Closing Bell: ಷೇರುಪೇಟೆ ಸತತ ಎರಡನೇ ದಿನ ಏರಿಕೆ; ಸೆನ್ಸೆಕ್ಸ್ 445 ಪಾಯಿಂಟ್ಸ್, ನಿಫ್ಟಿ 131 ಪಾಯಿಂಟ್ಸ್ ಹೆಚ್ಚಳ

ಭಾರತದ ಷೇರು ಮಾರುಕಟ್ಟೆ ಸೂಚ್ಯಂಕಗಳಾದ ಸೆನ್ಸೆಕ್ಸ್, ನಿಫ್ಟಿ ಸತತ ಎರಡನೇ ದಿನವಾದ ಅಕ್ಟೋಬರ್ 5 ತಾರೀಕಿನ ಮಂಗಳವಾರ ಕೂಡ ಏರಿಕೆ ದಾಖಲಿಸಿದೆ. ಇಂದು ಏರಿಕೆ ಮತ್ತು ಇಳಿಕೆ ಕಂಡ ಪ್ರಮುಖ ಷೇರುಗಳ ವಿವರ ಇಲ್ಲಿದೆ.

Closing Bell: ಷೇರುಪೇಟೆ ಸತತ ಎರಡನೇ ದಿನ ಏರಿಕೆ; ಸೆನ್ಸೆಕ್ಸ್ 445 ಪಾಯಿಂಟ್ಸ್, ನಿಫ್ಟಿ 131 ಪಾಯಿಂಟ್ಸ್ ಹೆಚ್ಚಳ
ಸಾಂದರ್ಭಿಕ ಚಿತ್ರ
Follow us
TV9 Web
| Updated By: Srinivas Mata

Updated on: Oct 05, 2021 | 4:04 PM

ಭಾರತೀಯ ಷೇರು ಮಾರುಕಟ್ಟೆ ಸೂಚ್ಯಂಕಗಳಾದ ಸೆನ್ಸೆಕ್ಸ್ ಮತ್ತು ನಿಫ್ಟಿ ಸತತ ಎರಡನೇ ದಿನವಾದ ಅಕ್ಟೋಬರ್​ 5, 2021ರ ಮಂಗಳವಾರ ಸಹ ಏರಿಕೆಯನ್ನು ದಾಖಲಿಸಿದೆ. ಜಾಗತಿಕ ಪ್ರಭಾವದ ಹಿನ್ನೆಲೆಯಲ್ಲಿ ಈ ಬೆಳವಣಿಗೆ ಆಗಿದೆ. ದಿನಾಂತ್ಯಕ್ಕೆ ಸೆನ್ಸೆಕ್ಸ್ ಸೂಚ್ಯಂಕವು 445.56 ಪಾಯಿಂಟ್ಸ್ ಅಥವಾ ಶೇ 0.75ರಷ್ಟು ಹೆಚ್ಚಳವಾಗಿ 59,744.88 ಪಾಯಿಂಟ್ಸ್​ನಲ್ಲಿ ವ್ಯವಹಾರವನ್ನು ಮುಗಿಸಿದೆ. ಇನ್ನು ನಿಫ್ಟಿ 131 ಪಾಯಿಂಟ್ಸ್​ ಅಥವಾ ಶೇ 0.74ರಷ್ಟು ಮೇಲೇರಿ 17,822.30 ಪಾಯಿಂಟ್ಸ್​ನೊಂದಿಗೆ ದಿನದ ವಹಿವಾಟನ್ನು ಚುಕ್ತಾ ಮಾಡಿದೆ. ಇಂದಿನ ವ್ಯವಹಾರದಲ್ಲಿ 2025ರಷ್ಟು ಕಂಪೆನಿಗಳ ಷೇರು ಏರಿಕೆಯನ್ನು ದಾಖಲಿಸಿದರೆ, 1184 ಕಂಪೆನಿಗಳ ಷೇರು ಕುಸಿತ ಕಂಡವು. ಮತ್ತು 154 ಕಂಪೆನಿಗಳ ಷೇರಿನಲ್ಲಿ ಯಾವುದೇ ಬದಲಾವಣೆ ಆಗಲಿಲ್ಲ.

ಸಾರ್ವಜನಿಕ ವಲಯದ ಬ್ಯಾಂಕ್​, ರಿಯಾಲ್ಟಿ ಮತ್ತು ಫಾರ್ಮಾಗಳನ್ನು ಹೊರತುಪಡಿಸಿದರೆ ಉಳಿದ ಎಲ್ಲ ವಲಯದ ಸೂಚ್ಯಂಕಗಳು ಸಹ ಏರಿಕೆಯಲ್ಲೇ ದಿನದ ವಹಿವಾಟನ್ನು ಕೊನೆಗೊಳಿಸಿದವು. ತೈಲ ಹಾಗೂ ಅನಿಲ, ವಿದ್ಯುತ್, ಮಾಹಿತಿ ತಂತ್ರಜ್ಞಾನ ಸೂಚ್ಯಂಕಗಳು ಶೇ 1ರಿಂದ ಶೇ 3ರ ತನಕ ಏರಿಕೆಯನ್ನು ದಾಖಲಿಸಿದವು. ಬಿಎಸ್​ಇ ಮಿಡ್​ಕ್ಯಾಪ್ ಮತ್ತು ಸ್ಮಾಲ್​ಕ್ಯಾಪ್ ಸೂಚ್ಯಂಕಗಳು ಏರಿಕೆಯಲ್ಲೇ ದಿನಾಂತ್ಯ ಮುಗಿಸಿದವು.

ನಿಫ್ಟಿಯಲ್ಲಿ ಏರಿಕೆ ಕಂಡ ಪ್ರಮುಖ ಷೇರುಗಳು ಮತ್ತು ಶೇಕಡಾವಾರು ಪ್ರಮಾಣ ಒಎನ್​ಜಿಸಿ ಶೇ 10.87 ಇಂಡಸ್​ಇಂಡ್ ಬ್ಯಾಂಕ್ ಶೇ 4.36 ಕೋಲ್ ಇಂಡಿಯಾ ಶೇ 4.21 ಐಒಸಿ ಶೇ 2.89 ಭಾರ್ತಿ ಏರ್​ಟೆಲ್ ಶೇ 2.62

ನಿಫ್ಟಿಯಲ್ಲಿ ಇಳಿಕೆ ಕಂಡ ಪ್ರಮುಖ ಷೇರುಗಳು ಮತ್ತು ಶೇಕಡಾವಾರು ಪ್ರಮಾಣ ಸಿಪ್ಲಾ ಶೇ -2.40 ಹಿಂಡಾಲ್ಕೋ ಶೇ -2.06 ಶ್ರೀ ಸಿಮೆಂಟ್ಸ್ ಶೇ -1.79 ಟಾಟಾ ಕನ್ಸ್ಯೂಮರ್ ಪ್ರಾಡಕ್ಟ್ಸ್ ಶೇ -1.58 ಸನ್ ಫಾರ್ಮಾ ಶೇ -1.38

ಇದನ್ನೂ ಓದಿ: ಎಲ್ಲ ಕಂಪನಿಗಳ ಷೇರುಗಳು ಹಣವನ್ನು ದ್ವಿಗುಣಗೊಳಿಸಲಾರವು, ಹಣ ಹೂಡುವಾಗ ವಿವೇಚನೆ ಬಳಸಬೇಕು: ಡಾ ಬಾಲಾಜಿ ರಾವ್

156 ದಿನ ಗರಿಷ್ಠ ಮಟ್ಟ ಕಾಯ್ದುಕೊಂಡ ಕೆಆರ್​​ಎಸ್, ಮೊದಲ ಬಾರಿಗೆ ದಾಖಲೆ
156 ದಿನ ಗರಿಷ್ಠ ಮಟ್ಟ ಕಾಯ್ದುಕೊಂಡ ಕೆಆರ್​​ಎಸ್, ಮೊದಲ ಬಾರಿಗೆ ದಾಖಲೆ
ಆಟವೆಲ್ಲ ರಂಪಾಟವಾದಾಗ; ಹದ್ದುಮೀರಿ ನಡೆದುಕೊಂಡ ಸ್ಪರ್ಧಿಗಳು
ಆಟವೆಲ್ಲ ರಂಪಾಟವಾದಾಗ; ಹದ್ದುಮೀರಿ ನಡೆದುಕೊಂಡ ಸ್ಪರ್ಧಿಗಳು
ಕೈ ತುತ್ತಿನ ಹಿಂದಿರುವ ಮಹತ್ವದ ಬಗ್ಗೆ ನಿಮಗೆ ಗೊತ್ತಾ?
ಕೈ ತುತ್ತಿನ ಹಿಂದಿರುವ ಮಹತ್ವದ ಬಗ್ಗೆ ನಿಮಗೆ ಗೊತ್ತಾ?
ವಿಷ್ಣು, ಗಣೇಶನ ಲಹರಿ ಇರುವ ಈ ದಿನದ ರಾಶಿ ಭವಿಷ್ಯ ಹೇಗಿದೆ ತಿಳಿಯಿರಿ
ವಿಷ್ಣು, ಗಣೇಶನ ಲಹರಿ ಇರುವ ಈ ದಿನದ ರಾಶಿ ಭವಿಷ್ಯ ಹೇಗಿದೆ ತಿಳಿಯಿರಿ
2025ರ ಸರ್ಕಾರಿ ಕ್ಯಾಲೆಂಡರ್ ಹೇಗಿರುತ್ತದೆ? ಇಲ್ಲಿದೆ ನೋಡಿ ವಿಡಿಯೋ
2025ರ ಸರ್ಕಾರಿ ಕ್ಯಾಲೆಂಡರ್ ಹೇಗಿರುತ್ತದೆ? ಇಲ್ಲಿದೆ ನೋಡಿ ವಿಡಿಯೋ
ಹಿಮದಿಂದ ತುಂಬಿದ ಕಣಿವೆಯಲ್ಲಿ ಚಿರತೆಗಳ ಕುಣಿದಾಟ
ಹಿಮದಿಂದ ತುಂಬಿದ ಕಣಿವೆಯಲ್ಲಿ ಚಿರತೆಗಳ ಕುಣಿದಾಟ
ನಾಸಿಕ್‌ನಲ್ಲಿ 11 ವರ್ಷದ ಬಾಲಕಿ ಮೇಲೆ ಬೀದಿನಾಯಿಗಳ ದಾಳಿ; ವಿಡಿಯೋ ಇಲ್ಲಿದೆ
ನಾಸಿಕ್‌ನಲ್ಲಿ 11 ವರ್ಷದ ಬಾಲಕಿ ಮೇಲೆ ಬೀದಿನಾಯಿಗಳ ದಾಳಿ; ವಿಡಿಯೋ ಇಲ್ಲಿದೆ
ಕಷ್ಟ ಬಂದರೆ ಪ್ರಸಾದ ತಿಂದು ಬದುಕ್ತೀನಿ, ಯಾರ ಜತೆಗೂ ಹೋಗಿ ಇರಲ್ಲ: ರಚಿತಾ
ಕಷ್ಟ ಬಂದರೆ ಪ್ರಸಾದ ತಿಂದು ಬದುಕ್ತೀನಿ, ಯಾರ ಜತೆಗೂ ಹೋಗಿ ಇರಲ್ಲ: ರಚಿತಾ
ದಲಿತ ಸಮುದಾಯದ ಸಮಸ್ಯೆಗಳ ಚರ್ಚೆಗೆ ಮೀಟಿಂಗ್ ಕರೆದಿದ್ದಾರೆ: ಮಹಾದೇವಪ್ಪ
ದಲಿತ ಸಮುದಾಯದ ಸಮಸ್ಯೆಗಳ ಚರ್ಚೆಗೆ ಮೀಟಿಂಗ್ ಕರೆದಿದ್ದಾರೆ: ಮಹಾದೇವಪ್ಪ
ಕಾಂಗ್ರೆಸ್ 135 ಸ್ಥಾನ ಪಡೆಯುವಲ್ಲಿ ಶಿವಕುಮಾರ್ ಪಾತ್ರ ದೊಡ್ಡದು: ವಿಶ್ವನಾಥ್
ಕಾಂಗ್ರೆಸ್ 135 ಸ್ಥಾನ ಪಡೆಯುವಲ್ಲಿ ಶಿವಕುಮಾರ್ ಪಾತ್ರ ದೊಡ್ಡದು: ವಿಶ್ವನಾಥ್