ಕಚ್ಚಾ ತೈಲ ಬೆಲೆ ಏರಿಕೆ ಮುಂದುವರಿಕೆ: ಭಾರತದ ಯಾವ ನಗರದಲ್ಲಿ ಎಷ್ಟಿದೆ ಪೆಟ್ರೋಲ್, ಡೀಸೆಲ್ ದರ? ಇಲ್ಲಿದೆ ವಿವರ
Petrol Diesel Price on February 17th: ಕಚ್ಚಾ ತೈಲ ಬೆಲೆಯಲ್ಲಿ ಏರಿಕೆಯಾಗಿದೆ. ಕೊಲ್ಲಿ ರಾಷ್ಟ್ರಗಳ ಕಚ್ಚಾ ತೈಲ ಪ್ರತಿ ಬ್ಯಾರೆಲ್‌ಗೆ 83 ಡಾಲರ್ ದಾಟಿದೆ. ಫೆಬ್ರವರಿ ತಿಂಗಳ ಬಗ್ಗೆ ಹೇಳುವುದಾದರೆ, ಬ್ರೆಂಟ್ ಕಚ್ಚಾ ತೈಲದ ಬೆಲೆಯಲ್ಲಿ ಶೇಕಡಾ 6 ಕ್ಕಿಂತ ಹೆಚ್ಚು ಹೆಚ್ಚಳವಾಗಿದೆ. ಅಮೆರಿಕದ ಕಚ್ಚಾ ತೈಲದ ಬೆಲೆ ಶೇಕಡಾ 7 ಕ್ಕಿಂತ ಹೆಚ್ಚು ಏರಿಕೆ ಕಂಡಿದೆ.
ಫೆಬ್ರುವರಿ ತಿಂಗಳ ಅರ್ಧಕ್ಕಿಂತಲೂ ಹೆಚ್ಚು ದಿನಗಳು ಕಳೆದಿವೆ. ಫೆಬ್ರವರಿ 1 ರಿಂದ ಕಚ್ಚಾ ತೈಲ ಬೆಲೆಯಲ್ಲಿ (Crude Oil Price) ಗಣನೀಯ ಏರಿಕೆಯಾಗಿದೆ. ಗಲ್ಫ್ ದೇಶಗಳ ಕಚ್ಚಾ ತೈಲದಲ್ಲಿ ಶೇ 6 ರಷ್ಟು ಹೆಚ್ಚಳ ಕಂಡುಬಂದಿದೆ. ಇದೇ ವೇಳೆ ಅಮೆರಿಕದ ಕಚ್ಚಾ ತೈಲದ ಬೆಲೆಯಲ್ಲಿ ಶೇ 7ರಷ್ಟು ಏರಿಕೆ ಕಂಡುಬಂದಿದೆ. ವಾಸ್ತವವಾಗಿ, ಮಧ್ಯಪ್ರಾಚ್ಯದ ಉದ್ವಿಗ್ನತೆ ಇನ್ನೂ ಮುಗಿದಿಲ್ಲ. ಇದರಿಂದಾಗಿ ಕಚ್ಚಾ ತೈಲದ ಬೆಲೆ ನಿರಂತರವಾಗಿ ಏರಿಕೆಯಾಗುತ್ತಿದೆ. ತಜ್ಞರ ಪ್ರಕಾರ, ಮುಂಬರುವ ದಿನಗಳಲ್ಲಿ ಕಚ್ಚಾ ತೈಲ ಬೆಲೆ ಪ್ರತಿ ಬ್ಯಾರೆಲ್‌ಗೆ 85 ಡಾಲರ್ ದಾಟುವ ಸಾಧ್ಯತೆಗಳಿವೆ. ಮತ್ತೊಂದೆಡೆ, ಕಚ್ಚಾ ತೈಲ ಬೆಲೆ ಏರಿಕೆ ಹೊರತಾಗಿಯೂ ಭಾರತದಲ್ಲಿ ಪೆಟ್ರೋಲ್ (Petrol Price) ಮತ್ತು ಡೀಸೆಲ್ ದರ (Diesel Price) ಅಗ್ಗವಾಗಿರುವುದು ಕುತೂಹಲಕ್ಕೆ ಕಾರಣವಾಗಿದೆ.
ಸುಮಾರು ಎರಡು ವರ್ಷಗಳಿಂದ ದೇಶದಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಗಳು ತಟಸ್ಥವಾಗಿವೆ. ಲೋಕಸಭೆ ಚುನಾವಣೆಗೂ ಮುನ್ನ ತೈಲ ಮಾರುಕಟ್ಟೆ ಕಂಪನಿಗಳು ಪೆಟ್ರೋಲ್ ಮತ್ತು ಡೀಸೆಲ್ ಬೆಲೆಯನ್ನು ಕಡಿತಗೊಳಿಸುತ್ತವೆ ಎಂದು ನಿರೀಕ್ಷಿಸಲಾಗಿತ್ತು. ಅದಕ್ಕೂ ಕಾರಣವಿತ್ತು. ಆಗ ಕಂಪನಿಗಳು ಪ್ರತಿ ಲೀಟರ್ ಪೆಟ್ರೋಲ್ ಮೇಲೆ 11 ರೂಪಾಯಿ ಮತ್ತು ಡೀಸೆಲ್ ಮೇಲೆ 6 ರೂಪಾಯಿ ಲಾಭ ಗಳಿಸುತ್ತಿದ್ದವು. ಈಗ ಬಂದಿರುವ ಸುದ್ದಿ ಏನೆಂದರೆ ಪೆಟ್ರೋಲ್ ಮೇಲಿನ ಕಂಪನಿಗಳ ಲಾಭ ಕಡಿಮೆಯಾಗಿದೆ ಮತ್ತು ಡೀಸೆಲ್ ಮೇಲೆ ಲೀಟರ್ ಗೆ 3 ರೂಪಾಯಿ ನಷ್ಟವಾಗಿದೆ.
ಇದನ್ನೂ ಓದಿ: ಫಾಸ್ಟ್ಯಾಗ್ ನೀಡುವ ಅಧಿಕೃತ ಬ್ಯಾಂಕುಗಳ ಪಟ್ಟಿಯಿಂದ ಪೇಟಿಎಂ ಹೊರಕ್ಕೆ; ಇಲ್ಲಿದೆ ಪಟ್ಟಿ
ವಿಶೇಷವೆಂದರೆ ಪ್ರಸಕ್ತ ಹಣಕಾಸು ವರ್ಷದಲ್ಲಿ ತೈಲ ಕಂಪನಿಗಳು 69 ಸಾವಿರ ಕೋಟಿ ಲಾಭ ಗಳಿಸಿವೆ. ಆದರೆ ಕಚ್ಚಾ ತೈಲ ಬೆಲೆಯಲ್ಲಿನ ಏರಿಳಿತದಿಂದ ಪೆಟ್ರೋಲ್ ಮತ್ತು ಡೀಸೆಲ್ ಅನ್ನು ಅಗ್ಗವಾಗಿಸಲು ಕಂಪನಿಗಳು ಹಿಂದೇಟು ಹಾಕುತ್ತಿವೆ. ಪ್ರಸ್ತುತ ದೇಶದ ಪ್ರಮುಖ ನಗರಗಳಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಎಷ್ಟಿದೆ ಎಂಬ ವಿವರ ಇಲ್ಲಿದೆ.
- ಬೆಂಗಳೂರು: ಪೆಟ್ರೋಲ್ ದರ ಲೀಟರ್‌ಗೆ 101.94 ರೂ, ಡೀಸೆಲ್ ದರ ಲೀಟರ್‌ಗೆ 87.89 ರೂ.
- ಹೊಸದಿಲ್ಲಿ: ಪೆಟ್ರೋಲ್ ದರ ಪ್ರತಿ ಲೀಟರ್‌ಗೆ 96.72 ರೂ, ಡೀಸೆಲ್ ದರ ಪ್ರತಿ ಲೀಟರ್‌ಗೆ 89.62 ರೂ.
- ಕೋಲ್ಕತ್ತಾ: ಪೆಟ್ರೋಲ್ ದರ ಪ್ರತಿ ಲೀಟರ್‌ಗೆ 106.03 ರೂ, ಡೀಸೆಲ್ ದರ ಪ್ರತಿ ಲೀಟರ್‌ಗೆ 92.76 ರೂ.
- ಮುಂಬೈ: ಪೆಟ್ರೋಲ್ ದರ ಲೀಟರ್‌ಗೆ 106.31 ರೂ, ಡೀಸೆಲ್ ದರ ಲೀಟರ್‌ಗೆ 94.27 ರೂ.
- ಚೆನ್ನೈ: ಪೆಟ್ರೋಲ್ ದರ ಪ್ರತಿ ಲೀಟರ್‌ಗೆ 102.63 ರೂ, ಡೀಸೆಲ್ ದರ: ಪ್ರತಿ ಲೀಟರ್‌ಗೆ 94.24 ರೂ.
- ಚಂಡೀಗಢ: ಪೆಟ್ರೋಲ್ ದರ ಲೀಟರ್‌ಗೆ 96.20 ರೂ, ಡೀಸೆಲ್ ದರ ಲೀಟರ್‌ಗೆ 84.26 ರೂ.
- ಗುರುಗ್ರಾಮ: ಪೆಟ್ರೋಲ್ ದರ ಲೀಟರ್‌ಗೆ 97.18 ರೂ, ಡೀಸೆಲ್ ದರ ಲೀಟರ್‌ಗೆ 90.05 ರೂ.
- ಲಕ್ನೋ: ಪೆಟ್ರೋಲ್ ದರ ಪ್ರತಿ ಲೀಟರ್‌ಗೆ 96.57 ರೂ, ಡೀಸೆಲ್ ದರ ಪ್ರತಿ ಲೀಟರ್‌ಗೆ 89.76 ರೂ.
- ನೋಯ್ಡಾ: ಪೆಟ್ರೋಲ್ ದರ ಪ್ರತಿ ಲೀಟರ್‌ಗೆ 96.79 ರೂ, ಡೀಸೆಲ್ ದರ ಪ್ರತಿ ಲೀಟರ್‌ಗೆ 89.96 ರೂ.
ವಾಣಿಜ್ಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ