Stock Market: ಷೇರುಪೇಟೆ ಸೂಚ್ಯಂಕಗಳಾದ ಸೆನ್ಸೆಕ್ಸ್ 1736 ಪಾಯಿಂಟ್ಸ್, ನಿಫ್ಟಿ 510 ಪಾಯಿಂಟ್ಸ್ ಝೂಮ್

ಫೆಬ್ರವರಿ 15, 2022ರ ಮಂಗಳವಾರದಂದು ಷೇರುಪೇಟೆ ಸೂಚ್ಯಂಕಗಳಾದ ಸೆನ್ಸೆಕ್ಸ್, ನಿಫ್ಟಿ ಭಾರೀ ಪ್ರಮಾಣದಲ್ಲಿ ಏರಿಕೆ ಕಂಡಿದೆ. ಪ್ರಮುಖವಾಗಿ ಏರಿಕೆ, ಇಳಿಕೆ ಕಂಡ ಷೇರುಗಳ ಮಾಹಿತಿ ಇಲ್ಲಿದೆ.

Stock Market: ಷೇರುಪೇಟೆ ಸೂಚ್ಯಂಕಗಳಾದ ಸೆನ್ಸೆಕ್ಸ್ 1736 ಪಾಯಿಂಟ್ಸ್, ನಿಫ್ಟಿ 510 ಪಾಯಿಂಟ್ಸ್ ಝೂಮ್
ಸಾಂದರ್ಭಿಕ ಚಿತ್ರ
Updated By: Srinivas Mata

Updated on: Feb 15, 2022 | 5:06 PM

ಭಾರತದ ಷೇರು ಮಾರುಕಟ್ಟೆ (Stock Market) ಸೂಚ್ಯಂಕಗಳು ಫೆಬ್ರವರಿ 15ನೇ ತಾರೀಕಿನ ಮಂಗಳವಾರದಂದು ಭಾರೀ ಪ್ರಮಾಣದಲ್ಲಿ ಏರಿಕೆ ದಾಖಲಿಸಿವೆ. ಸತತ ಎರಡು ದಿನಗಳಿಂದ ಇಳಿಕೆ ಕಾಣುತ್ತಿದ್ದ ಸೂಚ್ಯಂಕಗಳಲ್ಲಿ ಇಂಥ ದೊಡ್ಡ ಪ್ರಮಾಣದಲ್ಲಿ ಏರಿಕೆ ಬರುವುದಕ್ಕೆ ಕಾರಣ ಆಗಿದ್ದು ಎಲ್ಲ ವಲಯಗಳಲ್ಲೂ ಆದ ಖರೀದಿ. ದಿನದ ಅಂತ್ಯಕ್ಕೆ ಸೆನ್ಸೆಕ್ಸ್ ಸೂಚ್ಯಂಕವು 1736.21 ಪಾಯಿಂಟ್ಸ್​ ಅಥವಾ ಶೇ 3.08ರಷ್ಟು ಮೇಲೇರಿ, 58,142.05 ಪಾಯಿಂಟ್ಸ್​ನಲ್ಲಿ ದಿನಾಂತ್ಯ ಮುಗಿಸಿತು. ಇನ್ನು ನಿಫ್ಟಿ 509.70 ಪಾಯಿಂಟ್ಸ್ ಅಥವಾ ಶೇ 3.03 ಪಾಯಿಂಟ್ಸ್ ಹೆಚ್ಚಳವಾಗಿ, 17,352.50 ಪಾಯಿಂಟ್ಸ್​ನೊಂದಿಗೆ ವಹಿವಾಟು ಚುಕ್ತಾ ಮಾಡಿತು. ಇಂದಿನ ವಹಿವಾಟಿನಲ್ಲಿ 1996 ಕಂಪೆನಿಯ ಷೇರುಗಳು ಏರಿಕೆ ದಾಖಲಿಸಿದರೆ, 1286 ಕಂಪೆನಿಯ ಷೇರುಗಳು ಕುಸಿತ ಕಂಡವು. ಇನ್ನು 90 ಕಂಪೆನಿಯ ಷೇರುಗಳಲ್ಲಿ ಯಾವುದೇ ಬದಲಾವಣೆ ಆಗಲಿಲ್ಲ.

ಎಲ್ಲ ವಲಯದ ಸೂಚ್ಯಂಕಗಳು ಏರಿಕೆಯಲ್ಲೇ ದಿನ ಮುಗಿಸಿದವು. ವಾಹನ, ಬ್ಯಾಂಕ್, ರಿಯಾಲ್ಟಿ, ಕ್ಯಾಪಿಟಲ್ ಗೂಡ್ಸ್, ಪಿಎಸ್​ಯು ಬ್ಯಾಂಕ್, ಮಾಹಿತಿ ತಂತ್ರಜ್ಞಾನ ಮತ್ತು ಎಫ್​ಎಂಸಿಜಿ ಶೇ 2ರಿಂದ 3ರಷ್ಟು ಮೇಲೇರಿದವು. ಬಿಎಸ್​ಇ ಮಿಡ್​ಕ್ಯಾಪ್ ಮತ್ತು ಸ್ಮಾಲ್​ಕ್ಯಾಪ್ ಸೂಚ್ಯಂಕಗಳು ತಲಾ ಶೇ 2ರಷ್ಟು ಮೇಲೇರಿದವು.

ನಿಫ್ಟಿಯಲ್ಲಿ ಏರಿಕೆ ಕಂಡ ಪ್ರಮುಖ ಷೇರುಗಳು ಹಾಗೂ ಶೇಕಡಾವಾರು ಪ್ರಮಾಣ

ಟಾಟಾ ಮೋಟಾರ್ಸ್​ ಶೇ 6.90

ಐಷರ್ ಮೋಟಾರ್ಸ್ ಶೇ 5.96

ಶ್ರೀ ಸಿಮೆಂಟ್ಸ್​ ಶೇ 5.60

ಬಜಾಜ್ ಫೈನಾನ್ಸ್ ಶೇ 5.25

ಹೀರೋ ಮೋಟೋಕಾರ್ಪ್​ ಶೇ 4.91

ನಿಫ್ಟಿಯಲ್ಲಿ ಇಳಿಕೆ ಕಂಡ ಪ್ರಮುಖ ಷೇರುಗಳು ಹಾಗೂ ಶೇಕಡಾವಾರು ಪ್ರಮಾಣ

ಸಿಪ್ಲಾ ಶೇ -3.46

ಒಎನ್​ಜಿಸಿ ಶೇ -1.23

ಇದನ್ನೂ ಓದಿ: Multibagger Stock: ಈ ಸ್ಟಾಕ್​ನಲ್ಲಿನ ರೂ. 1 ಲಕ್ಷ ಹೂಡಿಕೆ 10 ವರ್ಷದಲ್ಲಿ 1.35 ಕೋಟಿ ರೂಪಾಯಿ