Working Hours: ಹೆಚ್ಚು ಅವಧಿ ಕೆಲಸ ಮಾಡಿ, ಜೀವನದ ಜೊತೆ ಕೆಲಸ ಮಿಳಿತಗೊಳಿಸಿ: ಉದ್ಯೋಗಿಗಳಿಗೆ ಅಮೆರಿಕನ್ ಸಿಇಒ ನೀರಜ್ ಶಾ ಕರೆ

CEO Neeraj Shah: ಸೋಮಾರಿತನಕ್ಕೆ ಇತಿಹಾಸದಲ್ಲಿ ಹೆಚ್ಚು ಯಶಸ್ಸು ಸಿಕ್ಕಿಲ್ಲ. ಹೆಚ್ಚು ಅವಧಿ ಕೆಲಸ ಮಾಡಬೇಕು ಎಂದು ವೇಫೇರ್ ಇಕಾಮರ್ಸ್ ಸಂಸ್ಥೆಯ ಸಿಇಒ ನೀರಜ್ ಶಾ ತನ್ನ ಉದ್ಯೋಗಿಗಳಿಗೆ ತಿಳಿಸಿದ್ದಾರೆ. ತಾವೆಲ್ಲರೂ ಮಹತ್ವಾಕಾಂಕ್ಷಿ ವ್ಯಕ್ತಿಗಳು. ತಮ್ಮ ಕೆಲಸ ಪರಿಣಾಮಕಾರಿ ಎನಿಸುವಂತೆ ಫಲ ಕೊಡಬೇಕು ಎಂದು ಬಯಸುವವರು. ಅದಕ್ಕಾಗಿ ಶ್ರಮ ಪಡಬೇಕು ಎಂದು ವೇಫೇರ್ ಸಿಇಒ ತಿಳಿಸಿದ್ದಾರೆ.

Working Hours: ಹೆಚ್ಚು ಅವಧಿ ಕೆಲಸ ಮಾಡಿ, ಜೀವನದ ಜೊತೆ ಕೆಲಸ ಮಿಳಿತಗೊಳಿಸಿ: ಉದ್ಯೋಗಿಗಳಿಗೆ ಅಮೆರಿಕನ್ ಸಿಇಒ ನೀರಜ್ ಶಾ ಕರೆ
ನೀರಜ್ ಶಾ
Follow us
ಸುಗ್ಗನಹಳ್ಳಿ ವಿಜಯಸಾರಥಿ
|

Updated on: Dec 24, 2023 | 11:27 AM

ನವದೆಹಲಿ, ಡಿಸೆಂಬರ್ 24: ಇವತ್ತಿನ ಯುವ ಉದ್ಯೋಗಿಗಳು ಒಂದು ವಾರದಲ್ಲಿ 70 ಗಂಟೆ ಕೆಲಸ ಮಾಡಬೇಕು ಎಂದು ಇನ್ಫೋಸಿಸ್ ಸಹ-ಸಂಸ್ಥಾಪಕ ಎನ್ ಆರ್ ನಾರಾಯಣ ಮೂರ್ತಿ ಅವರು ಕೊಟ್ಟಿದ್ದ ಕರೆಗೆ ಇದೀಗ ಅಮೆರಿಕದ ಕಂಪನಿಯೊಂದರ ಸಿಇಒ ಧ್ವನಿಗೂಡಿಸಿದ್ದಾರೆ. ವೇ ಫೇರ್ ಎಂಬ ಆನ್ಲೈನ್ ಪೀಠೋಪಕರಣ ಮಾರಾಟ ಕಂಪನಿಯ ಸಿಇಒ ನೀರಜ್ ಶಾ ತಮ್ಮ ಉದ್ಯೋಗಿಗಳಿಗೆ ಹೆಚ್ಚು ಅವಧಿ ಕೆಲಸ ಮಾಡುವಂತೆ ಕರೆ ನೀಡಿದ್ದಾರೆ. ಸೋಮಾರಿತನಕ್ಕೆ ಇತಿಹಾಸದಲ್ಲಿ ಹೆಚ್ಚು ಯಶಸ್ಸು ಸಿಕ್ಕಿಲ್ಲ ಎಂದಿರುವ ಅವರು, ಸಾಕಷ್ಟು ಅವಧಿ ಕೆಲಸ ಮಾಡಬೇಕು. ಜೀವನದಲ್ಲಿ ಕೆಲಸವನ್ನು ಮಿಳಿತಗೊಳಿಸಬೇಕು ಎಂದು ಸಲಹೆ ನೀಡಿದ್ದಾರೆ.

‘ಗೆಲುವಿಗೆ ಕಠಿಣ ಪರಿಶ್ರಮ ಅಗತ್ಯ. ನಾವೆಲ್ಲರೂ ಮಹತ್ವಾಂಕ್ಷೆಗಳಿರುವ ವ್ಯಕ್ತಿಗಳು. ನಮ್ಮ ಶ್ರಮ ಮತ್ತು ಪ್ರಯತ್ನಗಳು ಗಮನಾರ್ಹ ಎನಿಸಿದರೆ ಖುಷಿ ಪಡುವ ವ್ಯಕ್ತಿಗಳು ನಾವೆಂಬುದು ನನ್ನ ಅನಿಸಿಕೆ,’ ಎಂದು ಭಾರತದ ಮೂಲದ ಈ ಅಮೆರಿಕನ್ ಸಿಇಒ ತನ್ನ ಸಂಸ್ಥೆಯ ಉದ್ಯೋಗಿಗಳಿಗೆ ತಿಳಿಸಿದರೆನ್ನಲಾಗಿದೆ.

ಇದನ್ನೂ ಓದಿ: RBI: ನಿರ್ದೇಶಕರಿಗೆ ಸಾಲ ಕೊಟ್ಟು ನಿಯಮ ಉಲ್ಲಂಘನೆ; ಟಿಡಿಸಿಸಿ ಬ್ಯಾಂಕ್​ಗೆ ದಂಡ ವಿಧಿಸಿದ ಆರ್​ಬಿಐ

‘ಹೆಚ್ಚು ಅವಧಿ ಕೆಲಸ ಮಾಡುವುದು, ಸ್ಪಂದನಾಶೀಲತೆಯಿಂದ ಇರುವುದು, ಕೆಲಸ ಮತ್ತು ಜೀವನವನ್ನು ಮಿಳಿತಗೊಳಿಸುವುದು, ಇವಕ್ಕೆ ಹಿಂಜರಿಯುವಂತಿಲ್ಲ. ಸೋಮಾರಿತನಕ್ಕೆ ಯಶಸ್ಸು ಸಿಕ್ಕ ಇತಿಹಾಸ ಸಾಕಷ್ಟಿಲ್ಲ,’ ಎಂದು ಅವರು ಹೇಳಿದ್ದಾಗಿ ಸಿಎನ್​ಎನ್ ಸುದ್ದಿವಾಹಿನಿ ವರದಿ ಮಾಡಿದೆ.

‘ಈ ದಿಕ್ಕಿನಲ್ಲಿ ನಾವೆಲ್ಲರೂ ಒಮ್ಮುಖವಾಗಿ ಸಾಗಿದರೆ ಇನ್ನೂ ಬೇಗ ಗೆಲ್ಲಬಹುದು. ನಾವು ಆಕ್ರಮಣಕಾರಿ ಪ್ರವೃತ್ತಿ ಹೊಂದಿರೋಣ, ಗ್ರಾಹಕ ಕೇಂದ್ರಿತರಾಗಿರೋಣ, ಸ್ಮಾರ್ಟ್ ಆಗಿರೋಣ’ ಎಂದು ಉದ್ಯೋಗಿಗಳಿಗೆ ನೀರತ್ ಶಾ ತಿಳಿಸಿದ್ದಾರೆ.

ಇದನ್ನೂ ಓದಿ: Own Factories: ಫ್ಯಾಕ್ಟರಿ ಸ್ಥಾಪಿಸಬೇಕೆ? ಇಲ್ಲಿವೆ ಸಣ್ಣ ಮ್ಯಾನುಫ್ಯಾಕ್ಚರಿಂಗ್ ಬಿಸಿನೆಸ್ ಐಡಿಯಾಗಳು

ವೇಫೇರ್ ಸಂಸ್ಥೆ ಪೀಠೋಪರಣವನ್ನು ಆನ್​ಲೈನ್​ನಲ್ಲಿ ಮಾರುವ ಇಕಾಮರ್ಸ್ ಸಂಸ್ಥೆ. ಅಮೆರಿಕದ ಮಸಾಚುಸೆಟ್ಸ್ ರಾಜ್ಯದ ಬೋಸ್ಟೋನ್ ನಗರದಲ್ಲಿ ಮುಖ್ಯಕಚೇರಿ ಹೊಂದಿದೆ. 2022ರಲ್ಲಿ ವೇಫೇರ್ ಶೇ. 5ರಷ್ಟು ಉದ್ಯೋಗಿಗಳನ್ನು ಲೇ ಆಫ್ ಮಾಡಿತ್ತು. ವೆಚ್ಚ ಉಳಿಸಲು ಈ ಕ್ರಮ ಕೈಗೊಳ್ಳಲಾಗಿತ್ತು. ಇದರಿಂದ ಸಂಸ್ಥೆ ಮತ್ತೆ ಲಾಭದ ಹಳಿಗೆ ಮರಳಿತು ಎನ್ನಲಾಗಿದೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಪ್ರೀತಿಯಿಂದ ಸಂಭಾವನೆ ಕೊಟ್ಟರು: ಬಿಗ್ ಬಾಸ್ ಪೇಮೆಂಟ್ ಬಗ್ಗೆ ಗೌತಮಿ ಮಾತು
ಪ್ರೀತಿಯಿಂದ ಸಂಭಾವನೆ ಕೊಟ್ಟರು: ಬಿಗ್ ಬಾಸ್ ಪೇಮೆಂಟ್ ಬಗ್ಗೆ ಗೌತಮಿ ಮಾತು
ಅಮೆರಿಕ ಅಧ್ಯಕ್ಷ ಟ್ರಂಪ್​ಗೂ ಮೊದಲೇ ಪ್ರಮಾಣವಚನ ಸ್ವೀಕರಿಸಿದ ಉಪಾಧ್ಯಕ್ಷ
ಅಮೆರಿಕ ಅಧ್ಯಕ್ಷ ಟ್ರಂಪ್​ಗೂ ಮೊದಲೇ ಪ್ರಮಾಣವಚನ ಸ್ವೀಕರಿಸಿದ ಉಪಾಧ್ಯಕ್ಷ
ಅಮೆರಿಕದ 47ನೇ ಅಧ್ಯಕ್ಷರಾಗಿ ಡೊನಾಲ್ಡ್ ಟ್ರಂಪ್​ ಪ್ರಮಾಣ ವಚನದ ನೇರಪ್ರಸಾರ
ಅಮೆರಿಕದ 47ನೇ ಅಧ್ಯಕ್ಷರಾಗಿ ಡೊನಾಲ್ಡ್ ಟ್ರಂಪ್​ ಪ್ರಮಾಣ ವಚನದ ನೇರಪ್ರಸಾರ
ಮೋಕ್ಷಿತಾ ಕಿಡ್ನಾಪ್ ಕೇಸ್ ಬಗ್ಗೆ ಗೊತ್ತಾದಾಗ ಗೌತಮಿ ರಿಯಾಕ್ಷನ್ ಹೇಗಿತ್ತು?
ಮೋಕ್ಷಿತಾ ಕಿಡ್ನಾಪ್ ಕೇಸ್ ಬಗ್ಗೆ ಗೊತ್ತಾದಾಗ ಗೌತಮಿ ರಿಯಾಕ್ಷನ್ ಹೇಗಿತ್ತು?
ಟ್ರಂಪ್ ಪ್ರಮಾಣವಚನ ಸ್ವೀಕಾರಕ್ಕೆ ಕ್ಷಣಗಣನೆ; ವೇದಿಕೆ ಸುತ್ತ ಜನವೋ ಜನ
ಟ್ರಂಪ್ ಪ್ರಮಾಣವಚನ ಸ್ವೀಕಾರಕ್ಕೆ ಕ್ಷಣಗಣನೆ; ವೇದಿಕೆ ಸುತ್ತ ಜನವೋ ಜನ
ಚಾರ್ಮಾಡಿ ಘಾಟಿಯಲ್ಲಿ ಭಾರಿ ಕಾಡ್ಗಿಚ್ಚು: ನೂರಾರು ಎಕರೆ ಅರಣ್ಯಕ್ಕೆ ಬೆಂಕಿ
ಚಾರ್ಮಾಡಿ ಘಾಟಿಯಲ್ಲಿ ಭಾರಿ ಕಾಡ್ಗಿಚ್ಚು: ನೂರಾರು ಎಕರೆ ಅರಣ್ಯಕ್ಕೆ ಬೆಂಕಿ
ನನ್ನ ವಿರುದ್ಧ ವರಿಷ್ಠರಿಗೆ ಯಾರೇ ದೂರು ನೀಡಿದರೂ ಹೆದರಲ್ಲ: ಯತ್ನಾಳ್
ನನ್ನ ವಿರುದ್ಧ ವರಿಷ್ಠರಿಗೆ ಯಾರೇ ದೂರು ನೀಡಿದರೂ ಹೆದರಲ್ಲ: ಯತ್ನಾಳ್
ಮಂಗಳೂರು ಬ್ಯಾಂಕ್ ದರೋಡೆಕೋರರು ಸಿಕ್ಕಿಬಿದ್ದಿದ್ಹೇಗೆ?
ಮಂಗಳೂರು ಬ್ಯಾಂಕ್ ದರೋಡೆಕೋರರು ಸಿಕ್ಕಿಬಿದ್ದಿದ್ಹೇಗೆ?
ಫಿನಾಲೆ ವೀಕ್ ತಲುಪದೆ ಹೋಗಿದ್ದು ನನ್ನ ಪತಿಗೆ ನಿರಾಶೆ ತಂದಿದೆ: ಗೌತಮಿ ಜಾಧವ್
ಫಿನಾಲೆ ವೀಕ್ ತಲುಪದೆ ಹೋಗಿದ್ದು ನನ್ನ ಪತಿಗೆ ನಿರಾಶೆ ತಂದಿದೆ: ಗೌತಮಿ ಜಾಧವ್
ಮಂಜು ಮನೆಯವರ ಮಾತುಗಳು ಬೇಸರ ತರಿಸಿತು: ಗೌತಮಿ
ಮಂಜು ಮನೆಯವರ ಮಾತುಗಳು ಬೇಸರ ತರಿಸಿತು: ಗೌತಮಿ