AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Cryptocurrency: ಕೇವಲ 24 ಗಂಟೆಯಲ್ಲಿ 71 ಸಾವಿರ ಪರ್ಸೆಂಟ್​ನಷ್ಟು ಏರಿಕೆ ಕಂಡ ಈ ಕ್ರಿಪ್ಟೋಕರೆನ್ಸಿ ಬಗ್ಗೆ ನಿಮಗೆಷ್ಟು ಗೊತ್ತು?

ಕ್ರಿಪ್ಟೋಕರೆನ್ಸಿ ಕೊಕೊಸ್ವಾಪ್ ಕಳೆದ ಇಪ್ಪತ್ನಾಲ್ಕು ಗಂಟೆಯಲ್ಲಿ ಶೇ 71000ದಷ್ಟು ಲಾಭ ಗಳಿಸಿದೆ. ಭಾರತದ ರೂಪಾಯಿ ಲೆಕ್ಕದಲ್ಲಿ 0.75 ಪೈಸೆಯಿಂದ 537 ರೂಪಾಯಿಗೆ ಹೆಚ್ಚಳವಾಗಿದೆ.

Cryptocurrency: ಕೇವಲ 24 ಗಂಟೆಯಲ್ಲಿ 71 ಸಾವಿರ ಪರ್ಸೆಂಟ್​ನಷ್ಟು ಏರಿಕೆ ಕಂಡ ಈ ಕ್ರಿಪ್ಟೋಕರೆನ್ಸಿ ಬಗ್ಗೆ ನಿಮಗೆಷ್ಟು ಗೊತ್ತು?
ಸಾಂದರ್ಭಿಕ ಚಿತ್ರ
TV9 Web
| Edited By: |

Updated on: Nov 11, 2021 | 6:33 PM

Share

ಕೊಕೊಸ್ವಾಪ್ (Kokoswap) ಸ್ವಲ್ಪ ಮಟ್ಟಿಗೆ ಮಾತ್ರ ಪರಿಚಿತವಾಗಿರುವ ಕ್ರಿಪ್ಟೋಕರೆನ್ಸಿ. ನವೆಂಬರ್ 10ರಂದು ಕೇವಲ 24 ಗಂಟೆಗಳಲ್ಲಿ 0.01005 ಯುಎಸ್​ಡಿಯಿಂದ (ಭಾರತದ ರೂಪಾಯಿ ಲೆಕ್ಕದಲ್ಲಿ 0.75 ಪೈಸೆ) 7.22 ಯುಎಸ್​ಡಿಗೆ (ಭಾರತದ ರೂಪಾಯಿ ಲೆಕ್ಕದಲ್ಲಿ 537.34ಕ್ಕೆ) ಏರಿಕೆ ಆಗಿದೆ. ಈ ಮೂಲಕವಾಗಿ ಇದು ಶೇ 71,000ದಷ್ಟು ಬೃಹತ್ ಪ್ರಮಾಣದಲ್ಲಿ ಹೆಚ್ಚಳವಾಗಿದೆ ಎಂದು ಕಾಯಿನ್​ಮಾರ್ಕೆಟ್​ಕ್ಯಾಪ್​ ಡೇಟಾ ತೋರಿಸಿದೆ. 200 ಕೋಟಿ ಅಮೆರಿಕನ್ ಡಾಲರ್​ಗೂ ಹೆಚ್ಚು ಮಾರುಕಟ್ಟೆ ಬಂಡವಾಳ ಹೊಂದಿರುವ ಕೊಕೊಸ್ವಾಪ್ ಸದ್ಯಕ್ಕೆ 6.44 ಯುಎಸ್​ಡಿಯಲ್ಲಿ (17:32 IST) ವಹಿವಾಟು ನಡೆಸುತ್ತಿದೆ. ಈ ಕ್ರಿಪ್ಟೋ ಕಳೆದ ವಾರದಲ್ಲಿ ಭಾರಿ ಬೆಲೆ ಬದಲಾವಣೆಗಳೊಂದಿಗೆ ಬಹಳ ಏರಿಳಿತದೊಂದಿಗೆ ಕೂಡಿದೆ. ನವೆಂಬರ್ 8ರಂದು, ಕೊಕೊಸ್ವಾಪ್​ 6.00 ಡಾಲರ್​ನಿಂದ 0.01017 ಡಾಲರ್​ಗೆ ಕುಸಿಯಿತು. ಸುಮಾರು ಶೇ 60,000ದಷ್ಟು ಕುಸಿತ ಕಂಡಿತು.

ಅಂದಹಾಗೆ ಹೂಡಿಕೆದಾರರಲ್ಲಿ ಕ್ರಿಪ್ಟೋಕರೆನ್ಸಿ ವ್ಯಾಮೋಹವು ದಿನದಿಂದ ದಿನಕ್ಕೆ ಬೆಳೆಯುತ್ತಿದೆ. ಏಕೆಂದರೆ, ಇದರ ಬಗ್ಗೆ ಹೆಚ್ಚೆಚ್ಚು ಮಂದಿ ಅದರ ವಿಶ್ವಾಸಾರ್ಹತೆ ಮತ್ತು ಸುಸ್ಥಿರತೆ ಬಗ್ಗೆ ತಿಳಿದುಕೊಳ್ಳುತ್ತಿದ್ದಾರೆ. ಕಳೆದ ಎರಡು ವರ್ಷಗಳು ಕ್ರಿಪ್ಟೋಕರೆನ್ಸಿ ಪಾಲಿಗೆ ಪ್ಲಸ್ ಆಗಿದೆ. ಆದರೂ ವರ್ಷ ಕಳೆದಂತೆ ಕ್ರಿಪ್ಟೋ ವ್ಯವಹಾರದಲ್ಲಿ ಕೆಲವು ಹೊಸ ಪರಿಕಲ್ಪನೆಗಳು ಹೊರಹೊಮ್ಮಿವೆ ಮತ್ತು ಅವುಗಳ ಲಾಭದಾಯಕ ವೈಶಿಷ್ಟ್ಯಗಳೊಂದಿಗೆ ಆಕರ್ಷಕವಾಗಿವೆ. ಕೊಕೊಸ್ವಾಪ್ ವಿಶಿಷ್ಟ ವಿಕೇಂದ್ರೀಕೃತ ಪ್ಲಾಟ್​ಫಾರ್ಮ್ ಆಗಿದ್ದು, ಬಳಕೆದಾರರಿಗೆ ತಡೆರಹಿತ ಅನುಭವವನ್ನು ನೀಡಲು ಬ್ಲಾಕ್‌ಚೈನ್ ಗೇಮಿಂಗ್‌ನೊಂದಿಗೆ NFT ವಹಿವಾಟುಗಳನ್ನು ಸಂಯೋಜಿಸುತ್ತದೆ. ಇದು $KOKO ಟೋಕನ್‌ನಿಂದ ಚಾಲಿತವಾಗಿದೆ. NFTಗಳು, ಸ್ಟಾಕಿಂಗ್ ಪ್ಲಾಟ್‌ಫಾರ್ಮ್ ಮತ್ತು NFT ಗೇಮಿಂಗ್‌ನಂತಹ ಪ್ರಮುಖ ವೈಶಿಷ್ಟ್ಯಗಳೊಂದಿಗೆ ವ್ಯಾಪಾರ, ಹೂಡಿಕೆ, ಗಳಿಸುವ, ಆಡುವ ಮತ್ತು ಗೆಲ್ಲುವ ಸಾಮರ್ಥ್ಯವನ್ನು ಪ್ಲಾಟ್‌ಫಾರ್ಮ್ ನೀಡುತ್ತದೆ. ಇದು ನಾನ್ ಫಂಗಬಲ್ ಟೋಕನ್ (NFT) ಕ್ಷೇತ್ರದ ಪ್ರವರ್ತಕರಲ್ಲಿ ಒಂದಾಗಿದೆ ಮತ್ತು ಅದರ ಬಹು ಯೋಜನೆಗಳೊಂದಿಗೆ ಸ್ವತಃ ಹೆಸರನ್ನು ಗಳಿಸುತ್ತಿದೆ.

ಕೊಕೊಸ್ವಾಪ್ ವಿವಿಧ NFT ಈವೆಂಟ್‌ಗಳನ್ನು ಪ್ರಾಯೋಜಿಸಿದೆ. ಹಲವಾರು ಪ್ರಸಿದ್ಧ ಕಲಾವಿದರು ತಮ್ಮ NFT ಸಂಗ್ರಹಗಳನ್ನು ಆಹ್ವಾನಿತ-ಮಾತ್ರ (Invite Only) ಮಾರ್ಕೆಟ್​ ಪ್ಲೇಸ್​ನಲ್ಲಿ ಬಿಡುಗಡೆ ಮಾಡಲು ಸಹಾಯ ಮಾಡಿದೆ. NFT ಮಾರುಕಟ್ಟೆಯ ಹೊರತಾಗಿ, ಕೊಕೊಸ್ವಾಪ್​ನ NFT ಗೇಮಿಂಗ್ $ಕೊಕೊ ಟೋಕನ್‌ಗಳನ್ನು ಗಳಿಸುವ ಸಾಧನವಾಗಿದೆ. ಮತ್ತು ಈಥರ್ ಹಾಗೂ ಕೊಕೊನಂತಹ ಡಿಜಿಟಲ್ ಸ್ವತ್ತುಗಳನ್ನು ಸಂಗ್ರಹಿಸುವ ಮೂಲಕ ಪ್ಯಾಸಿವ್ ಆದಾಯ ಮೂಲಗಳನ್ನು ಉತ್ಪಾದಿಸುತ್ತದೆ.

ಕೊಕೊಸ್ವಾಪ್ ಇತ್ತೀಚೆಗೆ ಎಥೆರಮ್​ನಿಂದ ಬಿನಾನ್ಸ್ ಸ್ಮಾರ್ಟ್ ಚೈನ್‌ಗೆ ತನ್ನ ಸ್ಟಾಕಿಂಗ್ ಪ್ಲಾಟ್‌ಫಾರ್ಮ್ ಅನ್ನು ಸ್ಥಳಾಂತರಿಸುವ ಪ್ರಕ್ರಿಯೆಯನ್ನು ಪೂರ್ಣಗೊಳಿಸಿದೆ. ಎಥೆರಮ್ ಇತ್ತೀಚಿನ ವರ್ಷಗಳಲ್ಲಿ ಜನಪ್ರಿಯವಾಗಿದ್ದರೂ ಅದರ ದಟ್ಟಣೆಯ ಸಮಸ್ಯೆಗಳು ಮತ್ತು ಹೆಚ್ಚಿನ ಶುಲ್ಕಗಳು ನೆಟ್​ವರ್ಕ್​ನಿಂದ ಕ್ರಮೇಣ ಬದಲಾವಣೆಗೆ ಕಾರಣವಾಗಿವೆ. ಹಲವಾರು ಯೋಜನೆಗಳು ಎಥೆರಮ್ ಬ್ಲಾಕ್​ಚೈನ್​ಗೆ ಪರ್ಯಾಯಗಳನ್ನು ಹುಡುಕುತ್ತಿರುವುದರಿಂದ, ಕೊಕೊಸ್ಚಾಪ್ ತನ್ನ ಬಳಕೆದಾರರಿಗೆ ಉತ್ತಮವಾದ ಅನುಭವವನ್ನು ನೀಡಲು ಶ್ರಮಿಸುವುದಾಗಿ ಹೇಳಿದೆ.

ಇದನ್ನೂ ಓದಿ: Bitcoin: ಹೀಗೆ 6 ಲಕ್ಷ ರೂಪಾಯಿ ಹೂಡಿಕೆ 9 ವರ್ಷದಲ್ಲಿ 216 ಕೋಟಿ ರೂಪಾಯಿ ಆಗಿದ್ದು ಎಲ್ಲಾದರೂ ಉಂಟೇ?