AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Budget 2023: ಈ ವರ್ಷ ನೇರ ತೆರಿಗೆ ಸಂಗ್ರಹ ಹೆಚ್ಚಳ ನಿರೀಕ್ಷೆ; ಮುಂದಿನ ದಿನಗಳು ಕಠಿಣ

2021ರ ಏಪ್ರಿಲ್ 1ರಿಂದ 2023 ಜನವರಿ 10ರವರೆಗೆ ನೇರ ತೆರಿಗೆ ಸಂಗ್ರಹ 12.31 ಲಕ್ಷ ಕೋಟಿ ರೂ. ಆಗಿದೆ. ಇದು ರೀಫಂಡ್ ಹೊರತುಪಡಿಸಿ ಆದ ಸಂಗ್ರಹ. ಬಜೆಟ್​ನಲ್ಲಿ ಇರಿಸಲಾಗಿದ್ದ ಗುರಿಯು ಬಹುತೇಕ ಎರಡು ತಿಂಗಳ ಮೊದಲೇ ಈಡೇರಿದಂತಾಗಿದೆ.

Budget 2023: ಈ ವರ್ಷ ನೇರ ತೆರಿಗೆ ಸಂಗ್ರಹ ಹೆಚ್ಚಳ ನಿರೀಕ್ಷೆ; ಮುಂದಿನ ದಿನಗಳು ಕಠಿಣ
ಸಾಂದರ್ಭಿಕ ಚಿತ್ರImage Credit source: Reuters
TV9 Web
| Updated By: Ganapathi Sharma|

Updated on: Jan 21, 2023 | 6:27 PM

Share

ನವದೆಹಲಿ: ಈ ಬಾರಿಯ ಹಣಕಾಸು ವರ್ಷದಲ್ಲಿ (2022-23) ಒಟ್ಟು ನೇರ ತೆರಿಗೆ ಸಂಗ್ರಹವು (Direct Tax Collections) 16 ಲಕ್ಷ ಕೋಟಿ ರೂ. ದಾಟುವ ಸಂಭವ ಇದೆ. ಕಳೆದ ಬಾರಿಯ ಬಜೆಟ್​​ನಲ್ಲಿ (Union Budget) 14.2 ಲಕ್ಷ ಕೋಟಿ ರೂ. ನೇರ ತೆರಿಗೆ ಸಂಗ್ರಹದ ಗುರಿ ಇರಿಸಲಾಗಿತ್ತು. ಅದಕ್ಕಿಂತ ಕನಿಷ್ಠ 2 ಲಕ್ಷ ಕೋಟಿ ರೂ.ನಷ್ಟು ಹೆಚ್ಚು ತೆರಿಗೆ ಸಂಗ್ರಹವಾಗುವ ನಿರೀಕ್ಷೆ ಇದೆ ಎಂದು ಹಿರಿಯ ಸರ್ಕಾರಿ ಅಧಿಕಾರಿಯೊಬ್ಬರು ಮಾಧ್ಯಮಗಳಿಗೆ ಮಾಹಿತಿ ನೀಡಿರುವುದು ತಿಳಿದುಬಂದಿದೆ. 2022ರ ಹಣಕಾಸು ವರ್ಷದಲ್ಲಿ (2021-22) 14.16 ಲಕ್ಷ ಕೋಟಿ ರೂ.ನಷ್ಟು ನೇರ ತೆರಿಗೆ ಸಂಗ್ರಹವಾಗಿತ್ತು. ಅದಕ್ಕೂ ಹಿಂದಿನ ಹಣಕಾಸು ವರ್ಷದಲ್ಲಿ ಸಂಗ್ರಹವಾಗಿದ್ದ ಮೊತ್ತ 12.5 ಲಕ್ಷ ಕೋಟಿ ರೂ. ಇಲ್ಲಿ ನೇರ ತೆರಿಗೆ ಎಂದರೆ ವೈಯಕ್ತಿಕ ಆದಾಯ ತೆರಿಗೆ (Personal Income Tax) ಮತ್ತು ಕಾರ್ಪೊರೇಟ್ ತೆರಿಗೆ (Corporate Tax) ಒಳಗೊಂಡಿವೆ. 2022ರ ಫೆಬ್ರವರಿಯಲ್ಲಿ ಮಂಡಿಸಲಾದ ಬಜೆಟ್ ನಲ್ಲಿ ಹಣಕಾಸು ಸಚಿವರು 2022-23ರ ಹಣಕಾಸು ವರ್ಷದಲ್ಲಿ 14.2 ಲಕ್ಷ ಕೋಟಿ ನೇರ ತೆರಿಗೆಯ ಸಂಗ್ರಹದ ಗುರಿ ಇಟ್ಟಿದ್ದರು. ಆ ನಿರೀಕ್ಷೆಮೀರಿ ಹೆಚ್ಚು ತೆರಿಗೆ ಸಂಗ್ರಹವಾಗಲಿದೆ. ಅದಾದಲ್ಲಿ ಶೇ. 6.4ರಷ್ಟಿರುವ ವಿತ್ತೀಯ ಕೊರತೆ ಸ್ವಲ್ಪಮಟ್ಟಿಗೆ ತಗ್ಗುತ್ತದೆ.

ಮಾಧ್ಯಮಗಳಿಗೆ ನೀಡಲಾಗಿರುವ ಮಾಹಿತಿ ಪ್ರಕಾರ 2021ರ ಏಪ್ರಿಲ್ 1ರಿಂದ 2023 ಜನವರಿ 10ರವರೆಗೆ ನೇರ ತೆರಿಗೆ ಸಂಗ್ರಹ 12.31 ಲಕ್ಷ ಕೋಟಿ ರೂ. ಆಗಿದೆ. ಇದು ರೀಫಂಡ್ ಹೊರತುಪಡಿಸಿ ಆದ ಸಂಗ್ರಹ. ಬಜೆಟ್​​ನಲ್ಲಿ ಇರಿಸಲಾಗಿದ್ದ ಗುರಿಯು ಬಹುತೇಕ ಎರಡು ತಿಂಗಳ ಮೊದಲೇ ಈಡೇರಿದಂತಾಗಿದೆ.

ಜಾಗತಿಕ ಆರ್ಥಿಕ ಹಿನ್ನಡೆ; ಮುಂದಿನ ದಿನಗಳು ಕಠಿಣ

ಜಾಗತಿಕ ಆರ್ಥಿಕ ಹಿನ್ನಡೆಯ ಕಾರಣದಿಂದ ಮುಂದಿನ ಹಣಕಾಸು ವರ್ಷದಲ್ಲಿ ಭಾರತದ ಆರ್ಥಿಕತೆಯ ಬೆಳವಣಿಗೆ ತುಸು ಮಂದಗೊಳ್ಳುವ ಸಾಧ್ಯತೆ ಇದೆ. ಈ ಹಿನ್ನೆಲೆಯಲ್ಲಿ ಈ ಹಣಕಾಸು ವರ್ಷದಲ್ಲಿ ಗಳಿಸಿರುವ ಉತ್ತಮ ನೇರ ತೆರಿಗೆ ಸಂಗ್ರಹ ಮುಂದಿನ ವರ್ಷವೂ ಮುಂದುವರಿಯುವುದು ಕಷ್ಟ ಎನ್ನಲಾಗಿದೆ. ಅಂದರೆ, 2023-24ರ ಹಣಕಾಸು ವರ್ಷದಲ್ಲಿ ನೇರ ತೆರಿಗೆ ಸಂಗ್ರಹದಲ್ಲಿ ಶೇ. 20ರಷ್ಟು ಹೆಚ್ಚಳ ಸಾಧಿಸುವುದು ಕಷ್ಟಸಾಧ್ಯ.

ಇದನ್ನು ಓದಿ: EPFO Higher Pension: ಅಧಿಕ ಪಿಂಚಣಿಗೆ ಅರ್ಜಿ, ಆನ್​ಲೈನ್ ಬಾಗಿಲು ತೆರೆದ ಇಪಿಎಫ್ಒ

ಸರ್ಕಾರ ಮಾಡಿರುವ ಮೊದಲ ಪೂರ್ವ ಅಂದಾಜು ಪ್ರಕಾರ ನಾಮಿನಲ್ ಜಿಡಿಪಿ (Nominal GDP) 2022-23ರ ವರ್ಷದಲ್ಲಿ ಶೇ. 15.3ರಷ್ಟು ಬೆಳವಣಿಗೆ ಸಾಧಿಸಬಹುದು. ರಿಯಲ್ ಜಿಡಿಪಿ (Real GDP) ಶೇ. 7ರಷ್ಟು ಹೆಚ್ಚಬಹುದು. ಆದರೆ, ಮುಂದಿನ ಹಣಕಾಸು ವರ್ಷದಲ್ಲಿ ಆರ್ಥಿಕ ತಜ್ಞರ ಅಂದಾಜು ಪ್ರಕಾರ ನಾಮಿನಲ್ ಜಿಡಿಪಿ ಶೇ. 10ರಿಂದ 11ರಷ್ಟರ ಬೆಳವಣಿಗೆಗೆ ಸೀಮಿತಗೊಳ್ಳಬಹುದು. ಇನ್ನು, ರಿಯಲ್ ಜಿಡಿಪಿ ಶೇ. 6ರಿಂದ ಶೇ. 6.5ರಷ್ಟು ಮಾತ್ರ ಹೆಚ್ಚಬಹುದು ಎಂದು ನಿರೀಕ್ಷಿಸಲಾಗಿದೆ. ಇದರ ಜೊತೆಗೆ ತೆರಿಗೆ ಸಂಗ್ರಹವೂ ಕಡಿಮೆಗೊಳ್ಳಬಹುದಾಗಿದ್ದು, 2023-24ರ ಹಣಕಾಸು ವರ್ಷದಲ್ಲಿ ಸರ್ಕಾರಕ್ಕೆ ವಿತ್ತೀಯ ಕೊರತೆಯನ್ನು ಕಡಿಮೆಗೊಳಿಸುವ ಕೆಲಸ ದುಸ್ತರವಾಗಬಹುದು ಎಂದು ನಿರೀಕ್ಷಿಸಲಾಗಿದೆ.

ಏನಿದು ನಾಮಿನಲ್, ರಿಯಲ್ ಜಿಡಿಪಿ?

ಜಿಡಿಪಿ ಎಂದರೆ ಒಟ್ಟು ದೇಶೀಯ ಉತ್ಪಾದನೆ. ನಾಮಿನಲ್ ಜಿಡಿಪಿ ಎಂದರೆ ಹಣದುಬ್ಬರವನ್ನು ಪರಿಗಣಿಸದೇ ನಡೆಸಲಾದ ಜಿಡಿಪಿ ಎಣಿಕೆ. ರಿಯಲ್ ಜಿಡಿಪಿಯಲ್ಲಿ ಹಣದುಬ್ಬರವನ್ನೂ ಪರಿಗಣಿಸಲಾಗುತ್ತದೆ. ಹೀಗಾಗಿ, ಆರ್ಥಿಕತೆಯ ಬೆಳವಣಿಗೆಗೆ ರಿಯಲ್ ಜಿಡಿಪಿ ನಿಜವಾದ ಮಾನದಂಡವಾಗುತ್ತದೆ. 2021ರ ಕ್ಯಾಲೆಂಡರ್ ವರ್ಷದಲ್ಲಿ ಭಾರತದ ಜಿಡಿಪಿ 3.18 ಲಕ್ಷ ಕೋಟಿ ಡಾಲರ್ ಇದೆ. ಅಂದರೆ ಸುಮಾರು 250 ಲಕ್ಷ ಕೋಟಿ ರೂ. ಮೊತ್ತದ ಜಿಡಿಪಿ ಭಾರತದ್ದಾಗಿದೆ. 2022-23ರ ವರ್ಷದಲ್ಲಿ ಇದು ಶೇ. 6.9ರಷ್ಟು ಹೆಚ್ಚಾಗುವ ನಿರೀಕ್ಷೆ ಇದೆ.

ಇನ್ನಷ್ಟು ವಾಣಿಜ್ಯ ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ

ಹುಬ್ಬಳ್ಳಿಯಲ್ಲಿ ವೇಶ್ಯಾವಾಟಿಕೆ ಜಾಲ: ಟಾಯ್ಲೆಟ್ ರೂಮ್​​ನಲ್ಲಿ ಸುರಂಗ ಮಾರ್ಗ
ಹುಬ್ಬಳ್ಳಿಯಲ್ಲಿ ವೇಶ್ಯಾವಾಟಿಕೆ ಜಾಲ: ಟಾಯ್ಲೆಟ್ ರೂಮ್​​ನಲ್ಲಿ ಸುರಂಗ ಮಾರ್ಗ
ನಾವು ಎಷ್ಟೇ ಬೆಳೆದರೂ ನಮ್ಮ ಕಾಲು ನೆಲದ ಮೇಲೆ ಇರಬೇಕು: ಹರ್ಷಿಕಾ ಪೂಣಚ್ಚ
ನಾವು ಎಷ್ಟೇ ಬೆಳೆದರೂ ನಮ್ಮ ಕಾಲು ನೆಲದ ಮೇಲೆ ಇರಬೇಕು: ಹರ್ಷಿಕಾ ಪೂಣಚ್ಚ
ಬೀಗರ ಗಲಾಟೆ: ಕಪಾಳಕ್ಕೆ ಬಾರಿಸಿದ ಶಾಸಕ ಪ್ರಭು ಚೌಹಾಣ್
ಬೀಗರ ಗಲಾಟೆ: ಕಪಾಳಕ್ಕೆ ಬಾರಿಸಿದ ಶಾಸಕ ಪ್ರಭು ಚೌಹಾಣ್
ಹೇಳದೇ ಒಬಿಸಿ ಸಮಿತಿಗೆ ನೇಮಕ: ಈ ಬಗ್ಗೆ ಸಿದ್ದರಾಮಯ್ಯ ಹೇಳಿದ್ದಿಷ್ಟು
ಹೇಳದೇ ಒಬಿಸಿ ಸಮಿತಿಗೆ ನೇಮಕ: ಈ ಬಗ್ಗೆ ಸಿದ್ದರಾಮಯ್ಯ ಹೇಳಿದ್ದಿಷ್ಟು
ತಮಿಳುನಾಡಿನ ಪಟಾಕಿ ಕಾರ್ಖಾನೆಯಲ್ಲಿ ಸ್ಫೋಟ, ಓರ್ವ ಸಾವು, ನಾಲ್ವರಿಗೆ ಗಂಭೀರ
ತಮಿಳುನಾಡಿನ ಪಟಾಕಿ ಕಾರ್ಖಾನೆಯಲ್ಲಿ ಸ್ಫೋಟ, ಓರ್ವ ಸಾವು, ನಾಲ್ವರಿಗೆ ಗಂಭೀರ
Video: ರೈಲ್ವೆ ಪ್ಲಾಟ್​ಫಾರ್ಮ್​ ಮೇಲೆ ಕಾರು ಚಲಾಯಿಸಿದ ವ್ಯಕ್ತಿ
Video: ರೈಲ್ವೆ ಪ್ಲಾಟ್​ಫಾರ್ಮ್​ ಮೇಲೆ ಕಾರು ಚಲಾಯಿಸಿದ ವ್ಯಕ್ತಿ
ಇಡೀ ಕುಟುಂಬವನ್ನು ಕಳೆದುಕೊಂಡು ಅನಾಥವಾದ 11ತಿಂಗಳ ಮಗು
ಇಡೀ ಕುಟುಂಬವನ್ನು ಕಳೆದುಕೊಂಡು ಅನಾಥವಾದ 11ತಿಂಗಳ ಮಗು
‘ಗೋಲಿ ಚಲ್ ಜಾವೇಗಿ’ ಹಾಡಿಗೆ ನೃತ್ಯ ಮಾಡುತ್ತಲೇ ಗುಂಡು ಹಾರಿಸಿದ ವ್ಯಕ್ತಿ
‘ಗೋಲಿ ಚಲ್ ಜಾವೇಗಿ’ ಹಾಡಿಗೆ ನೃತ್ಯ ಮಾಡುತ್ತಲೇ ಗುಂಡು ಹಾರಿಸಿದ ವ್ಯಕ್ತಿ
ರಶ್ಮಿಕಾ ಮಂದಣ್ಣ ತಪ್ಪು ಮಾತಾಡಿದ್ದಾರೆ, ಕ್ಷಮಿಸಿ ಬಿಡೋಣ: ನಟಿ ಹರ್ಷಿಕಾ
ರಶ್ಮಿಕಾ ಮಂದಣ್ಣ ತಪ್ಪು ಮಾತಾಡಿದ್ದಾರೆ, ಕ್ಷಮಿಸಿ ಬಿಡೋಣ: ನಟಿ ಹರ್ಷಿಕಾ
ಭೀಕರ ಅಪಘಾತ: ಡಿಕ್ಕಿ ರಭಸಕ್ಕೆ ಎರಡು ಪೀಸ್ ಆದ ಟೆಂಪೊ, EXCLUSIVE ದೃಶ್ಯ
ಭೀಕರ ಅಪಘಾತ: ಡಿಕ್ಕಿ ರಭಸಕ್ಕೆ ಎರಡು ಪೀಸ್ ಆದ ಟೆಂಪೊ, EXCLUSIVE ದೃಶ್ಯ