ಏರ್​ಟೆಲ್ ಈಗ ವಿಶ್ವದ ಎರಡನೇ ಅತಿದೊಡ್ಡ ಟೆಲಿಕಾಂ ಆಪರೇಟರ್; ಅಗ್ರಸ್ಥಾನ ಯಾರದ್ದು, ಟಾಪ್-10 ಕಂಪನಿಗಳು ಯಾವುವು?

Bharti Airtel becomes 2nd largest telecom operator in the world: ಭಾರ್ತಿ ಏರ್ಟೆಲ್ ಸಂಸ್ಥೆ ಈಗ ಅತಿಹೆಚ್ಚು ಗ್ರಾಹಕರ ಬಳಗ ಹೊಂದಿರುವ ಟೆಲಿಕಾಂ ಕಂಪನಿಗಳಲ್ಲಿ ಎರಡನೇ ಸ್ಥಾನಕ್ಕೇರಿದೆ. ರಿಲಾಯನ್ಸ್ ಜಿಯೊವನ್ನು ಹಿಂದಿಕ್ಕಿ ಅದು ಎರಡನೇ ಸ್ಥಾನ ಪಡೆದಿದೆ. ಆದರೆ, ಭಾರತದಲ್ಲಿ ಜಿಯೋ ನಂಬರ್ ಒನ್, ಮತ್ತು ಏರ್ಟೆಲ್ ಆ ನಂತರದ ಸ್ಥಾನ ಪಡೆದಿದೆ. ಚೈನಾ ಮೊಬೈಲ್ ಕಂಪನಿ 100 ಕೋಟಿಗೂ ಅಧಿಕ ಗ್ರಾಹಕರೊಂದಿಗೆ ಅಗ್ರಸ್ಥಾನದಲ್ಲಿದೆ.

ಏರ್​ಟೆಲ್ ಈಗ ವಿಶ್ವದ ಎರಡನೇ ಅತಿದೊಡ್ಡ ಟೆಲಿಕಾಂ ಆಪರೇಟರ್; ಅಗ್ರಸ್ಥಾನ ಯಾರದ್ದು, ಟಾಪ್-10 ಕಂಪನಿಗಳು ಯಾವುವು?
ಏರ್ಟೆಲ್
Image Credit source: Shutterstock

Updated on: Apr 02, 2026 | 6:05 PM

ನವದೆಹಲಿ, ಏಪ್ರಿಲ್ 2: ಭಾರತದಲ್ಲಿ ಎರಡನೇ ಅತಿದೊಡ್ಡ ಟೆಲಿಕಾಂ ಆಪರೇಟರ್ ಎನಿಸಿರುವ ಭಾರ್ತಿ ಏರ್ಟೆಲ್ (Bharti Airtel), ವಿಶ್ವದಲ್ಲೂ ನಂಬರ್ 2 ಎನಿಸಿದೆ. ಏರ್​ಟೆಲ್​ನ ಜಾಗತಿಕ ಗ್ರಾಹಕರ ಸಂಖ್ಯೆ (subscribers base) 65 ಕೋಟಿ ಗಡಿ ದಾಟಿದೆ. ಈ ಮಾಹಿತಿಯನ್ನು ಭಾರ್ತಿ ಏರ್ಟೆಲ್ ಸಂಸ್ಥೆಯೇ ಸ್ವತಃ ಪ್ರಕಟಿಸಿದೆ. ಅತಿಹೆಚ್ಚು ಬಳಕೆದಾರರನ್ನು ಹೊಂದಿರುವ ಕಂಪನಿಗಳಲ್ಲಿ ಏರ್ಟೆಲ್ ಎರಡನೇ ಸ್ಥಾನದಲ್ಲಿದೆ. ಆ ಸ್ಥಾನಕ್ಕೆ ಜಿಯೋವನ್ನು ಹಿಂದಿಕ್ಕಿದೆ. ಏರ್ಟೆಲ್ ಸಂಸ್ಥೆ ಭಾರತದಲ್ಲಿ 368 ಮಿಲಿಯನ್ ಮೊಬೈಲ್ ಯೂಸರ್​ಗಳನ್ನು ಹೊಂದಿದೆ. ಉಳಿದವರು ಆಫ್ರಿಕಾದ ವಿವಿಧ ದೇಶಗಳಲ್ಲಿದ್ದಾರೆ.

ಭಾರ್ತಿ ಏರ್ಟೆಲ್​ನ ಅಂಗಸಂಸ್ಥೆಯಾದ ಏರ್​ಟೆಲ್ ಆಫ್ರಿಕಾ 14 ದೇಶಗಳಲ್ಲಿ ಗ್ರಾಹಕರ ಬಳಗ ಹೊಂದಿದೆ. ಅಂದರೆ, ಆಫ್ರಿಕಾ ಖಂಡದ 14 ವಿವಿಧ ದೇಶಗಳಲ್ಲಿ ಏರ್ಟೆಲ್ ಆಫ್ರಿಕಾ ಟೆಲಿಕಾಂ ಸರ್ವಿಸ್ ಇದೆ. ಆ 14 ದೇಶಗಳಲ್ಲಿ ಏರ್ಟೆಲ್ ಗ್ರಾಹಕರ ಸಂಖ್ಯೆ 17.9 ಕೋಟಿಯಷ್ಟಿದೆ. ಇದು ಜಿಎಸ್​ಎಂಎ ಇಂಟೆಲಿಜೆನ್ಸ್ ಸಂಸ್ಥೆ ಬಿಡುಗಡೆ ಮಾಡಿದ ದತ್ತಾಂಶದಿಂದ ತಿಳಿದುಬಂದಿದೆ.

ಇದನ್ನೂ ಓದಿ: ಕಮರ್ಷಿಯಲ್ ಬ್ಯಾಂಕ್​ಗಳ ಎಫ್​ಡಿಗಿಂತಲೂ ಹೆಚ್ಚು ರಿಟರ್ನ್ಸ್ ಕೊಡುತ್ತೆ ಈ ಪೋಸ್ಟ್ ಆಫೀಸ್ ಡೆಪಾಸಿಟ್

ಕೋಟಕ್ ಈಕ್ವಿಟೀಸ್​ನ ವರದಿಯೊಂದರ ಪ್ರಕಾರ ಏರ್​ಟೆಲ್​ನ ಸಬ್​ಸ್ಕ್ರೈಬರ್ ಬೇಸ್ ಸ್ಥಿರವಾಗಿ ಹೆಚ್ಚುತ್ತಿದೆ. ಅದರಲ್ಲೂ ಅದರ ಡಾಟಾ ಬಳಕೆದಾರರ ಪ್ರಮಾಣ ವರ್ಷಕ್ಕೆ ಶೇ. 9.7ರ ದರದಲ್ಲಿ ಹೆಚ್ಚುತ್ತಿದೆ. ಇದು ಏರ್ಟೆಲ್ ಬ್ಯುಸಿನೆಸ್ ಲಾಭ ಹೆಚ್ಚುವಂತೆ ಮಾಡುತ್ತಿದೆ.

ಭಾರತದಲ್ಲಿ ಜಿಯೋ ನಂಬರ್ ಒನ್

ಭಾರತದಲ್ಲಿ ರಿಲಾಯನ್ಸ್ ಜಿಯೋ ಸಂಸ್ಥೆ ನಂಬರ್ ಒನ್ ಟೆಲಿಕಾಂ ಆಪರೇಟರ್ ಎನ್ನುವ ದಾಖಲೆ ಮುಂದುವರಿಸಿದೆ. ಜಿಯೋದ ಗ್ರಾಹಕರ ಬಳಗ 50 ಕೋಟಿಗೂ ಹೆಚ್ಚಿದೆ. ಏರ್​ಟೆಲ್​ನ ಹೊಚ್ಚ ಹೊಸ ದತ್ತಾಂಶ ಪ್ರಕಟವಾಗುವವರೆಗೂ ಜಿಯೋ ವಿಶ್ವದ ಎರಡನೇ ಅತಿದೊಡ್ಡ ಟೆಲಿಕಾಂ ಆಪರೇಟರ್ ಎನಿಸಿತ್ತು. ಈಗ ಅದು ಮೂರನೇ ಸ್ಥಾನಕ್ಕೆ ಇಳಿದಿದೆ. ಆದರೆ, ಭಾರತದಲ್ಲಿ ಮಾತ್ರ ನಂಬರ್ ಒನ್ ಎನಿಸಿದೆ.

ಇದನ್ನೂ ಓದಿ: April 2026 Rules Changes: ಡಿಜಿಟಲ್ ಪಾವತಿ, ಪ್ಯಾನ್ ಇತ್ಯಾದಿ ನಿಯಮಗಳಲ್ಲಿ ಬದಲಾವಣೆ; ಆರ್‌ಬಿಐಯಿಂದ ಹೊಸ ಗೈಡ್‌ಲೈನ್ಸ್ ತಿಳಿದಿರಿ

ವಿಶ್ವದ ಟಾಪ್ ಟೆಲಿಕಾಂ ಕಂಪನಿಗಳು ಹಾಗೂ ಗ್ರಾಹಕರ ಬಳಗ

  1. ಚೈನಾ ಮೊಬೈಲ್: 100 ಕೋಟಿಗೂ ಅಧಿಕ ಗ್ರಾಹಕರು
  2. ಭಾರ್ತಿ ಏರ್ಟೆಲ್: 65 ಕೋಟಿಗೂ ಅಧಿಕ ಗ್ರಾಹಕರು
  3. ರಿಲಾಯನ್ಸ್ ಜಿಯೋ: 50 ಕೋಟಿಗೂ ಅಧಿಕ ಗ್ರಾಹಕರು
  4. ಚೈನಾ ಟೆಲಿಕಾಂ: 42 ಕೋಟಿಗೂ ಅಧಿಕ ಗ್ರಾಹಕರು
  5. ಚೈನಾ ಯೂನಿಕಾಂ: 35 ಕೋಟಿ ಗ್ರಾಹಕರು
  6. ಟೆಲಿಫೋನಿಕಾ, ಬ್ರಿಟನ್: 34 ಕೋಟಿಗೂ ಅಧಿಕ ಗ್ರಾಹಕರು
  7. ಅಮೆರಿಕ ಮೋವಿಲ್, ಮೆಕ್ಸಿಕೋ: 32 ಕೋಟಿಗೂ ಅಧಿಕ ಗ್ರಾಹಕರು
  8. ವೊಡಾಫೋನ್ ಗ್ರೂಪ್, ಬ್ರಿಟನ್: 30 ಕೋಟಿಗೂ ಅಧಿಕ ಗ್ರಾಹಕರು
  9. ಎಂಟಿಎನ್ ಗ್ರೂಪ್, ಸೌತ್ ಆಫ್ರಿಕಾ: 29 ಕೋಟಿಗೂ ಅಧಿಕ ಗ್ರಾಹಕರು
  10. ಡ್ಯೂಶೆ ಟೆಲಿಕಾಂ (Deutshe Telekom), ಎಟಿ ಅಂಡ್ ಟಿ, ವೆರಿಜಾನ್

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Follow Us