Bitcoin: 2020ರ ಡಿಸೆಂಬರ್ ನಂತರ ಮೊದಲ ಬಾರಿಗೆ ಬಿಟ್‌ಕಾಯಿನ್ 20 ಸಾವಿರ ಯುಎಸ್ಡಿಗಿಂತ ಕೆಳಗೆ
2020ರ ಡಿಸೆಂಬರ್ ನಂತರ ಮೊದಲ ಬಾರಿಗೆ ಬಿಟ್‌ಕಾಯಿನ್ ಮೌಲ್ಯ 20 ಸಾವಿರ ಯುಎಸ್ಡಿಗಿಂತ ಕೆಳಗೆ ಇಳಿದಿದೆ. ಆ ಬಗ್ಗೆ ವಿವರ ಇಲ್ಲಿದೆ.
2020ರ ಡಿಸೆಂಬರ್ನಿಂದ ಈಚೆಗೆ ಮೊದಲ ಬಾರಿಗೆ ಬಿಟ್‌ಕಾಯಿನ್ 20,000 ಯುಎಸ್ಡಿಗಿಂತ ಕಡಿಮೆಯಾಗಿದೆ. ಏಕೆಂದರೆ ಹಣಕಾಸು ಬಿಗಿತದ ಹಿನ್ನೆಲೆಯಲ್ಲಿ ಕ್ರಿಪ್ಟೋ (Cryptocurrency) ಉದ್ಯಮದಲ್ಲಿ ಒತ್ತಡವನ್ನು ಹೆಚ್ಚಿಸುವ ಪುರಾವೆಗಳು ಹೆಚ್ಚುತ್ತಲೇ ಇವೆ. ಶನಿವಾರ ಮಧ್ಯಾಹ್ನ 2.54ರ ಹೊತ್ತಿಗೆ ಹಾಂಕಾಂಗ್‌ನಲ್ಲಿ ಬಿಟ್‌ಕಾಯಿನ್ ಶೇ 6ರಷ್ಟು ಕುಸಿದು, ಯುಎಸ್ಡಿ 19,377.08ಕ್ಕೆ ತಲುಪಿದೆ. ಅತಿ ದೊಡ್ಡ ಟೋಕನ್ ಆದ ಬಿಟ್ಕಾಯಿನ್ನ ಮಾರುಕಟ್ಟೆ ಮೌಲ್ಯ ಸತತ 12ನೇ ದಿನ ಕುಸಿತ ಕಂಡಿದೆ. “ಹೆಚ್ಚುತ್ತಿರುವ ಆರ್ಥಿಕ ಹಿಂಜರಿತದ ಭಯವು ಅಪಾಯಕಾರಿ ಸ್ವತ್ತುಗಳ ಖರೀದಿಯನ್ನು ದುರ್ಬಲಗೊಳಿಸುತ್ತಿದೆ ಮತ್ತು ಕ್ರಿಪ್ಟೋ ವ್ಯಾಪಾರಿಗಳು ಈ ಕಡಿಮೆ ಮಟ್ಟದಲ್ಲಿ ಬಿಟ್‌ಕಾಯಿನ್ ಖರೀದಿಸುವ ಬಗ್ಗೆ ಜಾಗರೂಕರಾಗಿರುತ್ತಿದ್ದಾರೆ,” ಎಂದು ಒಂಡಾದ ಹಿರಿಯ ಮಾರುಕಟ್ಟೆ ವಿಶ್ಲೇಷಕ ಎಡ್ವರ್ಡ್ ಮೋಯಾ ಜೂನ್ 16ರಂದು ಒಂದು ಟಿಪ್ಪಣಿಯಲ್ಲಿ ಹೇಳಿದ್ದರು. “ಸುದ್ದಿ ಹರಿವು ಕ್ರಿಪ್ಟೋಗಳ ಪಾಲಿಗೆ ಭಯಾನಕವಾಗಿದೆ.”
ಫೆಡರಲ್ ರಿಸರ್ವ್ ತನ್ನ ಮುಖ್ಯ ಬಡ್ಡಿದರವನ್ನು ಜೂನ್ 15ರಂದು ಶೇಕಡಾವಾರು ಪಾಯಿಂಟ್‌ನ ಮುಕ್ಕಾಲು ಭಾಗದಷ್ಟು ಹೆಚ್ಚಿಸಿತು – 1994ರಿಂದ ಈಚೆಗೆ ಇದು ಅತಿದೊಡ್ಡ ಹೆಚ್ಚಳ – ಮತ್ತು ಕೇಂದ್ರೀಯ ಬ್ಯಾಂಕರ್‌ಗಳು ಹಣದುಬ್ಬರವನ್ನು ತಗ್ಗಿಸುವ ಪ್ರಯತ್ನದಲ್ಲಿ ಈ ವರ್ಷ ಆಕ್ರಮಣಕಾರಿಯಾಗಿ ಮುಂದುವರಿಸುವುದಾಗಿ ಸೂಚಿಸಿದೆ. ಹೆಚ್ಚಿನ ದರದ ಪರಿಸರವು ಕ್ರಿಪ್ಟೋನಂತಹ ಅಪಾಯಕಾರಿ ಸ್ವತ್ತುಗಳಿಗೆ ಹಾನಿಕಾರಕವಾಗಿದ್ದು, ಇದು ನವೆಂಬರ್‌ನಲ್ಲಿ ಸಾರ್ವಕಾಲಿಕ ಗರಿಷ್ಠ ಮಟ್ಟದಿಂದ ಬಿಟ್‌ಕಾಯಿನ್‌ನಲ್ಲಿ ಸರಿಸುಮಾರು ಶೇ 70ರಷ್ಟು ಕುಸಿತಕ್ಕೆ ಕೊಡುಗೆ ನೀಡಿದೆ.
ಕಳೆದ ತಿಂಗಳು ಟೆರಾ ಬ್ಲಾಕ್‌ಚೈನ್‌ನ ಕುಸಿತ ಮತ್ತು ಹಿಂಪಡೆಯುವಿಕೆಯನ್ನು ನಿಲ್ಲಿಸಲು ಕ್ರಿಪ್ಟೋ ಸಾಲದಾತ ಸೆಲ್ಸಿಯಸ್ ನೆಟ್‌ವರ್ಕ್ ಲಿಮಿಟೆಡ್‌ನ ಇತ್ತೀಚಿನ ನಿರ್ಧಾರದ ನಂತರ, ಕಡಿಮೆ ಅಕಾಮಡೆಟಿವ್ ಫೆಡ್‌ನ ನಿರೀಕ್ಷೆಗಳ ಮೇಲೆ ಕಳೆದ ವರ್ಷದ ಕೊನೆಯಲ್ಲಿ ಕುಸಿತ ಪ್ರಾರಂಭಿಸಿದ ಮಾರುಕಟ್ಟೆಯು ಈಗ ವಿಶಾಲವಾದ ಸಂಕಷ್ಟದ ಲಕ್ಷಣಗಳನ್ನು ತೋರಿಸುತ್ತಿದೆ. ಈಗಿನ ಸ್ಥಿತಿಗೆ ಇನ್ನಷ್ಟು ಸೇರಿಸುವ ಮೂಲಕ, ಕ್ರಿಪ್ಟೋ ಹೆಡ್ಜ್ ಫಂಡ್ ತ್ರೀ ಆರೋಸ್ ಕ್ಯಾಪಿಟಲ್ ದೊಡ್ಡ ನಷ್ಟವನ್ನು ಅನುಭವಿಸಿತು ಮತ್ತು ಇದು ಆಸ್ತಿ ಮಾರಾಟ ಅಥವಾ ಬೇಲ್ಔಟ್ ಅನ್ನು ಪರಿಗಣಿಸುತ್ತಿದೆ ಎಂದು ಹೇಳಲಾಯಿತು. ಸಂಶೋಧಕ ಗ್ಲಾಸ್‌ನೋಡ್ ಪ್ರಕಾರ, ಇಲ್ಲಿಯವರೆಗೆ ಮಾರಾಟ ಮಾಡುವುದನ್ನು ತಪ್ಪಿಸಿದ ದೀರ್ಘಕಾಲೀನ ಉದ್ದೇಶದಿಂದ ಖರೀದಿ ಮಾಡಿ, ಇರಿಸಿಕೊಂಡಿರುವವರು ಸಹ ಒತ್ತಡಕ್ಕೆ ಒಳಗಾಗುತ್ತಿದ್ದಾರೆ.
ಬ್ಲೂಮ್‌ಬರ್ಗ್ ಇಂಟೆಲಿಜೆನ್ಸ್‌ನ ವಿಶ್ಲೇಷಕ ಮೈಕ್ ಮೆಕ್‌ಗ್ಲೋನ್ ಪ್ರಕಾರ, ಟೋಕನ್ ಸಾಮಾನ್ಯವಾಗಿ ಪಾರಮ್ಯದ ಬಿಂದುಗಳನ್ನು ಎಲ್ಲಿ ಕಂಡುಕೊಳ್ಳುತ್ತದೆ ಎಂಬುದನ್ನು ಹಿಂದಿನ ಮಾರಾಟಗಳು ಪ್ರದರ್ಶಿಸಿದಂತೆ, ಆ ಮಟ್ಟ ತಲುಪುವುದರೊಂದಿಗೆ ಬಿಟ್‌ಕಾಯಿನ್ ಸುಮಾರು ಯುಎಸ್ಡಿ 20,000 ಮಟ್ಟದಲ್ಲಿ ಪ್ರಮುಖ ಬೆಂಬಲವನ್ನು ಪಡೆಯಬಹುದು ಎಂದು ಐತಿಹಾಸಿಕ ಡೇಟಾ ತೋರಿಸುತ್ತದೆ. ಬಿಟ್‌ಕಾಯಿನ್ ಅತ್ಯಂತ ಕ್ಲಿಷ್ಟಕರ ಹಂತವನ್ನು ಮುಟ್ಟುತ್ತದೆ ಬಿಟ್‌ಕಾಯಿನ್ “2018-19ರಲ್ಲಿ ಸುಮಾರು ಯುಎಸ್ಡಿ 5,000 ಮತ್ತು 2014-15 ರಲ್ಲಿ ಯುಎಸ್ಡಿ 300 ಮಾಡಿದಂತೆ ಸುಮಾರು ಯುಎಸ್ಡಿ 20,000 ಬೇಸ್ ಅನ್ನು ನಿರ್ಮಿಸಬಹುದು,” ಎಂದು ಅವರು ಜೂನ್ 15ರ ಟಿಪ್ಪಣಿಯಲ್ಲಿ ಹೇಳಿದ್ದರು. “ಕಡಿಮೆ ಆಗುತ್ತಿರುವ ಏರಿಳಿತ ಮತ್ತು ಏರುತ್ತಿರುವ ಬೆಲೆಗಳು ಡಿಜಿಟಲ್ ಸ್ಟೋರ್-ಆಫ್- ಮೌಲ್ಯ ಪಕ್ವವಾಗಿಸುತ್ತಿವೆ,” ಎಂದಿದ್ದಾರೆ
ಕ್ರಿಪ್ಟೋ ಮಾರುಕಟ್ಟೆಯು ಈಗ 2021ರ ಅಂತ್ಯದಲ್ಲಿ ಅದರ ಎತ್ತರದ ಒಂದು ಭಾಗದಲ್ಲಿ ನಿಂತಿದ್ದು, ಬಿಟ್‌ಕಾಯಿನ್ ಯುಎಸ್ಡಿ 69,000 ಬಳಿ ವ್ಯಾಪಾರ ಮಾಡಿದಾಗ ಮತ್ತು ವ್ಯಾಪಾರಿಗಳು ಎಲ್ಲ ಅಂಚಿನಲ್ಲಿ ಊಹಾತ್ಮಕ ಹೂಡಿಕೆಗಳಿಗೆ ಹಣವನ್ನು ಸುರಿಯುತ್ತಾರೆ. CoinGecko ಪ್ರಕಾರ, ಕ್ರಿಪ್ಟೋಕರೆನ್ಸಿಗಳ ಒಟ್ಟು ಮಾರುಕಟ್ಟೆ ಬಂಡವಾಳ ಮೌಲ್ಯ ಸುಮಾರು ಯುಎಸ್ಡಿ 900 ಬಿಲಿಯನ್ ಆಗಿದೆ, ಅಂದರೆ ನವೆಂಬರ್‌ನಲ್ಲಿ ಇದ್ದ ಯುಎಸ್ಡಿ 3 ಟ್ರಿಲಿಯನ್ ಮಟ್ಟದಿಂದ ಕಡಿಮೆಯಾಗಿದೆ.
ಇನ್ನಷ್ಟು ವಾಣಿಜ್ಯ ಸುದ್ದಿಗೆ ಇಲ್ಲಿ ಕ್ಲಿಕ್ ಮಾಡಿ, ಪ್ರಮುಖ ಸುದ್ದಿಗೆ ಇಲ್ಲಿ ಕ್ಲಿಕ್ ಮಾಡಿ
ಇದನ್ನೂ ಓದಿ: Cryptocurrencies: ಬಿಟ್‌ಕಾಯಿನ್ ಸೇರಿದಂತೆ ಕ್ರಿಪ್ಟೋಕರೆನ್ಸಿಗಳ ಮೇಲೆ ಶೇ 28ರಷ್ಟು ಜಿಎಸ್ಟಿ ವಿಧಿಸುವ ಪ್ರಸ್ತಾವ