ಎಲ್‌ಪಿಜಿ ಸಿಲಿಂಡರ್ ರೀಫಿಲ್ ಪಡೆಯಲು ಲೋನ್ ಸ್ಕೀಮ್; ಭಾರತ್ ಗ್ಯಾಸ್ ಗ್ರಾಹಕರಿಗೆ ಬಡ್ಡಿರಹಿತ ಸಾಲ ಸೌಲಭ್ಯ
ಭಾರತ್ ಗ್ಯಾಸ್ (Bharatgas) ಸಿಲಿಂಡರ್ ರೀಫಿಲ್ ಮಾಡಲು ಗ್ರಾಹಕರಿಗೆ 600 ರೂಗಳ ಕಿರು ಲೋನ್ (Micro Loan) ಆಫರ್ ನೀಡಲಾಗುತ್ತಿದೆ. ಗ್ಯಾಸ್ಗೆ ಪೂರ್ಣವಾಗಿ ಪಾವತಿಸಲು ಹಣವಿಲ್ಲದಿದ್ದಾಗ ಈ ಸೌಲಭ್ಯ ಬಳಸಬಹುದು. ಆರು ವಾರಗಳ ಇಎಂಐ ಅವಕಾಶ ಇರುತ್ತದೆ. ಈ ಬಡ್ಡಿ ರಹಿತ ಸಾಲವನ್ನು ಪಡೆದುಕೊಳ್ಳುವುದು ಹೇಗೆ ಮತ್ತು ನಿಯಮಗಳ ಸಂಪೂರ್ಣ ವಿವರ ಇಲ್ಲಿದೆ.

ನವದೆಹಲಿ, ಸೆಪ್ಟೆಂಬರ್ 30: ಹಣಕಾಸಿನ ತುರ್ತು ಸಂದರ್ಭಗಳಲ್ಲಿ ಎಲ್‌ಪಿಜಿ ಸಿಲಿಂಡರ್ ರೀಫಿಲ್ ಮಾಡಲು ಕಷ್ಟಪಡುವ ಗ್ರಾಹಕರಿಗೆ ಅನುಕೂಲ ಮಾಡಿಕೊಡಲು ಭಾರತ್ ಪೆಟ್ರೋಲಿಯಂ ಕಾರ್ಪೊರೇಷನ್ ಲಿಮಿಟೆಡ್ (BPCL) ಹೊಸ ಪ್ರಯೋಗಕ್ಕೆ ಮುಂದಾಗಿದೆ. ಅದರ ‘ಭಾರತ್ ಗ್ಯಾಸ್’ (Bharatgas) ಗ್ರಾಹಕರಿಗಾಗಿ ವಿಶೇಷ ಮೈಕ್ರೋ ಲೋನ್ ಯೋಜನೆಯನ್ನು ಜಾರಿಗೆ ತಂದಿದೆ. ಈ ಯೋಜನೆಯಡಿ ಭಾರತ್ ಗ್ಯಾಸ್‌ನ ಅರ್ಹ ಗ್ರಾಹಕರು ಸಿಲಿಂಡರ್ ಬುಕಿಂಗ್ ಮತ್ತು ರೀಫಿಲ್ ಪಾವತಿಗಾಗಿ 600-650 ಗಳವರೆಗೆ ಸಣ್ಣ ಮೊತ್ತದ ಮೈಕ್ರೋ ಸಾಲವನ್ನು (Micro Loan) ಪಡೆಯಬಹುದು. ಈ ಸಾಲಕ್ಕೆ ಯಾವುದೇ ಬಡ್ಡಿ ಇರುವುದಿಲ್ಲ.
ಇದೊಂದು ರೀತಿ ಫ್ರೀ ಇಎಂಐ ಪ್ಲಾನ್ನಂತೆ. ಬಯ್ ನೌ ಪೇ ಲೇಟರ್ ಎಂಬಂತೆಯೂ ಹೌದು. ಗ್ಯಾಸ್ ಪಡೆಯಲು ತತ್ಕ್ಷಣಕ್ಕೆ ಹಣದ ಕೊರತೆ ಎದುರಿಸುವ ಗ್ರಾಹಕರಿಗೆ ಬಹಳ ಉಪಯೋಗವಾಗುವ ಯೋಜನೆಯನ್ನು ಬಿಪಿಸಿಎಲ್ ತಂದಿದೆ. ಇದು 5 ಕಿಲೋ ಚೋಟು ಭಾರತ್ಗ್ಯಾಸ್ ಎಲ್‌ಪಿಜಿ ಸಿಲಿಂಡರ್ ಬುಕಿಂಗ್ಗೆ ಅನ್ವಯಿಸಲಿದೆ.
ಇದನ್ನೂ ಓದಿ: ಟೈಪ್ ಸಿ ಅಥವಾ ಟೈಪ್ ಎ: ಫೋನ್ ಬೇಗ ಚಾರ್ಜ್ ಆಗುವುದು ಯಾವ ಕೇಬಲ್‌ನಲ್ಲಿ?
ಸಾಲ ಪಡೆಯುವ ಮತ್ತು ಮರುಪಾವತಿಸುವ ವಿಧಾನ
ಗ್ರಾಹಕರು ಭಾರತ್ ಗ್ಯಾಸ್‌ನ ಅಧಿಕೃತ ಆಪ್ ಅಥವಾ ಡಿಜಿಟಲ್ ಪಾವತಿ ಪ್ಲಾಟ್ಫಾರ್ಮ್ಗಳ ಮೂಲಕ ಸಿಲಿಂಡರ್ ಬುಕ್ ಮಾಡುವಾಗ ಈ ಲೋನ್ ಆಯ್ಕೆಯನ್ನು ಬಳಸಿಕೊಳ್ಳಬಹುದು. ಮುಂದಿನ ಸಿಲಿಂಡರ್ ಬುಕಿಂಗ್ ವೇಳೆಗೆ, ಅಥವಾ ನಿಗದಿತ ಕಾಲಾವಧಿಯೊಳಗೆ ಈ ಮೊತ್ತವನ್ನು ಹಿಂತಿರುಗಿಸಲು ಸುಲಭ ಕಂತು/ಮರುಪಾವತಿ ವ್ಯವಸ್ಥೆ ಇರುತ್ತದೆ.
ಬಿಪಿಸಿಎಲ್ ಎಕ್ಸ್ ಪೋಸ್ಟ್
रसोई की ज़रूरतें अब आर्थिक चिंता से नहीं रुकेंगी।
उपलब्ध सूक्ष्म-वित्तीय (माइक्रोफाइनेंस) सुविधा का लाभ उठाकर भारतगैस रिफिल अभी लें, भुगतान बाद में करें
अधिक जानकारी के लिए अपने भारतगैस वितरक से संपर्क करें।#Bharatgas #BPCL #BuyNowPayLater #LPG #FuellingPossibilities… pic.twitter.com/ppMRhhoHxX
— Bharat Petroleum LPG (@BPCLLPG) September 24, 2026
ಭಾರತ್ ಗ್ಯಾಸ್ ಗ್ರಾಹಕರಿಗೆ ನೀಡಲಾಗುವ ಈ ಕಿರು ಸಾಲಕ್ಕೆ ಯಾವುದೇ ಬಡ್ಡಿ ಇರುವುದಿಲ್ಲ. ಕಂತುಗಳಲ್ಲಿ ಹಣ ಕಟ್ಟುವ ಅವಕಾಶ ಇರುತ್ತದೆ. ತತ್ಕ್ಷಣದ ಹಣದ ಕೊರತೆಯಿಂದ ಗ್ಯಾಸ್ ಬುಕಿಂಗ್ ಮಾಡಲು ಆಗದಿರುವ ಗ್ರಾಹಕರಿಗೆ ಈ ಸ್ಕೀಮ್ ನೆರವಾಗಬಹುದು. ಕೂಲಿಗಾಗಿ ನಗರಗಳಿಗೆ ಬರುವ ಕಾರ್ಮಿಕರಿಗೆ ಇದು ಹೆಚ್ಚಿನ ಅನುಕೂಲ ಎನಿಸಬಹುದು.
ಇದನ್ನೂ ಓದಿ: ಟ್ರಾಯ್ ಹೊಸ ನಿಯಮಗಳು: ಸ್ಪ್ಯಾಮ್ ಕಾಲ್ಗೆ ಕಡಿವಾಣ ಹಾಕಲು ಟೆಲಿಕಾಂ ಆಪರೇಟರ್ಸ್ಗೆ ಹೆಚ್ಚಿನ ಅಧಿಕಾರ, ಜವಾಬ್ದಾರಿ
ಬಿಪಿಸಿಎಲ್ ಸಂಸ್ಥೆಯು OneAgro Fintech Private Limited ಜೊತೆಗೆ ಸಹಭಾಗಿತ್ವದಲ್ಲಿ ಈ ಸೌಲಭ್ಯ ನೀಡುತ್ತಿದೆ. ಯಾವುದೇ ಹೆಚ್ಚಿನ ದಾಖಲೆಗಳ ಅಗತ್ಯವಿಲ್ಲದೆ ಸಂಪೂರ್ಣ ಡಿಜಿಟಲ್ ಮಾರ್ಗದ ಮೂಲಕ ತಕ್ಷಣವೇ ಸಾಲ ಅನುಮೋದನೆಯಾಗುವಂತೆ ಈ ವ್ಯವಸ್ಥೆಯನ್ನು ರೂಪಿಸಲಾಗಿದೆ.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ




