AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಗ್ಲೋಬಲ್ ವೆಬ್‌ಸೈಟ್ ಸೆಕ್ಯುರಿಟಿ ಸರ್ಟಿಫಿಕೇಟ್ ವ್ಯವಹಾರದಿಂದ ಹಿಂದೆ ಸರಿಯಲು eMudhra ನಿರ್ಧಾರ

ಗಂಭೀರವಾದ ಕೀ ಉತ್ಪಾದನಾ ದೋಷ ಹಾಗೂ ಸುರಕ್ಷತಾ ವಿವಾದದ ಹಿನ್ನೆಲೆಯಲ್ಲಿ ಇಮುದ್ರ (eMudhra) ಕಂಪನಿಯು ತನ್ನ ಜಾಗತಿಕ ವೆಬ್‌ಸೈಟ್ ಭದ್ರತಾ ಸರ್ಟಿಫಿಕೇಟ್ ವ್ಯವಹಾರದಿಂದ (Global TLS business) ಸಂಪೂರ್ಣವಾಗಿ ಹಿಂದೆ ಸರಿಯಲು ನಿರ್ಧರಿಸಿದೆ. ಬೆಂಗಳೂರು ಮೂಲದ ಈ ಖಾಸಗಿ ಕಂಪನಿಯ ನಿರ್ಧಾರವನ್ನು ಅದರ ಸಂಸ್ಥಾಪಕರಾದ ವಿ ಶ್ರೀನಿವಾಸನ್ ತಿಳಿಸಿದ್ದಾರೆ.

ಗ್ಲೋಬಲ್ ವೆಬ್‌ಸೈಟ್ ಸೆಕ್ಯುರಿಟಿ ಸರ್ಟಿಫಿಕೇಟ್ ವ್ಯವಹಾರದಿಂದ ಹಿಂದೆ ಸರಿಯಲು eMudhra ನಿರ್ಧಾರ
ಸೈಬರ್ ಸೆಕ್ಯೂರಿಟಿ ಚಿತ್ರImage Credit source: Getty Images
ಸುಗ್ಗನಹಳ್ಳಿ ವಿಜಯಸಾರಥಿ
|

Updated on: Oct 22, 2026 | 7:14 PM

Share

ಬೆಂಗಳೂರು, ಅಕ್ಟೋಬರ್ 22: ಡಿಜಿಟಲ್ ಐಡೆಂಟಿಟಿ ಮತ್ತು ಸೈಬರ್ ಸೆಕ್ಯೂರಿಟಿ ಕಂಪನಿಯಾದ ಇಮುದ್ರ (eMudhra) ತನ್ನ ಜಾಗತಿಕ ವೆಬ್​ಸೈಟ್ ಸೆಕ್ಯೂರಿಟಿ ಸರ್ಟಿಫಿಕೇಶನ್ ಬ್ಯುಸಿನೆಸ್​ನಿಂದ ಹೊರಬೀಳುವ ಮಹತ್ವದ ನಿರ್ಧಾರ ತೆಗೆದುಕೊಂಡಿದೆ. ಅದರ ಕೆಲ ಜಾಗತಿಕ ಡಿಜಿಟಲ್ ಸೆಕ್ಯೂರಿಟಿ ಸರ್ಟಿಫಿಕೇಟ್​ಗಳಲ್ಲಿ ಕೀ ಉತ್ಪಾದನಾ ದೋಷದ (Key generation flaw) ವಿವಾದ ಹುಟ್ಟಿಕೊಂಡ ಬೆನ್ನಲ್ಲೇ, ಕಂಪನಿಯು ಈ ಹೆಜ್ಜೆ ಇಡುತ್ತಿದೆ.

ಕೆಲ ತಿಂಗಳುಗಳ ಹಿಂದೆ ಇಮುದ್ರದ ಕೆಲವು ಜಾಗತಿಕ ಮಧ್ಯಂತರ ಸರ್ಟಿಫಿಕೇಟ್‌ಗಳಲ್ಲಿ ತಾಂತ್ರಿಕ ದೋಷದಿಂದಾಗಿ ಅತಿ ದುರ್ಬಲವಾದ ಖಾಸಗಿ ಕೀಗಳು (Weak cryptographic keys) ಉತ್ಪತ್ತಿಯಾಗಿದ್ದವು. ಇದರಿಂದಾಗಿ ಜಾಗತಿಕ ಸೈಬರ್ ಭದ್ರತೆ ಮತ್ತು ಬ್ರೌಸರ್‌ಗಳ ವಿಶ್ವಾಸಾರ್ಹತೆಗೆ ಧಕ್ಕೆಯುಂಟಾಗಿ, ಪ್ರಮುಖ ತಂತ್ರಜ್ಞಾನ ಸಂಸ್ಥೆಗಳು ಆ ಸರ್ಟಿಫಿಕೇಟ್‌ಗಳನ್ನು ಬ್ಲಾಕ್ ಮಾಡಿವೆ.

ಇದನ್ನೂ ಓದಿ: ಲಕ್ಷಾಂತರ ವೆಬ್​ಸೈಟ್​ಗಳಿಗೆ ಸೆಕ್ಯೂರಿಟಿ ಅಲರ್ಟ್; PHP ಪ್ರೋಗ್ರಾಮಿಂಗ್ ಭಾಷೆಯಲ್ಲಿ ತಲೆದೋರಿದ ದೋಷ; PHP2Shell ಅಪಾಯ

ಈ ವಿವಾದದ ನಂತರ ಜಾಗತಿಕ ವೆಬ್‌ಸೈಟ್ ಭದ್ರತಾ ಸರ್ಟಿಫಿಕೇಟ್ ವಿಭಾಗದಲ್ಲಿ ಮುಂದುವರಿಯುವುದಕ್ಕಿಂತ, ತನ್ನ ಪ್ರಮುಖ ಹಾಗೂ ಬಲವಾದ ದೇಶೀಯ ವ್ಯವಹಾರಗಳತ್ತ ಗಮನಹರಿಸಲು ಕಂಪನಿ ತೀರ್ಮಾನಿಸಿದೆ.

ಇ-ಮುದ್ರಾ ಆದಾಯಕ್ಕೆ ಧಕ್ಕೆ ಏನೂ ಇಲ್ಲ

ಜಾಗತಿಕ ವೆಬ್​ಸೈಟ್ ದೃಢೀಕರಣ ಪ್ರಮಾಣಪತ್ರದ ವ್ಯವಹಾರಗಳು ಇಮುದ್ರಾಗೆ ತೀರಾ ದೊಡ್ಡ ಆದಾಯ ತಂದುಕೊಡುವಂಥದ್ದಲ್ಲ. ಅದರ ಒಟ್ಟು ಆದಾಯದಲ್ಲಿ ಇದರ ಪಾಲು ಶೇ. 1 ಮಾತ್ರವೇ ಎಂದು ಸಂಸ್ಥೆಯ ಸಂಸ್ಥಾಪಕ ವಿ ಶ್ರೀನಿವಾಸನ್ ಹೇಳಿದ್ದಾರೆ. ಆದರೆ, ಬೆಂಗಳೂರಿನಲ್ಲಿ ಮುಖ್ಯ ಕಚೇರಿ ಹೊಂದಿರುವ ಇ-ಮುದ್ರಾ, ಷೇರು ಮಾರುಕಟ್ಟೆಯಲ್ಲಿ ಲಿಸ್ಟ್ ಆಗಿರುವ ಖಾಸಗಿ ಕಂಪನಿಯಾಗಿದೆ. ಈ ಘಟನೆ ಬೆಳಕಿಗೆ ಬರುತ್ತಲೇ ಅದರ ಷೇರುಗಳು ಗುರುವಾರ ಕುಸಿದಿವೆ.

ಇದನ್ನೂ ಓದಿ: ಇ-ಮುದ್ರಾ ಭದ್ರತಾ ಲೋಪದ ಕುರಿತು ಕೇಂದ್ರ ಸರ್ಕಾರ ಸ್ಪಷ್ಟನೆ; ನಿಜಕ್ಕೂ ಏನಾಯ್ತು?

ದೇಶೀಯ ಸೇವೆಗಳಿಗೆ ಯಾವುದೇ ಸಮಸ್ಯೆಯಿಲ್ಲ

ಭಾರತದಲ್ಲಿ ಇಮುದ್ರ ಒದಗಿಸುತ್ತಿರುವ ಡಿಜಿಟಲ್ ಸಿಗ್ನೇಚರ್ ಸರ್ಟಿಫಿಕೇಟ್‌ಗಳು (DSC) ಮತ್ತು ಇ-ಸೈನ್ (eSign) ಸೇವೆಗಳು ಸಂಪೂರ್ಣವಾಗಿ ಸುರಕ್ಷಿತವಾಗಿವೆ ಮತ್ತು ಎಂದಿನಂತೆ ಮುಂದುವರಿಯಲಿವೆ. ಈ ಜಾಗತಿಕ ನಿರ್ಧಾರಕ್ಕೂ ಭಾರತದ ದೇಶೀಯ ಎಸ್‌ಎನ್‌ಸಿ ಅಥವಾ ಇ-ಸೈನ್ ಸೇವೆಗಳಿಗೂ ಯಾವುದೇ ಸಂಬಂಧವಿಲ್ಲ ಎಂದು ಕಂಪನಿ ತಿಳಿಸಿದೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Follow Us
ಸುಗ್ಗನಹಳ್ಳಿ ವಿಜಯಸಾರಥಿ
ಸುಗ್ಗನಹಳ್ಳಿ ವಿಜಯಸಾರಥಿ

ಹುಟ್ಟೂರು ಹಾಸನ ಜಿಲ್ಲೆಯ ಶ್ರವಣಬೆಳಗೊಳ ಸಮೀಪದ ಒಂದು ಪುಟ್ಟ ಹಳ್ಳಿ. ಬೆಳದದ್ದು ಬೆಂಗಳೂರು ನಗರದಲ್ಲಿ. ಹಲವು ವರ್ಷಗಳಿಂದ ಪತ್ರಿಕಾ ರಂಗದಲ್ಲಿ ನೆಲೆ. ಬರವಣಿಗೆಯ ಆಸಕ್ತಿ ಮತ್ತು ಪರಿಣಿತಿಯ ಕ್ಷೇತ್ರಗಳು ಆರ್ಥಿಕತೆ, ಹಣಕಾಸು, ಅಂತರರಾಷ್ಟ್ರೀಯ ವಿದ್ಯಮಾನ, ಜನಕ್ರಾಂತಿ, ರಾಷ್ಟ್ರೀಯತೆ, ಸಂಸ್ಕೃತಿ, ಮಾನವ ಸಂಬಂಧ, ಕ್ರೀಡೆ ಮೊದಲಾದವು ಇವೆ. ಓದುಗರಿಗೆ ಸುಲಭವಾಗಿ ಅರ್ಥವಾಗುವಂತೆ ಸಾಧ್ಯವಾದಷ್ಟೂ ಸ್ಫುಟವಾಗಿ, ಸರಳವಾಗಿ ಬರೆಯುವ ಇಚ್ಛೆ.

Read More
ಮೈಸೂರು ದಸರಾ ಯಶಸ್ವಿಗೊಳಿಸಿ ನಾಡಿನಿಂದ ಕಾಡಿನತ್ತ ಹೆಜ್ಜೆ ಹಾಕಿದ ಗಜಪಡೆ
ಮೈಸೂರು ದಸರಾ ಯಶಸ್ವಿಗೊಳಿಸಿ ನಾಡಿನಿಂದ ಕಾಡಿನತ್ತ ಹೆಜ್ಜೆ ಹಾಕಿದ ಗಜಪಡೆ
ಕಿರೀಟ ಕದಿಯಲು ಸಖತ್ ಪ್ಲ್ಯಾನ್ ಮಾಡಿದ ಸೌಂದರ್ಯಾ: ವಿಡಿಯೋ
ಕಿರೀಟ ಕದಿಯಲು ಸಖತ್ ಪ್ಲ್ಯಾನ್ ಮಾಡಿದ ಸೌಂದರ್ಯಾ: ವಿಡಿಯೋ
ಗ್ರಾಹಕನಂತೆ ಬಂದು ಚಿನ್ನ ಕದ್ದೊಯ್ದ: ಕಳ್ಳತನ ಕೃತ್ಯ ಸಿಸಿಟಿವಿಯಲ್ಲಿ ಸೆರೆ!
ಗ್ರಾಹಕನಂತೆ ಬಂದು ಚಿನ್ನ ಕದ್ದೊಯ್ದ: ಕಳ್ಳತನ ಕೃತ್ಯ ಸಿಸಿಟಿವಿಯಲ್ಲಿ ಸೆರೆ!
ಮಧ್ಯರಾತ್ರಿ ಪಟಾಕಿ ಹೊಡೆದ ಆರೋಪ: ರಮ್ಯಾಗೆ ಫನ್ ವರ್ಲ್ಡ್ ಪ್ರತಿಕ್ರಿಯೆ
ಮಧ್ಯರಾತ್ರಿ ಪಟಾಕಿ ಹೊಡೆದ ಆರೋಪ: ರಮ್ಯಾಗೆ ಫನ್ ವರ್ಲ್ಡ್ ಪ್ರತಿಕ್ರಿಯೆ
‘ಪ್ರೇಮದ ಊರಲಿ’ ಸಿನಿಮಾ ನೋಡಲು ಬಂದ ಮಹಿಳೆಯರ ಜಗಳ: ವಿಡಿಯೋ
‘ಪ್ರೇಮದ ಊರಲಿ’ ಸಿನಿಮಾ ನೋಡಲು ಬಂದ ಮಹಿಳೆಯರ ಜಗಳ: ವಿಡಿಯೋ
'ಪ್ರೇಮದ ಊರಲಿ' ಕ್ರೇಜ್: ಟಿಕೆಟ್​​​ಗಾಗಿ ಪರಸ್ಪರ ಬಡಿದಾಡಿಕೊಂಡ ಮಹಿಳೆಯರು!
'ಪ್ರೇಮದ ಊರಲಿ' ಕ್ರೇಜ್: ಟಿಕೆಟ್​​​ಗಾಗಿ ಪರಸ್ಪರ ಬಡಿದಾಡಿಕೊಂಡ ಮಹಿಳೆಯರು!
ತುಮಕೂರು ಶಿರಾದಲ್ಲಿ ಸಾಲಕ್ಕೆ ಚಹಾ ನೀಡಿಲ್ಲವೆಂದು ಬಿಹಾರದ ಯುವಕರ ಅಟ್ಟಹಾಸ
ತುಮಕೂರು ಶಿರಾದಲ್ಲಿ ಸಾಲಕ್ಕೆ ಚಹಾ ನೀಡಿಲ್ಲವೆಂದು ಬಿಹಾರದ ಯುವಕರ ಅಟ್ಟಹಾಸ
ವಿಧಾನ ಪರಿಷತ್ ಶಿಕ್ಷಕರ ಕ್ಷೇತ್ರದ ಚುನಾವಣೆ: ಕಾಂಗ್ರೆಸ್​​ನಿಂದ ಆಮಿಷ ಆರೋಪ
ವಿಧಾನ ಪರಿಷತ್ ಶಿಕ್ಷಕರ ಕ್ಷೇತ್ರದ ಚುನಾವಣೆ: ಕಾಂಗ್ರೆಸ್​​ನಿಂದ ಆಮಿಷ ಆರೋಪ
ದಸರಾ ಮುಕ್ತಾಯ, ಇಂದೇ ಕಾಡಿಗೆ ವಾಪಸಾಗುತ್ತಾ ಗಜಪಡೆ?
ದಸರಾ ಮುಕ್ತಾಯ, ಇಂದೇ ಕಾಡಿಗೆ ವಾಪಸಾಗುತ್ತಾ ಗಜಪಡೆ?
ತುಮಕೂರು ವಿಶ್ವವಿದ್ಯಾಲಯದ ಜ್ಞಾನಸಿರಿ ಕ್ಯಾಂಪಸ್ ಬಳಿ ಚಿರತೆ ಪ್ರತ್ಯಕ್ಷ
ತುಮಕೂರು ವಿಶ್ವವಿದ್ಯಾಲಯದ ಜ್ಞಾನಸಿರಿ ಕ್ಯಾಂಪಸ್ ಬಳಿ ಚಿರತೆ ಪ್ರತ್ಯಕ್ಷ