AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Crypto Currency: ಬೆಂಗಳೂರಿನ ಈ ಟೀ ಅಂಗಡಿಯಲ್ಲಿ ದುಡ್ಡಿನ ಬದಲು ಕ್ರಿಪ್ಟೋ ಕರೆನ್ಸಿ ನಡೆಯುತ್ತೆ ಗೊತ್ತಾ?

ಬೆಂಗಳೂರಿನ ಟೀ ಸ್ಟಾಲ್ ಮಾಲೀಕರೊಬ್ಬರು ತಮ್ಮ ಟೀ ಅಂಗಡಿಯಲ್ಲಿ ಹಣದ ಬದಲು ಕ್ರಿಪ್ಟೋಕರೆನ್ಸಿಯನ್ನು ಸ್ವೀಕರಿಸುತ್ತಿದ್ದಾರೆ. ಇದೀಗ ಸಾಮಾಜಿಕ ಜಾಲತಾಣದಲ್ಲಿ ಭಾರೀ ಟ್ರೆಂಡ್ ಆಗುತ್ತಿದೆ. ಎಲ್ಲಾ ಕಡೆ ಈ ಬಗ್ಗೆ ಚರ್ಚೆಗಳು ನಡೆಯುತ್ತಿದೆ.

Crypto Currency: ಬೆಂಗಳೂರಿನ ಈ ಟೀ ಅಂಗಡಿಯಲ್ಲಿ ದುಡ್ಡಿನ ಬದಲು ಕ್ರಿಪ್ಟೋ ಕರೆನ್ಸಿ ನಡೆಯುತ್ತೆ ಗೊತ್ತಾ?
TV9 Web
| Edited By: |

Updated on:Sep 29, 2022 | 4:53 PM

Share

ಬೆಂಗಳೂರಿನ ಟೀ ಸ್ಟಾಲ್ ಮಾಲೀಕರೊಬ್ಬರು ತಮ್ಮ ಟೀ ಅಂಗಡಿಯಲ್ಲಿ ಕ್ರಿಪ್ಟೋಕರೆನ್ಸಿಯನ್ನು ಸ್ವೀಕರಿಸಿದ ನಂತರ ಎಲ್ಲಾ ಕಡೆ ಈ ಬಗ್ಗೆ ಚರ್ಚೆಗಳು ನಡೆಯುತ್ತಿದೆ. ಇದೀಗ ಅವರ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಅವರ ಕಥೆಯ ಬಗ್ಗೆ ಇಟ್ರಸ್ಟಿಂಗ್ ವಿಚಾರಗಳನ್ನು ಹಂಚಿಕೊಂಡಿದ್ದಾರೆ. ಟೆಕ್ ಕ್ಯಾಪಿಟಲ್‌ನಲ್ಲಿ ಫ್ರಸ್ಟ್ರೇಟೆಡ್ ಡ್ರಾಪ್‌ಔಟ್ ಶೀರ್ಷಿಕೆಯಲ್ಲಿ ಅವರ ರಸ್ತೆ ಬದಿಯ ಚಹಾ ಅಂಗಡಿಯಲ್ಲಿ ಜನಪ್ರಿಯವಾಗಿದ್ದಾರೆ.

ಅಕ್ಷಯ್ ಸೈನಿ ಎಂಬ ಟ್ವಿಟ್ಟರ್ ಬಳಕೆದಾರರು ಬುಧವಾರ ಅವರ ಫೋಟೋವನ್ನು ಹಂಚಿಕೊಂಡಿದ್ದಾರೆ ಮತ್ತು ಅವರ ಬಗ್ಗೆ ಬರೆದುಕೊಂಡಿದ್ದಾರೆ. ಇಲ್ಲಿ ಕೇವಲ ಬೆಂಗಳೂರಿನ ಟ್ರಾಫಿಕ್, ಕೊಲೆ, ರಾಜಕೀಯ ಇಂತಹ ವಿಚಾರಗಳ ಬಗ್ಗೆ ಮಾತ್ರ ಚರ್ಚೆಗಳು ನಡೆಯುತ್ತಿದೆ ಅದಕ್ಕೆ ಇಂತಹ ಹ್ಯಾಶ್ ಟ್ಯಾಗ್​ಗಳು #crypto #NammaBengaluru ಜನರು ಈ ಬಗ್ಗೆ ಮಾತ್ರ ಚರ್ಚೆಯಾಗುತ್ತಿದೆ ಎಂದು ಸಾಮಾಜಿಕ ಜಾಲತಾಣದಲ್ಲಿ ಹತಾಶೆಗೊಂಡ ಡ್ರಾಪ್‌ಔಟ್ ಬಗ್ಗೆ ಹಲವು ಪ್ರಶ್ನೆ ಮಾಡುತ್ತಿದ್ದಾರೆ. ಆದರೆ ಟೀ ಸ್ಟಾಲ್ ಹುಡುಗ ಟೀ ಅಂಗಡಿಯಲ್ಲಿ ಕ್ರಿಪ್ಟೋಕರೆನ್ಸಿಯನ್ನು ಸ್ವೀಕರಿಸುತ್ತೇನೆ ಎಂದಾಗ ಇದು ಒಂದು ಆಸಕ್ತಿದಾಯಕ ವಿಚಾರವಲ್ಲವೇ.

ಈ ಬಗ್ಗೆ ಅನೇಕರು ಒಳ್ಳೆಯ ಪ್ರಶ್ನೆಗಳನ್ನು ಮಾಡಿದ್ದಾರೆ, ಒಬ್ಬ ಬಳಕೆದಾರರು ಕೇಳಿದರು, ಅವನು ಕ್ರಿಪ್ಟೋವನ್ನು ಹೇಗೆ ಸ್ವೀಕರಿಸುತ್ತಾನೆ? ಯಾವ ಎಲ್ಲಾ ನಾಣ್ಯಗಳನ್ನು ಸ್ವೀಕರಿಸಲಾಗುತ್ತದೆ? ವಿನಿಮಯ ದರವನ್ನು ಅವನು ಹೇಗೆ ನಿರ್ಧರಿಸುತ್ತಾನೆ? ನನಗೆ ಹಲವು ಪ್ರಶ್ನೆಗಳಿವೆ ಎಂದು ಕೇಳಿದ್ದಾರೆ.

ಇದನ್ನು ಓದಿ: ಭಾರತದ ಪ್ರಮುಖ ನಗರಗಳಲ್ಲಿ ಇಂದಿನ ಚಿನ್ನದ ಬೆಲೆ ಹೀಗಿದೆ; ಬೆಳ್ಳಿ ದರ 400 ರೂ. ಕುಸಿತ

ದಿ ನ್ಯೂ ಇಂಡಿಯನ್ ಎಕ್ಸ್‌ಪ್ರೆಸ್‌ನಲ್ಲಿನ ವರದಿಯ ಪ್ರಕಾರ, ಕ್ರಿಪ್ಟೋವನ್ನು ಸ್ವೀಕರಿಸುತ್ತಿರುವ ಚಹಾ ಮಾರಾಟಗಾರ ಶುಭಂ ಸೈನಿ. 30,000 ರೂ ಆರಂಭಿಕ ಬಂಡವಾಳದೊಂದಿಗೆ ಬೆಂಗಳೂರಿನ ಮಾರತ್ತಹಳ್ಳಿಯಲ್ಲಿ ಟೀ ಸ್ಟಾಲ್ ಆರಂಭಿಸಿದರು. 2021ರಲ್ಲಿ ಮಾರುಕಟ್ಟೆ ಕುಸಿದಾಗ ಕ್ರಿಪ್ಟೋ ವ್ಯಾಪಾರಿಯಾಗಿ ದೊಡ್ಡ ಮೊತ್ತವನ್ನು ಕಳೆದುಕೊಂಡ ನಂತರ ಅವರು ಈ ಟೀ ಸ್ಟಾಲ್ ಅನ್ನು ಪ್ರಾರಂಭಿಸಿದರು ಎಂದು ವರದಿ ಹೇಳಿದೆ.

ಸೈನಿ ಅವರು ಕ್ರಿಪ್ಟೋ ಪಾವತಿಗಳಿಗಾಗಿ US ಡಾಲರ್‌ಗಳನ್ನು ಭಾರತೀಯ ರೂಪಾಯಿಗಳಿಗೆ ಹೋಲಿಸಿದ ನಂತರ ಬೆಲೆಗಳನ್ನು ನವೀಕರಿಸುವ ಫಲಕವನ್ನು ಇರಿಸಿದ್ದಾರೆ.

Published On - 4:50 pm, Thu, 29 September 22

ರೈಲ್ವೆ ಸೇತುವೆಯಲ್ಲಿ ಯುವಕನಿಂದ ಅಪಾಯಕಾರಿ ಸಾಹಸ
ರೈಲ್ವೆ ಸೇತುವೆಯಲ್ಲಿ ಯುವಕನಿಂದ ಅಪಾಯಕಾರಿ ಸಾಹಸ
ಚಿತ್ರಕ್ಕೆ ನಾನು ಡೈರೆಕ್ಟರ್, ನೀವಲ್ಲ ಎಂದಿದ್ದ ಉಪ್ಪಿ; ಶಿವಣ್ಣನ ಏನಂದ್ರು?
ಚಿತ್ರಕ್ಕೆ ನಾನು ಡೈರೆಕ್ಟರ್, ನೀವಲ್ಲ ಎಂದಿದ್ದ ಉಪ್ಪಿ; ಶಿವಣ್ಣನ ಏನಂದ್ರು?
ಹೈಕಮಾಂಡ್ ನಮಗಿಬ್ರಿಗೂ ಏನೋ ಹೇಳಿದೆ: ಡಿಕೆಶಿ ಅಚ್ಚರಿಯ ಹೇಳಿಕೆ
ಹೈಕಮಾಂಡ್ ನಮಗಿಬ್ರಿಗೂ ಏನೋ ಹೇಳಿದೆ: ಡಿಕೆಶಿ ಅಚ್ಚರಿಯ ಹೇಳಿಕೆ
ಪಾವಗಡ ಕಡಮಲಕುಂಟೆ ಬಳಿ ಭೀಕರ ಅಪಘಾತ: ಕಾರು ಚಾಲಕ ಸಾವು
ಪಾವಗಡ ಕಡಮಲಕುಂಟೆ ಬಳಿ ಭೀಕರ ಅಪಘಾತ: ಕಾರು ಚಾಲಕ ಸಾವು
‘45’ ಶೂಟ್​​ನಲ್ಲಿ ಸಾವಿನ ಬಗ್ಗೆ ಮಾತನಾಡಿದ್ದ ಶಿವಣ್ಣ; ಜನ್ಯ, ರಾಜ್
‘45’ ಶೂಟ್​​ನಲ್ಲಿ ಸಾವಿನ ಬಗ್ಗೆ ಮಾತನಾಡಿದ್ದ ಶಿವಣ್ಣ; ಜನ್ಯ, ರಾಜ್
2026ರಲ್ಲಿ ಕಟಕ ರಾಶಿಯವರ ವರ್ಷ ಭವಿಷ್ಯ ಹೇಗಿದೆ ನೋಡಿ
2026ರಲ್ಲಿ ಕಟಕ ರಾಶಿಯವರ ವರ್ಷ ಭವಿಷ್ಯ ಹೇಗಿದೆ ನೋಡಿ
ಅಶ್ವಗಂಧ ಹಾಗೂ ಸಾಂಪ್ರದಾಯಿಕ ಔಷಧಿಗಳ ಬಗ್ಗೆ ಪ್ರಧಾನಿ ಮೋದಿ ಹೇಳಿದ್ದೇನು?
ಅಶ್ವಗಂಧ ಹಾಗೂ ಸಾಂಪ್ರದಾಯಿಕ ಔಷಧಿಗಳ ಬಗ್ಗೆ ಪ್ರಧಾನಿ ಮೋದಿ ಹೇಳಿದ್ದೇನು?
ಡಿಕೆಶಿ​ಗೆ ಸಿಕ್ತಾ ಸಿಎಂ ಆಗುವ ಸೂಚನೆ? ಬಲಗಡೆ ಹೂ ಕೊಟ್ಟ ಗೋಕರ್ಣ ಮಹಾಗಣಪತಿ
ಡಿಕೆಶಿ​ಗೆ ಸಿಕ್ತಾ ಸಿಎಂ ಆಗುವ ಸೂಚನೆ? ಬಲಗಡೆ ಹೂ ಕೊಟ್ಟ ಗೋಕರ್ಣ ಮಹಾಗಣಪತಿ
ತೈವಾನ್​ನ ತೈಪೆ ರೈಲು ನಿಲ್ದಾಣದ ಬಳಿ ವ್ಯಕ್ತಿಯಿಂದ ಮನಬಂದಂತೆ ಚಾಕು ದಾಳಿ
ತೈವಾನ್​ನ ತೈಪೆ ರೈಲು ನಿಲ್ದಾಣದ ಬಳಿ ವ್ಯಕ್ತಿಯಿಂದ ಮನಬಂದಂತೆ ಚಾಕು ದಾಳಿ
VIDEO: ಸಿಕ್ಸ್ ಹಿಟ್... ಕ್ಯಾಮೆರಾಮ್ಯಾನ್ ಕ್ಷಮೆಯಾಚಿಸಿದ ಹಾರ್ದಿಕ್ ಪಾಂಡ್ಯ
VIDEO: ಸಿಕ್ಸ್ ಹಿಟ್... ಕ್ಯಾಮೆರಾಮ್ಯಾನ್ ಕ್ಷಮೆಯಾಚಿಸಿದ ಹಾರ್ದಿಕ್ ಪಾಂಡ್ಯ