AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಬ್ಯಾಂಕುಗಳಿಗೆ ವಾರಕ್ಕೆ ಎರಡು ದಿನ ರಜೆ ವ್ಯವಸ್ಥೆ ಶೀಘ್ರದಲ್ಲೇ ಜಾರಿ; ಉದ್ಯೋಗಿಗಳಿಗೆ ಸಂಬಳ ಹೆಚ್ಚಳ ಪ್ರಸ್ತಾಪದ ಬಗ್ಗೆ ನಡೆದಿದೆ ಚರ್ಚೆ

Bank Holidays On Saturdays: ಬ್ಯಾಂಕುಗಳು ಪ್ರತೀ ಶನಿವಾರ ಮತ್ತು ಭಾನುವಾರಗಳಂದು ರಜೆ ಹೊಂದುವ ವರ್ಕ್​ವೀಕ್ ವ್ಯವಸ್ಥೆಯನ್ನು ಶೀಘ್ರದಲ್ಲೇ ಜಾರಿಗೆ ಬರಬಹುದು. ಈ ಪ್ರಸ್ತಾಪಕ್ಕೆ ಐಬಿಎ ಈ ಹಿಂದೆಯೆ ಒಪ್ಪಿದೆ. ಹಣಕಾಸು ಸಚಿವಾಲಯ ಮತ್ತು ಆರ್​ಬಿಐನ ಅನುಮೋದನೆ ಬಾಕಿ ಇದೆ. ಇನ್ನು, ಬ್ಯಾಂಕ್ ಉದ್ಯೋಗಿಗಳಿಗೆ ಶೇ. 15ರಷ್ಟು ಸರಾಸರಿ ಸಂಬಳಹೆಚ್ಚಳದ ಪ್ರಸ್ತಾಪದ ಕುರಿತೂ ಚರ್ಚೆಗಳಾಗುತ್ತಿವೆ.

ಬ್ಯಾಂಕುಗಳಿಗೆ ವಾರಕ್ಕೆ ಎರಡು ದಿನ ರಜೆ ವ್ಯವಸ್ಥೆ ಶೀಘ್ರದಲ್ಲೇ ಜಾರಿ; ಉದ್ಯೋಗಿಗಳಿಗೆ ಸಂಬಳ ಹೆಚ್ಚಳ ಪ್ರಸ್ತಾಪದ ಬಗ್ಗೆ ನಡೆದಿದೆ ಚರ್ಚೆ
ಬ್ಯಾಂಕ್ ಉದ್ಯೋಗಿ
ಸುಗ್ಗನಹಳ್ಳಿ ವಿಜಯಸಾರಥಿ
|

Updated on: Oct 30, 2023 | 4:58 PM

Share

ನವದೆಹಲಿ, ಅಕ್ಟೋಬರ್ 30: ಬ್ಯಾಂಕುಗಳು ವಾರದಲ್ಲಿ ಐದು ದಿನ ಮಾತ್ರ (5-day workweek) ಕಾರ್ಯನಿರ್ವಹಿಸುವ ವ್ಯವಸ್ಥೆ ಶೀಘ್ರದಲ್ಲೇ ಜಾರಿಗೆ ಬರುವ ನಿರೀಕ್ಷೆ ಇದೆ. ಹಾಗೆಯೇ, ಬ್ಯಾಂಕಿಂಗ್ ವಲಯದ ಪರಿಸ್ಥಿತಿ ಉತ್ತಮ ಇರುವುದರಿಂದ ಬ್ಯಾಂಕ್ ಉದ್ಯೋಗಿಗಳಿಗೆ ಸರಾಸರಿಯಾಗಿ ಈ ಬಾರಿ ಶೇ. 15ರಷ್ಟು ಸಂಬಳ ಹೆಚ್ಚಳ (salary hike) ಕೊಡುವ ಬಗ್ಗೆ ಚರ್ಚೆಗಳಾಗುತ್ತಿರುವುದು ತಿಳಿದುಬಂದಿದೆ. ಟೈಮ್ಸ್ ಆಫ್ ಇಂಡಿಯಾ ವರದಿ ಪ್ರಕಾರ ಇಂಡಿಯನ್ ಬ್ಯಾಂಕ್ಸ್ ಅಸೋಷಿಯೇಶನ್ ಸಂಸ್ಥೆ ಬ್ಯಾಂಕ್ ಉದ್ಯೋಗಿಗಳಿಗೆ ಶೇ. 15ರಷ್ಟು ಸಂಬಳ ಹೆಚ್ಚಳ ಮಾಡಬೇಕೆಂಬ ಪ್ರಸ್ತಾವ ಮುಂದಿಟ್ಟಿದೆ. ಆದರೆ, ವಿವಿಧ ಬ್ಯಾಂಕ್ ಯೂನಿಯನ್​ಗಳು (bank employees unions) ಇನ್ನೂ ಹೆಚ್ಚಿನ ಸಂಬಳಕ್ಕೆ ಪಟ್ಟು ಹಿಡಿದಿವೆಯಂತೆ.

ಸದ್ಯ ಸಂಬಳ ಹೆಚ್ಚಳ ವಿಚಾರದಲ್ಲಿ ಮಾತುಕತೆಗಳು ನಡೆಯುತ್ತಿದ್ದು, ಹಣಕಾಸು ಸಚಿವಾಲಯ ಕೂಡ ಕಿವಿಗೊಟ್ಟಿದೆ. ಅತ್ತ, ಬ್ಯಾಂಕುಗಳಿಗೆ ವಾರಕ್ಕೆ ಐದು ಕಾರ್ಯದಿನಗಳ ವ್ಯವಸ್ಥೆ ಶೀಘ್ರದಲ್ಲೇ ಜಾರಿಗೆ ತರಲು ಸರ್ಕಾರ ಸಿದ್ಧವಾಗಿದೆ. ಭಾರತೀಯ ಬ್ಯಾಂಕುಗಳ ಸಂಸ್ಥೆ (IBA- Indian Banks Association) ಈ ಐದು ದಿನದ ವರ್ಕ್​ವೀಕ್ ಪ್ರಸ್ತಾಪಕ್ಕೆ ಒಪ್ಪಿಗೆ ನೀಡಿ 9 ತಿಂಗಳೇ ಆಗಿವೆ. ಹಣಕಾಸು ಸಚಿವಾಲಯ ಮತ್ತು ಆರ್​ಬಿಐನಿಂದ ಅನುಮೋದನೆ ಸಿಕ್ಕ ಕೂಡಲೇ ಇದನ್ನು ಜಾರಿಗೆ ತರಬಹುದು.

ಇದನ್ನೂ ಓದಿ: ಬ್ರೌಸರ್​ಗಳಲ್ಲಿ ಡೀಫಾಲ್ಟ್ ಸರ್ಚ್ ಎಂಜಿನ್ ಆಗಲು ಗೂಗಲ್ ತೆರುವ ಹಣ ವರ್ಷಕ್ಕೆ ಬರೋಬ್ಬರಿ 2 ಲಕ್ಷಕೋಟಿ ರೂ?

ಕೆಲಸದ ದಿನಗಳ ಹೊಸ ವ್ಯವಸ್ಥೆಯ ಪ್ರಕಾರ ವಾರದಲ್ಲಿ ಎರಡು ದಿನ ಬ್ಯಾಂಕುಗಳಿಗೆ ವೀಕಾಫ್​ಗಳು ಇರುತ್ತವೆ. ಪ್ರತೀ ಶನಿವಾರ ಮತ್ತು ಭಾನುವಾರ ಎರಡೂ ದಿನವೂ ರಜೆಗಳಿರುತ್ತವೆ. ಸದ್ಯ ಭಾನುವಾರಗಳಂದು ವೀಕಾಫ್ ಇದೆ. ಎರಡನೇ ಮತ್ತು ನಾಲ್ಕನೇ ಶನಿವಾರಗಳಂದು ರಜೆ ಇದೆ. ಹೊಸ ಪ್ರಸ್ತಾಪ ಜಾರಿಗೆ ಬಂದಲ್ಲಿ ಶನಿವಾರ ಮತ್ತು ಭಾನುವಾರ ಎರಡೂ ದಿನಗಳು ರಜೆ ಇರುತ್ತವೆ.

2015ರಿಂದಲೂ ವಾರಕ್ಕೆ ಎರಡು ದಿನ ವೀಕಾಫ್ ಕೊಡಬೇಕೆಂಬ ಒತ್ತಾಯಗಳಿವೆ. 2015ರಲ್ಲಿ ಆದ ಒಪ್ಪಂದಲ್ಲಿ ಎರಡನೇ ಮತ್ತು ನಾಲ್ಕನೇ ಶನಿವಾರಗಳನ್ನು ರಜೆಗಳಾಗಿ ಘೋಷಿಸಬೇಕೆನ್ನುವ ಐಬಿಎ ಪ್ರಸ್ತಾವಕ್ಕೆ ಆರ್​ಬಿಐ ಒಪ್ಪಿಕೊಂಡಿತ್ತು. ಈಗ ಭಾನುವಾರಗಳಂತೆ ಎಲ್ಲಾ ಶನಿವಾರಗಳನ್ನೂ ರಜೆಯಾಗಿ ಘೋಷಿಸಬೇಕೆಂದು ಸರ್ಕಾರಿ ಸ್ವಾಮ್ಯದ ಬ್ಯಾಂಕುಗಳು ಪ್ರಸ್ತಾಪ ಮಾಡಿವೆ.

ಇದನ್ನೂ ಓದಿ: 70 ಗಂಟೆ ಕೆಲಸ ಮಾಡಬೇಕೆಂದು ಹೇಳುವ ನಾರಾಯಣಮೂರ್ತಿ ನಿಜಜೀವನದಲ್ಲಿ ಹೇಗೆ? ಪತ್ನಿ ಸುಧಾಮೂರ್ತಿ ಹೇಳಿದ್ದಿದು

ಉದ್ಯೋಗಿಗಳ ಶ್ರಮ ಗುರುತಿಸಿ ಸಂಬಳ ಹೆಚ್ಚಿಸಲು ಮನವಿ

ಬ್ಯಾಂಕ್ ಉದ್ಯೋಗಿಗಳ ವಿವಿಧ ಒಕ್ಕೂಟಗಳು ಈ ಬಾರಿ ಒಳ್ಳೆಯ ಸಂಬಳ ಹೆಚ್ಚಳವಾಗಬೇಕೆಂದು ಪಟ್ಟು ಹಿಡಿದಿವೆ. ಕೋವಿಡ್ ಸಾಂಕ್ರಾಮಿಕ ಸಂದರ್ಭದಲ್ಲಿ ಬ್ಯಾಂಕ್ ಉದ್ಯೋಗಿಗಳು ಬಹಳ ಶ್ರಮ ಪಟ್ಟು, ಜೀವದ ಹಂಗು ತೊರೆದು ಕೆಲಸ ಮಾಡಿದ್ದಾರೆ. ಸರ್ಕಾರದ ಯೋಜನೆಗಳನ್ನು ಜನರಿಗೆ ತಲುಪಿಸಲು ಬ್ಯಾಂಕ್ ಉದ್ಯೋಗಿಗಳ ಪಾತ್ರ ಮಹತ್ತರವಾದುದು. ಇತ್ತೀಚಿನ ವರ್ಷಗಳಲ್ಲಿ ಬ್ಯಾಂಕುಗಳ ಹಣಕಾಸು ಸಾಧನೆ ಕೂಡ ಉತ್ತಮವಾಗಿದೆ. ಈ ಎಲ್ಲಾ ಕಾರಣದಿಂದ ಬ್ಯಾಂಕ್ ಉದ್ಯೋಗಿಗಳಿಗೆ ಒಳ್ಳೆಯ ಸಂಬಳ ಹೆಚ್ಚಳ ಆಗಬೇಕು ಎಂಬುದು ಬ್ಯಾಂಕ್ ಉದ್ಯೋಗಿಗಳ ಯೂನಿಯನ್​ಗಳು ಆಗ್ರಹಿಸುತ್ತಿವೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಅರೇ ಇದೇನಿದು ಎರಡು ಬಸ್ ಒಂದೇ ನಂಬರ್ ಪ್ಲೇಟ್: ಆರ್​​ಟಿಓ ಅಧಿಕಾರಿಗಳೇ ಶಾಕ್!
ಅರೇ ಇದೇನಿದು ಎರಡು ಬಸ್ ಒಂದೇ ನಂಬರ್ ಪ್ಲೇಟ್: ಆರ್​​ಟಿಓ ಅಧಿಕಾರಿಗಳೇ ಶಾಕ್!
ಜೋರ್ಡಾನ್​​​ನಲ್ಲಿ ಮೋದಿಯನ್ನು ನೋಡಿ ಸಂಭ್ರಮಿಸಿದ ಭಾರತೀಯ ವಲಸಿಗರು
ಜೋರ್ಡಾನ್​​​ನಲ್ಲಿ ಮೋದಿಯನ್ನು ನೋಡಿ ಸಂಭ್ರಮಿಸಿದ ಭಾರತೀಯ ವಲಸಿಗರು
20 ದಿನದಲ್ಲೇ ದಾಂಪತ್ಯ ಜೀವನ ಅಂತ್ಯ: ಸಂಸಾರದಲ್ಲಿ ಹುಳಿ ಹಿಂಡಿದ ಪ್ರಿಯಕರ
20 ದಿನದಲ್ಲೇ ದಾಂಪತ್ಯ ಜೀವನ ಅಂತ್ಯ: ಸಂಸಾರದಲ್ಲಿ ಹುಳಿ ಹಿಂಡಿದ ಪ್ರಿಯಕರ
ಚಲಿಸುತ್ತಿದ್ದ ರೈಲಿನ ಚೈನ್ ಎಳೆದು ರಾದ್ಧಾಂತ: ಪ್ರಶ್ನಿಸಿದ್ದಕ್ಕೆ ಹಲ್ಲೆ
ಚಲಿಸುತ್ತಿದ್ದ ರೈಲಿನ ಚೈನ್ ಎಳೆದು ರಾದ್ಧಾಂತ: ಪ್ರಶ್ನಿಸಿದ್ದಕ್ಕೆ ಹಲ್ಲೆ
‘45’ ಚಿತ್ರದ ಟ್ರೇಲರ್ ರಿಲೀಸ್ ಕಾರ್ಯಕ್ರಮ: ಲೈವ್ ವಿಡಿಯೋ ಇಲ್ಲಿದೆ ನೋಡಿ..
‘45’ ಚಿತ್ರದ ಟ್ರೇಲರ್ ರಿಲೀಸ್ ಕಾರ್ಯಕ್ರಮ: ಲೈವ್ ವಿಡಿಯೋ ಇಲ್ಲಿದೆ ನೋಡಿ..
ಪ್ರಧಾನಿ ಮೋದಿಗೆ ಜೋರ್ಡಾನ್‌ನಲ್ಲಿ ಸಾಂಪ್ರದಾಯಿಕ ಸ್ವಾಗತ
ಪ್ರಧಾನಿ ಮೋದಿಗೆ ಜೋರ್ಡಾನ್‌ನಲ್ಲಿ ಸಾಂಪ್ರದಾಯಿಕ ಸ್ವಾಗತ
ಕಾಸರಗೋಡಿನಲ್ಲಿ ತೆಯ್ಯಂ ಪ್ರದರ್ಶನದ ವೇಳೆ ಏನಾಯ್ತು ನೋಡಿ!
ಕಾಸರಗೋಡಿನಲ್ಲಿ ತೆಯ್ಯಂ ಪ್ರದರ್ಶನದ ವೇಳೆ ಏನಾಯ್ತು ನೋಡಿ!
ಶಿವಶಂಕರಪ್ಪ ಕೈಲಾಸ ಶಿವಗಣಾರಾಧನೆಗೆ ಆಹ್ವಾನ ನೀಡಿದ ಕುಟುಂಬ: ಯಾವಾಗ, ಎಲ್ಲಿ?
ಶಿವಶಂಕರಪ್ಪ ಕೈಲಾಸ ಶಿವಗಣಾರಾಧನೆಗೆ ಆಹ್ವಾನ ನೀಡಿದ ಕುಟುಂಬ: ಯಾವಾಗ, ಎಲ್ಲಿ?
ಜೈಲಿನಲ್ಲಿ ದರ್ಶನ ಭೇಟಿ ಮಾಡಿದ ​ಅಲೋಕ್ ಕುಮಾರ್: ಏನು ವಿಚಾರಿಸಿದ್ರು?
ಜೈಲಿನಲ್ಲಿ ದರ್ಶನ ಭೇಟಿ ಮಾಡಿದ ​ಅಲೋಕ್ ಕುಮಾರ್: ಏನು ವಿಚಾರಿಸಿದ್ರು?
ಸೀಕ್ರೆಟ್ ರೂಮ್​​ನಲ್ಲೂ ನಡೆಯಿತು ಧ್ರುವಂತ್, ರಕ್ಷಿತಾ ಶೆಟ್ಟಿ ಜಗಳ
ಸೀಕ್ರೆಟ್ ರೂಮ್​​ನಲ್ಲೂ ನಡೆಯಿತು ಧ್ರುವಂತ್, ರಕ್ಷಿತಾ ಶೆಟ್ಟಿ ಜಗಳ