Bank Holidays in February 2024: ಫೆಬ್ರುವರಿಯಲ್ಲಿ ಬ್ಯಾಂಕುಗಳಿಗೆ 11 ದಿನ ರಜೆ; ಕರ್ನಾಟಕದಲ್ಲಿ ಎಷ್ಟು ರಜೆ?

RBI calendar: 2024ರ ಫೆಬ್ರುವರಿ ತಿಂಗಳಲ್ಲಿ ದೇಶದ ವಿವಿಧೆಡೆ ಒಟ್ಟು 11 ದಿನಗಳು ಬ್ಯಾಂಕ್ ರಜೆ ಇದೆ. ಕರ್ನಾಟಕದಲ್ಲಿ ಬ್ಯಾಂಕುಗಳು ಫೆಬ್ರುವರಿಯಲ್ಲಿ 6 ದಿನ ಮಾತ್ರ ರಜೆ ಹೊಂದಿವೆ. ಭಾನುವಾರ ಮತ್ತು ಶನಿವಾರದ ರಜೆ ಮಾತ್ರವೇ ಇರುವುದು. ಬ್ಯಾಂಕು ರಜೆ ಇದ್ದರೂ ಎಟಿಎಂ, ನೆಟ್​​ಬ್ಯಾಂಕಿಂಗ್ ಇತ್ಯಾದಿ ಡಿಜಿಟಲ್ ಸೇವೆಗಳು ಸದಾ ಲಭ್ಯ ಇದ್ದೇ ಇರುತ್ತವೆ.

Bank Holidays in February 2024: ಫೆಬ್ರುವರಿಯಲ್ಲಿ ಬ್ಯಾಂಕುಗಳಿಗೆ 11 ದಿನ ರಜೆ; ಕರ್ನಾಟಕದಲ್ಲಿ ಎಷ್ಟು ರಜೆ?
ಬ್ಯಾಂಕ್ ರಜೆ
Follow us
ಸುಗ್ಗನಹಳ್ಳಿ ವಿಜಯಸಾರಥಿ
|

Updated on: Jan 30, 2024 | 8:02 AM

ನವದೆಹಲಿ, ಜನವರಿ 30: ಕಳೆದ ನಾಲ್ಕೈದು ತಿಂಗಳಿಂದ ದೇಶದ ವಿವಿಧೆಡೆ ರಜಾದಿನಗಳ ಸುಗ್ಗಿಯೇ ಇತ್ತು. ಈಗ ಫೆಬ್ರುವರಿ ತಿಂಗಳು ಬರುತ್ತಿದ್ದು ಹೆಚ್ಚಿನ ರಜೆಗಳಿಲ್ಲ. ವಿವಿಧ ಪ್ರಾದೇಶಿಕ ರಜೆಗಳೂ ಸೇರಿದಂತೆ ಒಟ್ಟಾರೆ 11 ರಜೆಗಳಿವೆ. ಇದರಲ್ಲಿ 6 ಭಾನುವಾರ ಮತ್ತು ಶನಿವಾರದ ರಜೆಗಳೇ ಸೇರಿವೆ. ಹೆಚ್ಚಿನ ಪ್ರಾದೇಶಿಕ ರಜೆಗಳು ಪೂರ್ವ ಮತ್ತು ಈಶಾನ್ಯ ರಾಜ್ಯಗಳಲ್ಲಿ ಇವೆ. ಕರ್ನಾಟಕ ಸೇರಿದಂತೆ ಹೆಚ್ಚಿನ ಸ್ಥಳಗಳಲ್ಲಿ ಭಾನುವಾರ ಮತ್ತು ಶನಿವಾರ ರಜೆಗಳನ್ನು ಮಾತ್ರವೇ ಬ್ಯಾಂಕುಗಳು (Bank holidays) ಹೊಂದಿವೆ.

2024ರ ಫೆಬ್ರುವರಿ ತಿಂಗಳಲ್ಲಿ ಬ್ಯಾಂಕುಗಳಿಗೆ ಇರುವ ರಜಾ ದಿನಗಳು

  • ಫೆ. 4: ಭಾನುವಾರ
  • ಫೆ. 10: ಎರಡನೇ ಶನಿವಾರ
  • ಫೆ. 11: ಭಾನುವಾರ
  • ಫೆ. 14: ಸರಸ್ವತಿ ಪೂಜೆ / ಬಸಂತ ಪಂಚಮಿ (ಅಗಾರ್ತಲ, ಭುಬನೇಶ್ವರ್, ಕೋಲ್ಕತಾದಲ್ಲಿ ರಜೆ)
  • ಫೆ. 15: ಲುಯ್ ಎನ್​ಗೈ ನಿ ಹಬ್ಬ (ಇಂಫಾಲ್​ನಲ್ಲಿ ರಜೆ)
  • ಫೆ. 18: ಭಾನುವಾರ
  • ಫೆ. 19: ಶಿವಾಜಿ ಜಯಂತಿ (ಬೇಲಾಪುರ್, ಮುಂಬೈ ಮತ್ತು ನಾಗಪುರ್​ನಲ್ಲಿ ರಜೆ)
  • ಫೆ. 20: ರಾಜ್ಯೋತ್ಸವ ಹಬ್ಬದ ಪ್ರಯುಕ್ತ ಐಜ್ವಾಲ್ ಮತ್ತು ಇಟಾನಗರ್​ನಲ್ಲಿ ರಜೆ
  • ಫೆ. 24: ನಾಲ್ಕನೇ ಶನಿವಾರ
  • ಫೆ. 25: ಭಾನುವಾರ
  • ಫೆ. 26: ನ್ಯೋಕುಮ್ ಆಚರಣೆ (ಇಟಾನಗರ್​ನಲ್ಲಿ ರಜೆ)

ಇದನ್ನೂ ಓದಿ: Samsung: ಮೊಬೈಲ್ ಆಯ್ತು, ಸ್ಯಾಮ್ಸಂಗ್ ಲ್ಯಾಪ್​ಟಾಪ್ ಕೂಡ ಭಾರತದಲ್ಲಿ ತಯಾರಿಕೆ; ಮೇಡ್ ಇನ್ ಇಂಡಿಯಾಗೆ ಬದ್ಧವಾದ ಕೊರಿಯನ್ ದೈತ್ಯ

ಕರ್ನಾಟಕದಲ್ಲಿ ಯಾವ್ಯಾವತ್ತು ರಜೆ?

ಆರ್​ಬಿಐ ಕ್ಯಾಲಂಡರ್​ನ ಪಟ್ಟಿಯಲ್ಲಿ ಕರ್ನಾಟಕದಲ್ಲಿ ಫೆಬ್ರುವರಿಯಲ್ಲಿ ಯಾವ ವಿಶೇಷ ರಜೆಯೂ ಇಲ್ಲ. ಫೆಬ್ರುವರಿಯಲ್ಲಿ ಸಾಮಾನ್ಯವಾಗಿ ಇರುತ್ತಿದ್ದ ಶಿವರಾತ್ರಿ ಹಬ್ಬ ಈಗ ಮಾರ್ಚ್ ತಿಂಗಳಲ್ಲಿ ಬಿದ್ದಿದೆ. ಕಳೆದ ನಾಲ್ಕೈ ದಿನಗಳಿಂದ ರಜಾ ದಿನಗಳ ಸುಗ್ಗಿ ಅನುಭವಿಸಿದ್ದ ಬ್ಯಾಂಕುಗಳು ಫೆಬ್ರುವರಿಯಲ್ಲಿ ಹೆಚ್ಚು ಬಾಗಿಲು ತೆರೆಯುತ್ತವೆ. ರಾಜ್ಯದ ಬ್ಯಾಂಕುಗಳು ನಾಲ್ಕು ಭಾನುವಾರ ಮತ್ತು ಎರಡು ಶನಿವಾರದ ರಜೆಗಳನ್ನು ಮಾತ್ರ ಹೊಂದಿವೆ.

  • ಫೆ. 4: ಭಾನುವಾರ
  • ಫೆ. 10: ಎರಡನೇ ಶನಿವಾರ
  • ಫೆ. 11: ಭಾನುವಾರ
  • ಫೆ. 18: ಭಾನುವಾರ
  • ಫೆ. 24: ನಾಲ್ಕನೇ ಶನಿವಾರ
  • ಫೆ. 25: ಭಾನುವಾರ

ಬ್ಯಾಂಕುಗಳು ಬಾಗಿಲು ಬಂದ್ ಮಾಡಿದರೂ ಎಟಿಎಂ, ನೆಟ್​ಬ್ಯಾಂಕಿಂಗ್, ಯುಪಿಐ ಇತ್ಯಾದಿ ಮೂಲಕ ವಹಿವಾಟು ನಡೆಸಲು ಯಾವ ಅಡ್ಡಿ ಇರುವುದಿಲ್ಲ. ದಿನದ 24 ಗಂಟೆಯೂ ಡಿಜಿಟಲ್ ವಹಿವಾಟು ಸಾಧ್ಯ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ವಕ್ಫ್ ವಿರುದ್ಧ ಹೋರಾಟದ ರೂವಾರಿ ಯತ್ನಾಳ್ ಹೆಸರು ಪ್ರಸ್ತಾಪಿಸದ ವಿಜಯೇಂದ್ರ
ವಕ್ಫ್ ವಿರುದ್ಧ ಹೋರಾಟದ ರೂವಾರಿ ಯತ್ನಾಳ್ ಹೆಸರು ಪ್ರಸ್ತಾಪಿಸದ ವಿಜಯೇಂದ್ರ
ಹರಿದು ಚಿಂದಿಯಾಗಿರುವ ಈ ಶರ್ಟ್​​​ ಬೆಲೆ 2.14 ಲಕ್ಷ ರೂ.
ಹರಿದು ಚಿಂದಿಯಾಗಿರುವ ಈ ಶರ್ಟ್​​​ ಬೆಲೆ 2.14 ಲಕ್ಷ ರೂ.
ಪ್ರತಿಭಟನೆ ಮಾಡಿ ನ್ಯಾಯ ಕೇಳುವವರಿಗೆ ಎಳನೀರು, ಕಾಫಿಯೇ? ಕುಮಾರಸ್ವಾಮಿ
ಪ್ರತಿಭಟನೆ ಮಾಡಿ ನ್ಯಾಯ ಕೇಳುವವರಿಗೆ ಎಳನೀರು, ಕಾಫಿಯೇ? ಕುಮಾರಸ್ವಾಮಿ
ಸಚಿನ್ ಕುಟುಂಬಕ್ಕೆ ರಾಜ್ಯ ಸರ್ಕಾರದ ಮೇಲೆ ನಂಬಿಕೆ ಇಲ್ಲ: ಆರ್ ಅಶೋಕ
ಸಚಿನ್ ಕುಟುಂಬಕ್ಕೆ ರಾಜ್ಯ ಸರ್ಕಾರದ ಮೇಲೆ ನಂಬಿಕೆ ಇಲ್ಲ: ಆರ್ ಅಶೋಕ
ಆದರೆ ಕಾಂಗ್ರೆಸ್ ಕಾರ್ಯಕರ್ತರ ಪಾನೀಯಗಳು ಯಾರಿಗಾಗಿ? ಕನ್ನಡಿಗರ ಪ್ರಶ್ನೆ
ಆದರೆ ಕಾಂಗ್ರೆಸ್ ಕಾರ್ಯಕರ್ತರ ಪಾನೀಯಗಳು ಯಾರಿಗಾಗಿ? ಕನ್ನಡಿಗರ ಪ್ರಶ್ನೆ
ಕಲಬುರಗಿಯ ಮುಖ್ಯರಸ್ತೆಯಲ್ಲಿ ಸಂಚಾರ ನಿಷೇಧಿಸಿ ಪೊಲೀಸ್ ಕಮೀಶನರ್ ಆದೇಶ
ಕಲಬುರಗಿಯ ಮುಖ್ಯರಸ್ತೆಯಲ್ಲಿ ಸಂಚಾರ ನಿಷೇಧಿಸಿ ಪೊಲೀಸ್ ಕಮೀಶನರ್ ಆದೇಶ
ಮೊದಲ ಓವರ್​ನಲ್ಲೇ ಸ್ಟಾರ್ಕ್ ಬೆಂಡೆತ್ತಿ ದಾಖಲೆ ಬರೆದ ಯಶಸ್ವಿ ಜೈಸ್ವಾಲ್
ಮೊದಲ ಓವರ್​ನಲ್ಲೇ ಸ್ಟಾರ್ಕ್ ಬೆಂಡೆತ್ತಿ ದಾಖಲೆ ಬರೆದ ಯಶಸ್ವಿ ಜೈಸ್ವಾಲ್
ಹತ್ಯೆ ಹಿಂದಿನ ಉದ್ದೇಶ ಇನ್ನೂ ಗೊತ್ತಾಗಿಲ್ಲವೆಂದ ಚಿಕ್ಕಬಳ್ಳಾಪುರ ಎಸ್​ಪಿ
ಹತ್ಯೆ ಹಿಂದಿನ ಉದ್ದೇಶ ಇನ್ನೂ ಗೊತ್ತಾಗಿಲ್ಲವೆಂದ ಚಿಕ್ಕಬಳ್ಳಾಪುರ ಎಸ್​ಪಿ
ಟೆಸ್ಟ್ ಸ್ಪೆಷಲಿಸ್ಟ್​​ನ ಔಟ್ ಮಾಡಿದ ಕನ್ನಡಿಗ ಪ್ರಸಿದ್ಧ್ ಕೃಷ್ಣ
ಟೆಸ್ಟ್ ಸ್ಪೆಷಲಿಸ್ಟ್​​ನ ಔಟ್ ಮಾಡಿದ ಕನ್ನಡಿಗ ಪ್ರಸಿದ್ಧ್ ಕೃಷ್ಣ
ದೇವಾಲಯಗಳಲ್ಲಿ ಮುಡಿ ಕೊಡುವುದರ ಹಿಂದಿನ ರಹಸ್ಯ ತಿಳಿಯಿರಿ
ದೇವಾಲಯಗಳಲ್ಲಿ ಮುಡಿ ಕೊಡುವುದರ ಹಿಂದಿನ ರಹಸ್ಯ ತಿಳಿಯಿರಿ