ಈ ವರ್ಷ 8.11 ಲಕ್ಷ ಕೋಟಿ ರೂ ದಾಟಿದ ನಿವ್ವಳ ನೇರ ತೆರಿಗೆ ಸಂಗ್ರಹ; ಹಿಂದಿನ ವರ್ಷದಕ್ಕಿಂತ ಶೇ 23ರಷ್ಟು ಹೆಚ್ಚಳ

Direct tax collections this year rise drastically: ಭಾರತದಲ್ಲಿ ಈ ವರ್ಷ ತೆರಿಗೆ ಸಂಗ್ರಹ ಭರ್ಜರಿಯಾಗಿ ಹೆಚ್ಚಿದೆ. ಆದಾಯ ತೆರಿಗೆ, ಕಾರ್ಪೊರೇಟ್ ತೆರಿಗೆ ಇತ್ಯಾದಿ ನೇರ ತೆರಿಗೆ ಸಂಗ್ರಹ 9.55 ಲಕ್ಷ ಕೋಟಿ ರೂ ಮುಟ್ಟಿದೆ. ರೀಫಂಡ್ ಕಳೆದು ಉಳಿಯುವ ನಿವ್ವಳ ಡೈರೆಕ್ಟ್ ಟ್ಯಾಕ್ಸ್ 8.11 ಲಕ್ಷ ಕೋಟಿ ರೂ ಇದೆ. ಕಳೆದ ವರ್ಷದಕ್ಕಿಂತ ಇದು ಶೇ. 23ರಷ್ಟು ಹೆಚ್ಚಳ ಇದೆ.

ಈ ವರ್ಷ 8.11 ಲಕ್ಷ ಕೋಟಿ ರೂ ದಾಟಿದ ನಿವ್ವಳ ನೇರ ತೆರಿಗೆ ಸಂಗ್ರಹ; ಹಿಂದಿನ ವರ್ಷದಕ್ಕಿಂತ ಶೇ 23ರಷ್ಟು ಹೆಚ್ಚಳ
ತೆರಿಗೆ
Image Credit source: Getty Images

Updated on: Aug 11, 2026 | 9:39 PM

ನವದೆಹಲಿ, ಆಗಸ್ಟ್ 11: ಭಾರತದ ನಿವ್ವಳ ನೇರ ತೆರಿಗೆ ಸಂಗ್ರಹವು (Net Direct Tax Collections) ಶೇ. 23.09 ರಷ್ಟು ಭಾರಿ ಏರಿಕೆ ಕಂಡಿದೆ. ನಿನ್ನೆಯವರೆಗಿನ (ಆ. 10) ಅಂಕಿಅಂಶಗಳ ಪ್ರಕಾರ, ಒಟ್ಟು ನಿವ್ವಳ ನೇರ ತೆರಿಗೆ ₹8.11 ಲಕ್ಷ ಕೋಟಿ ತಲುಪಿದೆ. ಹಿಂದಿನ ಹಣಕಾಸು ವರ್ಷದ ಇದೇ ಅವಧಿಯಲ್ಲಿ ಈ ಮೊತ್ತವು ₹6.59 ಲಕ್ಷ ಕೋಟಿಯಾಗಿತ್ತು. ಈ ವರ್ಷದಲ್ಲಿ ಭರ್ಜರಿ ಟ್ಯಾಕ್ಸ್ ಕಲೆಕ್ಷನ್ ಆಗಿದೆ. ಇಲ್ಲಿ ನೇರ ತೆರಿಗೆ ಎಂದರೆ ವೈಯಕ್ತಿಕ ಆದಾಯ ತೆರಿಗೆ, ಕಾರ್ಪೊರೇಟ್ ಆದಾಯ ತೆರಿಗೆ ಇತ್ಯಾದಿ ಆದಾಯಗಳಿಗೆ ವಿಧಿಸಲಾಗುವ ಟ್ಯಾಕ್ಸ್ ಆಗಿದೆ.

ಕಾರ್ಪೊರೇಟೇತರ ತೆರಿಗೆದಾರರ ಕೊಡುಗೆ

ಈ ಬಾರಿ ತೆರಿಗೆ ಸಂಗ್ರಹದ ಏರಿಕೆಯಲ್ಲಿ ವೈಯಕ್ತಿಕ ಆದಾಯ ತೆರಿಗೆದಾರರು, ಎಚ್‌ಯುಎಫ್ (HUF) ಮತ್ತು ಸಂಸ್ಥೆಗಳನ್ನೊಳಗೊಂಡ ‘ಕಾರ್ಪೊರೇಟೇತರ’ (Non-Corporate Taxes) ವಿಭಾಗದ ಪಾತ್ರ ದೊಡ್ಡದಾಗಿದೆ. ಈ ವಿಭಾಗದಿಂದ ಹರಿದುಬಂದ ನಿವ್ವಳ ತೆರಿಗೆ ಮೊತ್ತವು ₹5.07 ಲಕ್ಷ ಕೋಟಿ ತಲುಪಿದ್ದು, ಕಳೆದ ವರ್ಷಕ್ಕೆ (₹4.11 ಲಕ್ಷ ಕೋಟಿ) ಹೋಲಿಸಿದರೆ ಸುಮಾರು 23.4% ಪ್ರಗತಿ ದಾಖಲಿಸಿದೆ.

ಇದನ್ನೂ ಓದಿ: ನಿಮ್ಮ ಬಳಿ ಆಧಾರ್ ಇದ್ರೆ ಸಾಕು ಇ-ಪ್ಯಾನ್ ಕಾರ್ಡ್ ಪಡೆಯೋದು ಸುಲಭ

ಕಾರ್ಪೊರೇಟ್ ತೆರಿಗೆ ಏರಿಕೆ

ಕಂಪನಿಗಳು ಮತ್ತು ಉದ್ಯಮ ವಲಯದಿಂದ ಪಾವತಿಯಾದ ನಿವ್ವಳ ಕಾರ್ಪೊರೇಟ್ ತೆರಿಗೆ (Corporate Tax) ಸಂಗ್ರಹವು ₹2.26 ಲಕ್ಷ ಕೋಟಿಯಿಂದ ₹2.70 ಲಕ್ಷ ಕೋಟಿಗೆ (19.8% ಏರಿಕೆ) ಹೆಚ್ಚಳವಾಗಿದೆ.

ಒಟ್ಟು ತೆರಿಗೆ ಸಂಗ್ರಹ ಹಾಗೂ ರಿಫಂಡ್

ಯಾವುದೇ ರಿಫಂಡ್ ನೀಡುವ ಮೊದಲು ಸಂಗ್ರಹವಾದ ಒಟ್ಟು ನೇರ ತೆರಿಗೆ (Gross Collection) ಮೊತ್ತವು ₹9.55 ಲಕ್ಷ ಕೋಟಿ ತಲುಪಿದೆ. ಕಳೆದ ವರ್ಷ ಇದೇ ಅವಧಿಯಲ್ಲಿ ಗ್ರಾಸ್ ಟ್ಯಾಕ್ಸ್ ಕಲೆಕ್ಷನ್ ₹7.97 ಲಕ್ಷ ಕೋಟಿ ಇತ್ತು. ಈ ವರ್ಷ 19.75% ಏರಿದೆ.

ಇಲಾಖೆಯು ಈ ಅವಧಿಯಲ್ಲಿ ₹1.43 ಲಕ್ಷ ಕೋಟಿ ಮೊತ್ತದ ರಿಫಂಡ್ (Refunds) ಅನ್ನು ತೆರಿಗೆದಾರರಿಗೆ ಹಿಂತಿರುಗಿಸಿದೆ. ಇದು ಕಳೆದ ವರ್ಷಕ್ಕಿಂತ ಶೇಕಡಾ 3.79 ರಷ್ಟು ಹೆಚ್ಚಾಗಿದೆ.

ಇದನ್ನೂ ಓದಿ: ಈಕ್ವಿಟಿ ಮ್ಯೂಚುವಲ್ ಫಂಡ್​ಗಳಲ್ಲಿ ಕಡಿಮೆ ಆಯ್ತು ಹೂಡಿಕೆ; ಲಾರ್ಜ್ ಕ್ಯಾಪ್ ಫಂಡ್​ಗಳಿಂದಲೂ ಹೊರಹೋಗುತ್ತಿರುವ ಹೂಡಿಕೆ

ಸೆಕ್ಯುರಿಟೀಸ್ ಟ್ರಾನ್ಸಾಕ್ಷನ್ ಟ್ಯಾಕ್ಸ್ (STT) ಜಿಗಿತ

ಷೇರು ಮಾರುಕಟ್ಟೆ ವಹಿವಾಟಿನ ಮೇಲೆ ವಿಧಿಸುವ ‘ಎಸ್‌ಟಿಟಿ’ (STT) ಸಂಗ್ರಹದಲ್ಲಿ ಬೃಹತ್ ಜಿಗಿತ ಕಂಡುಬಂದಿದ್ದು, ಕಳೆದ ವರ್ಷದ ₹22,354 ಕೋಟಿಯಿಂದ ₹33,824 ಕೋಟಿಗೆ (ಸುಮಾರು 51% ಏರಿಕೆ) ಏರಿಕೆಯಾಗಿದೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Loading...
Unable to load recommendations.
Follow Us