ರಿಲಾಯನ್ಸ್ ಜಿಯೋ, ಏರ್ಟೆಲ್, ವೊಡಾಫೋನ್ ಐಡಿಯಾ ಸಂಸ್ಥೆಗಳಂತೆ ಬಿಎಸ್ಸೆನ್ನೆಲ್ 5ಜಿ ಸರ್ವಿಸ್ ಕೊಡಲು ಸಾಧ್ಯವಾಗದೇ ಇರಬಹುದು. ಆದರೆ, 3ಜಿ ಮತ್ತು 4ಜಿ ನೆಟ್ವರ್ಕ್ ಅನ್ನು ಬಿಎಸ್ಸೆನ್ನೆಲ್ ಆಫರ್ ಮಾಡುತ್ತಿದೆ. ದೇಶಾದ್ಯಂತ 4ಜಿ ಅಳವಡಿಕೆಗೆ ಇದು ಯೋಜನೆ ಹಾಕಿದೆ. ಜಿಯೋ, ಏರ್ಟೆಲ್, ವಿಐ ಸಂಸ್ಥೆಗಳು ರೀಚಾರ್ಜ್ ದರಗಳನ್ನು ಸಿಕ್ಕಾಪಟ್ಟೆ ಏರಿಸಿವೆ. ಇದೇ ಹೊತ್ತಲ್ಲಿ ಬಿಎಸ್ಸೆನ್ನೆಲ್ ಬಹಳ ಅಗ್ಗದ ಬೆಲೆಗೆ 4ಜಿ ಸರ್ವಿಸ್ ದರ ಆಫರ್ ಮಾಡುತ್ತಿದೆ. ವರ್ಷಗಳ ಹಿಂದೆ ಪ್ರತಿಸ್ಪರ್ಧಿಗಳ ಪಾಲಾದ ತನ್ನ ಬಳಕೆದಾರರನ್ನು ಮರಳಿ ಗಿಟ್ಟಿಸಲು ಬಿಎಸ್ಸೆನ್ನೆಲ್ ಎಲ್ಲಾ ಪಟ್ಟುಗಳನ್ನು ಹಾಕುತ್ತಿದೆ. ಅದರ ಎಲ್ಲಾ ರೀಚಾರ್ಜ್ ದರಗಳೂ ಪ್ರತಿಸ್ಪರ್ಧಿಗಳಿಗಿಂತ ಬಹಳ ಕಡಿಮೆ ಇದೆ.
ದಿನಕ್ಕೆ ಹೆಚ್ಚು ಡಾಟಾ ಅಗತ್ಯ ಇರುವ ಗ್ರಾಹಕರಿಗೆ ಬಿಎಸ್ಸೆನ್ನೆಲ್ ಅಗ್ಗದ ಪ್ಲಾನ್ ಬಿಡುಗಡೆ ಮಾಡಿದೆ. ಅದರ 599 ರೂ ಪ್ಲಾನ್ ಬಹಳ ಲಾಭ ಕೊಡುತ್ತದೆ. ಇದು 84 ದಿನಗಳ ವ್ಯಾಲಿಡಿಟಿ ಹೊಂದಿದೆ. ಹೆಚ್ಚೂಕಡಿಮೆ ಮೂರು ತಿಂಗಳು ಇದನ್ನು ಬಳಸಬಹುದು. 84 ದಿನಗಳ ಕಾಲ ಪ್ರತೀ ದಿನ 3 ಜಿಬಿ ಡಾಟಾ ಪಡೆಯಬಹುದು. ಒಟ್ಟಾರೆ 252 ಜಿಬಿ ಡಾಟಾ ಬಳಸುವ ಅವಕಾಶ ಇರುತ್ತದೆ.
ಇದನ್ನೂ ಓದಿ: Highest Tax Paying Sportsperson: ಅತಿಹೆಚ್ಚು ತೆರಿಗೆ ಕಟ್ಟುವ ಭಾರತೀಯ ಕ್ರಿಕೆಟಿಗರು; ವಿರಾಟ್ ಕೊಹ್ಲಿ ನಂ. 1
84 ದಿನಕ್ಕೆ 599 ರೂ ಎಂದರೆ ಒಂದು ತಿಂಗಳಿಗೆ 214 ರೂ ಬೆಲೆ ಆಗುತ್ತದೆ. ಈ ಪ್ಲಾನ್ನಲ್ಲಿ ನೀವು ದಿನಕ್ಕೆ 100 ಎಸ್ಸೆಮ್ಮೆಸ್ಗಳನ್ನು ಉಚಿತವಾಗಿ ಕಳುಹಿಸಬಹುದು. ಈ 599 ರೂ ರೀಚಾರ್ಜ್ ಪ್ಲಾನ್ ವಿವರವನ್ನು ಬಿಎಸ್ಸೆನ್ನೆಲ್ ತನ್ನ ಸೋಷಿಯಲ್ ಮೀಡಿಯಾ ಪೋಸ್ಟ್ನಲ್ಲಿ ತಿಳಿಸಿದೆ.
ಒಂದು ಕಾಲದಲ್ಲಿ ಭಾರತದ ಅತಿದೊಡ್ಡ ಟೆಲಿಕಾಂ ಕಂಪನಿಯಾಗಿದ್ದ ಸರ್ಕಾರಿ ಸ್ವಾಮ್ಯದ ಬಿಎಸ್ಸೆನ್ನೆಲ್ ತನ್ನ ಅಸ್ತಿತ್ವ ಕಳೆದುಕೊಂಡಿತು ಎಂದೇ ಭಾವಿಸಿದ್ದರು. ಇತ್ತೀಚೆಗೆ ಅದು ಫೀನಿಕ್ಸ್ನಂತೆ ಮೇಲೇರಲು ಯತ್ನಿಸುತ್ತಿದೆ. 3ಜಿ ಮತ್ತು 4ಜಿ ಸರ್ವಿಸ್ ಕೊಡಲು ಆರಂಭಿಸಿದೆ. ಬಹಳಷ್ಟು ಗ್ರಾಹಕರು ಬಿಎಸ್ಸೆನ್ನೆಲ್ ಕಡೆ ವಲಸೆ ಹೋಗಿದ್ದಾರೆ.
ಇದನ್ನೂ ಓದಿ: ತಪ್ಪದೇ ಗಮನಿಸಿ; ಒಂದಕ್ಕಿಂತ ಹೆಚ್ಚು ಖಾತೆ ಹೊಂದಿರುವುದೂ ಸೇರಿ ಪಿಪಿಎಫ್ ಯೋಜನೆಯ 3 ನಿಯಮಗಳಲ್ಲಿ ಮಾರ್ಪಾಡು; ಅ. 1ರಿಂದ ಜಾರಿ
ಇದೇ ಹೊತ್ತಲ್ಲಿ 2025ರಷ್ಟರಲ್ಲಿ ಬಿಎಸ್ಸೆನ್ನೆಲ್ 5ಜಿ ಸರ್ವಿಸ್ ಆಫರ್ ಮಾಡುವ ನಿರೀಕ್ಷೆ ಇದೆ. ಅದಕ್ಕೆ ಬೇಕಾದ ಮೂಲಸೌಕರ್ಯಗಳನ್ನು ನಿರ್ಮಿಸಲು ಯೋಜನೆ ಹಾಕಿದೆ. ಸರ್ಕಾರದಿಂದಲೂ ಅನುದಾನ ಬಿಡುಗಡೆ ಆಗುತ್ತಿದೆ. ಬಿಎಸ್ಸೆನ್ನೆಲ್ಗೆ 4ಜಿ ನೆಟ್ವರ್ಕ್ ಅಳವಡಿಕೆ ಮಾಡಿದ್ದ ಟಿಸಿಎಸ್ನಿಂದಲೇ 5ಜಿ ನೆಟ್ವರ್ಕ್ ಸಿದ್ಧಗೊಳ್ಳಲಿದೆ. 4ಜಿ ನೆಟ್ವರ್ಕ್ ಅಳವಡಿಸುವಾಗಲೇ 5ಜಿಗೆ ಪರಿವರ್ತನೆಯಾಗುವ ರೀತಿಯಲ್ಲಿ ನಿರ್ಮಿಸಲಾಗಿತ್ತು. ಹೀಗಾಗಿ, 5ಜಿ ಅಳವಡಿಕೆಗೆ ಬಿಎಸ್ಸೆನ್ನೆಲ್ಗೆ ಹೆಚ್ಚಿನ ವೆಚ್ಚ ಮಾಡುವ ಅವಶ್ಯಕತೆ ಇರುವುದಿಲ್ಲ ಎನ್ನಲಾಗಿದೆ.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ