
ನವದೆಹಲಿ, ಜನವರಿ 1: ಆಧಾರ್ ನಂಬರ್ ಜೊತೆ ಪ್ಯಾನ್ ಲಿಂಕ್ ಆಗಿರಬೇಕೆಂದು ಆದಾಯ ತೆರಿಗೆ ಇಲಾಖೆ (Income Tax) ಫರ್ಮಾನು ಹೊರಡಿಸಿ ವರ್ಷಗಳೇ ಆಯಿತು. ಹಲವು ಬಾರಿ ವಾಯಿದೆಗಳು ವಿಸ್ತರಣೆಯಾಗುತ್ತಾ ಬಂದು ಡಿಸೆಂಬರ್ 31ರ ಕೊನೆಯ ಗಡುವು ಕೂಡ ಮುಕ್ತಾಯವಾಗಿದೆ. ಈ ಡೆಡ್ಲೈನ್ ಮತ್ತೆ ವಿಸ್ತರಣೆ ಮಾಡುವ ಸಾಧ್ಯತೆ ಇಲ್ಲ. ಅಂಥ ಯಾವ ನೋಟಿಫಿಕೇಶನ್ ಸದ್ಯಕ್ಕೆ ಇಲಾಖೆಯಿಂದ ಬಂದಿಲ್ಲ. ಈಗ ಆಧಾರ್ಗೆ ಲಿಂಕ್ ಆಗದೇ ಇರುವ ಪ್ಯಾನ್ ಹೊಂದಿರುವವರು ಏನು ಮಾಡಬೇಕು? ಅವರಿಗೆ ಏನು ಸಮಸ್ಯೆಯಾಗಬಹುದು? ಇಲ್ಲಿದೆ ಡೀಟೇಲ್ಸ್.
ವ್ಯಕ್ತಿ ಮತ್ತು ಸಂಸ್ಥೆಗಳ ಹಣಕಾಸು ವಹಿವಾಟುಗಳನ್ನು ಟ್ರ್ಯಾಕ್ ಮಾಡಲೆಂದು ಐಟಿ ಇಲಾಖೆ ಪ್ಯಾನ್ ಅನ್ನು ನೀಡುತ್ತದೆ. ಒಬ್ಬರೇ ವ್ಯಕ್ತಿ ಒಂದಕ್ಕಿಂತ ಹೆಚ್ಚು ಪ್ಯಾನ್ಗಳನ್ನು ಬಳಸುವುದನ್ನು ತಪ್ಪಿಸಲು ಆಧಾರ್ ಜೊತೆ ಪ್ಯಾನ್ ಲಿಂಕ್ ಮಾಡುವ ಕ್ರಮ ಜಾರಿಗೆ ತಂದಿತು. ಈಗ ಆಧಾರ್ಗೆ ಲಿಂಕ್ ಆಗದ ಪ್ಯಾನ್ ಅನ್ನು ಇನಾಪರೇಟಿವ್ ಎಂದು ಪರಿಗಣಿಸಲಾಗುತ್ತದೆ. ಅಂದರೆ, ನಿಷ್ಕ್ರಿಯ ಪ್ಯಾನ್ ಆಗಿರುತ್ತದೆ. ಈ ಪ್ಯಾನ್ ಇದ್ದೂ ಇಲ್ಲದಂತೆ ಆಗುತ್ತದೆ.
ಇದನ್ನೂ ಓದಿ: ಗೆಜೆಟ್ ಮೂಲಕ ಹೆಸರು ಬದಲಾಯಿಸುವುದು ಹೇಗೆ?; ಇಲ್ಲಿದೆ 3 ಹಂತಗಳ ನಾಮ ಬದಲಾವಣೆ ಪ್ರಕ್ರಿಯೆ
ಆಧಾರ್ ಜೊತೆ ಪ್ಯಾನ್ ಅನ್ನು ಈಗಲೂ ಕೂಡ ಲಿಂಕ್ ಮಾಡಬಹುದು. ಲೇಟ್ ಲಿಂಕಿಂಗ್ ಫೀ ಪಾವತಿಸಿ, ಲಿಂಕ್ ಮಾಡಲು ಸಾಧ್ಯ. ಯಶಸ್ವಿಯಾಗಿ ಲಿಂಕ್ ಆದ ಬಳಿಕ ಪ್ಯಾನ್ ಮತ್ತೆ ಸಕ್ರಿಯಗೊಳ್ಳುತ್ತದೆ. ಆದರೆ, ಪ್ಯಾನ್ ಸಕ್ರಿಯ ಆಗುವವರೆಗೂ ಅದು ಇನಾಪರೇಟಿವ್ ಸ್ಥಿತಿಯಲ್ಲೇ ಮುಂದುವರಿಯುತ್ತದೆ ಎಂಬುದು ಗಮನಿಸಬೇಕಾದ ಸಂಗತಿ.
ಈಗ ನಿಮ್ಮ ಪ್ಯಾನ್ ನಂಬರ್ ಆಧಾರ್ ಜೊತೆ ಲಿಂಕ್ ಆಗಿದೆಯಾ ಇಲ್ಲವಾ ಎಂಬುದನ್ನು ತಿಳಿಯಬಹುದು.
ಹಾಗೆಯೇ, ಎಸ್ಸೆಮ್ಮೆಸ್ ಮೂಲಕ ಇನ್ನೂ ಸುಲಭವಾಗಿ ಸ್ಟೇಟಸ್ ತಿಳಿಯಬಹುದು. ನಿಮ್ಮ ಮೊಬೈಲ್ ನಂಬರ್ನಿಂದ UIDPAN <aadhaar number> <PAN Number> ಅನ್ನು ಬರೆದು ಈ ಮೆಸೇಜ್ ಅನ್ನು 567678 ಅಥವಾ 56161 ನಂಬರ್ಗೆ ಕಳುಹಿಸಿ.
ಮೆಸೇಜ್ನ ಉದಾಹರಣೆ: ‘UIDPAN 123456789012 ABCED1875E’
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ