AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಹಾರುವ ಆಂಬುಲೆನ್ಸ್; 788 ಇ-ವಿಮಾನಗಳ ಸರಬರಾಜು ಮಾಡಲಿರುವ ಇಪ್ಲೇನ್ ಕಂಪನಿ

Air Ambulances in India: ಭಾರತದಲ್ಲಿ ಸದ್ಯದಲ್ಲೇ ಏರ್ ಕ್ಯಾಬ್​ಗಳು ಹಾರಾಡಲಿವೆ. ಮೊದಲಿಗೆ ಏರ್ ಆಂಬುಲೆನ್ಸ್ ಬರಲಿವೆ. ಐಸಿಎಟಿಟಿ ಎನ್ನುವ ಏರ್ ಆಂಬುಲೆನ್ಸ್ ಸರ್ವಿಸ್ ಸಂಸ್ಥೆಯು ಇಪ್ಲೇನ್ ಕಂಪನಿಗೆ 788 ಏರ್ ಆಂಬುಲೆನ್ಸ್​ಗಳ ತಯಾರಿಕೆಗೆ ಗುತ್ತಿಗೆ ನೀಡಿದೆ. ಒಂದು ಬಿಲಿಯನ್ ಡಾಲರ್ ಮೊತ್ತದ ಗುತ್ತಿಗೆ ಇದಾಗಿದೆ. ಒಬ್ಬ ಪೈಲಟ್, ಒಬ್ಬ ರೋಗಿ ಹಾಗು ಮತ್ತೊಬ್ಬ ವ್ಯಕ್ತಿ ಈ ಮಿನಿ ಎಲೆಕ್ಟ್ರಿಕ್ ವಿಮಾನದಂತಹ ವಾಹನದಲ್ಲಿ ಪ್ರಯಾಣಿಸಬಹುದು.

ಹಾರುವ ಆಂಬುಲೆನ್ಸ್; 788 ಇ-ವಿಮಾನಗಳ ಸರಬರಾಜು ಮಾಡಲಿರುವ ಇಪ್ಲೇನ್ ಕಂಪನಿ
ಏರ್ ಟ್ಯಾಕ್ಸಿ
ಸುಗ್ಗನಹಳ್ಳಿ ವಿಜಯಸಾರಥಿ
|

Updated on: Feb 17, 2025 | 4:09 PM

Share

ನವದೆಹಲಿ, ಫೆಬ್ರುವರಿ 17: ತುರ್ತು ಆರೋಗ್ಯ ಪರಿಸ್ಥಿತಿಯಲ್ಲಿ ಆಂಬುಲೆನ್ಸ್ ವಾಹನಗಳ ಅವಶ್ಯಕತೆ ಬಹಳ ಇರುತ್ತದೆ. ಟ್ರಾಫಿಕ್ ಸಮಸ್ಯೆ ಇತ್ಯಾದಿ ಕಾರಣದಿಂದ ಆಂಬುಲೆನ್ಸ್​ಗಳಲ್ಲಿ ಸಕಾಲಕ್ಕೆ ರೋಗಿಯನ್ನು ಕರೆದೊಯ್ಯಲು ಕಷ್ಟವಾಗಬಹುದು. ಇನ್ಮುಂದೆ ಈ ಸಮಸ್ಯೆ ಕಡಿಮೆಗೊಳ್ಳಬಹುದು. ಭಾರತದಲ್ಲಿ ಏರ್ ಆಂಬುಲೆನ್ಸ್​ಗಳು ಬರುತ್ತಿವೆ. ಭಾರತದ ಎಲೆಕ್ಟ್ರಿಕ್ ವಿಮಾನ ತಯಾರಿಸುವ ಇಪ್ಲೇನ್ ಕಂಪನಿ ಏರ್ ಆಂಬುಲೆನ್ಸ್ ತಯಾರಿಸಲು ಒಂದು ಬಿಲಿಯನ್ ಡಾಲರ್ ಮೊತ್ತದ ಗುತ್ತಿಗೆ ಪಡೆದಿದೆ. ಏರ್ ಆಂಬುಲೆನ್ಸ್ ಸರ್ವಿಸ್ ನೀಡುವ ಐಸಿಎಟಿಟಿ ಸಂಸ್ಥೆ ಈ ಗುತ್ತಿಗೆ ನೀಡಿದೆ. ದೇಶದ ಎಲ್ಲಾ ಜಿಲ್ಲೆಗಳಿಗೂ ಈ ಬ್ಯಾಟರಿ ಚಾಲಿತ ಪುಟ್ಟ ವೈಮಾನಿಕ ವಾಹನಗಳನ್ನು ನಿಯೋಜಿಸಬಹುದು.

ಇಪ್ಲೇನ್ ಕಂಪನಿಯ ಏರ್ ಆಂಬುಲೆನ್ಸ್ ವಾಹನವು ಒಂದು eVTOL (ಎಲೆಕ್ಟ್ರಿಕ್ ವರ್ಟಿಕಲ್ ಟೇಕಾಫ್ ಅಂಡ್ ಲ್ಯಾಂಡಿಂಗ್) ವಿಮಾನ. ಕಾಪ್ಟರ್ ಮತ್ತು ಡ್ರೋನ್ ಮಾದರಿಯಲ್ಲಿ ಇದು ಲಂಬವಾಗ ಮೇಲೇರಿ, ಲಂಬವಾಗಿಯೇ ಇಳಿಯಬಲ್ಲಂತಹ ವಾಹನ. ಈ ರೀತಿಯ ವಾಹನಗಳು ವಿಶ್ವದಲ್ಲಿ ಬೇರೆಲ್ಲೂ ನಿಯೋಜನೆಯಾಗಿಲ್ಲ. ಒಂದು ವೇಳೆ ಇಪ್ಲೇನ್ ಈ ವಾಹನಗಳನ್ನು ತಯಾರಿಸಿ ಕೊಟ್ಟಿದ್ದೆ ಆದಲ್ಲಿ ಹೊಸ ಇತಿಹಾಸ ಸೃಷ್ಟಿಸಿದಂತಾಗುತ್ತದೆ. ಭಾರತದಲ್ಲಿ ಮಾತ್ರವಲ್ಲ, ವಿಶ್ವದಲ್ಲೇ ಮೊದಲ ಏರ್ ಆಂಬುಲೆನ್ಸ್ ಇದಾಗಲಿದೆ. ಬೆಂಗಳೂರಿನಂಥ ಹೀನಾಯ ಟ್ರಾಫಿಕ್ ಇರುವ ನಗರಗಳಲ್ಲಿ ಈ ಮಿನಿ ವಿಮಾನಗಳು ಹೊಸ ಸಾಗಣೆ ಕ್ರಾಂತಿಯನ್ನೇ ತರಬಲ್ಲುವು.

ಇದನ್ನೂ ಓದಿ: ಈ ವರ್ಷ 10 ತಿಂಗಳಲ್ಲೇ ಭಾರತದಿಂದ ಸ್ಮಾರ್ಟ್​ಫೋನ್ ರಫ್ತು 1.50 ಲಕ್ಷ ಕೋಟಿ ರೂ ಮೈಲಿಗಲ್ಲು; ಹೊಸ ದಾಖಲೆ

ಈ ಪ್ರಯೋಗ ಯಶಸ್ವಿಯಾದಲ್ಲಿ ಮುಂದಿನ ದಿನಗಳಲ್ಲಿ ಭಾರತದಲ್ಲಿ ಏರ್ ಟ್ಯಾಕ್ಸಿ ಹಾರಾಡುವ ಪರ್ವ ಶುರುವಾಗಲಿದೆ. ವಿಶ್ವದಲ್ಲಿ ಹಲವು ಕಂಪನಿಗಳು ಇವಿಟಾಲ್ ಅಥವಾ ಎಲೆಕ್ಟ್ರಿಕ್ ವೈಮಾನಿಕ ವಾಹನಗಳನ್ನು ತಯಾರಿಸುತ್ತವೆ. ಆದರೆ, ಅವಿನ್ನೂ ಕೂಡ ಪ್ರಯೋಗ ಹಂತದಲ್ಲಿ ಇವೆ. ಭಾರತದಲ್ಲೂ ಇಪ್ಲೇನ್ ಕಂಪನಿ ಮಾತ್ರವಲ್ಲ, ಆರ್ಚರ್ ಏವಿಯೇಶನ್, ಸರಳಾ ಏವಿಯೇಶನ್ ಇತ್ಯಾದಿ ಕಂಪನಿಗಳೂ ಏರ್ ಟ್ಯಾಕ್ಸಿಗಳನ್ನು ತಯಾರಿಸಬಲ್ಲುವು.

ಇಪ್ಲೇನ್ ನೀಡಿರುವ ಮಾಹಿತಿ ಪ್ರಕಾರ 2026ರಲ್ಲಿ ಈ ಎಲೆಕ್ಟ್ರಿಕ್ ವೈಮಾನಿಕ ವಾಹನಗಳ ಕಮರ್ಷಿಯಲ್ ಬಳಕೆ ಶುರುವಾಗಬಹುದು. ವರ್ಷಕ್ಕೆ ನೂರು ವಾಹನಗಳನ್ನು ತಯಾರಿಸುವ ಸಾಮರ್ಥ್ಯ ಈ ಕಂಪನಿಗೆ ಇದೆ. ಏರ್ ಟ್ಯಾಕ್ಸಿಗಳಿಗೆ ಬೇಡಿಕೆ ಇದೆಯಾದರೂ ಮೊದಲಿಗೆ ಏರ್ ಆ್ಯಂಬುಲೆನ್ಸ್ ಪ್ರಯೋಗ ಉತ್ತಮ. ಅಗತ್ಯ ಬಿದ್ದರೆ ವರ್ಷಕ್ಕೆ ಹೆಚ್ಚೆಚ್ಚು ವಾಹನಗಳನ್ನು ತಯಾರಿಸುವ ಸಾಮರ್ಥ್ಯ ಹೆಚ್ಚಿಸಿಕೊಳ್ಳಬಹುದು ಎನ್ನುವುದು ಕಂಪನಿಯ ಅನಿಸಿಕೆ.

ಇದನ್ನೂ ಓದಿ: ಜವಳಿ ಕ್ಷೇತ್ರಕ್ಕೆ 9 ಲಕ್ಷ ಕೋಟಿ ರೂ ರಫ್ತು ಟಾರ್ಗೆಟ್ ಇಟ್ಟ ಪಿಎಂ ಮೋದಿ

ಇಪ್ಲೇನ್​ನ ಈ ಏರ್ ಆ್ಯಂಬುಲೆನ್ಸ್ ವಾಹನ ಬ್ಯಾಟರಿ ಚಾಲಿತವಾಗಿದ್ದು, ಒಮ್ಮೆ ಚಾರ್ಜ್ ಮಾಡಿದರೆ 110 ಕಿಮೀ ದೂರ ಸಾಗಬಲ್ಲುದು. ಇದರ ಶ್ರೇಣಿಯನ್ನು 200 ಕಿಮೀಗೆ ವಿಸ್ತರಿಸಬಹುದು ಎನ್ನಲಾಗಿದೆ. ಈ ಏರ್ ಆಂಬುಲೆನ್ಸ್​ನಲ್ಲಿ ಒಬ್ಬ ಪೈಲಟ್, ಒಬ್ಬ ವೈದ್ಯಕೀಯ ಉಪಚಾರಕ, ಮತ್ತು ಒಬ್ಬ ರೋಗಿ, ಹೀಗೆ ಮೂವರಿಗೆ ಅವಕಾಶ ಇರುತ್ತದೆ. ಜೊತೆಗೆ ಸ್ಟ್ರೆಚರ್​ಗೂ ಸ್ಥಳಾವಕಾಶ ಇರುತ್ತದೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಜರ್ಮನ್ ಚಾನ್ಸೆಲರ್ ಜತೆ ಸಬರಮತಿ ಆಶ್ರಮದಲ್ಲಿ ಗಾಳಿಪಟ ಹಾರಿಸಿದ ಮೋದಿ
ಜರ್ಮನ್ ಚಾನ್ಸೆಲರ್ ಜತೆ ಸಬರಮತಿ ಆಶ್ರಮದಲ್ಲಿ ಗಾಳಿಪಟ ಹಾರಿಸಿದ ಮೋದಿ
ಲಕ್ಕುಂಡಿ: ಈ ಹಿಂದೆ ನಿಧಿಗೆ ಆಸೆ ಪಟ್ಟವರು ರಕ್ತಕಾರಿ ಸತ್ತಿದ್ದಾರೆಂದ ಕಣವಿ!
ಲಕ್ಕುಂಡಿ: ಈ ಹಿಂದೆ ನಿಧಿಗೆ ಆಸೆ ಪಟ್ಟವರು ರಕ್ತಕಾರಿ ಸತ್ತಿದ್ದಾರೆಂದ ಕಣವಿ!
ಶಕ್ತಿ ಯೋಜನೆ ಎಫೆಕ್ಟ್​​​ಗೆ ಮಹಿಳೆಯರು ಸುಸ್ತೋ ಸುಸ್ತು
ಶಕ್ತಿ ಯೋಜನೆ ಎಫೆಕ್ಟ್​​​ಗೆ ಮಹಿಳೆಯರು ಸುಸ್ತೋ ಸುಸ್ತು
ಅಮೆರಿಕದಲ್ಲಿ ಇರಾನ್ ವಿರೋಧಿ ಪ್ರತಿಭಟನಾ ರ‍್ಯಾಲಿ ವೇಳೆ ನುಗ್ಗಿದ ಟ್ರಕ್
ಅಮೆರಿಕದಲ್ಲಿ ಇರಾನ್ ವಿರೋಧಿ ಪ್ರತಿಭಟನಾ ರ‍್ಯಾಲಿ ವೇಳೆ ನುಗ್ಗಿದ ಟ್ರಕ್
ಸೋಲಬಹುದು, ಸತ್ತಿಲ್ಲ; ಎವಿಕ್ಷನ್ ಸ್ಪೀಚ್ ಕೊಟ್ಟ ಗಿಲ್ಲಿ ನಟ 
ಸೋಲಬಹುದು, ಸತ್ತಿಲ್ಲ; ಎವಿಕ್ಷನ್ ಸ್ಪೀಚ್ ಕೊಟ್ಟ ಗಿಲ್ಲಿ ನಟ 
VIDEO: ಇದು WPL ಇತಿಹಾಸದ ಅತ್ಯಂತ ದುಬಾರಿ ಓವರ್..!
VIDEO: ಇದು WPL ಇತಿಹಾಸದ ಅತ್ಯಂತ ದುಬಾರಿ ಓವರ್..!
ಬಿಗ್ ಬಾಸ್​ಗೆ ಮಲ್ಲಮ್ಮ; ಅಟ್ಯಾಚ್​​ಮೆಂಟ್ ಈಗ ಉಳಿದಿಲ್ಲ ಎಂದ ಧ್ರುವಂತ್
ಬಿಗ್ ಬಾಸ್​ಗೆ ಮಲ್ಲಮ್ಮ; ಅಟ್ಯಾಚ್​​ಮೆಂಟ್ ಈಗ ಉಳಿದಿಲ್ಲ ಎಂದ ಧ್ರುವಂತ್
VIDEO: 6 ಎಸೆತಗಳಲ್ಲಿ 7 ರನ್​: ಡೆಲ್ಲಿ ಕ್ಯಾಪಿಟಲ್ಸ್​ಗೆ ಇದೆಂಥ ಸೋಲು..!
VIDEO: 6 ಎಸೆತಗಳಲ್ಲಿ 7 ರನ್​: ಡೆಲ್ಲಿ ಕ್ಯಾಪಿಟಲ್ಸ್​ಗೆ ಇದೆಂಥ ಸೋಲು..!
ನಂದಿ ಹಿಲ್ಸ್ ರಸ್ತೆ ಬಳಿ ಚಿರತೆ ಪ್ರತ್ಯಕ್ಷ: ಪ್ರವಾಸಿಗರೇ ಎಚ್ಚರ
ನಂದಿ ಹಿಲ್ಸ್ ರಸ್ತೆ ಬಳಿ ಚಿರತೆ ಪ್ರತ್ಯಕ್ಷ: ಪ್ರವಾಸಿಗರೇ ಎಚ್ಚರ
ಜಮ್ಮು-ಕಾಶ್ಮೀರದ ಗಡಿಯಲ್ಲಿ 5 ಪಾಕಿಸ್ತಾನಿ ಡ್ರೋನ್​ಗಳು ಪತ್ತೆ, ಹೈ ಅಲರ್ಟ್​
ಜಮ್ಮು-ಕಾಶ್ಮೀರದ ಗಡಿಯಲ್ಲಿ 5 ಪಾಕಿಸ್ತಾನಿ ಡ್ರೋನ್​ಗಳು ಪತ್ತೆ, ಹೈ ಅಲರ್ಟ್​