಿಗಳು ಮಾತ್ರ ದೇವಾಲಯದ ಟ್ರಸ್ಟ್‌ನ ಆಸ್ತಿಗಿಂತ ಹೆಚ್ಚಿನ ಮಾರುಕಟ್ಟೆ ಮೌಲ್ಯವನ್ನು ಹೊಂದಿವೆ.

ಬಿಲಿಯನೇರ್ ಮುಖೇಶ್ ಅಂಬಾನಿಯ ರಿಲಯನ್ಸ್ ಇಂಡಸ್ಟ್ರೀಸ್ ಲಿಮಿಟೆಡ್ (₹17.53 ಲಕ್ಷ ಕೋಟಿ), ಟಾಟಾ ಕನ್ಸಲ್ಟೆನ್ಸಿ ಸರ್ವಿಸಸ್ (₹11.76 ಲಕ್ಷ ಕೋಟಿ), ಎಚ್‌ಡಿಎಫ್‌ಸಿ ಬ್ಯಾಂಕ್ (₹8.34 ಲಕ್ಷ ಕೋಟಿ), ಇನ್ಫೋಸಿಸ್ (₹6.37 ಲಕ್ಷ ಕೋಟಿ), ಐಸಿಐಸಿಐ ಬ್ಯಾಂಕ್ (₹6.31 ಲಕ್ಷ ಕೋಟಿ), ಹಿಂದೂಸ್ತಾನ್ ಯೂನಿಲಿವರ್ ಲಿಮಿಟೆಡ್ (₹5.92 ಲಕ್ಷ ಕೋಟಿ), ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (₹5.29 ಲಕ್ಷ ಕೋಟಿ), ಭಾರ್ತಿ ಏರ್‌ಟೆಲ್ (₹4.54 ಲಕ್ಷ ಕೋಟಿ) ಮತ್ತು ಐಟಿಸಿ (₹4.38 ಲಕ್ಷ ಕೋಟಿ) ಆಸ್ತಿಯನ್ನು ಹೊಂದಿವೆ.

ಇದನ್ನೂ ಓದಿ: ಭಕ್ತರ ಗಮನಕ್ಕೆ: ನವೆಂಬರ್‌ನಿಂದ ತಿರುಪತಿ ವೆಂಕಟರಮಣ ದರ್ಶನ ನಿಯಮಗಳಲ್ಲಿ ಬದಲಾವಣೆ

ತಿರುಮಲ ತಿರುಪತಿ ದೇವಸ್ಥಾನದಲ್ಲಿ (ಟಿಟಿಡಿ) ಭಕ್ತರು ಸಲ್ಲಿಸುವ ನಗದು ಮತ್ತು ಚಿನ್ನದ ಕಾಣಿಕೆಗಳು ಹೆಚ್ಚುತ್ತಲೇ ಇರುವುದರಿಂದ ಈ ದೇವಸ್ಥಾನ ಶ್ರೀಮಂತವಾಗಿ ಬೆಳೆಯುತ್ತಲೇ ಇದೆ. ಟಿಟಿಡಿ ಒಡೆತನದ ಆಸ್ತಿಗಳಲ್ಲಿ ಭೂಮಿ, ಕಟ್ಟಡಗಳು, ಬ್ಯಾಂಕ್‌ಗಳಲ್ಲಿನ ನಗದು ಮತ್ತು ಚಿನ್ನದ ಠೇವಣಿಗಳು ಸೇರಿವೆ. ಇದೆಲ್ಲವನ್ನು ಭಕ್ತರು ದೇವಸ್ಥಾನಕ್ಕೆ ಕಾಣಿಕೆಯಾಗಿ ನೀಡಿದ್ದಾರೆ.

ಟಿಟಿಡಿ ಆಂಧ್ರಪ್ರದೇಶ, ತಮಿಳುನಾಡು, ತೆಲಂಗಾಣ, ಒಡಿಶಾ, ಹರಿಯಾಣ, ಮಹಾರಾಷ್ಟ್ರ ಮತ್ತು ನವದೆಹಲಿಯಲ್ಲಿ ಹೆಚ್ಚಿನ ಸಂಖ್ಯೆಯ ದೇವಾಲಯಗಳನ್ನು ಹೊಂದಿದೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ