12,000 ಕೋಟಿ ರೂ ಮನಿ ಲಾಂಡರಿಂಗ್ ಆರೋಪ; ಜೇಪೀ ಇನ್ಫ್ರಾಟೆಕ್ನ ಮನೋಜ್ ಗೌರ್ ಬಂಧನ
ED arrests Jaypee Infratech MD Manoj Gaur: ಮನಿ ಲಾಂಡರಿಂಗ್ ಪ್ರಕರಣ ಸಂಬಂಧ ಜೇಪೀ ಇನ್ಫ್ರಾಟೆಕ್ನ ನಿರ್ವಾಹಕ ನಿರ್ದೇಶಕ ಮನೋಜ್ ಗೌರ್ ಅವರನ್ನು ಇಡಿ ಅಧಿಕಾರಿಗಳು ಬಂಧಿಸಿದ್ದಾರೆ. ದೆಹಲಿಯಲ್ಲಿ ವಿವಿಧ ರಿಯಲ್ ಎಸ್ಟೇಟ್ ಪ್ರಾಜೆಕ್ಟ್ಗಳ ಮೂಲಕ ಗ್ರಾಹಕರಿಂದ ಹಣ ಪಡೆದು ವಂಚಿಸಿದ ಆರೋಪ ಜೇಪೀ ಇನ್ಫ್ರಾಟೆಕ್ ಮೇಲಿದೆ. ಒಟ್ಟು 12,000 ಕೋಟಿ ರೂ ಮೊತ್ತದ ಹಣದ ಅಕ್ರಮ ನಡೆದಿರುವುದು ತಿಳಿದುಬಂದಿದೆ.

ನವದೆಹಲಿ, ನವೆಂಬರ್ 13: ಅಕ್ರಮ ಹಣ ವರ್ಗಾವಣೆ ಮತ್ತು ವಂಚನೆ ಪ್ರಕರಣಗಳ ಸಂಬಂಧ ಜಾರಿ ನಿರ್ದೇಶನಾಲಯವು ಜೇಪೀ ಇನ್ಫ್ರಾಟೆಕ್ ಲಿಮಿಟೆಡ್ನ (Jaypee Infratech Ltd) ಎಂಡಿಯಾಗಿರುವ ಮನೋಜ್ ಗೌರ್ (Manoj Gaur) ಅವರನ್ನು ಬಂಧಿಸಿದೆ. ಜೆಐಎಲ್ ಸಂಸ್ಥೆಯು ಮನೆಗಳನ್ನು ಕೊಡುವುದಾಗಿ ನಂಬಿಸಿ ಗ್ರಾಹಕರಿಂದ ಹಣ ಪಡೆದು ವಂಚಿಸಿರುವುದು ತನಿಖೆಗಳಿಂದ ಗೊತ್ತಾಗಿದೆ. ಒಟ್ಟು 12,000 ಕೋಟಿ ರೂ ಮೊತ್ತದ ಪ್ರಕರಣ ಎದ್ದುಕಾಣುತ್ತಿದೆ. ಈ ಸಂಬಂಧ ಇಡಿ ಅಧಿಕಾರಿಗಳು (ED – Enforcement Directorate) ಗುರುವಾರ ಮನೋಜ್ ಗೌರ್ ಅವರನ್ನು ಕಸ್ಟಡಿಗೆ ತೆಗೆದುಕೊಂಡು ವಿಚಾರಣೆ ನಡೆಸುತ್ತಿದೆ.
ಜೇಪೀ ಇನ್ಫ್ರಾಟೆಕ್ ವಿರುದ್ಧ ಇರುವ ಆರೋಪಗಳೇನು?
ದೆಹಲಿ ಎನ್ಸಿಆರ್ ಪ್ರದೇಶದಲ್ಲಿ ದೊಡ್ಡ ಮಟ್ಟದಲ್ಲಿ ರಿಯಲ್ ಎಸ್ಟೇಟ್ ಪ್ರಾಜೆಕ್ಟ್ಗಳನ್ನು ಕೈಗೊಂಡ ಆರಂಭಿಕ ಖಾಸಗಿ ಸಂಸ್ಥೆಗಳಲ್ಲಿ ಜೇಪೀ ಇನ್ಫ್ರಾಟೆಕ್ ಒಂದು. ಜೇಪೀ ವಿಶ್ಟೌನ್, ಜೇಪೀ ಗ್ರೀನ್ಸ್ ಮೊದಲಾದ ಬೃಹತ್ ಪ್ರಾಜೆಕ್ಟ್ಗಳ ಮೂಲಕ ಸಾವಿರಾರು ಅಪಾರ್ಟ್ಮೆಂಟ್ ಮತ್ತು ಪ್ಲಾಟ್ಗಳನ್ನು ಮಾರಲಾಗಿತ್ತು. 2010-11ರಲ್ಲಿ ಹಲವು ಫ್ಲ್ಯಾಟ್ಗಳು ಮಾರಾಟವಾದವು.
ಇದನ್ನೂ ಓದಿ: ಣ್ತಪ್ಪಿಯಾದ ತಪ್ಪು ಇಡೀ ಬ್ಯಾಂಕನ್ನೇ ದಿವಾಳಿಯಾಗಿಸುತ್ತಿತ್ತಾ? ಕರ್ಣಾಟಕ ಬ್ಯಾಂಕ್ನ 1,00,000 ಕೋಟಿ ರೂ ಫ್ಯಾಟ್ ಫಿಂಗರ್ ಕಥೆ
ಆದರೆ, ಮನೆ ಖರೀದಿದಾರರಿಗೆ ಭರವಸೆ ಕೊಟ್ಟಂತೆ ಮನೆಗಳನ್ನು ನೀಡಲಿಲ್ಲ. ಪ್ರಾಜೆಕ್ಟ್ಗಳು ವಿಳಂಬವಾದವು. ಹಣ ಕೊಟ್ಟ ಜನರು ಪ್ರತಿಭಟಿಸಿದರು. 2017ರಲ್ಲಿ ಜೇಪೀ ಇನ್ಫ್ರಾಟೆಕ್ ವಿರುದ್ಧ ಹಲವು ಎಫ್ಐಆರ್ಗಳು ದಾಖಲಾದವು. ಹೌಸಿಂಗ್ ಪ್ರಾಜೆಕ್ಟ್ಗಳಲ್ಲಿ ಹೂಡಿಕೆದಾರರು ತೊಡಗಿಸಿದ್ದ ಹಣವನ್ನು ದುರ್ಬಳಕೆ ಮಾಡಲಾಗಿದೆ, ಅಕ್ರಮವಾಗಿ ಬೇರೆಡೆ ವರ್ಗಾಯಿಸಲಾಗಿದೆ ಎಂಬಿತ್ಯಾದಿ ಆರೋಪಗಳು ಎಫ್ಐಆರ್ನಲ್ಲಿ ಬಂದವು.
ಒಟ್ಟು 12,000 ಕೋಟಿ ರೂ ಮೊತ್ತದ ಹಣವನ್ನು ಲಪಟಾಯಿಸಿರುವ ಆರೋಪ ಜೇಪೀ ಇನ್ಫ್ರಾಟೆಕ್ ಮೇಲೆ ಇದೆ. ಜಾರಿ ನಿರ್ದೇಶನಾಲಯದ ಅಧಿಕಾರಿಗಳು ಇತ್ತೀಚೆಗೆ ವಿವಿಧ ಸ್ಥಳಗಳಲ್ಲಿ ರೇಡ್ ಮಾಡಿ ಮಹತ್ವದ ದಾಖಲೆಗಳನ್ನು ವಶಕ್ಕೆ ಪಡೆದುಕೊಂಡಿರುವುದು ತಿಳಿದುಬಂದಿದೆ.
ಇದನ್ನೂ ಓದಿ: ಎಐ ಸೃಷ್ಟಿತ ಕಂಟೆಂಟ್; ಸೋಷಿಯಲ್ ಮೀಡಿಯಾಗಳಿಗೆ ಜವಾಬ್ದಾರಿ; ಬರಲಿದೆ ಹೊಸ ಕಾನೂನು
ದೆಹಲಿ, ನೊಯ್ಡಾ, ಘಾಜಿಯಾಬಾದ್ ಮತ್ತು ಮುಂಬೈನಲ್ಲಿ ಇರುವ ಜೇಪೀ ಇನ್ಫ್ರಾಟೆಕ್, ಜೈಪ್ರಕಾಶ್ ಅಸೋಸಿಯೇಟ್ಸ್ ಮತ್ತಿತರ ಕಂಪನಿಗಳಿಗೆ ಸಂಬಂಧಿಸಿದ ಸ್ಥಳಗಳಲ್ಲಿ ಇಡಿ ಶೋಧ ನಡೆಸಿದೆ. ಜೇಪೀ ಜೊತೆ ಹಣಕಾಸು ವ್ಯವಹಾರ ಹೊಂದಿರುವ ಇತರ ರಿಯಲ್ ಎಸ್ಟೇಟ್ ಕಂಪನಿಗಳಾದ ಗೌರ್ಸನ್ಸ್ ಇಂಡಿಯಾ, ಗುಲ್ಶನ್ ಹೋಮ್ಸ್, ಮಹಾಗುಣ್ ರಿಯಲ್ ಎಸ್ಟೇಟ್ ಪ್ರೈ ಲಿ ಸಂಸ್ಥೆಗಳ ಕಚೇರಿಯನ್ನೂ ಇಡಿ ಶೋಧ ನಡೆಸಿ ದಾಖಲೆಗಳನ್ನು ಪರಿಶೀಲಿಸುತ್ತಿದೆ.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ




