Ola Electric Scooter: 24 ಗಂಟೆಯಲ್ಲಿ ದಾಖಲೆಯ 1 ಲಕ್ಷ ಓಲಾ ಎಲೆಕ್ಟ್ರಿಕ್ ಸ್ಕೂಟರ್ ಬುಕ್ಕಿಂಗ್

ಓಲಾ ಸ್ಕೂಟರ್​ನಿಂದ ಪ್ರೀ ಬುಕ್ಕಿಂಗ್ ಆರಂಭವಾದ ಮೇಲೆ ಕೇವಲ 24 ಗಂಟೆಯೊಳಗೆ 1 ಲಕ್ಷ ಸ್ಕೂಟರ್​ಗಳ ಬುಕ್ಕಿಂಗ್ ಆಗಿದೆ. ಆ ಬಗ್ಗೆ ಮಾಹಿತಿ ಇಲ್ಲಿದೆ.

Ola Electric Scooter:  24 ಗಂಟೆಯಲ್ಲಿ ದಾಖಲೆಯ 1 ಲಕ್ಷ ಓಲಾ ಎಲೆಕ್ಟ್ರಿಕ್ ಸ್ಕೂಟರ್ ಬುಕ್ಕಿಂಗ್
ಓಲಾ ಇವಿಗಳು
Follow us
TV9 Web
| Updated By: Srinivas Mata

Updated on:Jul 17, 2021 | 3:07 PM

ಓಲಾ ಎಲೆಕ್ಟ್ರಿಕ್ (Ola Electric) ಸಿಇಒ ಭವಿಷ್ ಅಗರ್​ವಾಲ್ ಶನಿವಾರದಂದು ಘೋಷಣೆ ಮಾಡಿರುವ ಪ್ರಕಾರ, ಲಾಂಚ್​ಗೆ ಪೂರ್ವವಾಗಿ ಬುಕ್ಕಿಂಗ್ ಆರಂಭವಾದ ಕೇವಲ 24 ಗಂಟೆಯೊಳಗಾಗಿ ಓಲಾ ಎಲೆಕ್ಟ್ರಿಕ್ ಸ್ಕೂಟರ್ 1 ಲಕ್ಷ ಬುಕ್ಕಿಂಗ್ ಪಡೆದಿದೆ. ಈ ಮೂಲಕ ವಿಶ್ವದಲ್ಲೇ ಅತಿ ಹೆಚ್ಚು ಪ್ರೀ ಬುಕ್ಡ್ ಸ್ಕೂಟರ್ ಎಂಬ ಅಗ್ಗಳಿಕೆ ಪಡೆದಿದೆ. ಜುಲೈ 15ನೇ ತಾರೀಕಿನಂದು ಓಲಾ ಎಲೆಕ್ಟ್ರಿಕ್​ನಿಂದ ಬುಕ್ಕಿಂಗ್ ಆರಂಭವಾದ ಬಗ್ಗೆ ಘೋಷಣೆ ಮಾಡಲಾಯಿತು. ಟೋಕನ್ ಮೊತ್ತ ರೂ. 499ರೊಂದಿಗೆ ಅಧಿಕೃತ ವೆಬ್​ಸೈಟ್​ನಲ್ಲಿ ಶುರು ಮಾಡಿತು. ಭಾರತದ ಎಲೆಕ್ಟ್ರಿಕ್ ವಾಹನದ ಕ್ರಾಂತಿಯು ಸ್ಫೋಟಕ ಆರಂಭವನ್ನು ಪಡೆದುಕೊಂಡಿದೆ. 1,00.000+ ಕ್ರಾಂತಿಕಾರಿಗಳು ಯಾರು ಸೇರ್ಪಡೆಯಾದರೋ ಮತ್ತು ತಮ್ಮ ಸ್ಕೂಟರ್ ಬುಕ್​ ಮಾಡಿದರೋ ಅವರಿಗೆಲ್ಲ ದೊಡ್ಡ ಧನ್ಯವಾದ ಎಂದು ಭವಿಷ್ ಅಗರ್​ವಾಲ್​ ಹೇಳಿದ್ದಾರೆ.

ನಮ್ಮ ಮೊದಲ ಎಲೆಕ್ಟ್ರಿಕ್ ವಾಹನಕ್ಕೆ ಭಾರತದಾದ್ಯಂತ ಕಂಡುಬಂದಿರುವ ಗ್ರಾಹಕರ ಅದ್ಭುತ ಪ್ರತಿಕ್ರಿಯೆಗೆ ನನಗೆ ಸಿಕ್ಕಾಪಟ್ಟೆ ಖುಷಿಯಾಗಿದೆ. ಈ ಹಿಂದೆಂದೂ ಕಾಣದಂಥ ಬೇಡಿಕೆ ಕಂಡುಬಂದಿರುವುದು ಗ್ರಾಹಕರ ಆದ್ಯತೆಯು ಎಲೆಕ್ಟ್ರಿಕ್ ವಾಹನಗಳಿಗೆ ಬದಲಾಗಿದ್ದರ ಸ್ಪಷ್ಟ ಸೂಚನೆ ಇದು. ವಿಶ್ವವನ್ನು ಸುಸ್ಥಿರ ಮೊಬಿಲಿಟಿ ಕಡೆಗೆ ಕರೆದೊಯ್ಯಬೇಕು ಎಂಬ ನಮ್ಮ ಮಿಷನ್​ನಲ್ಲಿ ಇದು ಅತಿ ದೊಡ್ಡ ಹೆಜ್ಜೆ. ಓಲಾ ಸ್ಕೂಟರ್​ ಬುಕ್ ಮಾಡಿದ ಹಾಗೂ ಎಲೆಕ್ಟ್ರಿಕ್ ವಾಹನದ ಕ್ರಾಂತಿಗೆ ಸೇರ್ಪಡೆಯಾದ ಎಲ್ಲರಿಗೂ ಧನ್ಯವಾದ. ಇದು ಕೇವಲ ಆರಂಭ!, ಎಂದು ಭವಿಷ್ ಅಗರ್​ವಾಲ್ ಹೇಳಿಕೆಯಲ್ಲಿ ತಿಳಿಸಿದ್ದಾರೆ.

ಈ ತಿಂಗಳ ಕೊನೆಯ ಭಾಗದಲ್ಲಿ ಹೊಸ ಓಲಾ ಎಲೆಕ್ಟ್ರಿಕ್ ಸ್ಕೂಟರ್ ಮಾರಾಟ ಆರಂಭ ಆಗುವ ಸಾಧ್ಯತೆ ಇದೆ. ಕಂಪೆನಿ ಹೇಳಿಕೊಂಡಿರುವಂತೆ, ಈ ಸ್ಕೂಟರ್​ನ ಬೂಟ್​ ಸ್ಪೇಸ್ ಬೆಸ್ಟ್​ ಆಗಿರುತ್ತದೆ. ಇದರ ಜತೆಗೆ ಕೀರಹಿತವಾಗಿ ಅನುಭವಕ್ಕೆ ಈ ಸ್ಕೂಟರ್​ನಕ್ಕು ಆ್ಯಪ್ ಆಧಾರಿತವಾದ ಕೀ ಬರುತ್ತದೆ. ಇನ್ನು ಈ ಎಲೆಕ್ಟ್ರಿಕ್ ಸ್ಕೂಟರ್ ಆರಾಮದಾಯಕವಾದ ಆಸನದೊಂದಿಗೆ ಬರಲಿದೆ ಎಂದು ಓಲಾ ಹೇಳಿದೆ. ಸ್ಕೂಟರ್ “ಸೂಪರ್ ಕಾರ್ನರಿಂಗ್” ಸಾಮರ್ಥ್ಯ ಮತ್ತು “ಕ್ಲಾಸ್​- ವೇಗ ವರ್ಧನೆ”ಯೊಂದಿಗೆ ಬರಲಿದೆ ಎಂದು ಕಂಪೆನಿ ಹೇಳಿಕೊಂಡಿದೆ.

ಇದನ್ನೂ ಓದಿ: Ola Electric Scooter: ಓಲಾ ಎಲೆಕ್ಟ್ರಿಕ್ ಸ್ಕೂಟರ್​ ರೀಫಂಡಬಲ್ ರೂ. 499 ಪಾವತಿಸಿ, ಕಾಯ್ದಿರಿಸುವ ಅವಕಾಶ

Published On - 3:06 pm, Sat, 17 July 21

ಕ್ಷಣಾರ್ಧದಲ್ಲಿ ಅತ್ಯಾದ್ಭುತ ಕ್ಯಾಚ್ ಹಿಡಿದ ಮ್ಯಾಕ್ಸ್​ವೆಲ್
ಕ್ಷಣಾರ್ಧದಲ್ಲಿ ಅತ್ಯಾದ್ಭುತ ಕ್ಯಾಚ್ ಹಿಡಿದ ಮ್ಯಾಕ್ಸ್​ವೆಲ್
ಸರ್ಕಾರೀ ಗೌರವಗಳೊಂದಿಗೆ ಅಂತ್ಯಸಂಸ್ಕಾರ ನಡೆಸಲು ಸಿಎಸ್​ಗೆ ಸಿಎಂ ಸೂಚನೆ
ಸರ್ಕಾರೀ ಗೌರವಗಳೊಂದಿಗೆ ಅಂತ್ಯಸಂಸ್ಕಾರ ನಡೆಸಲು ಸಿಎಸ್​ಗೆ ಸಿಎಂ ಸೂಚನೆ
ಡಿಸೆಂಬರ್ 29ರಂದು ನಿಧನರಾದ ದಿವಿನ್ ಫೆಬ್ರುವರಿ 22ರಂದು ಮದುವೆಯಾಗಲಿದ್ದರು
ಡಿಸೆಂಬರ್ 29ರಂದು ನಿಧನರಾದ ದಿವಿನ್ ಫೆಬ್ರುವರಿ 22ರಂದು ಮದುವೆಯಾಗಲಿದ್ದರು
ಬಿಗ್​ ಬಾಸ್ ಮನೆಗೆ ಬಂದ ಗೌತಮಿ ಜಾದವ್ ಪತಿ​; ಹೇಗಿತ್ತು ಮಂಜು ರಿಯಾಕ್ಷನ್?
ಬಿಗ್​ ಬಾಸ್ ಮನೆಗೆ ಬಂದ ಗೌತಮಿ ಜಾದವ್ ಪತಿ​; ಹೇಗಿತ್ತು ಮಂಜು ರಿಯಾಕ್ಷನ್?
ಭಾವುಕ ಜೀವಿ ಸಾರಾ ಮಹೇಶ್ ಗತಿಸಿದ ಚಿಂಟುಳನ್ನು ನೆನೆದು ಕಣ್ಣೀರಾಗುತ್ತಾರೆ!
ಭಾವುಕ ಜೀವಿ ಸಾರಾ ಮಹೇಶ್ ಗತಿಸಿದ ಚಿಂಟುಳನ್ನು ನೆನೆದು ಕಣ್ಣೀರಾಗುತ್ತಾರೆ!
ರಸ್ತೆ ತಡೆಗೋಡೆಯಿಲ್ಲದಿದ್ದರೆ ಬಸ್ಸು ಪ್ರಪಾತಕ್ಕೆ ಉರುಳುತಿತ್ತು!
ರಸ್ತೆ ತಡೆಗೋಡೆಯಿಲ್ಲದಿದ್ದರೆ ಬಸ್ಸು ಪ್ರಪಾತಕ್ಕೆ ಉರುಳುತಿತ್ತು!
ಕೆಪಿಸಿಸಿ ಅಧ್ಯಕ್ಷನನ್ನು ಬದಲಾಯಿಸುವುದು ಹೈಕಮಾಂಡ್​ಗೆ ಬಿಟ್ಟ ವಿಚಾರ: ಸಚಿವ
ಕೆಪಿಸಿಸಿ ಅಧ್ಯಕ್ಷನನ್ನು ಬದಲಾಯಿಸುವುದು ಹೈಕಮಾಂಡ್​ಗೆ ಬಿಟ್ಟ ವಿಚಾರ: ಸಚಿವ
ತಂದೆ ಮುಖ ನೋಡಿ ಅಳು ನಿಲ್ಲಿಸಲೇ ಇಲ್ಲ ಉಗ್ರಂ ಮಂಜು; ಎಮೋಷನಲ್ ಎಪಿಸೋಡ್
ತಂದೆ ಮುಖ ನೋಡಿ ಅಳು ನಿಲ್ಲಿಸಲೇ ಇಲ್ಲ ಉಗ್ರಂ ಮಂಜು; ಎಮೋಷನಲ್ ಎಪಿಸೋಡ್
ಪೊಲೀಸರ ಮೇಲೆ ಅಪಾರ ನಂಬಿಕೆಯಿದೆ, ಸಿಬಿಐ ತನಿಖೆ ಬೇಕಿಲ್ಲ: ಸಿದ್ದರಾಮಯ್ಯ
ಪೊಲೀಸರ ಮೇಲೆ ಅಪಾರ ನಂಬಿಕೆಯಿದೆ, ಸಿಬಿಐ ತನಿಖೆ ಬೇಕಿಲ್ಲ: ಸಿದ್ದರಾಮಯ್ಯ
ಸಂವಿಧಾನದ ಆಶಯಗಳಿಗೆ ಕಾಂಗ್ರೆಸ್​ನಿಂದ ಅಪಪ್ರಚಾರ: ಸಿಟಿ ರವಿ
ಸಂವಿಧಾನದ ಆಶಯಗಳಿಗೆ ಕಾಂಗ್ರೆಸ್​ನಿಂದ ಅಪಪ್ರಚಾರ: ಸಿಟಿ ರವಿ