ED Arrest: ಚೀನಾದ ವಿವೋ ಇಂಡಿಯಾದ ಸಿಇಒ ಸೇರಿ ಮೂವರು ಟಾಪ್ ಎಕ್ಸಿಕ್ಯೂಟಿವ್ಗಳನ್ನು ಬಂಧಿಸಿದ ಜಾರಿ ನಿರ್ದೇನಾಲಯ
Money Laundering Charges: ಮನಿ ಲಾಂಡರಿಂಗ್ ಆರೋಪ ಮೇಲೆ ವಿವೊ ಇಂಡಿಯಾದ ಮಧ್ಯಂತರ ಸಿಇಒ ಸೇರಿ ಮೂವರನ್ನು ಜಾರಿ ನಿರ್ದೇಶನಾಲಯ ಬಂಧಿಸಿದೆ. ಎರಡು ತಿಂಗಳ ಹಿಂದೆ ವಿವೊ ಇಂಡಿಯಾದ ಉದ್ಯೋಗಿ ಹಾಗು ಚೀನೀ ಪ್ರಜೆ ಸೇರಿ ನಾಲ್ವರು ವ್ಯಕ್ತಿಗಳನ್ನು ಇಡಿ ಬಂಧಿಸಿತ್ತು. ತನ್ನ ಟಾಪ್ ಎಕ್ಸಿಕ್ಯೂಟಿವ್ಗಳ ಬಂಧನಕ್ಕೆ ವಿವೊ ಇಂಡಿಯಾ ಆಕ್ಷೇಪ ವ್ಯಕ್ತಪಡಿಸಿದೆ. ಇದು ಪ್ರಾಧಿಕಾರಗಳಿಂದ ನಡೆಯುತ್ತಿರುವ ಕಿರುಕುಳ ಎಂದು ಬಣ್ಣಿಸಿದೆ.
ನವದೆಹಲಿ, ಡಿಸೆಂಬರ್ 24: ಚೀನಾದ ಸ್ಮಾರ್ಟ್ಫೋನ್ ಕಂಪನಿ ವಿವೊ ಇಂಡಿಯಾದ ಮಧ್ಯಂತರ ಸಿಇಒ (Interim CEO) ಸೇರಿದಂತೆ ಮೂವರು ಉನ್ನತ ಮಟ್ಟದ ಅಧಿಕಾರಿಗಳನ್ನು ಜಾರಿ ನಿರ್ದೇಶನಾಲಯ (ED- Enforcement Directorate) ಬಂಧಿಸಿರುವ ಸುದ್ದಿ ಮಾಧ್ಯಮಗಳಲ್ಲಿ ಬಂದಿದೆ. ಪಿಟಿಐ ಸುದ್ದಿ ಸಂಸ್ಥೆ ವರದಿ ಪ್ರಕಾರ ಅಕ್ರಮ ಹಣ ವರ್ಗಾವಣೆ ಅಥವಾ ಮನಿ ಲಾಂಡರಿಂಗ್ ಆರೋಪದ ಮೇಲೆ ಇಡಿ ಈ ಕ್ರಮ ಕೈಗೊಂಡಿದೆ. ವಿವೊ ಇಂಡಿಯಾದ ಇಂಟರಿಂ ಸಿಇಒ ಹೋಂಗ್ ಕ್ಸುಕುವಾನ್, ವಿವೋ ಸಿಎಫ್ಒ ಹರೀಂದರ್ ದಾಹಿಯಾ ಮತ್ತು ಕನ್ಸಲ್ಟೆಂಟ್ ಹೇಮಂತ್ ಮುಂಜಲ್ ಅವರು ಜಾರಿ ನಿರ್ದೇಶನಾಲಯದಿಂದ ಬಂಧಿತರಾಗಿರುವ ಮೂವರು. ಇವರನ್ನು ಶನಿವಾರ ಬಂಧಿಸಲಾಗಿದ್ದು, ಕೋರ್ಟ್ ಮೂರು ದಿನಗಳ ಕಾಲ ಇವರನ್ನು ಇಡಿ ಕಸ್ಟಡಿಗೆ ಒಪ್ಪಿಸಿದೆ.
ಎರಡು ತಿಂಗಳ ಹಿಂದಷ್ಟೇ ಈ ಉದ್ಯಮದ ನಾಲ್ವರು ಎಕ್ಸಿಕ್ಯೂಟಿವ್ಗಳನ್ನು ಇಡಿ ಬಂಧಿಸಿತ್ತು. ವಿವೋ ಇಂಡಿಯಾ ಸಂಸ್ಥೆಯಲ್ಲಿ ಕೆಲಸ ಮಾಡುತ್ತಿದ್ದ ಚೀನೀ ಪ್ರಜೆ ಆಂಡ್ರ್ಯೂ ಕುವಾಂಗ್, ಲಾವಾ ಇಂಟರ್ನ್ಯಾಷನಲ್ ಎಂಡಿ ಹರಿ ಓಂ ರಾಯ್, ಚಾರ್ಟರ್ಡ್ ಅಕೌಂಟೆಂಟ್ಗಳಾದ ನಿತಿನ್ ಗರ್ಗ್ ಮತ್ತು ರಾಜನ್ ಮಲಿಕ್ ಅವರನ್ನು ಬಂಧಿಸಲಾಗಿತ್ತು. ಆ ಹಿನ್ನೆಲೆಯಲ್ಲಿ ನಿನ್ನೆ ವಿವೋ ಇಂಡಿಯಾದ ಮೂವರು ಟಾಪ್ ಎಕ್ಸಿಕ್ಯೂಟಿವ್ಗಳ ಬಂಧನವಾಗಿರುವ ಸುದ್ದಿ ಗಮನಾರ್ಹ ಎನಿಸಿದೆ.
ಇದನ್ನೂ ಓದಿ: RBI: ನಿರ್ದೇಶಕರಿಗೆ ಸಾಲ ಕೊಟ್ಟು ನಿಯಮ ಉಲ್ಲಂಘನೆ; ಟಿಡಿಸಿಸಿ ಬ್ಯಾಂಕ್ಗೆ ದಂಡ ವಿಧಿಸಿದ ಆರ್ಬಿಐ
ಬಂಧನಕ್ಕೆ ಆಘಾತ ವ್ಯಕ್ತಪಡಿಸಿದ ವಿವೊ
ತನ್ನ ಮೂವರು ಉನ್ನತ ಅಧಿಕಾರಿಗಳನ್ನು ಇಡಿ ಬಂಧಿಸಿರುವುದಕ್ಕೆ ವಿವೊ ಆಘಾತ ಮತ್ತು ಆಕ್ಷೇಪ ವ್ಯಕ್ತಪಡಿಸಿದೆ. ಪ್ರಾಧಿಕಾರಿಗಳ ಈ ಕ್ರಮದಿಂದ ಆತಂಕಗೊಂಡಿರುವುದಾಗಿ ಅದು ಹೇಳಿಕೆ ನೀಡಿದೆ.
‘ಕಿರುಕುಳಗಳು ಮುಂದುವರಿಯುತ್ತಿರುವುದಕ್ಕೆ ಇತ್ತೀಚೆಗೆ ಮಾಡಲಾಗಿರುವ ಬಂಧನಗಳ ಸಾಕ್ಷಿಯಾಗಿವೆ. ಇದು ಅನಿಶ್ಚಿತ ವಾತಾವರಣ ತುಂಬುತ್ತಿದೆ. ಈ ಆರೋಪಗಳನ್ನು ಎದುರಿಸಲು ಎಲ್ಲಾ ಕಾನೂನು ಮಾರ್ಗ ಅವಲೋಕಿಸಲು ನಾವು ನಿರ್ಣಯಿಸಿದ್ದೇವೆ,’ ಎಂದು ವಿವೋ ಸಂಸ್ಥೆಯ ವಕ್ತಾರ ಹೇಳಿರುವುದಾಗಿ ರಾಯ್ಟರ್ಸ್ ಸುದ್ದಿ ಸಂಸ್ಥೆ ವರದಿ ಮಾಡಿದೆ.
ಇದನ್ನೂ ಓದಿ: Working Hours: ಹೆಚ್ಚು ಅವಧಿ ಕೆಲಸ ಮಾಡಿ, ಜೀವನದ ಜೊತೆ ಕೆಲಸ ಮಿಳಿತಗೊಳಿಸಿ: ಉದ್ಯೋಗಿಗಳಿಗೆ ಅಮೆರಿಕನ್ ಸಿಇಒ ನೀರಜ್ ಶಾ ಕರೆ
2020ರಲ್ಲಿ ಭಾರತದ ಗಡಿಭಾಗದಲ್ಲಿ ಚೀನೀ ಸೈನಿಕರು ಉಗ್ರ ದಾಳಿ ಮಾಡಿದ ಘಟನೆ ಬಳಿಕ ಭಾರತ ಮತ್ತು ಚೀನಾ ನಡುವಿನ ವ್ಯಾವಹಾರಿಕ ಸಂಬಂಧ ಸೂಕ್ಷ್ಮಗೊಂಡಿದೆ. ಚೀನಾದ ಹಲವಾರು ಆ್ಯಪ್ಗಳನ್ನು ಸರ್ಕಾರ ನಿಷೇಧಿಸಿದೆ. ಅದರ ಸ್ಮಾರ್ಟ್ಫೋನ್ ಕಂಪನಿಗಳ ಮೇಲೆ ಹದ್ದಿನ ಕಣ್ಣು ಇಟ್ಟಿದೆ. ಭಾರತದ ಸಾರ್ವಭೌಮತೆಗೆ ಧಕ್ಕೆ ತರುವಂತೆ ಚೀನೀ ಸ್ಮಾರ್ಟ್ಫೋನ್ಗಳು ಭಾರತೀಯ ಬಳಕೆದಾರರ ದತ್ತಾಂಶಗಳನ್ನು ಕದ್ದು ತಮ್ಮ ದೇಶಕ್ಕೆ ರವಾನಿಸುತ್ತಿರಬಹುದು ಎನ್ನುವಂತಹ ಆರೋಪಗಳೂ ಇವೆ.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
Published On - 1:06 pm, Sun, 24 December 23