AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

IT Raid: ಹೀರೋ ಮೋಟೋಕಾರ್ಪ್ ಅಧ್ಯಕ್ಷ ಪವನ್ ಮುಂಜಲ್ ಮತ್ತಿತರ ಉನ್ನತಾಧಿಕಾರಿಗಳ ಸ್ಥಳ, ಕಚೇರಿಗಳ ಮೇಲೆ ಐಟಿ ದಾಳಿ

ಹೀರೋ ಮೋಟೋಕಾರ್ಪ್​ ಅಧ್ಯಕ್ಷ ಪವನ್ ಮುಂಜಲ್ ಮತ್ತು ಇತರ ಉನ್ನತಾಧಿಕಾರಿಗಳ ವಿರುದ್ಧ ಆದಾಯ ತೆರಿಗೆ ಇಲಾಖೆಯಿಂದ ಬುಧವಾರ ದಾಳಿ ನಡೆದಿದೆ.

IT Raid: ಹೀರೋ ಮೋಟೋಕಾರ್ಪ್ ಅಧ್ಯಕ್ಷ ಪವನ್ ಮುಂಜಲ್ ಮತ್ತಿತರ ಉನ್ನತಾಧಿಕಾರಿಗಳ ಸ್ಥಳ, ಕಚೇರಿಗಳ ಮೇಲೆ ಐಟಿ ದಾಳಿ
ಪವನ್ ಮುಂಜಲ್ (ಸಂಗ್ರಹ ಚಿತ್ರ)
TV9 Web
| Updated By: Srinivas Mata|

Updated on: Mar 23, 2022 | 2:21 PM

Share

ಹೀರೋ ಮೋಟೋಕಾರ್ಪ್​ನ (Hero Moto Corp) ಅಧ್ಯಕ್ಷ ಪವನ್ ಮುಂಜಲ್ ಮತ್ತು ಕಂಪೆನಿಯ ಇತರ ಮೇಲ್​ ಸ್ತರದ ಅಧಿಕಾರಿಗಳ ಆಸ್ತಿಗಳು ಮತ್ತು ಕಚೇರಿಗಳ ಮೇಲೆ ಮಾರ್ಚ್ 23ನೇ ತಾರೀಕಿನ ಬುಧವಾರದಂದು ಆದಾಯ ತೆರಿಗೆ ಇಲಾಖೆ ಅಧಿಕಾರಿಗಳಿಂದ ದಾಳಿ ನಡೆದಿದೆ. ತೆರಿಗೆ ಕಳವು ಆರೋಪದ ಹಿನ್ನೆಲೆಯಲ್ಲಿ ಈ ದಾಳಿಯನ್ನು ನಡೆಸಲಾಗಿದೆ. ಪವನ್ ಮುಂಜಲ್​ರ ಮನೆ ಮತ್ತು ಕಚೇರಿಗಳು ಗುರುಗ್ರಾಮ, ಹರ್ಯಾಣ, ದೆಹಲಿ ಮತ್ತಿತರ ನಗರಗಳಲ್ಲಿ ಶೋಧ ಕಾರ್ಯಾಚರಣೆ ನಡೆದಿದೆ ಎಂದು ಆದಾಯ ತೆರಿಗೆ ಇಲಾಖೆಯ ಮೂಲಗಳು ತಿಳಿಸಿವೆ. ಆದಾಯ ತೆರಿಗೆ ಇಲಾಖೆಯಲ್ಲಿನ ಅಧಿಕಾರಿಗಳ ಗುಂಪು ಕಂಪೆನಿಯ ಮತ್ತು ಪ್ರವರ್ತಕರ (Promotors) ಹಣಕಾಸು ದಾಖಲಾತಿಗಳು ಮತ್ತು ಇತರ ವ್ಯವಹಾರ ವಹಿವಾಟುಗಳನ್ನು ಪರಿಶೀಲಿಸಿದೆ ಎಂದು ಮಾಹಿತಿ ನೀಡಲಾಗಿದೆ.

ಹೀರೋ ಮೋಟೋಕಾರ್ಪ್ ಅಧ್ಯಕ್ಷ ಪವನ್​ ಮುಂಜಲ್​ರ ಸ್ಥಳಗಳಲ್ಲಿ ಶೋಧ ಕಾರ್ಯಾಚರಣೆ ನಡೆದಿದೆ. ಹೀರೋ ಮೋಟೋಕಾರ್ಪ್ ಮತ್ತು ಅದರ ಹಿರಿಯ ಅಧಿಕಾರಿಗಳಿಗೆ ಸೇರಿದ ಹತ್ತಾರು ಸ್ಥಳಗಳ ಶೋಧ ನಡೆಸಲಾಗಿದೆ. ತೆರಿಗೆ ಕಳುವಿನ ಗುಮಾನಿ ಮೇಲೆ ನಡೆದಿರುವ ಶೋಧ ಹಾಗೂ ವಶಪಡಿಸಿಕೊಳ್ಳುವ ಕಾರ್ಯಾಚರಣೆ ಇದು ಎಂದು ಆದಾಯ ತೆರಿಗೆ ಇಲಾಖೆ ಮೂಲಗಳು ತಿಳಿಸಿರುವುದಾಗಿ ಎನ್​ಡಿಟಿವಿ ವರದಿ ಮಾಡಿದೆ. ಈ ಬಗ್ಗೆ ಹೀರೋ ಮೋಟೋಕಾರ್ಪ್​ನಿಂದ ಅಧಿಕೃತವಾದ ಹೇಳಿಕೆ ಬರಬೇಕಿದೆ. ಆದಾಯ ತೆರಿಗೆ ದಾಳಿ ಬಗ್ಗೆ ಸುದ್ದಿ ಹೊರ ಬಿದ್ದ ಮೇಲೆ ಕಂಪೆನಿಯ ಷೇರುಗಳು ಶೇ 1.5ರಷ್ಟು ನಷ್ಟ ಕಂಡವು.

ಮುಂಜಲ್ ನೇತೃತ್ವದ ಹೀರೋ ಮೋಟೋಖಾರ್ಪ್ ಏಷ್ಯಾ, ಆಫ್ರಿಕಾ ಹಾಗೂ ದಕ್ಷಿಣ ಮತ್ತು ಮಧ್ಯ ಅಮೆರಿಕ ಸೇರಿದಂತೆ 40 ದೇಶಗಳಲ್ಲಿ ಘಟಕಗಳನ್ನು ಹೊಂದಿದೆ. ಒಂದು ವರ್ಷದಲ್ಲಿ ಅತಿ ಹೆಚ್ಚು ಯೂನಿಟ್​ ಬೈಕ್​ಗಳನ್ನು ಮಾರಾಟ ಮಾಡುವ ವಿಶ್ವದ ಅತಿ ದೊಡ್ಡ ದ್ವಿಚಕ್ರ ವಾಹನ ತಯಾರಕ ಎಂದು 2001ರಲ್ಲಿ ಎನಿಸಿಕೊಂಡಿತು ಹೀರೋ ಮೋಟೋಕಾರ್ಪ್. ದೇಶೀಯ ಮೋಟಾರ್​ಸೈಕಲ್ ಮಾರುಕಟ್ಟೆಯಲ್ಲಿ ಕಂಪೆನಿಯು ಶೇ 50ರಷ್ಟು ಪಾಲನ್ನು ಹೊಂದಿದ್ದು, ದೇಶೀಯ ಮತ್ತು ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ 10 ಕೋಟಿ ಮೋಟಾರ್ ಸೈಕಲ್ ಮಾರಾಟ ಮಾಡಿದೆ.

ಕಂಪೆನಿಯ ಒಟ್ಟಾರೆ ಸಗಟು ಮಾರಾಟದಲ್ಲಿ ಶೇ 29ರಷ್ಟು ಕುಸಿತ ಆಗಿದೆ ಎಂದು ಫೆಬ್ರವರಿಯಲ್ಲಿ ವರದಿ ಮಾಡಲಾಗಿತ್ತು.

ಇದನ್ನೂ ಓದಿ: Tax evasion: ತೆರಿಗೆ ಕಳವಿನ ಆರೋಪದಲ್ಲಿ ಶಿಯೋಮಿ, ಒನ್​ಪ್ಲಸ್, ಒಪ್ಪೋ ಕಚೇರಿ ಮೇಲೆ ಆದಾಯ ತೆರಿಗೆ ಇಲಾಖೆ ದಾಳಿ

ನನ್ನ ಹಿಂದೆ ಯಾರೂ ಬರೋದು ಬೇಡ: ಡಿಕೆ ಶಿವಕುಮಾರ್​​ ಹೀಗಂದಿದ್ದೇಕೆ?
ನನ್ನ ಹಿಂದೆ ಯಾರೂ ಬರೋದು ಬೇಡ: ಡಿಕೆ ಶಿವಕುಮಾರ್​​ ಹೀಗಂದಿದ್ದೇಕೆ?
ಆಂಧ್ರದಲ್ಲಿ ಬಸ್ ಅಪಘಾತ; ಪ್ರಧಾನಿಯಿಂದ 2 ಲಕ್ಷ ರೂ. ಪರಿಹಾರ ಘೋಷಣೆ
ಆಂಧ್ರದಲ್ಲಿ ಬಸ್ ಅಪಘಾತ; ಪ್ರಧಾನಿಯಿಂದ 2 ಲಕ್ಷ ರೂ. ಪರಿಹಾರ ಘೋಷಣೆ
ಮೈಸೂರಿನ ಅಭಿಮಾನಿಗಳಿಗೆ ‘ದಿ ಡೆವಿಲ್’ ಸಿನಿಮಾ ಇಷ್ಟ ಆಯ್ತಾ? ವಿಡಿಯೋ ನೋಡಿ..
ಮೈಸೂರಿನ ಅಭಿಮಾನಿಗಳಿಗೆ ‘ದಿ ಡೆವಿಲ್’ ಸಿನಿಮಾ ಇಷ್ಟ ಆಯ್ತಾ? ವಿಡಿಯೋ ನೋಡಿ..
ರೈತರಿಗೆ ಕನ್ಯಾ ಕೊಡುತ್ತಿಲ್ಲ ಎಂದು ಡಿಸಿ ಮುಂದೆ ಅಳಲು ತೋಡಿಕೊಂಡ ಯುವಕ
ರೈತರಿಗೆ ಕನ್ಯಾ ಕೊಡುತ್ತಿಲ್ಲ ಎಂದು ಡಿಸಿ ಮುಂದೆ ಅಳಲು ತೋಡಿಕೊಂಡ ಯುವಕ
ಇನ್ಸ್​​ಸ್ಟಾದಲ್ಲಿ ನೋಡಿ ಓಡೋಡಿ ಬಂದು ಪ್ರಿಯಕರನ ಮದ್ವೆ ತಡೆದ ಪ್ರೇಯಿಸಿ
ಇನ್ಸ್​​ಸ್ಟಾದಲ್ಲಿ ನೋಡಿ ಓಡೋಡಿ ಬಂದು ಪ್ರಿಯಕರನ ಮದ್ವೆ ತಡೆದ ಪ್ರೇಯಿಸಿ
ದರ್ಶನ್ ಪತ್ನಿ ವಿಜಯಲಕ್ಷ್ಮಿಗೆ ಧನ್ಯವಾದ ಹೇಳಿದ ‘ಡೆವಿಲ್’ ನಟಿ ರಚನಾ
ದರ್ಶನ್ ಪತ್ನಿ ವಿಜಯಲಕ್ಷ್ಮಿಗೆ ಧನ್ಯವಾದ ಹೇಳಿದ ‘ಡೆವಿಲ್’ ನಟಿ ರಚನಾ
ದುರಹಂಕಾರದ ಫೈಟ್: ಬಿಗ್ ಬಾಸ್ ಮನೆಯಲ್ಲಿ ರಜತ್, ಅಶ್ವಿನಿ ಗೌಡ, ಚೈತ್ರಾ ಜಗಳ
ದುರಹಂಕಾರದ ಫೈಟ್: ಬಿಗ್ ಬಾಸ್ ಮನೆಯಲ್ಲಿ ರಜತ್, ಅಶ್ವಿನಿ ಗೌಡ, ಚೈತ್ರಾ ಜಗಳ
ಭಾರತದಲ್ಲಿ ಇದೇ ಮೊದಲ ಬಾರಿಗೆ ಡಿಜಿಟಲ್ ಜನಗಣತಿ
ಭಾರತದಲ್ಲಿ ಇದೇ ಮೊದಲ ಬಾರಿಗೆ ಡಿಜಿಟಲ್ ಜನಗಣತಿ
ಬಿಜೆಪಿಗೆ ವಾಪಸ್ ಆಗಲು ಎರಡ್ಮೂರು ಪ್ರಮುಖ ಬೇಡಿಕೆ ಇಟ್ಟ ಯತ್ನಾಳ್
ಬಿಜೆಪಿಗೆ ವಾಪಸ್ ಆಗಲು ಎರಡ್ಮೂರು ಪ್ರಮುಖ ಬೇಡಿಕೆ ಇಟ್ಟ ಯತ್ನಾಳ್
ಡಿಕೆ ಸಿಎಂ, ವಿಜಯೇಂದ್ರ ಡಿಸಿಎಂ ಪ್ಲ್ಯಾನ್:ಅಮಿತ್ ಶಾ ಮುಂದೇನಾಗಿತ್ತು?
ಡಿಕೆ ಸಿಎಂ, ವಿಜಯೇಂದ್ರ ಡಿಸಿಎಂ ಪ್ಲ್ಯಾನ್:ಅಮಿತ್ ಶಾ ಮುಂದೇನಾಗಿತ್ತು?