ಈ ವಾರ ಮೂರು ಐಪಿಒಗಳಿವೆ; ಡೀ, ಸ್ಟಾನ್ಲೀ, ಆಕ್ಮೆಗಳಿಂದ ಷೇರು ಆಫರ್
Three IPOs this week: ಸಿನಿಮಾಗಳು ಬಿಡುಗಡೆ ಆಗುವ ರೀತಿಯಲ್ಲಿ ಷೇರು ಮಾರುಕಟ್ಟೆಯಲ್ಲಿ ಪ್ರತೀ ವಾರ ಐಪಿಒಗಳು ಬಿಡುಗಡೆ ಆಗುತ್ತವೆ. ಬಳಿಕ ಷೇರುಪೇಟೆಯ ಗಲ್ಲಾಪೆಟ್ಟಿಗೆ ಸೇರುತ್ತವೆ. ಈ ವಾರ ಡೀ ಡವಲಪ್ಮೆಂಟ್ ಎಂಜಿನಿಯರ್ಸ್, ಸ್ಟಾನ್ಲೀ ಲೈಫ್ಸ್ಟೈಲ್ಸ್ ಮತ್ತು ಆಕ್ಮೆ ಫಿನ್ಟ್ರೇಡ್ ಸಂಸ್ಥೆಯ ಐಪಿಒಗಳು ಬಿಡುಗಡೆ ಆಗುತ್ತಿವೆ. ಜೂನ್ 19ಕ್ಕೆ ಎರಡು, ಜೂನ್ 21ಕ್ಕೆ ಒಂದು ಐಪಿಒಗಳ ರಿಲೀಸ್ ಇದೆ.
ಮುಂಬೈ, ಜೂನ್ 17: ಈ ವಾರ ಮೂರು ಮುಖ್ಯ ಐಪಿಒಗಳು ಬಿಡುಗಡೆ ಆಗಲಿವೆ. ಮತ್ತೊಂದು ಐಪಿಒ ಯೋಜನೆ (IPO) ಈ ವಾರ ಮುಗಿಯಲಿದೆ. ಒಟ್ಟು ನಾಲ್ಕು ಐಪಿಒಗಳ ಆಯ್ಕೆ ಹೂಡಿಕೆದಾರರಿಗೆ ಈ ವಾರ ಸಿಕ್ಕಿದೆ. ಡೀ ಡೆವಲಪ್ಮೆಂಟ್ ಎಂಜಿನಿಯರ್ಸ್, ಸ್ಟಾನ್ಲೀ ಲೈಫ್ಸ್ಟೈಲ್ಸ್ ಮತ್ತು ಆಕ್ಮೆ ಫಿನ್ಟ್ರೇಡ್ ಇಂಡಿಯಾದ (Akme FinTrade India) ಐಪಿಒಗಳು ಈ ವಾರ ಬಿಡುಗಡೆ ಆಗಲಿವೆ. ಕಳೆದ ವಾರದ ಕೊನೆಯಲ್ಲಿ ಬಿಡುಗಡೆಯಾಗಿದ್ದ ಜಿಪಿಇಎಸ್ ಸೋಲಾರ್ ಐಪಿಒ ಜೂನ್ 19ರವರೆಗೂ ಇದೆ.
ಈ ವಾರ ಬಿಡುಗಡೆ ಆಗಲಿರುವ ಮೂರು ಐಪಿಒಗಳ ಪೈಕಿ ಆಕ್ಮೆ ಫಿನ್ಟ್ರೇಡ್ ಮತ್ತು ಡೀ ಡೆಲವಪ್ಮೆಂಟ್ ಎಂಜಿನಿಯರ್ಸ್ನ ಐಪಿಒಗಳು ಜೂನ್ 19ಕ್ಕೆ ಆರಂಭವಾಗುತ್ತವೆ. ಸ್ಟಾನ್ಲೀ ಲೈಫ್ಸ್ಟೈಲ್ಸ್ ಐಪಿಒ ಆಫರ್ ಜೂನ್ 21ರಿಂದ ಆರಂಭವಾಗುತ್ತದೆ.
ಡೀ ಡೆಲಪ್ಮೆಂಟ್ ಎಂಜಿನಿಯರ್ಸ್ ಐಪಿಒ
- ದಿನಾಂಕ: ಜೂನ್ 19ರಿಂದ ಜೂನ್ 21ರವರೆಗೆ
- ಷೇರುಬೆಲೆ: 193ರಿಂದ 203 ರೂ
- ಮಾರಾಟಕ್ಕಿರುವ ಒಟ್ಟು ಷೇರು: 2.06 ಕೋಟಿ
- ಹೊಸ ಷೇರುಗಳು: 1.6 ಕೋಟಿ
- ಓಎಫ್ಎಸ್ ಮೂಲಕ ಬಿಕರಿಯಾಗುವ ಷೇರು: 46 ಲಕ್ಷ
- ಒಟ್ಟು ಬಂಡವಾಳ ನಿರೀಕ್ಷೆ: 418 ಕೋಟಿ ರೂ
- ಷೇರು ಗುಚ್ಛ: 73
- ಕನಿಷ್ಠ ಹೂಡಿಕೆ: 14,819 ರೂ
ಇದನ್ನೂ ಓದಿ: ಚೀನಾ ಬೆಳವಣಿಗೆಗೆ ಸಹಾಯವಾಗಿದ್ದ ಮೂರಂಶಗಳು ಭಾರತಕ್ಕೆ ತೊಡಕಾಗಿವೆ: ಸಿಇಎ ಅನಂತನಾಗೇಶ್ವರನ್
ಆಕ್ಮೆ ಫೀನ್ಟ್ರೇಡ್ ಇಂಡಿಯಾ ಐಪಿಒ
- ಐಪಿಒ ದಿನಾಂಕ: ಜೂನ್ 19ರಿಂದ 21ರವರೆಗೆ
- ಷೇರು ಬೆಲೆ: 114ರಿಂದ 120 ರೂ
- ಮಾರಾಟಕ್ಕಿರುವ ಷೇರು: 1.1 ಕೋಟಿ
- ಕನಿಷ್ಠ ಹೂಡಿಕೆ: 15,000 ರೂ
- ಬಂಡವಾಳ ನಿರೀಕ್ಷೆ: 132 ಕೋಟಿ ರೂ
ಸ್ಟಾನ್ಲೀ ಲೈಫ್ಸ್ಟೈಲ್ಸ್ ಐಪಿಒ
- ದಿನಾಂಕ: ಜೂನ್ 21ರಿಂದ 25ರವರೆಗೆ
- ಷೇರು ಬೆಲೆ: 351ರಿಂದ 369 ರೂ
- ಹೊಸ ಷೇರು: 54.2 ಲಕ್ಷ
- ಒಎಫ್ಎಸ್ ಮೂಲಕ ಬಿಕರಿಯಾಗುವ ಷೇರು: 91.33 ಲಕ್ಷ
- ಒಟ್ಟು ಬಂಡವಾಳ ನಿರೀಕ್ಷೆ: 537 ಕೋಟಿ ರೂ
ಇದನ್ನೂ ಓದಿ: ಭಾರತಕ್ಕೆ ಹೋಲಿಸಿದರೆ ಚೀನಾ ಷೇರುಪೇಟೆ ಹೇಗೆ? ಚೀನೀ ದೌರ್ಬಲ್ಯ ಬಿಚ್ಚಿಟ್ಟ ಮಾರ್ಗನ್ ಸ್ಟಾನ್ಲೀ ಅಧಿಕಾರಿ
ಐಪಿಒಗಳು ಯಾಕೆ ಮುಖ್ಯ?
ಐಪಿಒಗಳನ್ನು ಷೇರು ಮಾರುಕಟ್ಟೆಯಲ್ಲಿ ಪ್ರೈಮರಿ ಮಾರ್ಕೆಟ್ ಎನ್ನುತ್ತಾರೆ. ಕಂಪನಿಗಳಿಗೆ ಸಾರ್ವಜನಿಕರಿಂದ ನೇರವಾಗಿ ಬಂಡವಾಳ ಸಂಗ್ರಹಕ್ಕೆ ಅವಕಾಶ ಕೊಡುತ್ತದೆ. ಇಲ್ಲಿ ಮಾರಾಟವಾದ ಷೇರುಗಳು ಬಿಎಸ್ಇ ಅಥವಾ ಎನ್ಎಸ್ಇಗಳಲ್ಲಿ ಲಿಸ್ಟ್ ಆಗುತ್ತವೆ. ಅಲ್ಲಿ ಅವುಗಳ ಟ್ರೇಡಿಂಗ್ ನಡೆಯುತ್ತದೆ. ಅಲ್ಲಿ ಆಗುವ ಬೆಲೆ ಏರಿಕೆ ಅಥವಾ ಇಳಿಕೆಯು ಕಂಪನಿಯ ಬಂಡವಾಳದ ಮೇಲೇನೂ ಪರಿಣಾಮ ಬೀರುವುದಿಲ್ಲ.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ