ಗ್ರಾಹಕ ಬೆಲೆ ಸೂಚ್ಯಂಕ (CPI)ದಿಂದ ಅಳೆಯುವ ಭಾರತದ ಪ್ರಮುಖ ರೀಟೇಲ್ ಹಣದುಬ್ಬರ ದರವು 2022ರ ಜೂನ್‌ನಲ್ಲಿ ಶೇ 7.01ರಷ್ಟಾಗಿದೆ. ಇದು ಕಳೆದ ತಿಂಗಳು, ಅಂದರೆ ಮೇ ತಿಂಗಳಿನಲ್ಲಿ ಶೇ 7.04ರಷ್ಟು ಇತ್ತು ಎಂದು ಸಾಂಖ್ಯಿಕ ಮತ್ತು ಕಾರ್ಯಕ್ರಮ ಅನುಷ್ಠಾನ ಸಚಿವಾಲಯವು ಜುಲೈ 12ರಂದು ಬಿಡುಗಡೆ ಮಾಡಿದ ಅಂಕಿ-ಅಂಶಗಳು ತೋರಿಸಿವೆ. ಇತ್ತೀಚಿನ ಹಣದುಬ್ಬರ (Inflation) ಮುದ್ರಣವು ಒಮ್ಮತದ ಅಂದಾಜಿನಲ್ಲಿದೆ. ಮನಿಕಂಟ್ರೋಲ್ ಸಮೀಕ್ಷೆಯ ಪ್ರಕಾರ, ಜೂನ್‌ನಲ್ಲಿ ಸಿಪಿಐ ಹಣದುಬ್ಬರವು ಶೇಕಡಾ 7ರಷ್ಟಿತ್ತು. ಜೂನ್ ತಿಂಗಳಿನ ಹಣದುಬ್ಬರ ದರವು ಶೇ 7.01 ಆಗುವ ಮೂಲಕ ಏಪ್ರಿಲ್ನಿಂದ ಜೂನ್‌ಗೆ ಸರಾಸರಿ ಹಣದುಬ್ಬರವನ್ನು ಶೇ 7.3ಕ್ಕೆ ಒಯ್ಯುತ್ತದೆ. ಅಂದರೆ ಭಾರತೀಯ ರಿಸರ್ವ್ ಬ್ಯಾಂಕ್ (RBI) ಅಂದಾಜು ಮಾಡಿದ್ದ ಶೇ 7.5ಕ್ಕಿಂತ 20 ಬೇಸಿಸ್ ಪಾಯಿಂಟ್‌ಗಳು ಕಡಿಮೆ ಆಗಿದೆ. ಆದರೆ ಈ ಹಂತದಲ್ಲಿ ಮುನ್ಸೂಚನೆಯನ್ನು ಕಡಿಮೆ ಮಾಡುವುದು ಕಡಿಮೆ ಪ್ರಾಮುಖ್ಯತೆ ಹೊಂದಿದ್ದು, ಕೇಂದ್ರ ಬ್ಯಾಂಕ್ ತನ್ನ ಜವಾಬ್ದಾರಿಯನ್ನು ನಿರ್ವಹಿಸುವುದಕ್ಕೆ ಸಾಧ್ಯವಿಲ್ಲದ ಹಾದಿಯಲ್ಲಿದೆ.
ಸತತ ಮೂರು ತ್ರೈಮಾಸಿಕಗಳಲ್ಲಿ ಸರಾಸರಿ ಸಿಪಿಐ ಹಣದುಬ್ಬರವು ಶೇ 2-6ರ ಸಹಿಷ್ಣುತಾ ಬ್ಯಾಂಡ್‌ನ ಹೊರಗಿರುವಾಗ ಆರ್‌ಬಿಐನ ಹಣಕಾಸು ನೀತಿ ಸಮಿತಿಯು ವಿಫಲವಾಗಿದೆ ಎಂದು ಪರಿಗಣಿಸಲಾಗುತ್ತದೆ. ಜನವರಿ-ಮಾರ್ಚ್‌ನಲ್ಲಿ ಹಣದುಬ್ಬರವು ಈಗಾಗಲೇ ಶೇಕಡಾ 6.3ರ ಸರಾಸರಿಯನ್ನು ಹೊಂದಿದ್ದು, ಆರ್‌ಬಿಐ ಈಗ ವೈಫಲ್ಯದಿಂದ ಕೇವಲ ಒಂದು ತ್ರೈಮಾಸಿಕ ದೂರದಲ್ಲಿದೆ. ಆರ್‌ಬಿಐನ ಇತ್ತೀಚಿನ ಮುನ್ಸೂಚನೆಯು ಜುಲೈ-ಸೆಪ್ಟೆಂಬರ್‌ಗೆ ಸರಾಸರಿ ಸಿಪಿಐ ಹಣದುಬ್ಬರವನ್ನು ಶೇಕಡಾ 7.4ಕ್ಕೆ ತಲುಪಿಸುತ್ತದೆ.
ಆಹಾರದ ಬೆಲೆಗಳು ಒಟ್ಟಾರೆಯಾಗಿ ಜೂನ್‌ನಲ್ಲಿ ಏರಿಕೆ ಕಂಡಿತು. ಗ್ರಾಹಕ ಆಹಾರದ ಬೆಲೆ ಸೂಚ್ಯಂಕವು ತಿಂಗಳಿನಿಂದ ತಿಂಗಳಿಗೆ ಶೇ 1.0ರಷ್ಟು ಏರಿಕೆಯಾಗಿದೆ. ಆದರೆ ಆಹಾರದ ಬುಟ್ಟಿಯೊಳಗೆ ಚಲನೆಯು ವೈವಿಧ್ಯಮಯವಾಗಿತ್ತು: ಧಾನ್ಯಗಳು, ತರಕಾರಿಗಳು, ಮಾಂಸ ಮತ್ತು ಮೀನು, ಹಾಲು ಮತ್ತು ಮೊಟ್ಟೆಗಳು ಬೆಲೆಗಳಲ್ಲಿ ಅನುಕ್ರಮವಾದ ಏರಿಕೆಗೆ ಸಾಕ್ಷಿಯಾಗಿದೆ. ಇನ್ನು ಈ ಮಧ್ಯೆ, ಮೇ ತಿಂಗಳಿನಿಂದ ಖಾದ್ಯ ತೈಲಗಳು, ಬೇಳೆಕಾಳುಗಳು ಮತ್ತು ಹಣ್ಣುಗಳ ಬೆಲೆ ಕಡಿಮೆಯಾಗಿದೆ.
ಜೂನ್ 2022ರ ಸೂಚ್ಯಂಕದಲ್ಲಿ ಹಣದುಬ್ಬರ ಹೀಗಿದೆ:
ಸಿಪಿಐ ಶೇ 7.01
ಆಹಾರ ಸೂಚ್ಯಂಕ ಶೇ 7.75
ಧಾನ್ಯಗಳು ಶೇ 5.66
ಮಾಂಸ, ಮೀನು ಶೇ 8.61
ತೈಲಗಳು, ಫ್ಯಾಟ್ಸ್ ಶೇ 9.36
ತರಕಾರಿಗಳು ಶೇ 17.37
ಬೇಳೆಕಾಳುಗಳು ಶೇ -1.02
ಬಟ್ಟೆ, ಪಾದರಕ್ಷೆಗಳು ಶೇ 9.52
ವಸತಿ ಶೇ 3.93
ಇಂಧನ, ವಿದ್ಯುತ್ ಶೇ 10.39
ಇತರೆ ಶೇ 6.28
ಕೈಗಾರಿಕಾ ಉತ್ಪಾದನೆಯ ಸೂಚ್ಯಂಕ (ಐಐಪಿ) ಬೆಳವಣಿಗೆಯು ಏಪ್ರಿಲ್‌ನಲ್ಲಿ ಶೇ 7.1ರಿಂದ ಮೇ ತಿಂಗಳಲ್ಲಿ 19.6ಕ್ಕೆ ಏರಿದೆ ಎಂದು ಅಂಕಿ-ಅಂಶಗಳು ಮಂಗಳವಾರ ತೋರಿಸಿವೆ. ಈ ವರ್ಷದ ಮೇ ತಿಂಗಳಲ್ಲಿ ಉತ್ಪಾದನಾ ವಲಯದ ಉತ್ಪಾದನೆಯು ಶೇ 20.6ರಷ್ಟು ಬೆಳವಣಿಗೆಯಾಗಿದೆ. ಮೇ 2022ರಲ್ಲಿ ಗಣಿಗಾರಿಕೆ ಉತ್ಪಾದನೆಯು ಶೇ 10.9 ಏರಿದೆ ಮತ್ತು ವಿದ್ಯುತ್ ಉತ್ಪಾದನೆಯು ಶೇ 23.5ರಷ್ಟು ಹೆಚ್ಚಾಗಿದೆ. ಕಳೆದ ವರ್ಷ ಮೇ ತಿಂಗಳಲ್ಲಿ ಐಐಪಿ ಶೇ 27.6ರಷ್ಟು ಬೆಳೆದಿತ್ತು, ಮುಖ್ಯವಾಗಿ ಕಡಿಮೆ-ಮೂಲದ ಪರಿಣಾಮದಿಂದಾಗಿ ಇದಾಗಿತ್ತು.
Published On - 6:48 pm, Tue, 12 July 22