Closing Bell: ಷೇರುಪೇಟೆ ಸತತ ಎರಡನೇ ದಿನ ಏರಿಕೆ; ಸೆನ್ಸೆಕ್ಸ್ 445 ಪಾಯಿಂಟ್ಸ್, ನಿಫ್ಟಿ 131 ಪಾಯಿಂಟ್ಸ್ ಹೆಚ್ಚಳ

| Updated By: Srinivas Mata

Updated on: Oct 05, 2021 | 4:04 PM

ಭಾರತದ ಷೇರು ಮಾರುಕಟ್ಟೆ ಸೂಚ್ಯಂಕಗಳಾದ ಸೆನ್ಸೆಕ್ಸ್, ನಿಫ್ಟಿ ಸತತ ಎರಡನೇ ದಿನವಾದ ಅಕ್ಟೋಬರ್ 5 ತಾರೀಕಿನ ಮಂಗಳವಾರ ಕೂಡ ಏರಿಕೆ ದಾಖಲಿಸಿದೆ. ಇಂದು ಏರಿಕೆ ಮತ್ತು ಇಳಿಕೆ ಕಂಡ ಪ್ರಮುಖ ಷೇರುಗಳ ವಿವರ ಇಲ್ಲಿದೆ.

Closing Bell: ಷೇರುಪೇಟೆ ಸತತ ಎರಡನೇ ದಿನ ಏರಿಕೆ; ಸೆನ್ಸೆಕ್ಸ್ 445 ಪಾಯಿಂಟ್ಸ್, ನಿಫ್ಟಿ 131 ಪಾಯಿಂಟ್ಸ್ ಹೆಚ್ಚಳ
ಸಾಂದರ್ಭಿಕ ಚಿತ್ರ
Follow us on

ಭಾರತೀಯ ಷೇರು ಮಾರುಕಟ್ಟೆ ಸೂಚ್ಯಂಕಗಳಾದ ಸೆನ್ಸೆಕ್ಸ್ ಮತ್ತು ನಿಫ್ಟಿ ಸತತ ಎರಡನೇ ದಿನವಾದ ಅಕ್ಟೋಬರ್​ 5, 2021ರ ಮಂಗಳವಾರ ಸಹ ಏರಿಕೆಯನ್ನು ದಾಖಲಿಸಿದೆ. ಜಾಗತಿಕ ಪ್ರಭಾವದ ಹಿನ್ನೆಲೆಯಲ್ಲಿ ಈ ಬೆಳವಣಿಗೆ ಆಗಿದೆ. ದಿನಾಂತ್ಯಕ್ಕೆ ಸೆನ್ಸೆಕ್ಸ್ ಸೂಚ್ಯಂಕವು 445.56 ಪಾಯಿಂಟ್ಸ್ ಅಥವಾ ಶೇ 0.75ರಷ್ಟು ಹೆಚ್ಚಳವಾಗಿ 59,744.88 ಪಾಯಿಂಟ್ಸ್​ನಲ್ಲಿ ವ್ಯವಹಾರವನ್ನು ಮುಗಿಸಿದೆ. ಇನ್ನು ನಿಫ್ಟಿ 131 ಪಾಯಿಂಟ್ಸ್​ ಅಥವಾ ಶೇ 0.74ರಷ್ಟು ಮೇಲೇರಿ 17,822.30 ಪಾಯಿಂಟ್ಸ್​ನೊಂದಿಗೆ ದಿನದ ವಹಿವಾಟನ್ನು ಚುಕ್ತಾ ಮಾಡಿದೆ. ಇಂದಿನ ವ್ಯವಹಾರದಲ್ಲಿ 2025ರಷ್ಟು ಕಂಪೆನಿಗಳ ಷೇರು ಏರಿಕೆಯನ್ನು ದಾಖಲಿಸಿದರೆ, 1184 ಕಂಪೆನಿಗಳ ಷೇರು ಕುಸಿತ ಕಂಡವು. ಮತ್ತು 154 ಕಂಪೆನಿಗಳ ಷೇರಿನಲ್ಲಿ ಯಾವುದೇ ಬದಲಾವಣೆ ಆಗಲಿಲ್ಲ.

ಸಾರ್ವಜನಿಕ ವಲಯದ ಬ್ಯಾಂಕ್​, ರಿಯಾಲ್ಟಿ ಮತ್ತು ಫಾರ್ಮಾಗಳನ್ನು ಹೊರತುಪಡಿಸಿದರೆ ಉಳಿದ ಎಲ್ಲ ವಲಯದ ಸೂಚ್ಯಂಕಗಳು ಸಹ ಏರಿಕೆಯಲ್ಲೇ ದಿನದ ವಹಿವಾಟನ್ನು ಕೊನೆಗೊಳಿಸಿದವು. ತೈಲ ಹಾಗೂ ಅನಿಲ, ವಿದ್ಯುತ್, ಮಾಹಿತಿ ತಂತ್ರಜ್ಞಾನ ಸೂಚ್ಯಂಕಗಳು ಶೇ 1ರಿಂದ ಶೇ 3ರ ತನಕ ಏರಿಕೆಯನ್ನು ದಾಖಲಿಸಿದವು. ಬಿಎಸ್​ಇ ಮಿಡ್​ಕ್ಯಾಪ್ ಮತ್ತು ಸ್ಮಾಲ್​ಕ್ಯಾಪ್ ಸೂಚ್ಯಂಕಗಳು ಏರಿಕೆಯಲ್ಲೇ ದಿನಾಂತ್ಯ ಮುಗಿಸಿದವು.

ನಿಫ್ಟಿಯಲ್ಲಿ ಏರಿಕೆ ಕಂಡ ಪ್ರಮುಖ ಷೇರುಗಳು ಮತ್ತು ಶೇಕಡಾವಾರು ಪ್ರಮಾಣ
ಒಎನ್​ಜಿಸಿ ಶೇ 10.87
ಇಂಡಸ್​ಇಂಡ್ ಬ್ಯಾಂಕ್ ಶೇ 4.36
ಕೋಲ್ ಇಂಡಿಯಾ ಶೇ 4.21
ಐಒಸಿ ಶೇ 2.89
ಭಾರ್ತಿ ಏರ್​ಟೆಲ್ ಶೇ 2.62

ನಿಫ್ಟಿಯಲ್ಲಿ ಇಳಿಕೆ ಕಂಡ ಪ್ರಮುಖ ಷೇರುಗಳು ಮತ್ತು ಶೇಕಡಾವಾರು ಪ್ರಮಾಣ
ಸಿಪ್ಲಾ ಶೇ -2.40
ಹಿಂಡಾಲ್ಕೋ ಶೇ -2.06
ಶ್ರೀ ಸಿಮೆಂಟ್ಸ್ ಶೇ -1.79
ಟಾಟಾ ಕನ್ಸ್ಯೂಮರ್ ಪ್ರಾಡಕ್ಟ್ಸ್ ಶೇ -1.58
ಸನ್ ಫಾರ್ಮಾ ಶೇ -1.38

ಇದನ್ನೂ ಓದಿ: ಎಲ್ಲ ಕಂಪನಿಗಳ ಷೇರುಗಳು ಹಣವನ್ನು ದ್ವಿಗುಣಗೊಳಿಸಲಾರವು, ಹಣ ಹೂಡುವಾಗ ವಿವೇಚನೆ ಬಳಸಬೇಕು: ಡಾ ಬಾಲಾಜಿ ರಾವ್