Satellite Broadband: ಸ್ಯಾಟಲೈಟ್ ಬ್ರಾಡ್​ಬ್ಯಾಂಡ್​ ಕ್ಷೇತ್ರಕ್ಕೆ ಕಾಲಿಡಲಿದೆ ​ರಿಲಯನ್ಸ್ ಜಿಯೋ ಪ್ಲಾಟ್​ಫಾರ್ಮ್ಸ್

ಬಿಲಿಯನೇರ್​ ಉದ್ಯಮಿ ಮುಕೇಶ್​ ಅಂಬಾನಿ ನೇತೃತ್ವದ ಜಿಯೋ ಪ್ಲಾಟ್​ಫಾರ್ಮ್ ಸ್ಯಾಟಲೈಟ್ ಬ್ರಾಡ್​ಬ್ಯಾಂಡ್​ ​ ಕ್ಷೇತ್ರಕ್ಕೆ ಪದಾರ್ಪಣೆ ಮಾಡುವ ಬಗ್ಗೆ ತಿಳಿಸಿದೆ.

Satellite Broadband: ಸ್ಯಾಟಲೈಟ್ ಬ್ರಾಡ್​ಬ್ಯಾಂಡ್​ ಕ್ಷೇತ್ರಕ್ಕೆ ಕಾಲಿಡಲಿದೆ ​ರಿಲಯನ್ಸ್ ಜಿಯೋ ಪ್ಲಾಟ್​ಫಾರ್ಮ್ಸ್
ಮುಕೇಶ್ ಅಂಬಾನಿ (ಸಂಗ್ರಹ ಚಿತ್ರ)
Follow us
TV9 Web
| Updated By: Srinivas Mata

Updated on: Feb 15, 2022 | 1:13 PM

ಬಿಲಿಯನೇರ್ ಉದ್ಯಮಿ ಮುಕೇಶ್​ ಅಂಬಾನಿ (Mukesh Ambani) ನೇತೃತ್ವದ ಸಮೂಹವು ಸ್ಯಾಟಲೈಟ್ ಬ್ರಾಡ್​ಬ್ಯಾಂಡ್​ ಕನೆಕ್ಟಿವಿಟಿ ಒದಗಿಸುವುದಕ್ಕೆ ಮುಂದಾಗಿದೆ. ಇದೇ ಸೆಗ್ಮಂಟ್​ನಲ್ಲಿ ಸುನೀಲ್​ ಮಿತ್ತಲ್​ರ ಒನ್​ವೆಬ್​ ಮತ್ತು ಎಲಾನ್​ ಮಸ್ಕ್​ರ ಸ್ಪೇಸ್​ಎಕ್ಸ್​ ಇದೇ ಮಹತ್ವಾಕಾಂಕ್ಷೆಯ ಯೋಜನೆ ಹೊಂದಿವೆ. ಲಿಸ್ಟೆಡ್​ ಕಂಪೆನಿಯಾದ ರಿಲಯನ್ಸ್​ ಇಂಡಸ್ಟ್ರೀಸ್​ನ ಸಂಪೂರ್ಣ ಒಡೆತನ ಇರುವ ಅಂಗ ಸಂಸ್ಥೆಯಾದ ಜಿಯೋ ಪ್ಲಾಟ್​ಫಾರ್ಮ್ಸ್ ಲಿಮಿಟೆಡ್​ ಲಕ್ಸೆಂಬರ್ಗ್ ಮೂಲದ ಎಸ್​ಇಎಸ್​ ಜತೆ ಜಂಟಿಯಾಗಿ, ಭಾರತದಲ್ಲಿ ಮುಂದಿನ ತಲೆಮಾರಿನ ಕೈಗೆಟುಕುವ, ಎಲ್ಲರನ್ನೂ ತಲುಪುವಂಥ ಬ್ರಾಡ್​ಬ್ಯಾಂಡ್​ ಸೇವೆಯನ್ನು ಉಪಗ್ರಹ ತಂತ್ರಜ್ಞಾನವನ್ನು ಬಳಸಿಕೊಂಡು ನೀಡಲಿದೆ, ಎಂದು ಸೋಮವಾರದಂದು ವಿನಿಮಯ ಕೇಂದ್ರದ ಫೈಲಿಂಗ್​ನಲ್ಲಿ ತಿಳಿಸಲಾಗಿದೆ. ಹೊಸದಾಗಿ ರಚನೆ ಆದಂಥ ಜಿಯೋ ಸ್ಪೇಸ್​ ಟೆಕ್ನಾಲಜಿ ಲಿಮಿಟೆಡ್​ನಲ್ಲಿ ಶೇ 51ರಷ್ಟು ಪಾಲನ್ನು ಹೊಂದಿದ್ದರೆ, ಬಾಕಿ ಪಾಲನ್ನು ಎಸ್​ಇಎಸ್​ ಹೋಲ್ಡಿಂಗ್​ ಹೊಂದಿರುತ್ತದೆ.

ಈ ಜಂಟಿ ಉದ್ಯಮವು “ಬಹು- ಕಕ್ಷೆ ಬಾಹ್ಯಾಕಾಶ ನೆಟ್​ವರ್ಕ್​ಗಳ”ನ್ನು ಬಳಸಲಿದೆ. ಆ ಮೂಲಕ ಭಾರತ ಮತ್ತು ನೆರೆಯ ಪ್ರದೇಶಗಳಾದ್ಯಂತ ಕಂಪೆನಿಗಳು, ರೀಟೇಲ್ ಬಳಕೆದಾರರು ಮತ್ತು ಬ್ಯಾಕ್​ಎಂಡ್​ ವಯರ್​ಲೆಸ್​ ನೆಟ್​ವರ್ಕ್ಸ್​ಗಳಿಗೆ ಮಲ್ಟಿ-ಗಿಗಾಬೈಟ್ ಇಂಟರ್​ನೆಟ್​ ಸಾಮರ್ಥ್ಯವನ್ನು ಒದಗಿಸಲಾಗುತ್ತದೆ ಎಂದು ಹೇಳಿಕೆಯಲ್ಲಿ ತಿಳಿಸಲಾಗಿದೆ. ರಿಲಯನ್ಸ್​ನ ಅತಿ ದೊಡ್ಡ ಟೆಲಿಕಾಂ ಮೂಲಸೌಕರ್ಯದಲ್ಲಿ ಭಾರತದಾದ್ಯಂತ ಆಪ್ಟಿಕ್ ಫೈಬರ್ ಸಹ ಇದ್ದು, ಸ್ಯಾಟಲೈಟ್​ ಬ್ರಾಡ್​ಬ್ಯಾಂಡ್​ ಮಾತ್ರ ಇಲ್ಲದಂತಾಗಿದೆ. ಆದರೆ 2016ರಲ್ಲಿ ಪದಾರ್ಪಣೆ ಮಾಡಿದ ಜಿಯೋ ದೇಶದ ಅತಿ ದೊಡ್ಡ ಮೊಬೈಲ್​ ಆಪರೇಟರ್​ ಆಗಲು ತೆಗೆದುಕೊಂಡಿದ್ದು ಕೆಲವೇ ವರ್ಷಗಳ ಸಮಯ. ವಿಶ್ವದಲ್ಲಿ ಎರಡನೇ ಅತಿ ದೊಡ್ಡ ವೈಯರ್​ಲೆಸ್ ಮಾರುಕಟ್ಟೆಯಾದ ಭಾರತದಲ್ಲಿ, 2020ನೇ ಇಸವಿ ಹೊತ್ತಿಗೆ ಇದ್ದದ್ದು ಕೇವಲ 62.2 ಕೋಟಿ ಸಕ್ರಿಯ ಇಂಟರ್​ನೆಟ್​ ಬಳಕೆದಾರರು ಎಂದು ಕಾಂಟಾರ್ ಕನ್ಸಲ್ಟೆನ್ಸಿ ತಿಳಿಸಿದೆ. ಆದ್ದರಿಂದ ಇದು ಬೆಳವಣಿಗೆಗೆ ಪೂರಕವಾದ ಮಾರುಕಟ್ಟೆ ಎಂದು ಅಭಿಪ್ರಾಯ ಪಡಲಾಗಿದೆ.

“ಬಹು ವರ್ಷಗಳ ಸಾಮರ್ಥ್ಯದ ಖರೀದಿ ಒಪ್ಪಂದ”ದ ಜತೆಗೆ ಈ ಜಂಟಿ ಉದ್ಯಮದಲ್ಲಿ ಜಿಯೋ ಆ್ಯಂಕರ್ ಗ್ರಾಹಕ ಆಗಿರುತ್ತದೆ. ಈ ಒಪ್ಪಂದದ ಮೌಲ್ಯ 100 ಮಿಲಿಯನ್ ಡಾಲರ್ (10 ಕೋಟಿ ಅಮೆರಿಕನ್ ಡಾಲರ್) ಆಗಿರುತ್ತದೆ, ಎಂದು ಹೇಳಿಕೆಯಲ್ಲಿ ತಿಳಿಸಲಾಗಿದೆ. ಕೆಳ ಮಟ್ಟದ- ಭೂ ಕಕ್ಷೆ ಅಥವಾ ಎಲ್​ಇಒ, ಉಪಗ್ರಹಗಳು ಹೀಗೆ ವೇಗವಾಗಿ ಇಂಟರ್​ನೆಟ್​ ಒದಗಿಸುವ ಈ ಪೈಕಿ ಯಾವ ವಿಭಾಗಕ್ಕೆ ಬರುತ್ತದೆ ಎಂಬ ಬಗ್ಗೆ ರಿಲಯನ್ಸ್​ ವಕ್ತಾರರು ತಕ್ಷಣದ ಪ್ರತಿಕ್ರಿಯೆಗೆ ಲಭ್ಯರಾಗಿಲ್ಲ ಎಂದು ಎಕನಾಮಿಕ್ ಟೈಮ್ಸ್ ತಿಳಿಸಿದೆ.

ಮಸ್ಕ್‌ ಅವರ ಸ್ಪೇಸ್‌ಎಕ್ಸ್ ಸ್ಟಾರ್‌ಲಿಂಕ್‌ನ ಕ್ಷಿಪ್ರ ವಿಸ್ತರಣೆಯ ಮಧ್ಯದಲ್ಲಿದ್ದು, ಇದು ಎಲ್​ಇಒ ಉಪಗ್ರಹಗಳ ಸಮೂಹವಾಗಿ, ಅಂತಿಮ ಎಂಬಂತೆ 30,000ಕ್ಕಿಂತ ಹೆಚ್ಚು ಸಂಖ್ಯೆಯನ್ನು ನೀಡುತ್ತದೆ ಮತ್ತು ಪ್ರಪಂಚದಾದ್ಯಂತ ಹೆಚ್ಚಿನ ವೇಗದ ಇಂಟರ್​ನೆಟ್ ಕವರೇಜ್ ಅನ್ನು ಒದಗಿಸುತ್ತದೆ. ಯುನೈಟೆಡ್​ ಕಿಂಗ್​ಡಮ್​ ಸರ್ಕಾರದ ದಿವಾಳಿತನದ ತೂಗುಗತ್ತಿಯಿಂದ ಸ್ಯಾಟಲೈಟ್ ಸ್ಟಾರ್ಟ್ಅಪ್ OneWeb ಅನ್ನು ರಕ್ಷಿಸಿದ ಮಿತ್ತಲ್, ಜೂನ್‌ನಲ್ಲಿ ಕಂಪೆನಿಯು ಈ ವರ್ಷ 648 ಉಪಗ್ರಹಗಳ ಯೋಜಿತ ಸಮೂಹದೊಂದಿಗೆ ಜಾಗತಿಕ ಬ್ರಾಡ್‌ಬ್ಯಾಂಡ್ ಸೇವೆಗಳನ್ನು ನೀಡಲಿದೆ ಎಂದು ಹೇಳಿದ್ದರು. ಇದು ಸ್ಪರ್ಧೆಯನ್ನು ತೀವ್ರಗೊಳಿಸುವ ಮೂಲಕ ಭಾರತಕ್ಕೆ ಉಪಗ್ರಹ ಬ್ರಾಡ್‌ಬ್ಯಾಂಡ್ ಸೇವೆಗಳಿಗಾಗಿ ಹ್ಯೂಸ್ ನೆಟ್‌ವರ್ಕ್ ಸಿಸ್ಟಮ್ಸ್ LLC ಯೊಂದಿಗೆ ಸಹ ಒಪ್ಪಂದ ಮಾಡಿಕೊಂಡಿದೆ.

2022ರ ಡಿಸೆಂಬರ್ ವೇಳೆಗೆ 2,00,000 ಸಂಪರ್ಕಗಳನ್ನು ಹೊಂದುವ ಯೋಜನೆಯೊಂದಿಗೆ ಸ್ಪೇಸ್​ ಎಕ್ಸ್​ ಕಳೆದ ವರ್ಷ ಭಾರತದಲ್ಲಿ ಸಂಪೂರ್ಣ ಒಡೆತನದ ಘಟಕವನ್ನು ಸ್ಥಾಪಿಸಿತು. ಆದರೆ ಅದು ಶೀಘ್ರದಲ್ಲೇ ನವೆಂಬರ್‌ನಲ್ಲಿ ಭಾರತ ಸರ್ಕಾರದೊಂದಿಗೆ ತಿಕ್ಕಾಟದಿಂದಾಗಿ, ಇದು ಪೂರ್ವ-ಆರ್ಡರ್‌ಗಳ ಮೂಲಕ ಸಂಗ್ರಹಿಸಿದ ಹಣವನ್ನು ಹಿಂತಿರುಗಿಸಲು ಸ್ಟಾರ್‌ಲಿಂಕ್‌ಗೆ ಕೇಳಿತು ಮತ್ತು ಸ್ಟಾರ್‌ಲಿಂಕ್ ಸ್ಯಾಟಲೈಟ್ ಇಂಟರ್‌ನೆಟ್ ನೀಡಲು ಪರವಾನಗಿಯನ್ನು ಪಡೆದಿಲ್ಲವಾದ್ದರಿಂದ ಅದರ ಸೇವೆಗಳಿಗೆ ಚಂದಾದಾರರಾಗದೆ ಇರುವಂತೆ ಗ್ರಾಹಕರಿಗೆ ಸಲಹೆ ನೀಡಿತು.

ಇದನ್ನೂ ಓದಿ: Rise of New India: ಮುಂದಿನ 30 ವರ್ಷದಲ್ಲಿ ಭಾರತ ಇತಿಹಾಸದಲ್ಲಿಯೇ ಅತ್ಯುತ್ತಮವನ್ನು ಸಾಧಿಸಬಲ್ಲದು, ಹೇಗೆ? ಇಲ್ಲಿದೆ ಮುಕೇಶ್ ಅಂಬಾನಿ ವ್ಯಾಖ್ಯಾನ

ಬೆಂಗಳೂರಲ್ಲಿದ್ದರೂ ಬಿಜೆಪಿ ಸಭೆಗೆ ಹಾಜರಾಗದ ಬಸನಗೌಡ ಪಾಟೀಲ್ ಯತ್ನಾಳ್
ಬೆಂಗಳೂರಲ್ಲಿದ್ದರೂ ಬಿಜೆಪಿ ಸಭೆಗೆ ಹಾಜರಾಗದ ಬಸನಗೌಡ ಪಾಟೀಲ್ ಯತ್ನಾಳ್
ಪ್ರತಿಭಟನೆಕಾರರು ಆಟೋರಿಕ್ಷಾ ಬೆನ್ನಟ್ಟಿದ್ದರೂ ಪೊಲೀಸ್ ಮೂಕ ಪ್ರೇಕ್ಷಕ ಮಾತ್ರ
ಪ್ರತಿಭಟನೆಕಾರರು ಆಟೋರಿಕ್ಷಾ ಬೆನ್ನಟ್ಟಿದ್ದರೂ ಪೊಲೀಸ್ ಮೂಕ ಪ್ರೇಕ್ಷಕ ಮಾತ್ರ
ಕುಂಭಕೋಣಂ ಪ್ರತ್ಯಂಗಿರಾ ದೇವಿ ದರ್ಶನ ಪಡೆದ ಡಿಕೆ ಶಿವಕುಮಾರ್
ಕುಂಭಕೋಣಂ ಪ್ರತ್ಯಂಗಿರಾ ದೇವಿ ದರ್ಶನ ಪಡೆದ ಡಿಕೆ ಶಿವಕುಮಾರ್
ರೈಲು ಹತ್ತಲು ಹೋಗಿ ಪ್ಲಾಟ್​ಫಾರಂ ಕೆಳಗೆ ಬೀಳುತ್ತಿದ್ದ ಪ್ರಯಾಣಿಕನ ರಕ್ಷಣೆ
ರೈಲು ಹತ್ತಲು ಹೋಗಿ ಪ್ಲಾಟ್​ಫಾರಂ ಕೆಳಗೆ ಬೀಳುತ್ತಿದ್ದ ಪ್ರಯಾಣಿಕನ ರಕ್ಷಣೆ
ರಸ್ತೆಗಳಲ್ಲಿ ವಾಹನ ಸಂಚಾರ ಕಂಡುಬರುತ್ತಿಲ್ಲ, ಶಾಲೆಗಳು ಬಂದ್ ಆಗಿವೆ: ಪೊಲೀಸ್
ರಸ್ತೆಗಳಲ್ಲಿ ವಾಹನ ಸಂಚಾರ ಕಂಡುಬರುತ್ತಿಲ್ಲ, ಶಾಲೆಗಳು ಬಂದ್ ಆಗಿವೆ: ಪೊಲೀಸ್
ವೈಕುಂಠದ್ವಾರ ಸರ್ವದರ್ಶನಕ್ಕಾಗಿ ಟೋಕನ್ ಪಡೆಯಲು ನಡೆದ ದುರಂತ
ವೈಕುಂಠದ್ವಾರ ಸರ್ವದರ್ಶನಕ್ಕಾಗಿ ಟೋಕನ್ ಪಡೆಯಲು ನಡೆದ ದುರಂತ
ನಂಬಿ ಮೋಸ ಹೋದ್ರಾ ಧನರಾಜ್; ಮಿಸ್ ಆಯ್ತು ಬಿಗ್ ಬಾಸ್ ಫಿನಾಲೆ ಟಿಕೆಟ್
ನಂಬಿ ಮೋಸ ಹೋದ್ರಾ ಧನರಾಜ್; ಮಿಸ್ ಆಯ್ತು ಬಿಗ್ ಬಾಸ್ ಫಿನಾಲೆ ಟಿಕೆಟ್
ಮಹಿಳೆಯರು ಮುಡಿ ಕಟ್ಟದೆ ದೇವಾಲಯಕ್ಕೆ ಹೋಗಬಹುದಾ ತಿಳಿಯಿರಿ
ಮಹಿಳೆಯರು ಮುಡಿ ಕಟ್ಟದೆ ದೇವಾಲಯಕ್ಕೆ ಹೋಗಬಹುದಾ ತಿಳಿಯಿರಿ
Daily horoscope: ಗುರುವಾರದ ದಿನ ಭವಿಷ್ಯ ತಿಳಿಯಿರಿ
Daily horoscope: ಗುರುವಾರದ ದಿನ ಭವಿಷ್ಯ ತಿಳಿಯಿರಿ
‘ಸಂಜು ವೆಡ್ಸ್​ ಗೀತಾ 2’ ಸಿನಿಮಾದ ಕಥೆಯೇ ಬೇರೆ: ರಚಿತಾ ರಾಮ್ ಸ್ಪಷ್ಟನೆ
‘ಸಂಜು ವೆಡ್ಸ್​ ಗೀತಾ 2’ ಸಿನಿಮಾದ ಕಥೆಯೇ ಬೇರೆ: ರಚಿತಾ ರಾಮ್ ಸ್ಪಷ್ಟನೆ