AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಮರ್ಸಿಡಿಸ್ ಬೆಂಜ್​ನಿಂದ ಬೆಂಗಳೂರಿನಲ್ಲಿ ಅತ್ಯಾಧುನಿಕ ವರ್ಕ್​ಶಾಪ್; ಪ್ರೀಮಿಯರ್ ಎಕ್ಸ್​ಪ್ರೆಸ್ ಪ್ರೈಮ್ 2.0 ಪುನರಾರಂಭ

ಬೆಂಗಳೂರಿನ ಹೊಸೂರು ರಸ್ತೆಯಲ್ಲಿ ಮರ್ಸಿಡಿಸ್ ಬೆಂಜ್​ನಿಂದ ಅತ್ಯಾಧುನಿಕ ವರ್ಕ್​ಶಾಪ್​ ಆರಂಭ ಮಾಡಲಾಗಿದೆ. ಸರ್ವೀಸ್ ಮಾಡಿ, ಮೂರು ಗಂಟೆಯೊಳಗೆ ಎಕ್ಸ್​ಪ್ರೆಸ್ ಡೆಲಿವರಿ ನೀಡಲಾಗುತ್ತದೆ.

ಮರ್ಸಿಡಿಸ್ ಬೆಂಜ್​ನಿಂದ ಬೆಂಗಳೂರಿನಲ್ಲಿ ಅತ್ಯಾಧುನಿಕ ವರ್ಕ್​ಶಾಪ್; ಪ್ರೀಮಿಯರ್ ಎಕ್ಸ್​ಪ್ರೆಸ್ ಪ್ರೈಮ್ 2.0 ಪುನರಾರಂಭ
ಮರ್ಸಿಡಿಸ್ ಬೆಂಜ್ ವರ್ಕ್​ಶಾಪ್ ಉದ್ಘಾಟನೆ
TV9 Web
| Updated By: Srinivas Mata|

Updated on: Nov 11, 2021 | 9:15 PM

Share

ಮರ್ಸಿಡಿಸ್-ಬೆಂಜ್ ತನ್ನ ಜನಪ್ರಿಯ ಸರ್ವೀಸ್ ಉಪಕ್ರಮವಾಗಿರುವ ‘ಪ್ರೀಮಿಯರ್ ಎಕ್ಸ್​ಪ್ರೆಸ್ ಪ್ರೈಮ್ 2.0′ ಪುನರಾರಂಭಿಸಿದೆ. ಈಗ 3 ಗಂಟೆಗಳ ಒಳಗೆ ಮರ್ಸಿಡಿಸ್-ಬೆಂಜ್ ಸರ್ವೀಸ್ ಒದಗಿಸಲಾಗುವುದು. ಬೆಂಗಳೂರಿನ ಹೊಸೂರು ರಸ್ತೆಯಲ್ಲಿನ ಅಕ್ಷಯ್ ಮೋಟಾರ್ಸ್​ನಲ್ಲಿ ಈ ಸೌಲಭ್ಯ ಆರಂಭಿಸಲಾಗಿದೆ. ಈ ಹೊಸ ವರ್ಕ್​ಶಾಪ್, ರೀಟೇಲ್​ನಲ್ಲಿ ಮರ್ಸಿಡಿಸ್-ಬೆಂಜ್​ನ ಹೊಸ ಬ್ರ್ಯಾಂಡ್ ಪ್ರಸ್ತುತಿ ಆಗಿರುವ ‘ಎಂಎಆರ್ 2020’ ಆಧರಿಸಿದೆ. ‘ಎಂಎಆರ್ 2020’ರ ಪ್ರಮುಖ ಗಮನವು ವಿನ್ಯಾಸ, ವಾಸ್ತುಶಿಲ್ಪ, ಗ್ರಾಹಕ ಆಧಾರಿತ ಪ್ರಕ್ರಿಯೆಗಳು ಮತ್ತು ಡಿಜಿಟಲ್ ವರ್ಧನೆ ಒಳಗೊಂಡ ನಾಲ್ಕು ಸ್ತಂಭಗಳ ಮೇಲೆ ಕೇಂದ್ರೀಕೃತವಾಗಿದೆ. ವಾಹನ ಉದ್ಯಮದಲ್ಲಿಯೇ ಮೊದಲ ಬಾರಿಗೆ ಪರಿಚಯಿಸಿರುವ ‘ಸರ್ವೀಸ್ ಲಾಬಿ’ಯಲ್ಲಿ ಗ್ರಾಹಕರು ತಮ್ಮ ಕಾರ್​ನೊಂದಿಗೆ ವರ್ಕ್​ಶಾಪ್ ಆವರಣದ ಒಳಗೆ ನೇರವಾಗಿ ಆಗಮಿಸುತ್ತಾರೆ. ನಂತರದ ಯೋಜಿತ ಹಂತಗಳಿಗಾಗಿ ಸ್ಟಾರ್ ಸಹಾಯಕರು ಕಾರ್ ಅನ್ನು ತಮ್ಮ ಸುಪರ್ದಿಗೆ ತೆಗೆದುಕೊಳ್ಳುತ್ತಾರೆ.

ರೂ. 4.5 ಕೋಟಿ ಮೊತ್ತದ ಹೂಡಿಕೆಯಲ್ಲಿ 20,000 ಚದರ ಅಡಿ ಪ್ರದೇಶದಲ್ಲಿ ವಿಶಾಲವಾಗಿ ಇದು ಹರಡಿದೆ. ವೃತ್ತಿಪರ ತರಬೇತಿ ಪಡೆದ 50 ಸಿಬ್ಬಂದಿ, 11 ಬೇಗಳು (ಇದರಲ್ಲಿ 6 ಪ್ರೊಡಕ್ಟಿವ್) ಪ್ರತಿ ವರ್ಷಕ್ಕೆ 4,500ಕ್ಕೂ ಹೆಚ್ಚು ಕಾರುಗಳನ್ನು ಸರ್ವೀಸ್ ಮಾಡುವ ಸೌಲಭ್ಯ ಇದೆ. ಇಕ್ಯುಸಿ ಐಷಾರಾಮಿ ಇವಿ ಸೇರಿದಂತೆ ಮರ್ಸಿಡಿಸ್-ಬೆಂಜ್​ನ ಪ್ರಯಾಣಿಕ ಕಾರುಗಳ ಎಲ್ಲ ಮಾದರಿಗಳಿಗೆ ಈ ವರ್ಕ್​ಶಾಪ್ ಸೇವೆ ಒದಗಿಸಲಿದೆ. ಪ್ರೀಮಿಯಂ ಎಕ್ಸ್​ಪ್ರೆಸ್ ಪ್ರೈಮ್ 2.0: ಅಕ್ಷಯ ಮೋಟಾರ್ಸ್​ನ ಈ ವರ್ಕ್​ ಶಾಪ್​ನಲ್ಲಿ ಮರ್ಸಿಡಿಸ್-ಬೆಂಜ್ ಪಿಇಪಿ ಸೇವೆಯನ್ನು ಮರುಪ್ರಾರಂಭಿಸುತ್ತಿದೆ. ಇದರೊಂದಿಗೆ, ಗ್ರಾಹಕರು ತಮ್ಮ ಕಾರುಗಳಿಗೆ 3 ಗಂಟೆಗಳಲ್ಲಿ ಸರ್ವಿಸ್ ಪಡೆಯಬಹುದು. ಇದು ಬೆಂಗಳೂರಿನಲ್ಲಿ ಮರ್ಸಿಡಿಸ್-ಬೆಂಜ್​ನ 4ನೇ ವರ್ಕ್​ಶಾಪ್ ಆಗಿದೆ. ಮರ್ಸಿಡಿಸ್-ಬೆಂಜ್ ಈಗ ಭಾರತದಾದ್ಯಂತ 47 ನಗರಗಳಲ್ಲಿ 100 ಗ್ರಾಹಕ-ಟಚ್ ಪಾಯಿಂಟ್​ಗಳನ್ನು ಹೊಂದಿದೆ.

ಮರ್ಸಿಡಿಸ್-ಬೆಂಜ್ ಇಂಡಿಯಾದ ವ್ಯವಸ್ಥಾಪಕ ನಿರ್ದೇಶಕ ಮತ್ತು ಸಿಇಒ ಮಾರ್ಟಿನ್ ಷ್ವೆಂಕ್, ಮರ್ಸಿಡಿಸ್-ಬೆಂಜ್ ಇಂಡಿಯಾದ ಗ್ರಾಹಕ ಸೇವೆಗಳು ಮತ್ತು ಕಾರ್ಪೊರೇಟ್ ವ್ಯವಹಾರಗಳ ಉಪಾಧ್ಯಕ್ಷ ಶೇಖರ್ ಭಿಡೆ, ಅಕ್ಷಯ ಮೋಟಾರ್ಸ್​ನ ವ್ಯವಸ್ಥಾಪಕ ನಿರ್ದೇಶಕ ಡಾ.ಎಂ.ಪಿ.ಶ್ಯಾಮ್ ಶೆಟ್ಟಿ ಅವರ ಉಪಸ್ಥಿತಿಯಲ್ಲಿ ಬೆಂಗಳೂರಿನಲ್ಲಿ ಅಕ್ಷಯ ಮೋಟರ್ಸ್ನ ಈ ಹೊಸ ಸರ್ವೀಸ್ ಕೇಂದ್ರವನ್ನು ಉದ್ಘಾಟಿಸಲಾಯಿತು. ಮಾರ್ಟಿನ್ ಷ್ವೆಂಕ್ ಅವರು ಮಾತನಾಡಿ, ಹಲವಾರು ಮಾನದಂಡಗಳ ಗ್ರಾಹಕ ಸೇವಾ ಉಪಕ್ರಮಗಳನ್ನು ಪರಿಚಯಿಸುವ ವಿಷಯದಲ್ಲಿ ಮರ್ಸಿಡಿಸ್-ಬೆಂಜ್ ಇಂಡಿಯಾಕ್ಕೆ 2021 ಒಂದು ಪ್ರಮುಖ ವರ್ಷವಾಗಿದೆ. ಹೊಸ ಪೀಳಿಗೆಯ ಕಾರುಗಳಿಗೆ ವಾಹನ ಉದ್ಯಮದಲ್ಲಿಯೇ ಅತ್ಯುತ್ತಮವಾಗಿರುವ 8 ವರ್ಷಗಳ ವಾರಂಟಿಯನ್ನು ಪರಿಚಯಿಸುವುದರಿಂದ ಹಿಡಿದು ಎಂಬಿ ವ್ಯಾಲ್ಯೂ ಸರ್ವೀಸ್ ಪರಿಚಯದವರೆಗೆ, ನಮ್ಮ ಗ್ರಾಹಕರಿಗೆ ಕಿರಿಕಿರಿ ಮುಕ್ತ ಮಾಲೀಕತ್ವದ ಅನುಭವವನ್ನು ಒದಗಿಸಲು ನಾವು ಪ್ರಯತ್ನಿಸುತ್ತಿದ್ದೇವೆ. ಈ ಹೊಸ ಸರ್ವೀಸ್ ಸೌಲಭ್ಯದ ಸೇರ್ಪಡೆಯು ಈ ಮಾರುಕಟ್ಟೆಯಲ್ಲಿನ ಎಲ್ಲ ಸರ್ವೀಸ್ ಅಗತ್ಯಗಳನ್ನು ಹೊಂದುವ ಮೂಲಕ ನಮ್ಮ ಗ್ರಾಹಕರಿಗೆ ಪೂರ್ಣ ಪ್ರಮಾಣದಲ್ಲಿ ನೆರವು ನೀಡಲಿದೆ ಎಂದು ಹೇಳಿದ್ದಾರೆ.

ಇದನ್ನೂ ಓದಿ: ಮರ್ಸಿಡಿಸ್-ಎಎಮ್‌ಜಿಯ ಮೊಟ್ಟಮೊದಲ ಪ್ಲಗ್-ಇನ್ ಹೈಬ್ರಿಡ್ ಕಾರು ಬಂದೇ ಬಿಟ್ಟಿತ್ತು!

ದೇಶಿ ಟಿ20 ಟೂರ್ನಿಯಲ್ಲಿ ಹ್ಯಾಟ್ರಿಕ್ ವಿಕೆಟ್ ಪಡೆದ ನಿತೀಶ್ ರೆಡ್ಡಿ
ದೇಶಿ ಟಿ20 ಟೂರ್ನಿಯಲ್ಲಿ ಹ್ಯಾಟ್ರಿಕ್ ವಿಕೆಟ್ ಪಡೆದ ನಿತೀಶ್ ರೆಡ್ಡಿ
ನನ್ನ ಹಿಂದೆ ಯಾರೂ ಬರೋದು ಬೇಡ: ಡಿಕೆ ಶಿವಕುಮಾರ್​​ ಹೀಗಂದಿದ್ದೇಕೆ?
ನನ್ನ ಹಿಂದೆ ಯಾರೂ ಬರೋದು ಬೇಡ: ಡಿಕೆ ಶಿವಕುಮಾರ್​​ ಹೀಗಂದಿದ್ದೇಕೆ?
ಆಂಧ್ರದಲ್ಲಿ ಬಸ್ ಅಪಘಾತ; ಪ್ರಧಾನಿಯಿಂದ 2 ಲಕ್ಷ ರೂ. ಪರಿಹಾರ ಘೋಷಣೆ
ಆಂಧ್ರದಲ್ಲಿ ಬಸ್ ಅಪಘಾತ; ಪ್ರಧಾನಿಯಿಂದ 2 ಲಕ್ಷ ರೂ. ಪರಿಹಾರ ಘೋಷಣೆ
ಮೈಸೂರಿನ ಅಭಿಮಾನಿಗಳಿಗೆ ‘ದಿ ಡೆವಿಲ್’ ಸಿನಿಮಾ ಇಷ್ಟ ಆಯ್ತಾ? ವಿಡಿಯೋ ನೋಡಿ..
ಮೈಸೂರಿನ ಅಭಿಮಾನಿಗಳಿಗೆ ‘ದಿ ಡೆವಿಲ್’ ಸಿನಿಮಾ ಇಷ್ಟ ಆಯ್ತಾ? ವಿಡಿಯೋ ನೋಡಿ..
ರೈತರಿಗೆ ಕನ್ಯಾ ಕೊಡುತ್ತಿಲ್ಲ ಎಂದು ಡಿಸಿ ಮುಂದೆ ಅಳಲು ತೋಡಿಕೊಂಡ ಯುವಕ
ರೈತರಿಗೆ ಕನ್ಯಾ ಕೊಡುತ್ತಿಲ್ಲ ಎಂದು ಡಿಸಿ ಮುಂದೆ ಅಳಲು ತೋಡಿಕೊಂಡ ಯುವಕ
ಇನ್ಸ್​​ಸ್ಟಾದಲ್ಲಿ ನೋಡಿ ಓಡೋಡಿ ಬಂದು ಪ್ರಿಯಕರನ ಮದ್ವೆ ತಡೆದ ಪ್ರೇಯಿಸಿ
ಇನ್ಸ್​​ಸ್ಟಾದಲ್ಲಿ ನೋಡಿ ಓಡೋಡಿ ಬಂದು ಪ್ರಿಯಕರನ ಮದ್ವೆ ತಡೆದ ಪ್ರೇಯಿಸಿ
ದರ್ಶನ್ ಪತ್ನಿ ವಿಜಯಲಕ್ಷ್ಮಿಗೆ ಧನ್ಯವಾದ ಹೇಳಿದ ‘ಡೆವಿಲ್’ ನಟಿ ರಚನಾ
ದರ್ಶನ್ ಪತ್ನಿ ವಿಜಯಲಕ್ಷ್ಮಿಗೆ ಧನ್ಯವಾದ ಹೇಳಿದ ‘ಡೆವಿಲ್’ ನಟಿ ರಚನಾ
ದುರಹಂಕಾರದ ಫೈಟ್: ಬಿಗ್ ಬಾಸ್ ಮನೆಯಲ್ಲಿ ರಜತ್, ಅಶ್ವಿನಿ ಗೌಡ, ಚೈತ್ರಾ ಜಗಳ
ದುರಹಂಕಾರದ ಫೈಟ್: ಬಿಗ್ ಬಾಸ್ ಮನೆಯಲ್ಲಿ ರಜತ್, ಅಶ್ವಿನಿ ಗೌಡ, ಚೈತ್ರಾ ಜಗಳ
ಭಾರತದಲ್ಲಿ ಇದೇ ಮೊದಲ ಬಾರಿಗೆ ಡಿಜಿಟಲ್ ಜನಗಣತಿ
ಭಾರತದಲ್ಲಿ ಇದೇ ಮೊದಲ ಬಾರಿಗೆ ಡಿಜಿಟಲ್ ಜನಗಣತಿ
ಬಿಜೆಪಿಗೆ ವಾಪಸ್ ಆಗಲು ಎರಡ್ಮೂರು ಪ್ರಮುಖ ಬೇಡಿಕೆ ಇಟ್ಟ ಯತ್ನಾಳ್
ಬಿಜೆಪಿಗೆ ವಾಪಸ್ ಆಗಲು ಎರಡ್ಮೂರು ಪ್ರಮುಖ ಬೇಡಿಕೆ ಇಟ್ಟ ಯತ್ನಾಳ್