AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Explainer | ಅಮೆಜಾನ್ ಸಿಇಒ ಹುದ್ದೆಯಿಂದ ಬಿಜೊಸ್ ಕೆಳಗಿಳಿಯುತ್ತಿರುವುದೇಕೆ? ಇನ್ಮುಂದೆ ಕಂಪನಿ ಮುನ್ನಡೆಸುವವರು ಯಾರು?

ಅಮೆಜಾನ್​ನ ಪ್ರತಿದಿನದ ವಹಿವಾಟನ್ನು ನೋಡಿಕೊಳ್ಳುವ ಕೆಲಸದಿಂದ ಹಿಂದೆ ಸರಿದು ದೀರ್ಘಾವಧಿಯ ಯೋಜನೆಗಳ ಮೇಲೆ ಗಮನ ಕೇಂದ್ರೀಕರಿಸಿಲು ಬಿಜೊಸ್ ನಿರ್ಧರಿಸಿದ್ದಾರೆ. ಅವರ ಈ ಯೋಜನೆಗಳಲ್ಲಿ ರಾಕೆಟ್ ತಯಾರಿಕೆಯ ಬ್ಲ್ಯೂ ಒರಿಜಿನ್ ಕೂಡ ಒಂದಾಗಿದೆ.

Explainer | ಅಮೆಜಾನ್ ಸಿಇಒ ಹುದ್ದೆಯಿಂದ ಬಿಜೊಸ್ ಕೆಳಗಿಳಿಯುತ್ತಿರುವುದೇಕೆ? ಇನ್ಮುಂದೆ ಕಂಪನಿ ಮುನ್ನಡೆಸುವವರು ಯಾರು?
ಜೆಫ್ ಬಿಜೊಸ್ (ಸಂಗ್ರಹ ಚಿತ್ರ)
ಅರುಣ್​ ಕುಮಾರ್​ ಬೆಳ್ಳಿ
|

Updated on:Feb 03, 2021 | 6:56 PM

Share

ಆನ್​ಲೈನ್ ರಿಟೇಲ್ ಮಾರುಕಟ್ಟೆಯಲ್ಲಿ ಪಾರಮ್ಯ ಮೆರೆದಿರುವ ಅಮೆಜಾನ್ ಸಂಸ್ಥೆಯ ಸಂಸ್ಥಾಪಕ ಜೆಫ್ ಬಿಜೊಸ್ 27 ವರ್ಷಗಳ ಕಾಲ ಸಂಸ್ಥೆಯ ಮುಖ್ಯ ಕಾರ್ಯನಿರ್ವಹಣಾಧಿಕಾರಿಯಾಗಿ ಕೆಲಸ ಮಾಡಿದ ನಂತರ ಹುದ್ದೆಯಿಂದ ಕೆಳಗಿಳಿಯುವ ನಿರ್ಧಾರವನ್ನು ಪ್ರಕಟಿಸಿದ್ದಾರೆ. ಕಂಪನಿಯು ಮಂಗಳವಾರ ಬಿಡುಗಡೆ ಮಾಡಿರುವ ಪ್ರಕಟಣೆಯೊಂದರ ಪ್ರಕಾರ ಬಿಜೊಸ್ ಅಮೆಜಾನ್​ನ ಕಾರ್ಯನಿರ್ವಾಹಕ ಅಧ್ಯಕ್ಷರಾಗಿ ಅಧಿಕಾರವಹಿಸಿಕೊಂಡು ಸಂಸ್ಥೆಯ ಅತಿದೊಡ್ಡ ಪಾಲುದಾರರಾಗಿ ಮುಂದುವರಿಯಲಿದ್ದಾರೆ

ಬಿಜೊಸ್​ ಉತ್ತರಾಧಿಕಾರಿ ಯಾರು? ಅಮೆಜಾನ್ ಕಂಪನಿಯ ಕಾಮಧೇನು ಎನಿಸಿಕೊಂಡಿರುವ ಕಂಪ್ಯೂಟಿಂಗ್ ವಿಭಾಗದ ಮುಖ್ಯಸ್ಥ ಮತ್ತು ಕಂಪನಿ ಅಸ್ತಿತ್ವಕ್ಕೆ ಬಂದ ನಂತರ ಬಹು ಸಮಯದಿಂದ ಅದರ ಅಬಿಭಾಜ್ಯ ಅಂಗವಾಗಿರುವ ಆ್ಯಂಡಿ ಜಸ್ಸಿ ಅವರಿಗೆ ಸಿಇಒ ಹೊಣೆಗಾರಿಕೆಯನ್ನು ಬಿಜೊಸ್ ಹಸ್ತಾಂತರಿಸಲಿದ್ದಾರೆ. ಕಂಪನಿ ಮೂಲಗಳ ಪ್ರಕಾರ ಬಿಜೊಸ್​ಗೆ ಜಸ್ಸಿ ಅತ್ಯಂತ ಆಪ್ತರು. ಜಸ್ಸಿ 2003ರಿಂದ ಬಿಜೊಸ್ ಜೊತೆ ಎಲ್ಲ ಮೀಟಿಂಗ್​ಗಳಲ್ಲಿ ಭಾಗಿಯಾಗಿದ್ದಾರೆ. ಅಮೆಜಾನ್ ವೆಬ್ ಸಿರೀಸ್​ನ (ಎಡಬ್ಲ್ಯುಎಸ್) ಮೂಲ ವ್ಯವಹಾರದ ಯೋಜನೆಯನ್ನು ಜಸ್ಸಿಯೇ ಸಿದ್ಧಪಡಿಸಿದ್ದು. 2006ರಲ್ಲಿ ಅದು ಅಸ್ತಿತ್ವಕ್ಕೆ ಬಂದಾಗಿನಿಂದ ಅವರೇ ಅದನ್ನು ನಡೆಸಿಕೊಂಡು ಹೋಗುತ್ತಿದ್ದಾರೆ. ಜಸ್ಸಿಗೆ ನೀಡಿರುವ ಬಡ್ತಿ ಅಮೆಜಾನ್ ಸಂಸ್ಥೆಯಲ್ಲಿ ಎಡಬ್ಲ್ಯುಎಸ್​ಗಿರುವ ಮಹತ್ವವನ್ನು ಬಿಂಬಿಸುತ್ತದೆ.

ಇದನ್ನೂ ಓದಿ: Explainer | ಕೇಂದ್ರ ಸರ್ಕಾರದ ಖಜಾನೆಯ 1 ರೂಪಾಯಿ ಲೆಕ್ಕ ನಿಮಗೆ ಗೊತ್ತಾ?

ಆ್ಯಂಡಿ ಜಸ್ಸಿ

ಲಭ್ಯವಿರುವ ವರದಿಗಳ ಪ್ರಕಾರ, ಅಮೆಜಾನ್​ನ ಪ್ರತಿದಿನದ ವಹಿವಾಟನ್ನು ನೋಡಿಕೊಳ್ಳುವ ಕೆಲಸದಿಂದ ಹಿಂದೆ ಸರಿದು ದೀರ್ಘಾವಧಿಯ ಯೋಜನೆಗಳ ಮೇಲೆ ಗಮನ ಕೇಂದ್ರೀಕರಿಸಿಲು ಬಿಜೊಸ್ ನಿರ್ಧರಿಸಿದ್ದಾರೆ. ಅವರ ಈ ಯೋಜನೆಗಳಲ್ಲಿ ರಾಕೆಟ್ ತಯಾರಿಕೆಯ ಬ್ಲ್ಯೂ ಒರಿಜಿನ್ ಕೂಡ ಒಂದಾಗಿದೆ.

‘ಹೊಣೆಗಾರಿಕೆ ಹಸ್ತಾಂತರ ನನ್ನನ್ನು ರೋಮಾಂಚಿತನಾಗಿಸಿದೆ. ಸಂಸ್ಥೆಯ ಕಾರ್ಯನಿರ್ವಾಹಕ ಅಧ್ಯಕ್ಷನಾಗಿ ಅಮೆಜಾನ್​ನ ಇತರ ಪ್ರಮುಖ ಯೋಜನೆಗಳ ಕಡೆ ಗಮನ ಹರಿಸುತ್ತೇನೆ. ಹಾಗೆಯೇ, ಸಂಸ್ಥೆಯ ಡೇ 1 ಫಂಡ್, ದಿ ಬಿಜೊಸ್ ಫಂಡ್, ಬ್ಲ್ಯೂ ಒರಿಜಿನ್, ವಾಷಿಂಗ್ಟನ್ ಪೋಸ್ಟ್ ಮತ್ತು ನನ್ನ ಇತರ ಆಸಕ್ತಿಗಳ ಮೇಲೆ ಗಮನ ಹರಿಸುವಷ್ಟು ಶಕ್ತಿ ನನ್ನಲ್ಲುಳಿದಿದೆ’ ಎಂದು ತಮ್ಮ ಸಿಬ್ಬಂದಿಗೆ ಮಂಗಳವಾರದಂದು ಬರೆದ ಪತ್ರದಲ್ಲಿ ಬಿಜೊಸ್ ಹೇಳಿದ್ದಾರೆ.

‘ಇದಕ್ಕೆ ಮೊದಲು ಯವತ್ತೂ ನನ್ನಲ್ಲಿ ಈ ಪಾಟಿ ಶಕ್ತಿ ಇರಲಿಲ್ಲ. ಸಿಇಒ ಹುದ್ದೆಯಿಂದ ದೂರ ಸರಿಯುತ್ತಿರುವುದು ನಿವೃತ್ತಿಯ ಸೂಚನೆ ಖಂಡಿತ ಅಲ್ಲ. ನಮ್ಮ ಸಂಸ್ಥೆಗಳು ವಿಶ್ವದಾದ್ಯಂತ ಬೀರಲಿರುವ ಪ್ರಬಾವದ ಬಗ್ಗೆ ನಾನು ಅತೀವ ಉತ್ಸುಕನಾಗಿದ್ದೇನೆ’ ಎಂದು ಬಿಜೊಸ್ ಹೇಳಿದ್ದಾರೆ.

1,288 ಕೋಟಿಯಷ್ಟು ವ್ಯಾಪಾರವಾದ್ರೂ ಬರಿ 58 ಕೋಟಿ ರೂ. Tax ಕಟ್ಟಿದ ಅಮೆಜಾನ್, ಯಾಕೆ?

Published On - 6:52 pm, Wed, 3 February 21

ಚಿಕ್ಕಬಳ್ಳಾಪುರದಲ್ಲಿ ಸರಣಿ ಅಪಘಾತ: ತಪ್ಪಿದ ಭಾರಿ ಅನಾಹುತ
ಚಿಕ್ಕಬಳ್ಳಾಪುರದಲ್ಲಿ ಸರಣಿ ಅಪಘಾತ: ತಪ್ಪಿದ ಭಾರಿ ಅನಾಹುತ
ವೇದಿಕೆಯಲ್ಲಿ ವೈದ್ಯೆಯ ಹಿಜಾಬ್ ಎಳೆದ ಸಿಎಂ ನಿತೀಶ್ ಕುಮಾರ್
ವೇದಿಕೆಯಲ್ಲಿ ವೈದ್ಯೆಯ ಹಿಜಾಬ್ ಎಳೆದ ಸಿಎಂ ನಿತೀಶ್ ಕುಮಾರ್
ಧ್ರುವಂತ್​ನ ಸೀಕ್ರೆಟ್​ರೂಂನಲ್ಲಿ ಇಟ್ಟ ಬಗ್ಗೆ ಬಿಗ್ ಬಾಸ್​ಗೆ ಬೇಸರ?
ಧ್ರುವಂತ್​ನ ಸೀಕ್ರೆಟ್​ರೂಂನಲ್ಲಿ ಇಟ್ಟ ಬಗ್ಗೆ ಬಿಗ್ ಬಾಸ್​ಗೆ ಬೇಸರ?
‘ಸು ಫ್ರಮ್ ಸೋ’ ಯಶಸ್ಸಿನ ಮೂಲವನ್ನು‘45’ ನಿರ್ಮಾಪಕನಿಗೆ ಹಸ್ತಾಂತರಿಸಿದ ರಾಜ್
‘ಸು ಫ್ರಮ್ ಸೋ’ ಯಶಸ್ಸಿನ ಮೂಲವನ್ನು‘45’ ನಿರ್ಮಾಪಕನಿಗೆ ಹಸ್ತಾಂತರಿಸಿದ ರಾಜ್
ದೆಹಲಿ-ಆಗ್ರಾ ಎಕ್ಸ್​ಪ್ರೆಸ್​ವೇನಲ್ಲಿ ಹಲವು ಬಸ್​ಗಳಿಗೆ ಬೆಂಕಿ
ದೆಹಲಿ-ಆಗ್ರಾ ಎಕ್ಸ್​ಪ್ರೆಸ್​ವೇನಲ್ಲಿ ಹಲವು ಬಸ್​ಗಳಿಗೆ ಬೆಂಕಿ
ಧನುರ್ಮಾಸದಲ್ಲಿ ಶುಭಕಾರ್ಯಗಳನ್ನ ಮಾಡಬಾರದು ಯಾಕೆ ಗೊತ್ತಾ?
ಧನುರ್ಮಾಸದಲ್ಲಿ ಶುಭಕಾರ್ಯಗಳನ್ನ ಮಾಡಬಾರದು ಯಾಕೆ ಗೊತ್ತಾ?
ಇಂದು ಈ ರಾಶಿಯವರ ಹಳೆಯ ಸಮಸ್ಯೆಗಳಿಗೆ ಪರಿಹಾರ ಸಿಗಲಿದೆ
ಇಂದು ಈ ರಾಶಿಯವರ ಹಳೆಯ ಸಮಸ್ಯೆಗಳಿಗೆ ಪರಿಹಾರ ಸಿಗಲಿದೆ
ಜೋರ್ಡಾನ್ ಕಿಂಗ್ ಅಬ್ದುಲ್ಲಾ ಜೊತೆ ಪ್ರಧಾನಿ ಮೋದಿ ಮಾತುಕತೆ
ಜೋರ್ಡಾನ್ ಕಿಂಗ್ ಅಬ್ದುಲ್ಲಾ ಜೊತೆ ಪ್ರಧಾನಿ ಮೋದಿ ಮಾತುಕತೆ
ಅರೇ ಇದೇನಿದು ಎರಡು ಬಸ್ ಒಂದೇ ನಂಬರ್ ಪ್ಲೇಟ್: ಆರ್​​ಟಿಓ ಅಧಿಕಾರಿಗಳೇ ಶಾಕ್!
ಅರೇ ಇದೇನಿದು ಎರಡು ಬಸ್ ಒಂದೇ ನಂಬರ್ ಪ್ಲೇಟ್: ಆರ್​​ಟಿಓ ಅಧಿಕಾರಿಗಳೇ ಶಾಕ್!
ಜೋರ್ಡಾನ್​​​ನಲ್ಲಿ ಮೋದಿಯನ್ನು ನೋಡಿ ಸಂಭ್ರಮಿಸಿದ ಭಾರತೀಯ ವಲಸಿಗರು
ಜೋರ್ಡಾನ್​​​ನಲ್ಲಿ ಮೋದಿಯನ್ನು ನೋಡಿ ಸಂಭ್ರಮಿಸಿದ ಭಾರತೀಯ ವಲಸಿಗರು