Ola Electric Car: 2023ರ ಹೊತ್ತಿಗೆ ಓಲಾ ಎಲೆಕ್ಟ್ರಿಕ್ ಕಾರು ಎಂಬ ಮಾಹಿತಿ ತೆರೆದಿಟ್ಟ ಭಾವೇಶ್ ಅಗರ್​ವಾಲ್

| Updated By: Srinivas Mata

Updated on: Aug 20, 2021 | 2:35 PM

ಓಲಾ ಎಲೆಕ್ಟ್ರಿಕ್ ಕಾರು 2023ನೇ ಇಸವಿಯಲ್ಲಿ ಬಿಡುಗಡೆ ಆಗಲಿದೆ ಎಂದು ಕಂಪೆನಿಯ ಸಿಇಒ ಭಾವೇಶ್ ಅಗರ್​ವಾಲ್ ಅವರು ಉತ್ತರ ನೀಡಿದ್ದಾರೆ.

Ola Electric Car: 2023ರ ಹೊತ್ತಿಗೆ ಓಲಾ ಎಲೆಕ್ಟ್ರಿಕ್ ಕಾರು ಎಂಬ ಮಾಹಿತಿ ತೆರೆದಿಟ್ಟ ಭಾವೇಶ್ ಅಗರ್​ವಾಲ್
ಭಾವೇಶ್ ಅಗರ್​ವಾಲ್ (ಸಂಗ್ರಹಚಿತ್ರ)
Follow us on

ಎಲೆಕ್ಟ್ರಿಕ್ ಸ್ಕೂಟರ್ ಶ್ರೇಣಿಯ ಯಶಸ್ಸಿನ ಮೇಲೆ ಸವಾರಿ ಮಾಡುತ್ತಿರುವ ಬೆಂಗಳೂರು ಮೂಲದ ಸಂಸ್ಥೆಯಾದ ಓಲಾದಿಂದ 2023ನೇ ಇಸವಿಯ ಹೊತ್ತಿಗೆ ಎಲೆಕ್ಟ್ರಿಕ್ ಕಾರು ಸಹ ಉತ್ಪಾದನೆ ಮಾಡಲಾಗುತ್ತದೆ. ಓಲಾ ಎಲೆಕ್ಟ್ರಿಕ್ ಸ್ಕೂಟರ್ ಅನಾವರಣ ಕಾರ್ಯಕ್ರಮದ ಟ್ವೀಟ್ ಅಡಿಯಲ್ಲಿ ತಮ್ಮ ಬಳಿ ಪೆಟ್ರೋಲ್, ಡೀಸೆಲ್ ಅಥವಾ ಎಲೆಕ್ಟ್ರಿಕ್ ಕಾರು ಇದೆಯೇ ಎಂದು ಬಳಕೆದಾರರು ಭಾವೇಶ್ ಅಗರ್​ವಾಲ್ ಅವರನ್ನು ಕೇಳಿದ್ದಾರೆ. ಇದಕ್ಕೆ ಅಗರ್​ವಾಲ್, “2 ತಿಂಗಳ ಹಿಂದಿನವರೆಗೂ ಎಂದಿಗೂ ಕಾರನ್ನು ಹೊಂದಿಲ್ಲ. ಈಗ ಹೈಬ್ರಿಡ್. ಮುಂದಿನದು 2023ರಲ್ಲಿ ಎಲೆಕ್ಟ್ರಿಕ್ ಆಗಿರುತ್ತದೆ. ಓಲಾದ ಎಲೆಕ್ಟ್ರಿಕ್ ಕಾರು,” ಎಂದು ಹೇಳಿದ್ದಾರೆ.

ಆದರೂ ಕಂಪೆನಿಯು ಎಲೆಕ್ಟ್ರಿಕ್ ಕಾರು ಉದ್ಯಮವನ್ನು ಪ್ರವೇಶಿಸುವ ಬಗ್ಗೆ ಹೆಚ್ಚಿನ ಮಾಹಿತಿಯನ್ನು ಅವರು ಹಂಚಿಕೊಂಡಿಲ್ಲ. ಓಲಾ ಎಲೆಕ್ಟ್ರಿಕ್ ಸ್ಕೂಟರ್‌ಗಳ ಬಿಡುಗಡೆಗೆ ಮುಂಚಿತವಾಗಿ, ಅಗರ್‌ವಾಲ್ ಭಾರತಕ್ಕೆ ಎಲೆಕ್ಟ್ರಿಕ್ ವಾಹನಗಳನ್ನು ಆಮದು ಮಾಡಿಕೊಳ್ಳುವವರು ದೇಶದಲ್ಲಿ ಹೂಡಿಕೆ ಮಾಡಬೇಕು ಎಂದು ಒತ್ತಾಯಿಸಿದ್ದರು. ಉದ್ಯಮವು ದೇಶದಲ್ಲಿ ಸುಸ್ಥಿರ ಕ್ರಾಂತಿಯನ್ನು ಸೃಷ್ಟಿಸಬೇಕು ಮತ್ತು ತಂತ್ರಜ್ಞಾನ ಹಾಗೂ ಉತ್ಪಾದನಾ ಎಕೋ ಸಿಸ್ಟಮ್ ಅನ್ನು ಬೆಳೆಯಬೇಕು ಎಂದಿದ್ದರು.

ಓಲಾ ತನ್ನ S1 ಎಲೆಕ್ಟ್ರಿಕ್ ಸ್ಕೂಟರ್ ಶ್ರೇಣಿಯನ್ನು ಭಾರತದಲ್ಲಿ ಭಾನುವಾರ ಬಿಡುಗಡೆ ಮಾಡಿದೆ. ಈ ಶ್ರೇಣಿಯು ಎರಡು ವೇರಿಯಂಟ್​ಗಳಲ್ಲಿ ಬರುತ್ತದೆ – ಓಲಾ S1 (ಬೆಲೆ ರೂ 99,999) ಮತ್ತು ಓಲಾ S1 Pro (ಬೆಲೆ 1,29,999). ಸ್ಕೂಟರ್‌ನ ಬೆಲೆ ವಿವಿಧ ರಾಜ್ಯ ಸರ್ಕಾರಗಳು ಎಲೆಕ್ಟ್ರಿಕ್ ವಾಹನಗಳ ಮೇಲೆ ನೀಡುವ ಸಬ್ಸಿಡಿಗಳಿಗೆ ಒಳಪಟ್ಟಿರುತ್ತದೆ. ಓಲಾ ಇ-ಸ್ಕೂಟರ್‌ಗಳನ್ನು ಪ್ರಸ್ತುತ ತಮಿಳುನಾಡಿನ ಕೃಷ್ಣಗಿರಿಯಲ್ಲಿರುವ ಓಲಾ ಫ್ಯೂಚರ್ ಫ್ಯಾಕ್ಟರಿಯಲ್ಲಿ ಉತ್ಪಾದಿಸಲಾಗುತ್ತಿದೆ. ಇದು ವಾರ್ಷಿಕ 1 ಕೋಟಿ ಯೂನಿಟ್‌ಗಳ ಸಾಮರ್ಥ್ಯವನ್ನು ಹೊಂದಿದೆ.

ಇದನ್ನೂ ಓದಿ: Ola Electric Scooter: 24 ಗಂಟೆಯಲ್ಲಿ ದಾಖಲೆಯ 1 ಲಕ್ಷ ಓಲಾ ಎಲೆಕ್ಟ್ರಿಕ್ ಸ್ಕೂಟರ್ ಬುಕ್ಕಿಂಗ್

(Bhavish Aggarwal Said Ola Electric Car Will Be Released On 2023)