AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಪಶ್ಚಿಮ ಏಷ್ಯಾ ಬಿಕ್ಕಟ್ಟಿಗೆ ಸಿಲುಕಿರುವ ಸಣ್ಣ ಉದ್ದಿಮೆಗಳಿಗೆ ಸರ್ಕಾರದಿಂದ 2.5 ಲಕ್ಷ ಕೋಟಿ ರೂ ಸಾಲ ಖಾತ್ರಿ ಯೋಜನೆ ನೆರವು

Govt plans for big credit guarantee scheme: ಇರಾನ್ ಯುದ್ಧದಿಂದಾಗಿ ತೈಲ ಪೂರೈಕೆ, ಪೆಟ್ರೋಕೆಮಿಕಲ್ ಉತ್ಪನ್ನಗಳ ಪೂರೈಕೆಯಲ್ಲಿ ವ್ಯತ್ಯಯ ಆಗಿ, ಅನೇಕ ಉದ್ದಿಮೆಗಳು ಬಾಧಿತವಾಗಿವೆ. ಇವುಗಳ ನೆರವಿಗೆ ಸರ್ಕಾರ ಹೊಸ ಯೋಜನೆ ಹಾಕುತ್ತಿದೆ. ಹಿಂದೆ ಕೋವಿಡ್ ಸಂದರ್ಭದಲ್ಲಿ ಮಾಡಿದ ಕ್ರೆಡಿಟ್ ಗ್ಯಾರಂಟಿ ಯೋಜನೆ ಯಶಸ್ವಿಯಾಗಿತ್ತು. ಅದೇ ಮಾದರಿಯಲ್ಲಿ ಇನ್ನೂ ವಿಸ್ತೃತವಾದ ಯೋಜನೆ ರೂಪಿಸಲು ಹೊರಟಿದೆ ಸರ್ಕಾರ.

ಪಶ್ಚಿಮ ಏಷ್ಯಾ ಬಿಕ್ಕಟ್ಟಿಗೆ ಸಿಲುಕಿರುವ ಸಣ್ಣ ಉದ್ದಿಮೆಗಳಿಗೆ ಸರ್ಕಾರದಿಂದ 2.5 ಲಕ್ಷ ಕೋಟಿ ರೂ ಸಾಲ ಖಾತ್ರಿ ಯೋಜನೆ ನೆರವು
ಸಾಲImage Credit source: Shutterstock
ಸುಗ್ಗನಹಳ್ಳಿ ವಿಜಯಸಾರಥಿ
|

Updated on: Apr 07, 2026 | 6:52 PM

Share

ನವದೆಹಲಿ, ಏಪ್ರಿಲ್ 7: ಪಶ್ಚಿಮ ಏಷ್ಯನ್ ಬಿಕ್ಕಟ್ಟಿನಿಂದ ಭಾರತದ ಹಲವು ಕ್ಷೇತ್ರಗಳು ಬಾಧಿತವಾಗಿವೆ. ಈ ಸಂಕಷ್ಟದ ಸಂದರ್ಭದಲ್ಲಿ ಬಾಧಿಕ ಕ್ಷೇತ್ರಗಳೆಲ್ಲವಕ್ಕೂ ನೆರವು ನೀಡಲು ಕೇಂದ್ರ ಸರ್ಕಾರ ಸಾಲ ಖಾತ್ರಿ ಯೋಜನೆ ಆರಂಭಿಸಲು ಯೋಜಿಸಿದೆ. ಕೋವಿಡ್ ಸಂದರ್ಭದಲ್ಲಿ ಬಿಡುಗಡೆ ಮಾಡಿದ ಪ್ಯಾಕೇಜ್ ಮಾದರಿಯಲ್ಲಿ ಇರುವ ಈ ಕ್ರೆಡಿಟ್ ಗ್ಯಾರಂಟಿ ಸ್ಕೀಮ್​ನ (Credit Guarantee scheme) ಒಟ್ಟು ಮೊತ್ತ 2.5 ಲಕ್ಷ ಕೋಟಿ ರೂ ಇರುವ ಅಂದಾಜು ಇದೆ ಎಂದು ಮನಿಕಂಟ್ರೋಲ್​ನಲ್ಲಿ ವರದಿ ಮಾಡಲಾಗಿದೆ. ಇಬ್ಬರು ಅಧಿಕಾರಿಗಳ ಮೂಲಗಳಿಂದ ಈ ಮಾಹಿತಿ ಸಿಕ್ಕಿದೆ.

2020ರಲ್ಲಿ ಕೋವಿಡ್ ಬಂದಾಗ ಲಾಕ್​ಡೌನ್ ಕಾರಣದಿಂದ ಆರ್ಥಿಕತೆ ಸ್ಥಗಿತಗೊಂಡಿತ್ತು. ಬಹುತೇಕ ಎಲ್ಲಾ ಉದ್ಯಮಗಳು ನಲುಗಿದ್ದವು. ಅದರಲ್ಲೂ ಎಂಎಸ್​ಎಂಇಗಳು ವಿಪರೀತ ಹೊಡೆತ ತಿಂದಿದ್ದವು. ಅವುಗಳಿಗೆ ಚೇತರಿಕೆ ನೀಡುವ ಸಲುವಾಗಿ ಸರ್ಕಾರವು ಇಸಿಜಿಎಲ್​ಎಸ್ ಅಥವಾ ತುರ್ತು ಸಾಲ ಖಾತ್ರಿ ಯೋಜನೆ ಹಾಕಿತ್ತು. ಈಗ ಸರ್ಕಾರ ಯೋಜಿಸಿರುವುದು ಆ ಯೋಜನೆಯ ವಿಸ್ತೃತ ರೂಪವಾಗಿದೆ.

ಇದನ್ನೂ ಓದಿ: ಅಮೆರಿಕ, ಜಪಾನ್, ಜರ್ಮನಿಗೂ ಸಾಧ್ಯವಾಗದ ಅಡ್ವಾನ್ಸ್ಡ್ ರಿಯಾಕ್ಟರ್ ಸಾಧಿಸಿದ ಭಾರತ; ದೇಶದ ಇಂಧನ ಭವಿಷ್ಯ ಸುರಕ್ಷಿತ?

ಉದ್ದಿಮೆಗಳಿಗೆ ಸರ್ಕಾರದಿಂದ ಸಾಲ ಖಾತ್ರಿ

ವಿವಿಧ ಉದ್ದಿಮೆಗಳು ಸಾಲ ಪಡೆಯಲು ಸಾಧ್ಯವಾಗುವಂತೆ ನ್ಯಾಷನಲ್ ಕ್ರೆಡಿಟ್ ಕ್ಯಾರಂಟಿ ಟ್ರಸ್ಟೀ ಕಂಪನಿಯಿಂದ ಶೇ. 90ರಷ್ಟು ಕ್ರೆಡಿಟ್ ಗ್ಯಾರಂಟಿ ಒದಗಿಸುವ ಉದ್ದೇಶ ಈ ಸ್ಕೀಮ್​ನದ್ದಾಗಿದೆ. ಒಂದು ವೇಳೆ, ಸಾಲ ತೆಗೆದುಕೊಂಡವರು ತೀರಿಸಲು ವಿಫಲರಾದಲ್ಲಿ ಸರ್ಕಾರವು ಆ ಸಾಲವನ್ನು ಭರಿಸುತ್ತದೆ.

ಕೋವಿಡ್ ಸಂದರ್ಭದಲ್ಲಿ ಜಾರಿಗೊಳಿಸಲಾದ ಸಾಲ ಖಾತ್ರಿ ಸ್ಕೀಮ್​ನಲ್ಲಿ ಬಡ್ಡಿದರ ಹೆಚ್ಚಾಗದಂತೆ ಮಿತಿ ಹಾಕಲಾಗಿತ್ತು. ಬ್ಯಾಂಕುಗಳು ಈ ಸ್ಕೀಮ್​ನಲ್ಲಿ ನೀಡುವ ಸಾಲಗಳಿಗೆ ವಿಧಿಸುವ ಬಡ್ಡಿ ದರ ಶೇ. 9.25 ಮೀರಬಾರದು, ಮತ್ತು ಎನ್​ಬಿಎಫ್​ಸಿಗಳು ಶೇ. 14ಕ್ಕಿಂತ ಹೆಚ್ಚು ಬಡ್ಡಿ ವಿಧಿಸಬಾರದು ಎಂದು ಸರ್ಕಾರ ಒಂದು ಮಿತಿ ಹಾಕಿತ್ತು. ಹಾಗೆಯೇ, ಒಂದು ವರ್ಷ ಅಸಲು ಹಣ ಪಾವತಿಸುವ ಅವಶ್ಯಕತೆ ಇಲ್ಲದೆ, ಕೇವಲ ಬಡ್ಡಿ ಮಾತ್ರ ಕಟ್ಟಿಕೊಂಡು ಹೋಗುವ ಅವಕಾಶ ನೀಡಲಾಗಿತ್ತು.

ಇದನ್ನೂ ಓದಿ: ಐದು ಕಿಲೋ ಎಲ್​ಪಿಜಿ ಸಿಲಿಂಡರ್ ಹಂಚಿಕೆ ಎರಡು ಪಟ್ಟು ಹೆಚ್ಚಳ; ವಲಸೆ ಕಾರ್ಮಿಕರಿಗೆ ನಿರಾಳ

ಈ ಸ್ಕೀಮ್ ಅಡಿಯಲ್ಲಿ ಒಟ್ಟು ನೀಡಿದ ಕ್ರೆಡಿಟ್ ಗ್ಯಾರಂಟಿಗಳ ಸಂಖ್ಯೆ 1.19 ಕೋಟಿ. ಈ ಪೈಕಿ ಎಂಎಸ್​ಎಂಇಗಳಿಗೆ ನೀಡಿದ್ದು 1.13 ಕೋಟಿ ಗ್ಯಾರಂಟಿಗಳು. ಆ ಸಂದರ್ಭದಲ್ಲಿ ಬಾಧಿತ ಉದ್ದಿಮೆಗಳಿಗೆ ಈ ಸಾಲ ಬಹಳ ಉಪಯೋಗಕ್ಕೆ ಬಂದಿದ್ದು ಗಮನಾರ್ಹ. ಹೀಗಾಗಿ, ಅದೇ ಮಾದರಿಯಲ್ಲಿ ಇನ್ನೂ ವಿಸ್ತೃತವಾದ ಸ್ಕೀಮ್ ಅನ್ನು ಈಗ ರೂಪಿಸಲು ಸರ್ಕಾರ ಮುಂದಾಗಿದೆ ಎಂದು ಮನಿಕಂಟ್ರೋಲ್ ವರದಿಯಲ್ಲಿ ಹೇಳಲಾಗಿದೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Follow Us