AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಭಾರತದ ಇವಿ ಸಬ್ಸಿಡಿಗಳಿಗೆ ಚೀನಾ ಅಸಮಾಧಾನ; ಡಬ್ಲ್ಯುಟಿಒದಲ್ಲಿ ದೂರು

China's complaint in WTO against India's EV subsidies: ಚೀನಾದ ದೇಶ ಭಾರತ ಹಾಗೂ ಇತರ ಕೆಲ ದೇಶಗಳ ವಿರುದ್ಧ ವರ್ಲ್ಡ್ ಟ್ರೇಡ್ ಆರ್ಗನೈಸೇಶನ್​ನಲ್ಲಿ ದೂರು ನೀಡಿದೆ. ಭಾರತವು ಇವಿ ತಯಾರಕರಿಗೆ ಸಬ್ಸಿಡಿ ನೀಡುತ್ತಿದೆ. ಇದರಿಂದ ಚೀನಾದ ಇವಿ ಉತ್ಪನ್ನಗಳಿಗೆ ಹಿನ್ನಡೆಯಾಗುತ್ತದೆ ಎಂಬುದು ಚೀನಾದ ತಗಾದೆ. ಭಾರತವಲ್ಲದೆ, ಟರ್ಕಿ, ಕೆನಡಾ ಮತ್ತು ಐರೋಪ್ಯ ಒಕ್ಕೂಟದ ವಿರುದ್ಧ ಡಬ್ಲ್ಯುಟಿಒದಲ್ಲಿ ಚೀನಾ ದೂರು ಕೊಟ್ಟಿದೆ.

ಭಾರತದ ಇವಿ ಸಬ್ಸಿಡಿಗಳಿಗೆ ಚೀನಾ ಅಸಮಾಧಾನ; ಡಬ್ಲ್ಯುಟಿಒದಲ್ಲಿ ದೂರು
ಡಬ್ಲ್ಯುಟಿಒ
ಸುಗ್ಗನಹಳ್ಳಿ ವಿಜಯಸಾರಥಿ
|

Updated on: Oct 16, 2025 | 5:46 PM

Share

ನವದೆಹಲಿ, ಅಕ್ಟೋಬರ್ 16: ಎಲೆಕ್ಟ್ರಿಕ್ ವಾಹನಗಳು ಹಾಗೂ ಬ್ಯಾಟರಿಗಳ ತಯಾರಿಕೆಗೆ ಭಾರತ ಸಬ್ಸಿಡಿ ನೀಡುತ್ತಿರುವುದನ್ನು ಪ್ರಶ್ನಿಸಿ ಚೀನಾ (China) ವಿಶ್ವ ವ್ಯಾಪಾರ ಸಂಘಟನೆಯಾದ ಡಬ್ಲ್ಯುಟಿಒಗೆ ದೂರು ನೀಡಿದೆ. ಭಾರತ ಸರ್ಕಾರ ನೀಡುತ್ತಿರುವ ಸಬ್ಸಿಡಿಯಿಂದ ಅದರ ದೇಶೀಯ ಉದ್ಯಮಗಳಿಗೆ ಹೆಚ್ಚು ಅನುಕೂಲವಾಗುತ್ತದೆ. ಚೀನಾದ ಉತ್ಪನ್ನಗಳಿಗೆ ಅನನುಕೂಲವಾಗುತ್ತದೆ. ಈ ರೀತಿ ಸಬ್ಸಿಡಿಗಳನ್ನು ನೀಡುವುದು ಜಾಗತಿಕ ವ್ಯಾಪಾರ ನಿಯಮಗಳ ಉಲ್ಲಂಘನೆಯಾಗುತ್ತದೆ ಎಂಬುದು ಚೀನಾ ಎತ್ತಿರುವ ತಗಾದೆ.

ಚೀನಾ ಈ ಸಬ್ಸಿಡಿ ವಿಚಾರದಲ್ಲಿ ಡಬ್ಲ್ಯುಟಿಒದಲ್ಲಿ ಭಾರತದ ವಿರುದ್ಧ ಮಾತ್ರವಲ್ಲ, ಟರ್ಕಿ, ಕೆನಡಾ, ಯೂರೋಪ್ ಯೂನಿಯನ್ ವಿರುದ್ಧವೂ ಇದೇ ರೀತಿಯಲ್ಲಿ ದೂರು ನೀಡಿದೆ. ಎಲೆಕ್ಟ್ರಿಕ್ ವಾಹನ ತಯಾರಿಕೆಯಲ್ಲಿ ವಿಶ್ವದಲ್ಲೇ ಚೀನಾ ಮುಂಚೂಣಿಯಲ್ಲಿದೆ. ವಿಶ್ವದ ಇವಿ ಮಾರುಕಟ್ಟೆಯಲ್ಲಿ ಚೀನಾ ಪೂರ್ಣ ಪ್ರಾಬಲ್ಯ ಸಾಧಿಸಿದೆ. ಚೀನಾದ ಇವಿ ಮಾರುಕಟ್ಟೆಯಲ್ಲಿ ಈಗ ಮೊದಲಿನಷ್ಟು ವೇಗದಲ್ಲಿ ಬೆಳೆಯುತ್ತಿಲ್ಲವಾದ್ದರಿಂದ ಇತರ ಮಾರುಕಟ್ಟೆಗಳಲ್ಲಿ ಸುಲಭ ಪ್ರವೇಶಕ್ಕೆ ಚೀನಾ ಇದಿರು ನೋಡುತ್ತಿದೆ. ಈ ಹಿನ್ನೆಲೆಯಲ್ಲಿ ಅದು ಡಬ್ಲ್ಯುಟಿಒ ಅಸ್ತ್ರ ಬಳಸಲು ಯತ್ನಿಸುತ್ತಿರಬಹುದು.

ಇದನ್ನೂ ಓದಿ: ರಷ್ಯನ್ ತೈಲ ಖರೀದಿಸಲ್ಲ ಅಂತ ಟ್ರಂಪ್​ಗೆ ಮೋದಿ ಭರವಸೆ ಕೊಟ್ಟರಾ? ಇಲ್ಲಿದೆ ಭಾರತದ ನಿಲುವು

ಭಾರತದ ಇವಿ ಮಾರುಕಟ್ಟೆ ಈಗ ಪ್ರವರ್ಧಮಾನಕ್ಕೆ ಬರುತ್ತಿದೆ. ದೇಶೀಯ ಇವಿ ಕಾರು ತಯಾರಕರನ್ನು ಉತ್ತೇಜಿಸಲು ಸರ್ಕಾರ ಪಿಎಲ್​ಐ ಸ್ಕೀಮ್ ಮೂಲಕ ಸಬ್ಸಿಡಿ ಒದಗಿಸುತ್ತಿದೆ. ಇದರಿಂದ ಚೀನಾದ ಇವಿ ಉತ್ಪನ್ನಗಳ ಬೆಲೆ ಅನುಕೂಲತೆಗಳು ಭಾರತೀಯ ಮಾರುಕಟ್ಟೆಯಲ್ಲಿ ಸಿಗದೇ ಹೋಗಬಹುದು ಎನ್ನುವ ಆತಂಕ ಚೀನಾದ್ದು.

ಭಾರತದ ವಾಣಿಜ್ಯ ಕಾರ್ಯದರ್ಶಿ ರಾಜೇಶ್ ಅಗರ್ವಾಲ್ ಅವರು ಪ್ರತಿಕ್ರಿಯಿಸಿದ್ದು, ಚೀನಾದ ಆಕ್ಷೇಪಗಳನ್ನು ವಿವರವಾಗಿ ಅವಲೋಕಿಸಲಾಗುವುದು ಎಂದಿದ್ದಾರೆ.

ಇದನ್ನೂ ಓದಿ: ಈ ವರ್ಷ ಬಿಗ್ ಕ್ರ್ಯಾಷ್; ಕರೆನ್ಸಿಗೆ ಇರಲ್ಲ ಮೌಲ್ಯ; ಚಿನ್ನ, ಬೆಳ್ಳಿ, ಬಿಟ್​ಕಾಯಿನ್​ನಂತಹ ಆಸ್ತಿಗಳಿಗೆ ಉಳಿಗಾಲ: ಕಿಯೋಸಾಕಿ

ಭಾರತದ ಜೊತೆ ಸಮಾಲೋಚನೆಗೆ ಚೀನಾ ಡಬ್ಲ್ಯುಟಿಒದಲ್ಲಿ ಅರ್ಜಿ ಸಲ್ಲಿಸಿದೆ ಎಂದು ಅಧಿಕಾರಿಯೊಬ್ಬರು ಸ್ಪಷ್ಟಪಡಿಸಿದ್ದಾರೆ. ಡಬ್ಲ್ಯುಟಿಒ ನಿಯಮಗಳ ಬಳಿಕ ವಿವಿಧ ದೇಶಗಳ ನಡುವೆ ವ್ಯಾಪಾರ ನಿಯಮಗಳಲ್ಲಿ ವ್ಯಾಜ್ಯ ಕಾಣಿಸಿದಾಗ ಅದನ್ನು ಬಗೆಹರಿಸುವ ನಿಟ್ಟಿನಲ್ಲಿ ಆ ದೇಶಗಳ ನಡುವೆ ಮಾತುಕತೆ ಅಥವಾ ಸಮಾಲೋಚನೆ ನಡೆಯಬೇಕು. ಅದು ಮೊದಲ ಹೆಜ್ಜೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಪಂಚಾಯ್ತಿಗೆ ನುಗ್ಗಿ PDO ಚೇರ್ ಮೇಲೆಯೇ ಆಯಾಗಿ ಮಲಗಿದ ಶ್ವಾನ!
ಪಂಚಾಯ್ತಿಗೆ ನುಗ್ಗಿ PDO ಚೇರ್ ಮೇಲೆಯೇ ಆಯಾಗಿ ಮಲಗಿದ ಶ್ವಾನ!
ವಾಸನೆ ಕುಡಿದು ಸಾಕಾಗಿ ಕೊನೆಗೆ ಫಾರಂನಲ್ಲಿದ್ದ ಕೋಳಿಗಳನ್ನೇ ಕದ್ದರು
ವಾಸನೆ ಕುಡಿದು ಸಾಕಾಗಿ ಕೊನೆಗೆ ಫಾರಂನಲ್ಲಿದ್ದ ಕೋಳಿಗಳನ್ನೇ ಕದ್ದರು
ದರ್ಶನ್ ಪತ್ನಿಗೆ ಕೆಟ್ಟ ಕಮೆಂಟ್: ಎಚ್ಚರಿಕೆ ನೀಡಿದ ಶಿವರಾಜ್​ಕುಮಾರ್
ದರ್ಶನ್ ಪತ್ನಿಗೆ ಕೆಟ್ಟ ಕಮೆಂಟ್: ಎಚ್ಚರಿಕೆ ನೀಡಿದ ಶಿವರಾಜ್​ಕುಮಾರ್
ಮಾರ್ಮಿಕವಾಗಿ ಡಿ.ಕೆ. ಸುರೇಶ್ ಪೋಸ್ಟ್​: ಟಾರ್ಗೆಟ್​​ ಯಾರು?
ಮಾರ್ಮಿಕವಾಗಿ ಡಿ.ಕೆ. ಸುರೇಶ್ ಪೋಸ್ಟ್​: ಟಾರ್ಗೆಟ್​​ ಯಾರು?
ಪೊಲೀಸ್ ಕಂಪ್ಲೇಂಟ್ ಕೊಡ್ತೀನಿ ಎಂದ ಅಭಿಮಾನಿ: ಅರ್ಜುನ್ ಜನ್ಯ ಉತ್ತರ ಏನು?
ಪೊಲೀಸ್ ಕಂಪ್ಲೇಂಟ್ ಕೊಡ್ತೀನಿ ಎಂದ ಅಭಿಮಾನಿ: ಅರ್ಜುನ್ ಜನ್ಯ ಉತ್ತರ ಏನು?
ನಿಯಮ ಮುರಿದ ಸಹೋದರ, ಬಿಗ್​​ಬಾಸ್ ಆದೇಶಕ್ಕೆ ಕಾವ್ಯಾ ಕಣ್ಣೀರು
ನಿಯಮ ಮುರಿದ ಸಹೋದರ, ಬಿಗ್​​ಬಾಸ್ ಆದೇಶಕ್ಕೆ ಕಾವ್ಯಾ ಕಣ್ಣೀರು
‘45’ ಸಿನಿಮಾ ಅನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ಶಿವಣ್ಣ
‘45’ ಸಿನಿಮಾ ಅನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ಶಿವಣ್ಣ
ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ
ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ
ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ
ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ