
ಚೀನಾದಲ್ಲಿ ಎಲೆಕ್ಟ್ರಿಕ್ ಕಾರುಗಳ (Electric Car) ಬೇಡಿಕೆ ಎಷ್ಟರಮಟ್ಟಿಗೆ ಹೆಚ್ಚಾಗಿದೆ ಎಂಬುದಕ್ಕೆ ಆಗಸ್ಟ್ 2026ರ ಕಾರು ಮಾರಾಟದ ಅಂಕಿ-ಅಂಶಗಳು ಸಾಕ್ಷಿಯಾಗಿವೆ. ಆಗಸ್ಟ್‌ನಲ್ಲಿ ಚೀನಾದಲ್ಲಿ ಅತಿ ಹೆಚ್ಚು ಮಾರಾಟವಾದ ಟಾಪ್ 10 ಕಾರುಗಳ ಪಟ್ಟಿಯಲ್ಲಿ ಒಂದೇ ಒಂದು ಪೆಟ್ರೋಲ್ ಕಾರು ಕೂಡ ಸ್ಥಾನ ಪಡೆದಿಲ್ಲ. ಈ ಪಟ್ಟಿಯಲ್ಲಿರುವ 10 ಕಾರುಗಳಲ್ಲಿ 9 ಕಾರುಗಳು ಸಂಪೂರ್ಣ ಎಲೆಕ್ಟ್ರಿಕ್ ಆಗಿದ್ದರೆ, ಒಂದು ಕಾರು ಪ್ಲಗ್-ಇನ್ ಹೈಬ್ರಿಡ್ ಆಗಿದೆ. ಕಡಿಮೆ ರನ್ನಿಂಗ್ ಕಾಸ್ಟ್, ನಿರ್ವಹಣಾ ವೆಚ್ಚ ಕಡಿಮೆ ಇರುವುದು ಹಾಗೂ ಚಾರ್ಜಿಂಗ್ ಸೌಲಭ್ಯಗಳು ಹೆಚ್ಚುತ್ತಿರುವುದು ಸೇರಿದಂತೆ ಹಲವು ಕಾರಣಗಳಿಂದ ಎಲೆಕ್ಟ್ರಿಕ್ ವಾಹನಗಳತ್ತ ಗ್ರಾಹಕರ ಒಲವು ಹೆಚ್ಚುತ್ತಿದೆ.
ಆಗಸ್ಟ್‌ನಲ್ಲಿ ಚೀನಾದಲ್ಲಿ ಅತಿ ಹೆಚ್ಚು ಮಾರಾಟವಾದ ಕಾರು ಎಂಬ ಹೆಗ್ಗಳಿಕೆಯನ್ನು ಗೀಲಿ EX2 ಪಡೆದುಕೊಂಡಿದೆ. ಈ ಎಲೆಕ್ಟ್ರಿಕ್ ಕಾರಿನ 39,651 ಯೂನಿಟ್‌ಗಳು ಮಾರಾಟವಾಗಿವೆ. ಚೀನಾದಲ್ಲಿ ಇದರ ಬೆಲೆ 65,000ರಿಂದ 95,000 ಯುವಾನ್‌ವರೆಗೆ ಇದೆ. ಭಾರತೀಯ ಕರೆನ್ಸಿಯಲ್ಲಿ ಇದು ಸರಿಸುಮಾರು ₹9.2 ಲಕ್ಷದಿಂದ ₹13.5 ಲಕ್ಷದವರೆಗೆ ಆಗುತ್ತದೆ.
ಎರಡನೇ ಸ್ಥಾನದಲ್ಲಿ ಲೀಪ್‌ಮೋಟರ್ A10 ಇದೆ. ಆಗಸ್ಟ್‌ನಲ್ಲಿ ಈ ಎಲೆಕ್ಟ್ರಿಕ್ ಕಾರಿನ 30,652 ಯೂನಿಟ್‌ಗಳು ಮಾರಾಟವಾಗಿವೆ. ಚೀನಾದಲ್ಲಿ ಇದರ ಬೆಲೆ 66,000ರಿಂದ 87,000 ಯುವಾನ್‌ವರೆಗೆ ಇದೆ.
ಟೆಸ್ಲಾದ ಮಾಡೆಲ್ Y ಆಗಸ್ಟ್ ಮಾರಾಟ ಪಟ್ಟಿಯಲ್ಲಿ ಮೂರನೇ ಸ್ಥಾನದಲ್ಲಿದೆ. ಚೀನಾದಲ್ಲಿ ಈ ಎಲೆಕ್ಟ್ರಿಕ್ ಕಾರಿನ 29,260 ಯೂನಿಟ್‌ಗಳು ಮಾರಾಟವಾಗಿವೆ. ಇದರ ಬೆಲೆ 2,64,000ರಿಂದ 3,14,000 ಯುವಾನ್‌ವರೆಗೆ ಇದೆ.
Helmet Camera: ಹೆಲ್ಮೆಟ್‌ಗೆ ಕ್ಯಾಮೆರಾ ಅಳವಡಿಸುವುದು ಹೇಗೆ? ಎಷ್ಟು ಖರ್ಚು, ಏಕೆ ಅಗತ್ಯ?
ನಾಲ್ಕನೇ ಸ್ಥಾನದಲ್ಲಿ ಫಾಂಗ್ ಚೆಂಗ್ ಬಾವೊ Ti7 ಇದೆ. ಈ ಪಟ್ಟಿಯಲ್ಲಿರುವ ಏಕೈಕ ಹೈಬ್ರಿಡ್ ಕಾರು ಇದಾಗಿದೆ. ಆಗಸ್ಟ್‌ನಲ್ಲಿ ಇದರ 23,471 ಯೂನಿಟ್‌ಗಳು ಮಾರಾಟವಾಗಿವೆ. ಇದರ ಬೆಲೆ 1,80,000ರಿಂದ 2,40,000 ಯುವಾನ್‌ವರೆಗೆ ಇದೆ. ಇನ್ನು ಐದನೇ ಸ್ಥಾನವನ್ನು BYD Atto 2 ಪಡೆದುಕೊಂಡಿದೆ. ಈ ಎಲೆಕ್ಟ್ರಿಕ್ ಕಾರಿನ 22,958 ಯೂನಿಟ್‌ಗಳು ಆಗಸ್ಟ್‌ನಲ್ಲಿ ಮಾರಾಟವಾಗಿವೆ. ಚೀನಾದಲ್ಲಿ ಇದರ ಬೆಲೆ 75,000ರಿಂದ 1,20,000 ಯುವಾನ್‌ವರೆಗೆ ಇದೆ.
ಟೆಸ್ಲಾ ಮಾಡೆಲ್ 3 ಪಟ್ಟಿಯಲ್ಲಿ ಆರನೇ ಸ್ಥಾನದಲ್ಲಿದೆ. ಆಗಸ್ಟ್‌ನಲ್ಲಿ ಚೀನಾದಲ್ಲಿ ಇದರ 20,787 ಯೂನಿಟ್‌ಗಳು ಮಾರಾಟವಾಗಿವೆ. ಇದರ ಬೆಲೆ 2,36,000ರಿಂದ 3,40,000 ಯುವಾನ್‌ವರೆಗೆ ಇದೆ. ಚಾಂಗನ್ Nevo Q05 ಏಳನೇ ಸ್ಥಾನ, ಎಂಟನೇ ಸ್ಥಾನದಲ್ಲಿರುವ Li Auto i6 ಕಾರು, ಬಿವೈಡಿ Dolphin ಒಂಬತ್ತನೇ ಸ್ಥಾನದಲ್ಲಿದ್ದು, ಶಯೋಮಿ SU7 ಟಾಪ್ 10 ಪಟ್ಟಿಯಲ್ಲಿ ಕೊನೆಯ ಸ್ಥಾನದಲ್ಲಿದೆ.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ