ಉದಯ್ಪುರ , (ಡಿಸೆಂಬರ್ 9): ರಾಜಸ್ಥಾನದ ಉದಯಪುರವು ಅತ್ಯಂತ ಜನಪ್ರಿಯವಾದ ಪ್ರವಾಸಿ ಸ್ಥಳಗಳನ್ನು ಹೊಂದಿದೆ. ಅದರಲ್ಲೂ ಇಲ್ಲಿನ ಐಷರಾಮಿ ಹೋಟೆಲ್ಗಳು ವಿವಿಧ ಕಾರ್ಯಕ್ರಮಗಳಿಗೆ ಪ್ರಸಿದ್ಧಿಯಾಗಿವೆ. ಸೆಲೆಬ್ರಿಟಿಗಳು, ದೊಡ್ಡ-ದೊಡ್ಡ ಉದ್ಯಮಿಗಳ ಕುಟುಂಬದ ಮದುವೆ ಸೇರಿದಂತೆ ಇತರೆ ಕಾರ್ಯಕ್ರಮಗಳು ಈ ಉದಯಪುರದಲ್ಲೇ ನಡೆದಿವೆ. ಈಗ ಉದಯಪುರ ಮತ್ತೊಂದು ಅದ್ಧೂರಿ ಸಮಾರಂಭಕ್ಕೆ ಸಾಕ್ಷಿಯಾಗಲಿದೆ. ಹೌದು…ಅದಾನಿ ಗ್ರೂಪ್ನ ಚೇರ್ಮನ್ ಉದ್ಯಮಿ ಗೌತಮ್ ಅದಾನಿ ಅವರ ಪುತ್ರ ಜೀತ್ ಅದಾನಿ ವಿವಾಹ ಪೂರ್ವ ಕಾರ್ಯಕಮಗಳು ನಡೆಯಲಿವೆ. ಈಗಾಗಲೇ ಸಕಲ ಸಿದ್ಧತೆಗಳು ನಡೆದಿದ್ದು, ಇದೇ ಡಿಸೆಂಬರ್ 10 ಮತ್ತು 11 ರಂದು ಜೀತ್ ಅದಾನಿ ವಿವಾಹ ಪೂರ್ವ ಕಾರ್ಯಕ್ರಮಗಳು ನಡೆಯಲಿವೆ.
ವಜ್ರ ಹಾಗೂ ಚಿನ್ನಾಭರಣ ಉದ್ಯಮಿ ಜೈಮಿನ್ ಶಾ ಅವರ ಪುತ್ರಿ ದಿವಾ ಜೈಮಿನ್ ಶಾ ಜೊತೆ ಜೀತ್ ಅದಾನಿಯವರ ನಿಶ್ಚಿತಾರ್ಥ ಕಳೆದ ವರ್ಷ ಮಾರ್ಚ್ 12ರಂದುಅಹಮದಾಬಾದ್ನ ರೆಸಾರ್ಟ್ವೊಂದರಲ್ಲಿ ಸರಳವಾಗಿ ನಡೆದಿತ್ತು. ಆದ್ರೆ, ಮದುವೆಯನ್ನು ಅದ್ಧೂರಿಯಾಗಿ ಮಾಡಲು ಗೌತಮ್ ಅದಾನಿ ತೀರ್ಮಾನಿಸಿದ್ದು, ಅದರಂತೆ ಉದಯಪುರದಲ್ಲಿ ಮದುವೆ ಪೂರ್ವ ಸಿದ್ಧತೆಗಳು ನಡೆದಿವೆ.
ಜೀತ್ ಅದಾನಿ ಹಾಗೂ ದಿವಾ ಜೈಮಿನ್ ಶಾ ಮದುವೆಗಾಗಿ ಮೂರು ಐಷಾರಾಮಿ ಪಂಚತಾರಾ ಹೋಟೆಲ್ಗಳನ್ನು ಬುಕ್ ಮಾಡಲಾಗಿದೆ. ಅನೇಕ ಉದ್ಯಮಿಗಳು, ರಾಜಕೀಯ ಮುಖಂಡರು, ಸೆಲೆಬ್ರಿಟಿಗಳು ಆಗಮಿಸಲಿದ್ದಾರೆ. ಇದರಿಂದ ತಾಜ್ ಲೇಕ್ ಪ್ಯಾಲೇಸ್, ಲೀಲಾ ಪ್ಯಾಲೇಸ್ ಮತ್ತು ಉದಯ್ ವಿಲಾಸ್ ಈ ಮೂರು ಹೋಟೆಲ್ಗಳು ಸಂಪೂರ್ಣವಾಗಿ ಬುಕ್ ಆಗಿವೆ.
ಇನ್ನು ವಿವಾಹ ಸಮಾರಂಭವು ಉದಯ್ ವಿಲಾಸ್ ಹೋಟೆಲ್ನಲ್ಲಿ ನಡೆಯಲಿದೆ ಎಂದು ತಿಳಿದುಬಂದಿದ್ದು, ಈ ಉದಯ್ ವಿಲಾಸ್ ಹೋಟೆಲ್ ಒಟ್ಟು 100 ಕೊಠಡಿಗಳು ಹೊಂದಿದೆ. ಇನ್ನು ಈ ಹೋಟೆಲ್ಗೆ ಒಂದು ದಿನಕ್ಕೆ ಬರೋಬ್ಬರಿ 10 ಲಕ್ಷ ರೂ.
ಮದುವೆಗೆ ಆಗಮಿಸುವ ಅತಿಥಿಗಳು ಉಳಿದುಕೊಳ್ಳಲು ತಾಜ್ ಲೇಕ್ ಪ್ಯಾಲೇಸ್ ಮತ್ತು ಲೀಲಾ ಪ್ಯಾಲೇಸ್ ಹೋಟೆಲ್ನಲ್ಲಿ ವ್ಯವಸ್ಥೆ ಮಾಡಲಾಗಿದ್ದು, ಈ ಹೋಟೆಲ್ (ಒಂದು ರೂಮ್ಗೆ) ದರ ದಿನಕ್ಕೆ 75 ಸಾವಿರದಿಂದ 3.5 ಲಕ್ಷ ರೂ.
Published On - 10:07 pm, Mon, 9 December 24