ಡ್ರೈವಿಂಗ್ ಲೈಸೆನ್ಸ್ ಕಳೆದು ಹೋದ್ರೆ ಈ ರೀತಿ ಅರ್ಜಿ ಸಲ್ಲಿಸಿದ್ರೆ ಈ ದಾಖಲೆ ನಿಮ್ಮ ಕೈ ಸೇರುತ್ತೆ

ವಾಹನ ಓಡಿಸಲು ನಿಮ್ಮ ಬಳಿ ಡ್ರೈವಿಂಗ್ ಲೈಸೆನ್ಸ್ ಇರಲೇಬೇಕು. ಒಂದು ವೇಳೆ ಡಿಎಲ್ ಕಳೆದು ಹೋದರೆ ಅಥವಾ ಹಾನಿಗೊಳಗಾದರೆ ನೀವು ಹೆಚ್ಚು ತಲೆಕೆಡಿಸಿಕೊಳ್ಳುವ ಅಗತ್ಯವಿಲ್ಲ. ನೀವು ಡುಬ್ಲಿಕೇಟ್ ಡ್ರೈವಿಂಗ್ ಲೈಸೆನ್ಸ್ ಗೆ ಅರ್ಜಿ ಸಲ್ಲಿಸಬಹುದು. ಅರ್ಜಿ ಸಲ್ಲಿಕೆಗೆ ನಿಮ್ಮ ಬಳಿ ಲೈಸೆನ್ಸ್ ಕಳೆದು ಹೋದ ಬಗ್ಗೆ ದಾಖಲಿಸಿದ ಎಫ್‌ಐಆರ್ ಪ್ರತಿ, ಗುರುತು ಹಾಗೂ ವಿಳಾಸದ ಪುರಾವೆಯಾದ ಆಧಾರ್‌ ಕಾರ್ಡ್‌ ಅಥವಾ ವೋಟರ್‌ ಐಡಿ ಈ ದಾಖಲೆಗಳು ಅಗತ್ಯವಾಗಿ ಬೇಕು.

ಡ್ರೈವಿಂಗ್ ಲೈಸೆನ್ಸ್ ಕಳೆದು ಹೋದ್ರೆ ಈ ರೀತಿ ಅರ್ಜಿ ಸಲ್ಲಿಸಿದ್ರೆ ಈ ದಾಖಲೆ ನಿಮ್ಮ ಕೈ ಸೇರುತ್ತೆ
ಡ್ರೈವಿಂಗ್ ಲೈಸೆನ್ಸ್
Image Credit source: team-bhp.com

Updated on: Sep 01, 2026 | 6:29 PM

ಮುಖ್ಯಾಂಶಗಳು

  • ವಾಹನ ಚಾಲಕನಿಗೂ ಡ್ರೈವಿಂಗ್ ಲೈಸೆನ್ಸ್ ಅತ್ಯಂತ ಪ್ರಮುಖವಾದ ದಾಖಲೆಯಾಗಿದೆ
  • ಲೈಸೆನ್ಸ್ ಕಳೆದು ಹೋಗಿದ್ದರೆ ಕೆಲ ಅಗತ್ಯ ದಾಖಲೆಗಳೊಂದಿಗೆ ಲೈಸೆನ್ಸ್‌ಗೆ ಅರ್ಜಿ ಸಲ್ಲಿಸಲು ಅವಕಾಶವಿದೆ
  • ಪರಿವಾಹನ್ ಸೇವಾ ಅಧಿಕೃತ ವೆಬ್‌ಸೈಟ್‌ಗೆ ಭೇಟಿ ನೀಡಿ ಲೈಸೆನ್ಸ್‌ಗೆ ಅರ್ಜಿ ಸಲ್ಲಿಸಬಹುದು

ಪ್ರತಿಯೊಬ್ಬ ವಾಹನ ಚಾಲಕನಿಗೂ ಡ್ರೈವಿಂಗ್ ಲೈಸೆನ್ಸ್ (Driving License) ಅತ್ಯಂತ ಪ್ರಮುಖವಾದ ದಾಖಲೆಯಾಗಿದೆ. ಒಂದು ವೇಳೆ ಪರವಾನಗಿ ಇಲ್ಲದೆ ವಾಹನ ಓಡಿಸಿ ಸಿಕ್ಕಿಬಿದ್ದರೆ ಕನಿಷ್ಠ 5,000 ರೂವರೆಗೆ ದಂಡ ವಿಧಿಸಲಾಗುತ್ತದೆ. ಆದರೆ ನಿಮ್ಮ ಬಳಿಯಿದ್ದ ಒರಿಜಿನಲ್‌ ಲೈಸೆನ್ಸ್ ಕಳೆದು ಹೋಗಿದ್ದರೆ ಅಥವಾ ಹಾಳಾಗಿದ್ದರೆ ಡುಬ್ಲಿಕೇಟ್ ಡ್ರೈವಿಂಗ್ ಲೈಸೆನ್ಸ್ ಪಡೆಯಲು ಅವಕಾಶವಿದೆ. ಆದರೆ ಈ ರೀತಿ ಚಾಲನಾ ಪರವಾನಗಿ ಪಡೆಯಲು ಸೂಕ್ತ ಕ್ರಮಗಳನ್ನು ಅನುಸರಿಸಬೇಕು, ಅದರ ಜತೆಗೆ ಕೆಲ ಮುಖ್ಯವಾದ ದಾಖಲೆಗಳು ನಿಮ್ಮ ಬಳಿ ಇರಲೇಬೇಕು.

ಡುಬ್ಲಿಕೇಟ್ ಡ್ರೈವಿಂಗ್ ಲೈಸೆನ್ಸ್ ಪಡೆಯಲು ಅವಕಾಶವಿದೆಯೇ?

ನಿಮ್ಮ ಮೂಲ ಡ್ರೈವಿಂಗ್ ಲೈಸೆನ್ಸ್ ಕಳೆದುಹೋಗಿದ್ದರೆ ಅಥವಾ ಹಾಳಾಗಿದ್ದರೆ, ನೀವು ಅಧಿಕೃತವಾಗಿ ಡುಬ್ಲಿಕೇಟ್ ಚಾಲನಾ ಪರವಾನಗಿ ಪಡೆಯಲು ಮಾತ್ರ ಅವಕಾಶವಿದೆ. ಲೈಸೆನ್ಸ್ ಪಡೆಯಲು ನಿಮ್ಮ ಬಳಿ ಈ ದಾಖಲೆ ಇರುವುದು ಕಡ್ಡಾಯ. ಹೌದು, ಚಾಲನಾ ಪರವಾನಗಿ ಕಳೆದುಹೋದರೆ ಸ್ಥಳೀಯ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಿಸಿ ಆ ಪ್ರತಿಯನ್ನು ಅರ್ಜಿಯೊಂದಿಗೆ ಸಲ್ಲಿಸುವುದು ಕಡ್ಡಾಯ. ಅದಲ್ಲದೇ, ಲೈಸೆನ್ಸ್ ಹಾಳಾಗಿದ್ದರೆ ಹಳೆಯ ಮೂಲ ಲೈಸೆನ್ಸ್ ಪ್ರತಿಯನ್ನು ಅರ್ಜಿಯೊಂದಿಗೆ ದಾಖಲೆಯಾಗಿ ನೀಡಬೇಕು.

ಚಾಲನಾ ಪರವಾನಗಿ ಕಳೆದು ಹೋಗಿದ್ದರೆ ಲೈಸೆನ್ಸ್‌ಗೆ ಅರ್ಜಿ ಸಲ್ಲಿಸುವುದು ಹೇಗೆ?

ಹಂತ 1: ಮೊದಲು ಪರಿವಾಹನ್ ಸೇವಾ ಅಧಿಕೃತ ವೆಬ್‌ಸೈಟ್‌ಗೆ ಭೇಟಿ ನೀಡಿ, ಕರ್ನಾಟಕ ರಾಜ್ಯವನ್ನು ಆಯ್ಕೆಮಾಡಿ.

ಹಂತ 2: ಡ್ರೈವಿಂಗ್ ಲೈಸೆನ್ಸ್ ರಿಲೇಟೆಡ್ ಸರ್ವಿಸಸ್ ಮೇಲೆ ಕ್ಲಿಕ್ ಮಾಡಿ, ಇಲ್ಲಿ ಡಿಎಲ್ ಸಂಖ್ಯೆ, ಹುಟ್ಟಿದ ದಿನಾಂಕವನ್ನು ನಮೂದಿಸಿ.

ಹಂತ 3: ಲೈಸೆನ್ಸ್ ಸೇವೆಗಳ ಪಟ್ಟಿಯಿಂದ ಅಪ್ಲೈ ಫಾರ್ ಡೂಪ್ಲಿಕೇಟ್ ಡಿ ಎಲ್ ಆಯ್ಕೆ ಮೇಲೆ ಕ್ಲಿಕ್ ಮಾಡಿ.

ಹಂತ 4: ಅರ್ಜಿ ನಮೂನೆಯಲ್ಲಿ ಅಗತ್ಯವಿರುವ ವಿವರಗಳನ್ನು ಭರ್ತಿ ಮಾಡಿ.

ಹಂತ 5: ಲೈಸೆನ್ಸ್ ಹರಿದುಹೋಗಿದ್ದರೆ ಡಿಎಲ್ ಮೂಲ ಪ್ರತಿ, ಕಳೆದುಹೋಗಿದ್ದರೆ ಎಫ್‌ಐಆರ್ ಪ್ರತಿ, ಅಪ್‌ಲೋಡ್ ಮಾಡಿ.

ಹಂತ 6: ಆನ್‌ಲೈನ್ ಮೂಲಕ ನಿರ್ದಿಷ್ಟ ಶುಲ್ಕವನ್ನು ಪಾವತಿಸಿ ರಶೀದಿಯನ್ನು ಡೌನ್‌ಲೋಡ್ ಮಾಡಿ.

ಹಂತ 7: ಅರ್ಜಿ ಸಲ್ಲಿಸಿದ 30 ದಿನಗಳ ಬಳಿಕ ನಿಮ್ಮ ಕೈಗೆ ಡುಬ್ಲಿಕೇಟ್ ಡ್ರೈವಿಂಗ್ ಲೈಸನ್ಸ್ ಸಿಗುತ್ತದೆ.

ಇದನ್ನೂ ಓದಿ: ಐದು ತಿಂಗಳಲ್ಲೇ 10 ಲಕ್ಷ ವಾಹನಗಳ ಮಾರಾಟದ ಮೈಲಿಗಲ್ಲು ದಾಟಿದ ಮಾರುತಿ ಸುಜುಕಿ

ಸಾಮಾನ್ಯವಾಗಿ ಕೇಳುವ ಪ್ರಶ್ನೆ ಮತ್ತು ಉತ್ತರ (FAQs)

ಪ್ರಶ್ನೆ: ಡ್ರೈವಿಂಗ್ ಲೈಸೆನ್ಸ್ ಎಷ್ಟು ಮುಖ್ಯ?

ಉತ್ತರ: ವಾಹನ ಚಲಾಯಿಸಲು ಡ್ರೈವಿಂಗ್ ಲೈಸೆನ್ಸ್ ಹೊಂದಿರುವುದು ಕಡ್ಡಾಯವಾಗಿದೆ. ಈ ಡ್ರೈವಿಂಗ್ ಲೈಸೆನ್ಸ್ ಅನ್ನು ಭಾರತ ಸರ್ಕಾರವು ನೀಡುವ ಅಧಿಕೃತ ಗುರುತಿನ ಮತ್ತು ವಿಳಾಸದ ಪುರಾವೆಯಾಗಿದೆ.

ಪ್ರಶ್ನೆ: ಡ್ರೈವಿಂಗ್ ಲೈಸೆನ್ಸ್ ಇಲ್ಲದೇ ಸಿಕ್ಕಿ ಬಿದ್ದರೆ ಎಷ್ಟು ದಂಡ ವಿಧಿಸಲಾಗುತ್ತದೆ?

ಉತ್ತರ: ಭಾರತದ ಮೋಟಾರು ವಾಹನ ಕಾಯ್ದೆಯ ಪ್ರಕಾರ, ಡ್ರೈವಿಂಗ್ ಲೈಸೆನ್ಸ್ ಇಲ್ಲದೇ ವಾಹನ ಚಲಾಯಿಸಿದರೆ ಮೊದಲ ಬಾರಿಗೆ 5,000 ರೂ ದಂಡ ವಿಧಿಸಲಾಗುತ್ತದೆ.

ಪ್ರಶ್ನೆ: ಡ್ರೈವಿಂಗ್ ಲೈಸೆನ್ಸ್ ಕಳೆದು ಹೋದರೆ ಮತ್ತೆ ಲೈಸೆನ್ಸ್ ಪಡೆಯುವುದು ಹೇಗೆ?

ಉತ್ತರ: ಪರಿವಾಹನ್ ಸೇವಾ ಅಧಿಕೃತ ವೆಬ್‌ಸೈಟ್‌ಗೆ ಭೇಟಿ ನೀಡಿ ಅಗತ್ಯ ದಾಖಲೆಗಳನ್ನು ನೀಡಿ ಲೈಸೆನ್ಸ್ ಪಡೆಯಬಹುದು.

ಇನ್ನಷ್ಟು ವಾಣಿಜ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್‌ ಮಾಡಿ

 

Published On - 6:28 pm, Tue, 1 September 26

Loading...
Unable to load recommendations.
Follow Us