ಈ ವರ್ಷ ಬರಲಿದೆ ಇಪಿಎಫ್​ಒ 3.0; ಹಣ ಹಿಂಪಡೆಯುವ ಪ್ರಕ್ರಿಯೆ ಮತ್ತಷ್ಟು ಸುಗಮ

EPFO 3.0 with new features: ಉದ್ಯೋಗಿಗಳಿಗೆ ರಿಟೈರ್ಮೆಂಟ್ ಸ್ಕೀಮ್ ಎನಿಸಿರುವ ಇಪಿಎಫ್​ನಲ್ಲಿ ಕಳೆದ ಹಲವು ವರ್ಷಗಳಿಂದ ಸಾಕಷ್ಟು ಸುಧಾರಣೆಗಳಾಗಿವೆ. 2014ಕ್ಕೆ ಮುಂಚೆ ಇದ್ದ ವ್ಯವಸ್ಥೆಗಿಂತ ಈಗ ಹೆಚ್ಚಿನ ಪ್ರಕ್ರಿಯೆಗಳು ಸುಗಮಗೊಂಡಿವೆ. ಸರ್ಕಾರ ಇದೀಗ ಇಪಿಎಫ್​ಒ 3.0 ರೂಪಿಸಿದ್ದು, ಇದರಲ್ಲಿ ಅನೇಕ ಹೊಸ ಫೀಚರ್ಗಳಿವೆ. ಕೆಲವು ಈಗಾಗಲೇ ಜಾರಿಯಲ್ಲಿವೆ. ಇನ್ನೂ ಕೆಲವು ಈ ವರ್ಷದೊಳಗೆ ಜಾರಿಯಾಗಬಹುದು.

ಈ ವರ್ಷ ಬರಲಿದೆ ಇಪಿಎಫ್​ಒ 3.0; ಹಣ ಹಿಂಪಡೆಯುವ ಪ್ರಕ್ರಿಯೆ ಮತ್ತಷ್ಟು ಸುಗಮ
ಇಪಿಎಫ್
Image Credit source: Shutterstock

Updated on: Apr 07, 2026 | 7:27 PM

ನವದೆಹಲಿ, ಏಪ್ರಿಲ್ 7: ಭಾರತದಲ್ಲಿ ಹೆಚ್ಚಿನ ಉದ್ಯೋಗಿಗಳಿಗೆ ರಿಟೈರ್ಮೆಂಟ್ ಸ್ಕೀಮ್ ಆಗಿ ಇಪಿಎಫ್ (EPF) ಇದೆ. ಕಳೆದ ಒಂದು ದಶಕದಲ್ಲಿ ಇಪಿಎಫ್ ಸಿಸ್ಟಂನಲ್ಲಿ ಗಮನಾರ್ಹ ಮಾರ್ಪಾಡುಗಳಾಗಿವೆ. ಆನ್​ಲೈನ್​ನಲ್ಲೇ ಹೆಚ್ಚಿನ ಕಾರ್ಯಗಳು ನಡೆಯುತ್ತಿವೆ. ಇಡೀ ಸಿಸ್ಟಂ ಅನ್ನು ತಕ್ಕಮಟ್ಟಿಗೆ ಸ್ಟ್ರೀಮ್​ಲೈನ್ ಮಾಡಲಾಗಿದೆ. ಮೂಲ ಇಪಿಎಫ್​ಒನಲ್ಲಿದ್ದ ಸಿಸ್ಟಂಗೂ ಇಪಿಎಫ್​ಒ 2.0ಗೂ ಅಜಗಜಾಂತರ ವ್ಯತ್ಯಾಸ ಗುರುತಿಸಬಹುದು. ಹಣ ವಿತ್​ಡ್ರಾ ಮಾಡುವುದು, ಯುಎಎನ್ ಅಡಿಯಲ್ಲಿ ಅಕೌಂಟ್​ಗಳನ್ನು ಸೇರಿಸುವುದು, ವಿಲೀನಗೊಳಿಸುವುದು ಇವೆಲ್ಲಾ ಪ್ರಕ್ರಿಯೆಗಳು ಸರಳಗೊಂಡಿವೆ. ಇದೇ ಹೊತ್ತಲ್ಲಿ ಸರ್ಕಾರ ಇಪಿಎಫ್​ಒ 3.0 ಅನ್ನು ಜಾರಿಗೆ ತರಲು ಹೊರಟಿದೆ.

ಇದು ಪ್ರಾವಿಡೆಂಟ್ ಫಂಡ್ ಸಿಸ್ಟಂಗಳನ್ನು ಮತ್ತಷ್ಟು ಸರಳಗೊಳಿಸುವ ಉದ್ದೇಶ ಹೊಂದಿದೆ. ಇಪಿಎಫ್​ಒ 3.0ದ ಅನೇಕ ಫೀಚರ್​ಗಳನ್ನು ಹಂತ ಹಂತವಾಗಿ ಜಾರಿಗೊಳಿಸುತ್ತಾ ಬರಲಾಗುತ್ತಿದೆ. ಈಗಾಗಲೇ ಕೆಲವು ಅಳವಡಿಕೆ ಆಗಿವೆ. ಮುಂಬರುವ ತಿಂಗಳುಗಳಲ್ಲಿ ಇಪಿಎಫ್​ಒ 3.0 ಅನ್ನು ಪೂರ್ಣವಾಗಿ ಜಾರಿಗೆ ತರಲಾಗುತ್ತದೆ.

ಇದನ್ನೂ ಓದಿ: ಪಶ್ಚಿಮ ಏಷ್ಯಾ ಬಿಕ್ಕಟ್ಟಿಗೆ ಸಿಲುಕಿರುವ ಸಣ್ಣ ಉದ್ದಿಮೆಗಳಿಗೆ ಸರ್ಕಾರದಿಂದ 2.5 ಲಕ್ಷ ಕೋಟಿ ರೂ ಸಾಲ ಖಾತ್ರಿ ಯೋಜನೆ ನೆರವು

ಇಪಿಎಫ್ ಹಣ ಬೇಗ ಕ್ಲೇಮ್ ಮಾಡಲು ಸಾಧ್ಯ

ಇಪಿಎಫ್​ಒ 2.0 ಮುಂಚಿನ ವ್ಯವಸ್ಥೆಯಲ್ಲಿ ಪಿಎಫ್ ಹಣ ಹಿಂಪಡೆಯಲು ಅನೇಕ ಕಟ್ಟುಪಾಡುಗಳಿದ್ದವು. ಪಿಎಫ್ ಕಚೇರಿಗೆ ಸಾಕಷ್ಟು ಬಾರಿ ಅಲೆದಾಡಬೇಕಿತ್ತು. ಆದರೆ, ವಿವಿಧ ಸುಧಾರಣಾ ಕ್ರಮಗಳನ್ನು ತಂದು, ಪಿಎಫ್ ಹಣ ವಿತ್​ಡ್ರಾ ಮಾಡುವ ಪ್ರಕ್ರಿಯೆಗಳನ್ನು ಸರಳಗೊಳಿಸಲಾಯಿತು. ಆನ್​ಲೈನ್​ನಲ್ಲಿ ಕ್ಲೇಮ್​ಗೆ ಅರ್ಜಿ ಸಲ್ಲಿಸುವ ಅವಕಾಶ ನೀಡಲಾಯಿತು. ಕೆಲ ವಾರಗಳಲ್ಲಿ ಹಣ ಬ್ಯಾಂಕ್ ಅಕೌಂಟ್​ಗೆ ಜಮೆ ಆಗುತ್ತದೆ.

ಈಗ ಇಪಿಎಫ್​ಒ 3.0 ವ್ಯವಸ್ಥೆಯಲ್ಲಿ ಪಿಎಫ್ ಹಣಕ್ಕೆ ಕ್ಲೇಮ್ ಮಾಡುವ ಮಿತಿಯನ್ನು 5 ಲಕ್ಷ ರೂಗೆ ಏರಿಸಲಾಗಿದೆ. ಇಷ್ಟು ಮೊತ್ತದ ಹಣಕ್ಕೆ ಸಲ್ಲಿಸುವ ಮನವಿಯನ್ನು ಆಟೊಮ್ಯಾಟಿಕ್ ಆಗಿ ಪ್ರೋಸಸ್ ಮಾಡಲಾಗುತ್ತದೆ. ಮ್ಯಾನುಯಲ್ ಆಗಿ ಅಧಿಕಾರಿಗಳು ಅನುಮೋದನೆ ಮಾಡುವ ಅಗತ್ಯ ಇರುವುದಿಲ್ಲ.

ಪಿಎಫ್ ಅಕೌಂಟ್​ಗಳನ್ನು ಒಂದು ಕಂಪನಿಯಿಂದ ಇನ್ನೊಂದು ಕಂಪನಿಗೆ ರವಾನೆ ಮಾಡಲು ಕಂಪನಿಯ ವೆರಿಫಿಕೇಶನ್ ಬೇಕಿತ್ತು. ಆದರೆ, ಹೊಸ ಸಿಸ್ಟಂನಲ್ಲಿ ಅದು ಆಟೊಮ್ಯಾಟಿಕ್ ಆಗಿ ಆಗುತ್ತದೆ.

ಇದನ್ನೂ ಓದಿ: ಅಮೆರಿಕ, ಜಪಾನ್, ಜರ್ಮನಿಗೂ ಸಾಧ್ಯವಾಗದ ಅಡ್ವಾನ್ಸ್ಡ್ ರಿಯಾಕ್ಟರ್ ಸಾಧಿಸಿದ ಭಾರತ; ದೇಶದ ಇಂಧನ ಭವಿಷ್ಯ ಸುರಕ್ಷಿತ?

ಯುಪಿಐ ಮೂಲಕ ಹಣ ವಿತ್​ಡ್ರಾ ಮಾಡಬಹುದು

ಇಪಿಎಫ್​ಒ 3.0ನಲ್ಲಿ ಎಲ್ಲರೂ ಎದುರು ನೋಡುತ್ತಿರುವ ಹೊಸ ಫೀಚರ್ ಎಂದರೆ ಅದು ಯುಪಿಐ ವಿತ್​ಡ್ರಾಯಲ್. ಇಪಿಎಫ್ ಖಾತೆದಾರರು ತಮ್ಮ ಪಿಎಫ್ ಅಕೌಂಟ್​ನಲ್ಲಿರುವ ನಿರ್ದಿಷ್ಟ ಹಣವನ್ನು ಯುಪಿಐ ಮೂಲಕ ವಿತ್​ಡ್ರಾ ಮಾಡುವ ಅವಕಾಶ ಸಿಗುತ್ತದೆ. ಇಪಿಎಫ್ ಅಕೌಂಟ್​ನಲ್ಲಿರುವ ಹಣವನ್ನು ಸದಸ್ಯರು ತಮ್ಮ ಬ್ಯಾಂಕ್ ಅಕೌಂಟ್​ಗೆ ಟ್ರಾನ್ಸ್​ಫರ್ ಮಾಡಬಹುದು. ಈ ಫೀಚರ್ ಅನ್ನು ಸದ್ಯ ಅಭಿವೃದ್ಧಿಪಡಿಸಲಾಗುತ್ತಿದ್ದು, ಈ ವರ್ಷದಲ್ಲೇ ಅದು ಜಾರಿಯಾಗುವ ನಿರೀಕ್ಷೆ ಇದೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Published On - 7:27 pm, Tue, 7 April 26

ಸುಗ್ಗನಹಳ್ಳಿ ವಿಜಯಸಾರಥಿ

ಹುಟ್ಟೂರು ಹಾಸನ ಜಿಲ್ಲೆಯ ಶ್ರವಣಬೆಳಗೊಳ ಸಮೀಪದ ಒಂದು ಪುಟ್ಟ ಹಳ್ಳಿ. ಬೆಳದದ್ದು ಬೆಂಗಳೂರು ನಗರದಲ್ಲಿ. ಹಲವು ವರ್ಷಗಳಿಂದ ಪತ್ರಿಕಾ ರಂಗದಲ್ಲಿ ನೆಲೆ. ಬರವಣಿಗೆಯ ಆಸಕ್ತಿ ಮತ್ತು ಪರಿಣಿತಿಯ ಕ್ಷೇತ್ರಗಳು ಆರ್ಥಿಕತೆ, ಹಣಕಾಸು, ಅಂತರರಾಷ್ಟ್ರೀಯ ವಿದ್ಯಮಾನ, ಜನಕ್ರಾಂತಿ, ರಾಷ್ಟ್ರೀಯತೆ, ಸಂಸ್ಕೃತಿ, ಮಾನವ ಸಂಬಂಧ, ಕ್ರೀಡೆ ಮೊದಲಾದವು ಇವೆ. ಓದುಗರಿಗೆ ಸುಲಭವಾಗಿ ಅರ್ಥವಾಗುವಂತೆ ಸಾಧ್ಯವಾದಷ್ಟೂ ಸ್ಫುಟವಾಗಿ, ಸರಳವಾಗಿ ಬರೆಯುವ ಇಚ್ಛೆ.

Read More
Follow Us