Multibagger Stock: ಈ ಸ್ಟಾಕ್ನಲ್ಲಿನ ರೂ. 1 ಲಕ್ಷ ಹೂಡಿಕೆ 10 ವರ್ಷದಲ್ಲಿ 1.35 ಕೋಟಿ ರೂಪಾಯಿ
ಹೂಡಿಕೆದಾರರು ಹತ್ತು ವರ್ಷಗಳ ಹಿಂದೆ 1 ಲಕ್ಷ ರೂಪಾಯಿ ಹೂಡಿದ್ದಲ್ಲಿ ಇದೀಗ ರೂ. 1.35 ಕೋಟಿ ಆಗಿರುತ್ತದೆ. ಯಾವುದು ಆ ಸ್ಟಾಕ್ ಎಂಬ ವಿವರ ಇಲ್ಲಿದೆ.
ಷೇರು ಮಾರ್ಕೆಟ್ ಹೂಡಿಕೆದಾರರು 2022ರ ಮಲ್ಟಿಬ್ಯಾಗರ್ ಸ್ಟಾಕ್‌ಗಳನ್ನು (Multibagger Stock) ಹುಡುಕುತ್ತಿದ್ದು, ಷೇರುಪೇಟೆಯಲ್ಲಿ ಇತ್ತೀಚಿನ ರಕ್ತದೋಕುಳಿ ನಂತರ ರಿಯಾಯಿತಿ ದರದಲ್ಲಿ ಲಭ್ಯ ಇರುವ ಗುಣಮಟ್ಟದ ಸ್ಟಾಕ್‌ಗಳನ್ನು ಹುಡುಕುವಲ್ಲಿ ನಿರತರಾಗಿದ್ದಾರೆ. ಅಂದಹಾಗೆ ಸೆಕೆಂಡರಿ ಮಾರ್ಕೆಟ್ ಅನ್ನೋ ವಿಚಾರಕ್ಕೆ ಬಂದರೆ, ಹೂಡಿಕೆದಾರರಿಗೆ ದೀಪಕ್ ನೈಟ್ರೈಟ್ ದೀರ್ಘಾವಧಿಯಲ್ಲಿ ಉತ್ತಮ ಆಯ್ಕೆ ಆಗಿರಬಹುದು ಎಂದು ತಜ್ಞರು ಸಲಹೆ ನೀಡುತ್ತಾರೆ. ಷೇರು ಮಾರುಕಟ್ಟೆಯ ತಜ್ಞರು ಹೇಳುವಂತೆ, ಷೇರುಗಳು ಈಗಾಗಲೇ ಸಾಕಷ್ಟು ಬೆಲೆ ಇಳಿಕೆ ಕಂಡಿವೆ. ಮತ್ತು ಒಮ್ಮೆ ಮಾರುಕಟ್ಟೆಗಳಲ್ಲಿ ಟ್ರೆಂಡ್ ವಾಪಸ್ ಆದಲ್ಲಿ ಕೆಳಗಿನ ಹಂತಗಳಿಂದ ಈ ಕೌಂಟರ್‌ನಲ್ಲಿ ಏರಿಕೆ ತೀಕ್ಷ್ಣವಾಗಿ ಮರುಕಳಿಸಬಹುದು. ಇನ್ನು ಇಲ್ಲಿ ಪ್ರಸ್ತಾವ ಮಾಡುತ್ತಿರುವ ಈ ರಾಸಾಯನಿಕ ಸ್ಟಾಕ್ 2021ರಲ್ಲಿ ಮಲ್ಟಿಬ್ಯಾಗರ್ ಸ್ಟಾಕ್‌ಗಳಲ್ಲಿ ಒಂದಾಗಿದ್ದು, ದೀರ್ಘಾವಧಿಯಲ್ಲಿ ತನ್ನ ಷೇರುದಾರರಿಗೆ ಅದ್ಭುತವಾದ ರಿಟರ್ನ್ ನೀಡಿದೆ.
ದೀಪಕ್ ನೈಟ್ರೈಟ್ ಷೇರು ಬೆಲೆ ಇತಿಹಾಸ ಕಳೆದ ಆರು ತಿಂಗಳಿನಿಂದ ದೀಪಕ್ ನೈಟ್ರೇಟ್ ಸ್ಟಾಕ್ ಮಾರಾಟದ ಒತ್ತಡಲ್ಲಿದೆ. ಕಳೆದ ಒಂದು ತಿಂಗಳಲ್ಲಿ ದೀಪಕ್ ನೈಟ್ರೈಟ್ ಷೇರಿನ ಬೆಲೆ ಸುಮಾರು ರೂ. 2660ರಿಂದ ರೂ. 2058ರ ಮಟ್ಟಕ್ಕೆ ಇಳಿದಿದ್ದು, ಈ ಅವಧಿಯಲ್ಲಿ ಶೇ 22ರಷ್ಟರ ಹತ್ತಿರ ಕುಸಿದಿದೆ. ಕಳೆದ 6 ತಿಂಗಳದು ಗಮನಿಸುವುದಾದರೆ ಸುಮಾರು ಶೇ 4ರಷ್ಟು ಬೆಲೆ ಇಳಿದಿದೆ. ಈ ವರ್ಷದ ಆರಂಭದಿಂದ ಇಲ್ಲಿಯವರೆಗೆ ರೂ. 2530ರಿಂದ ರೂ. 2058ಕ್ಕೆ ಬಂದಿದ್ದು, 2022ರಲ್ಲಿ ಶೇ 19ರಷ್ಟು ನಷ್ಟ ಅನುಭವಿಸಿದೆ. ಷೇರುದಾರರಿಂದ ಅಂತಹ ದೊಡ್ಡ ಮಾರಾಟದ ಹೊರತಾಗಿಯೂ ಕಳೆದ ಒಂದು ವರ್ಷದಲ್ಲಿ ತನ್ನ ಷೇರುದಾರರಿಗೆ ಶೇ 75ರಷ್ಟು ಲಾಭ ಮಾಡಿಕೊಟ್ಟಿದೆ. ಆದರೆ ಕಳೆದ 5 ವರ್ಷಗಳಲ್ಲಿ ಈ ಮಲ್ಟಿಬ್ಯಾಗರ್ ಸ್ಟಾಕ್ ರೂ. 103.65ರ ಹಂತದಿಂದ ರೂ. 2058ಕ್ಕೆ ಏರಿದ್ದು, ಈ ಅವಧಿಯಲ್ಲಿ ಶೇ 1900ರಷ್ಟು ಮೇಲೇರಿದೆ.
ಕಳೆದ 10 ವರ್ಷಗಳಲ್ಲಿ ಈ ಸ್ಟಾಕ್ನ ಗ್ರಾಫ್ ಗಮನಿಸುವುದಾದರೆ ರೂ. 15.21ರ ಮಟ್ಟದಿಂದ (ಎನ್‌ಎಸ್‌ಇಯಲ್ಲಿ 17 ಫೆಬ್ರವರಿ 2012ರ ಬೆಲೆ) ರೂ. 2058 ಮಟ್ಟಕ್ಕೆ (ಎನ್‌ಎಸ್‌ಇಯಲ್ಲಿ 14 ಫೆಬ್ರವರಿ 2022ರ ಬೆಲೆ), ಅಂದರೆ ಈ ಅವಧಿಯಲ್ಲಿ ಸುಮಾರು 135 ಪಟ್ಟು ಹೆಚ್ಚಾಗಿದೆ.
ಹೂಡಿಕೆ ಮೇಲೆ ಪರಿಣಾಮ ದೀಪಕ್ ನೈಟ್ರೈಟ್ ಷೇರಿನ ಬೆಲೆ ಇತಿಹಾಸವನ್ನು ನೋಡುವುದಾದರೆ ಹೂಡಿಕೆದಾರರು ಒಂದು ತಿಂಗಳ ಹಿಂದೆ ಈ ರಾಸಾಯನಿಕ ಸ್ಟಾಕ್‌ನಲ್ಲಿ ರೂ. 1 ಲಕ್ಷವನ್ನು ಹೂಡಿಕೆ ಮಾಡಿದ್ದರೆ ಆ ರೂ. 1 ಲಕ್ಷವು ರೂ. 78,000 ಆಗಿರುತ್ತಿತ್ತು. ಕಳೆದ 6 ತಿಂಗಳಲ್ಲಿ ರೂ. 96,000 ಆಗಿರುತ್ತಿತ್ತು. ಹೂಡಿಕೆದಾರರು ವರ್ಷದ ಹಿಂದೆ ಈ ಷೇರುಗಳಲ್ಲಿ ರೂ. 1 ಲಕ್ಷ ಹೂಡಿಕೆ ಮಾಡಿದ್ದರೆ ರೂ. 1.75 ಲಕ್ಷ ಆಗುತ್ತಿತ್ತು. ಹೂಡಿಕೆದಾರರು 5 ವರ್ಷಗಳ ಹಿಂದೆ ಈ ಮಲ್ಟಿಬ್ಯಾಗರ್ ರಾಸಾಯನಿಕ ಸ್ಟಾಕ್‌ನಲ್ಲಿ ರೂ. 1 ಲಕ್ಷ ಹೂಡಿಕೆ ಮಾಡಿದ್ದರೆ ಮತ್ತು ಇಂದಿನವರೆಗೆ ಈ ಹೂಡಿಕೆ ಹಾಗೇ ಉಳಿದುಕೊಂಡಿದ್ದರೆ 20 ಲಕ್ಷ ರೂಪಾಯಿ ಆಗಿರುತ್ತಿತ್ತು. ಅದೇ ರೀತಿ, ಹೂಡಿಕೆದಾರರು 10 ವರ್ಷಗಳ ಹಿಂದೆ ಈ ಸ್ಟಾಕ್‌ನಲ್ಲಿ ರೂ. 1 ಲಕ್ಷ ಹೂಡಿಕೆ ಮಾಡಿ, ರೂ. 15.21ರ ಮಟ್ಟದಲ್ಲಿ ಒಂದರಂತೆ ಖರೀದಿಸಿದ್ದರೆ ಮತ್ತು ಈ ಅವಧಿಯಲ್ಲಿ ಸ್ಕ್ರಿಪ್‌ನಲ್ಲಿ ಹಾಗೇ ಹೂಡಿಕೆ ಮಾಡಿದ್ದರೆ ಆ ರೂ. 1 ಲಕ್ಷ ಇಂದು ರೂ. 1.35 ಕೋಟಿಯಾಗಿ ಬದಲಾಗುತ್ತಿತ್ತು.
ದೀಪಕ್ ನೈಟ್ರೈಟ್ ಷೇರುಗಳ ಕುರಿತು ಇನ್ನಷ್ಟು 2021ರ ಅಕ್ಟೋಬರ್ನಲ್ಲಿ ಪ್ರತಿ ಷೇರಿಗೆ ರೂ. 3020ರ ಸಾರ್ವಕಾಲಿಕ ಗರಿಷ್ಠ ಮಟ್ಟಕ್ಕೆ ತಲುಪಿದ ನಂತರ ಈ ಸ್ಟಾಕ್ ಮಾರಾಟದ ಒತ್ತಡದಲ್ಲಿದೆ. ವಿಶೇಷವಾಗಿ ರಾಸಾಯನಿಕ ವಿಭಾಗದಲ್ಲಿ ದುರ್ಬಲ ತ್ರೈಮಾಸಿಕ ಫಲಿತಾಂಶಗಳ ನಂತರ ಇಳಿಕೆ ಕಂಡಿದೆ. ದೀಪಕ್ ನೈಟ್ರೈಟ್ ಷೇರುಗಳ 52 ವಾರದ ಕನಿಷ್ಠ ಬೆಲೆ ಎನ್ಎಸ್ಇನಲ್ಲಿ ರೂ. 1131 ಆಗಿದೆ. ಇದರ ಪ್ರಸ್ತುತ ಮಾರುಕಟ್ಟೆ ಬಂಡವಾಳ ರೂ. 28,140 ಕೋಟಿ. ಆದರೆ ಇದು P/E ಅನುಪಾತ 25.76 ಆಗಿದೆ. ಇದರ ಲಾಭಾಂಶ ಇಳುವರಿ ಶೇಕಡಾ 0.22 ಆಗಿದೆ.
ಇದನ್ನೂ ಓದಿ: Multibagger penny stocks: ಈ ಮಲ್ಟಿಬ್ಯಾಗರ್ ಪೆನ್ನಿ ಸ್ಟಾಕ್‌ನಲ್ಲಿ ಹೂಡಿದ 1 ಲಕ್ಷ ರೂಪಾಯಿ 10 ವರ್ಷಗಳಲ್ಲಿ ರೂ. 4 ಕೋಟಿಗೆ