Bank Holidays: ಮುಂದಿನ ವಾರ ಬ್ಯಾಂಕ್ ಸೇವೆಯಲ್ಲಿ ಭಾರಿ ವ್ಯತ್ಯಯ; 2 ದಿನ ಮಾತ್ರ ಬ್ಯಾಂಕ್ ಓಪನ್- ಗಮನಿಸಿ
ಏಪ್ರಿಲ್ 1 ರಂದು ಹೊಸ ಆರ್ಥಿಕ ವರ್ಷ ಆರಂಭ ಆದ್ದರಿಂದ ಬ್ಯಾಂಕ್ ಓಪನ್ ಇದ್ದರೂ ಗ್ರಾಹಕ ಸೇವೆ ಲಭ್ಯ ಇರುವುದಿಲ್ಲ. ಮತ್ತೆ ಏಪ್ರಿಲ್ 2 ರಂದು ಯುಗಾದಿ ಹಿನ್ನೆಲೆ ಬ್ಯಾಂಕ್‌ಗೆ ರಜೆ ಇರಲಿದೆ. ಹೀಗಾಗಿ ಒಟ್ಟಾರೆ ಮುಂದಿನ ವಾರ 2 ದಿನ ಮಾತ್ರ ಬ್ಯಾಂಕ್ ಓಪನ್ ಇರಲಿದೆ.
ಬೆಂಗಳೂರು: ಮುಂದಿನ ವಾರ ಬ್ಯಾಂಕ್ ಸೇವೆಯಲ್ಲಿ ಭಾರಿ ವ್ಯತ್ಯಯ ಉಂಟಾಗಲಿದೆ. ವಾರದಲ್ಲಿ 2 ದಿನ ಮಾತ್ರ ಬ್ಯಾಂಕ್‌ಗಳು ಓಪನ್ ಇರಲಿದೆ. ಮಾರ್ಚ್ 27 ರಿಂದ 29ರ ವರೆಗೆ ಬ್ಯಾಂಕ್ ನೌಕರರ ಮುಷ್ಕರ ಇರಲಿದೆ. ಹೀಗಾಗಿ ಸೋಮವಾರ, ಮಂಗಳವಾರ ಬ್ಯಾಂಕ್ ಕ್ಲೋಸ್ ಆಗಿರಲಿದೆ. ನಡುವೆ ಮಾರ್ಚ್ 30 ಮತ್ತು 31 ರಂದು ಬ್ಯಾಂಕ್ ಓಪನ್ ಇರಲಿದೆ. ಬಳಿಕ ಮತ್ತೆ ಏಪ್ರಿಲ್ 1 ರಂದು ಹೊಸ ಆರ್ಥಿಕ ವರ್ಷ ಆರಂಭ ಹಿನ್ನೆಲೆ ಗ್ರಾಹಕ ಸೇವೆ ಲಭ್ಯ ಇರುವುದಿಲ್ಲ. ಏಪ್ರಿಲ್ 1 ರಂದು ಹೊಸ ಆರ್ಥಿಕ ವರ್ಷ ಆರಂಭ ಆದ್ದರಿಂದ ಬ್ಯಾಂಕ್ ಓಪನ್ ಇದ್ದರೂ ಗ್ರಾಹಕ ಸೇವೆ ಲಭ್ಯ ಇರುವುದಿಲ್ಲ. ಮತ್ತೆ ಏಪ್ರಿಲ್ 2 ರಂದು ಯುಗಾದಿ ಹಿನ್ನೆಲೆ ಬ್ಯಾಂಕ್‌ಗೆ ರಜೆ ಇರಲಿದೆ. ಹೀಗಾಗಿ ಒಟ್ಟಾರೆ ಮುಂದಿನ ವಾರ 2 ದಿನ ಮಾತ್ರ ಬ್ಯಾಂಕ್ ಓಪನ್ ಇರಲಿದೆ.
ಬ್ಯಾಂಕ್ ಸೇವೆಗಳು ಜನಸಾಮಾನ್ಯರಿಗೆ ಅತಿ ಮುಖ್ಯವಾಗಿ ಇರುತ್ತದೆ. ಹಣ ಪಡೆದುಕೊಳ್ಳಲು, ಕಳುಹಿಸಲು, ಸಾಲ, ಇತರ ವ್ಯವಹಾರ ನಡೆಸಲು ಬ್ಯಾಂಕ್ ಸೇವೆ ಅಗತ್ಯ ಇರುತ್ತದೆ. ಈ ಮಧ್ಯೆ, ಸಾಲು ಸಾಲು ಬ್ಯಾಂಕ್ ರಜೆ ಇರುವುದರಿಂದ ತುರ್ತು ಕೆಲಸಗಳನ್ನು ಶೀಘ್ರ ಪೂರೈಸುವುದು ಒಳ್ಳೆಯದು. ಮುಂದಿನ ವಾರ ಎರಡು ದಿನ ಮಾತ್ರವೇ ಬ್ಯಾಂಕ್ ಓಪನ್ ಇರುವುದರಿಂದ ಈಗಲೇ ಬೇಕಾದ ಕೆಲಸ ಮಾಡಿಕೊಳ್ಳಬಹುದು. ಮತ್ತು ಮುಂದಿನ ವಾರಕ್ಕೆ ಬ್ಯಾಂಕ್ ಕೆಲಸಗಳನ್ನು ಉಳಿಸದೇ ಇರಬಹುದು.
ಮತ್ತೊಂದು ಗಮನಿಸಬೇಕಾದ ಅಂಶ ಎಂದರೆ ಬ್ಯಾಂಕ್ ಕಚೇರಿಗೆ ರಜೆ ಇದ್ದರೂ ಆನ್ಲೈನ್ ಸೇವೆಗಳ ಮೂಲಕ ಬ್ಯಾಂಕ್ ಕೆಲಸಗಳನ್ನು ಮಾಡಬಹುದು. ಡಿಜಿಟಲ್ ವಿಧಾನದಲ್ಲಿ ನೆಟ್ ಬ್ಯಾಂಕಿಂಗ್ ಸೇವೆಯನ್ನು ನಡೆಸಬಹುದು. ಈ ಬಗ್ಗೆ ಗ್ರಾಹಕರಿಗೆ ಮಾಹಿತಿ ಇರುವುದು ಅಗತ್ಯ. ಬ್ಯಾಂಕ್‌ಗೆ ಹೋಗದೆ, ಫಾರ್ಮ್ ತುಂಬಿಸದೆ ಕೇವಲ ನೆಟ್ ಬ್ಯಾಂಕಿಂಗ್ ಮೂಲಕವೂ ಈಗ ಕೆಲಸ ಪೂರೈಸಬಹುದು. ಅದಕ್ಕೆ ಬ್ಯಾಂಕ್ ರಜೆಗಳು ಸಮಸ್ಯೆ ಆಗುವುದಿಲ್ಲ.
2022ರ ಮಾರ್ಚ್ನ ಬ್ಯಾಂಕ್ ರಜಾದಿನಗಳ ವಿಸ್ತೃತ ಪಟ್ಟಿ ಹೀಗಿದೆ:
ಮಹಾಶಿವರಾತ್ರಿ (ಮಹಾ ವದ್-14): ಮಾರ್ಚ್ 1
ಲೋಸರ್: ಮಾರ್ಚ್ 3
ಚಪ್ಚರ್ ಕುಟ್: ಮಾರ್ಚ್ 4
ಹೋಲಿಕಾ ದಹನ್: ಮಾರ್ಚ್ 17
ಹೋಳಿ/ಹೋಳಿ ಎರಡನೇ ದಿನ – ಧುಲೇಟಿ/ಡೋಲ್ಜಾತ್ರಾ: ಮಾರ್ಚ್ 18
ಹೋಳಿ/ಯೋಸಾಂಗ್ 2ನೇ ದಿನ: ಮಾರ್ಚ್ 19
ಬಿಹಾರ ದಿವಸ್: ಮಾರ್ಚ್ 22
ಆರ್ಬಿಐ ತಿಳಿಸಿದ ಮೇಲಿನ ರಜಾದಿನಗಳನ್ನು ಹೊರತುಪಡಿಸಿ ವಾರಾಂತ್ಯಗಳಲ್ಲಿ ಬ್ಯಾಂಕ್‌ಗಳು ಮುಚ್ಚುತ್ತವೆ.
ಭಾನುವಾರ: ಮಾರ್ಚ್ 6
ಎರಡನೇ ಶನಿವಾರ: ಮಾರ್ಚ್ 12
ಭಾನುವಾರ: ಮಾರ್ಚ್ 13
ಭಾನುವಾರ: ಮಾರ್ಚ್ 20
ನಾಲ್ಕನೇ ಶನಿವಾರ: ಮಾರ್ಚ್ 26
ಭಾನುವಾರ: ಮಾರ್ಚ್ 27
ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ತನ್ನ ರಜಾದಿನಗಳನ್ನು ಮೂರು ಬ್ರಾಕೆಟ್ಗಳ ಅಡಿಯಲ್ಲಿ ಇರಿಸುತ್ತದೆ – ನೆಗೋಷಿಯೇಬಲ್ ಇನ್‌ಸ್ಟ್ರುಮೆಂಟ್ಸ್ ಆ್ಯಕ್ಟ್ ಅಡಿಯಲ್ಲಿ ರಜಾದಿನ; ನೆಗೋಷಿಯೇಬಲ್ ಇನ್‌ಸ್ಟ್ರುಮೆಂಟ್ಸ್ ಆ್ಯಕ್ಟ್ ಅಡಿಯಲ್ಲಿ ರಜಾದಿನ ಮತ್ತು ರಿಯಲ್ ಟೈಮ್ ಗ್ರಾಸ್ ಸೆಟಲ್‌ಮೆಂಟ್ ಹಾಲಿಡೇ; ಮತ್ತು ಬ್ಯಾಂಕ್‌ಗಳ ಖಾತೆಗಳನ್ನು ಮುಚ್ಚುವುದು. ಆದರೂ ಬ್ಯಾಂಕ್ ರಜಾದಿನಗಳು ವಿವಿಧ ರಾಜ್ಯಗಳಲ್ಲಿ ಬದಲಾಗುತ್ತವೆ ಮತ್ತು ಎಲ್ಲ ಬ್ಯಾಂಕಿಂಗ್ ಕಂಪೆನಿಗಳು ವಿವಿಧ ರಾಜ್ಯಗಳಲ್ಲಿ ಅನುಸರಿಸುವುದಿಲ್ಲ ಎಂದು ಗಮನಿಸಬೇಕು. ಬ್ಯಾಂಕಿಂಗ್ ರಜಾದಿನಗಳು ನಿರ್ದಿಷ್ಟ ರಾಜ್ಯಗಳಲ್ಲಿ ಆಚರಿಸಲಾಗುವ ಹಬ್ಬಗಳು ಅಥವಾ ಆ ರಾಜ್ಯಗಳಲ್ಲಿ ನಿರ್ದಿಷ್ಟ ಸಂದರ್ಭಗಳ ಅಧಿಸೂಚನೆಯನ್ನು ಅವಲಂಬಿಸಿರುತ್ತದೆ.
ಇದನ್ನೂ ಓದಿ: Axis Bank FD Interest Rate: ಮಾರ್ಚ್ 21ರಿಂದ ಅನ್ವಯಿಸುವಂತೆ ಆಕ್ಸಿಸ್ ಬ್ಯಾಂಕ್ ಎಫ್ಡಿ ಬಡ್ಡಿ ದರ ಪರಿಷ್ಕರಣೆ
ಇದನ್ನೂ ಓದಿ: State Bank Of India: ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದಿಂದ ಶ್ರೀಲಂಕಾಗೆ 7613 ಕೋಟಿ ರೂಪಾಯಿ ಸಾಲ
Published On - 9:21 am, Wed, 23 March 22