ತಿಂಗಳಿಗೆ ಕೇವಲ 28 ರೂಪಾಯಿ ಪಾವತಿಸಿದಲ್ಲಿ 4 ಲಕ್ಷ ರೂಪಾಯಿಯಷ್ಟು ಅನುಕೂಲ ಪಡೆಯಬಹುದು!
ತಿಂಗಳಿಗೆ 28 ರೂಪಾಯಿಯಷ್ಟನ್ನು ಉಳಿತಾಯ ಮಾಡಿ, ಸರ್ಕಾರದ ಈ ಎರಡು ಯೋಜನೆಗಳಲ್ಲಿ ಹೂಡಿಕೆ ಮಾಡಿದರೆ ರೂ. 4 ಲಕ್ಷ ರೂಪಾಯಿಯಷ್ಟು ಅನುಕೂಲ ದೊರೆಯುತ್ತದೆ. ಅದು ಹೇಗೆ ಎಂಬುದರ ವಿವರ ಇಲ್ಲಿದೆ.
ನೀವೇನಾದರೂ ಬ್ಯಾಂಕ್ ಆಫ್ ಬರೋಡಾದ ಖಾತೆದಾರರಾ? ಹಾಗಿದ್ದಲ್ಲಿ ಈ ಎರಡು ಸರ್ಕಾರಿ ಯೋಜನೆಗಳಿಂದ ಅನುಕೂಲ ಪಡೆಯುವ ಅವಕಾಶ ನಿಮಗಿದೆ. ಪ್ರಧಾನಮಂತ್ರಿ ಜೀವನ್ ಜ್ಯೋತಿ ಬಿಮಾ ಯೋಜನಾ ಮತ್ತು ಪ್ರಧಾನಮಂತ್ರಿ ಸುರಕ್ಷಾ ಬಿಮಾ ಯೋಜನಾ ಇವೆರಡೂ ಯೋಜನೆಯಿಂದ ಪ್ರತಿ ತಿಂಗಳು ಕೇವಲ 28 ರೂಪಾಯಿ ಉಳಿತಾಯ ಮಾಡಿದರಾಯಿತು, 4 ಲಕ್ಷ ರೂಪಾಯಿ ತನಕ ಗಳಿಸಬಹುದು. “ನಿಮ್ಮ ಭವಿಷ್ಯದ ಸುರಕ್ಷತೆಗೆ ಇದೀಗ ಕೇವಲ ಒಂದು ಹೆಜ್ಜೆ ದೂರವಿದ್ದೀರಿ! ಪ್ರಧಾನ ಮಂತ್ರಿ ಜೀವನ್ ಜ್ಯೋತಿ ಬಿಮಾ ಯೋಜನಾ, ಪ್ರಧಾನ ಮಂತ್ರಿ ಸುರಕ್ಷಾ ಬಿಮಾ ಯೋಜನಾ, ಅಟಲ್ ಪೆನ್ಷನ್ ಯೋಜನಾಗೆ ನೋಂದಣಿ ಆಗಿ ಮತ್ತು ಭವಿಷ್ಯ ಭದ್ರ ಪಡಿಸಿಕೊಳ್ಳುವ ಕಡೆಗೆ ಮತ್ತೊಂದು ಹೆಜ್ಜೆಯನ್ನು ತೆಗೆದುಕೊಳ್ಳಿ,” ಎಂದು ಬ್ಯಾಂಕ್ ಆಫ್ ಬರೋಡಾ ಟ್ವೀಟ್ ಮಾಡಿ.
ಈ ಲೆಕ್ಕಾಚಾರವನ್ನು ಗಮನಿಸಿ. ಪ್ರಧಾನ ಮಂತ್ರಿ ಜೀವನ್ ಜ್ಯೋತಿ ಬಿಮಾ ಯೋಜನಾ (PMJJBY) ಮತ್ತು ಪ್ರಧಾನ ಮಂತ್ರಿ ಸುರಕ್ಷಾ ಬಿಮಾ ಯೋಜನಾ (PMSBY) ಈ ಸರ್ಕಾರಿ ಯೋಜನೆಗಳಿಂದ 4 ಲಕ್ಷ ರೂಪಾಯಿ ಅನುಕೂಲ ಪಡೆಯಬಹುದು. ಅದಕ್ಕಾಗಿ ವಾರ್ಷಿಕವಾಗಿ ಒಟ್ಟಾರೆ ಮೊತ್ತ 342 ರೂಪಾಯಿ ಹೂಡಿಕೆ ಮಾಡಬೇಕು. ಇದರ ಅರ್ಥ ಏನೆಂದರೆ, ತಿಂಗಳಿಗೆ ಕೇವಲ 28 ರೂಪಾಯಿ ವೆಚ್ಚ ಮಾಡಿದರೆ ಸಾಕು. ಜೀವ ಮತ್ತು ಅಂಗವೈಕಲ್ಯ ಈ ಎರಡೂ ಸಹ ಪ್ರಧಾನ ಮಂತ್ರಿ ಜೀವನ ಜ್ಯೋತಿ ಯೋಜನಾ ಅಡಿಯಲ್ಲಿ ಕವರ್ ಆಗುತ್ತದೆ. ಇನ್ನು ಮೃತಪಟ್ಟಲ್ಲಿ ರೂ. 2 ಲಕ್ಷ ಆಗುತ್ತದೆ. ಪ್ರಧಾನ ಮಂತ್ರಿ ಸುರಕ್ಷಾ ಬಿಮಾ ಯೋಜನಾ 2 ಲಕ್ಷ ರೂಪಾಯಿ ಅಪಘಾತದ ಸಾವು (ಒಟ್ಟು 4 ಲಕ್ಷ ರೂಪಾಯಿ), ಅಸಂಘಟಿತ ಕಾರ್ಮಿಕರಿಗೆ ವಾರ್ಷಿಕ ಪ್ರೀಮಿಯಂ ರೂ. 342 (ರೂ. 330 PMJJBY+ ರೂ. 12 PMSBY) ಆಯಾ ವ್ಯಕ್ತಿಗಳ ಅರ್ಹತೆ ಮೇಲೆ ಆಗುತ್ತದೆ.
ಒಟ್ಟಾರೆ ಪ್ರೀಮಿಯಂ ರೂ.342 ಅನ್ನು ವಯಕ್ತಿಕವಾಗಿ/ರಾಜ್ಯ ಸರ್ಕಾರದಿಂದ ಪೂರ್ತಿ ಪ್ರೀಮಿಯಂ ಅಡಿಯಲ್ಲಿ 1.4.2020ರಿಂದ ಅನ್ವಯ ಆಗುವಂತೆ ಭರಿಸಬೇಕಾಗುತ್ತದೆ. ಕೇಂದ್ರ ಸರ್ಕಾರದ ಪಾಲಾದ PMJJBY/PMSBY ಪ್ರೀಮಿಯಂ ಅನ್ನು ಎಲ್ಐಸಿಯಿಂದ ಇದೇ ಉದ್ದೇಶಕ್ಕೆ ಮೀಸಲಾದ ಸಾಮಾಜಿಕ ಭದ್ರತಾ ನಿಧಿಯಿಂದ ಪಾವತಿಸಲಾಗುತ್ತದೆ.