AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Unemployment Allowance: ಕೆಲಸ ಕಳೆದುಕೊಂಡವರಿಗೆ ಸರ್ಕಾರದಿಂದ ಶೇ 50ರಷ್ಟು ಭತ್ಯೆ ನೀಡುವ ಯೋಜನೆ ಬಗ್ಗೆ ಗೊತ್ತೆ?

ಕೊವಿಡ್​- 19ನಿಂದ ಕೆಲಸ ಕಳೆದುಕೊಂಡವರಿಗೆ ಶೇ 50ರಷ್ಟು ನಿರುದ್ಯೋಗ ಭತ್ಯೆ ನೀಡುವ ಇಎಸ್​ಯಸಿ ಯೋಜನೆ ಬಗ್ಗೆ ನಿಮಗೆಷ್ಟು ಗೊತ್ತು? ಆ ಬಗ್ಗೆ ವಿವರ ಇಲ್ಲಿದೆ.

Unemployment Allowance: ಕೆಲಸ ಕಳೆದುಕೊಂಡವರಿಗೆ ಸರ್ಕಾರದಿಂದ ಶೇ 50ರಷ್ಟು ಭತ್ಯೆ ನೀಡುವ ಯೋಜನೆ ಬಗ್ಗೆ ಗೊತ್ತೆ?
ಸಾಂದರ್ಭಿಕ ಚಿತ್ರ
Follow us
TV9 Web
| Updated By: Srinivas Mata

Updated on: Sep 16, 2021 | 1:03 PM

ಕೊವಿಡ್​-19 ಕಾರಣಕ್ಕೆ ಹಲವಾರು ಜನರು ಉದ್ಯೋಗ ಕಳೆದುಕೊಂಡರು. ನಿರುದ್ಯೋಗಿಗಳಿಗೆ ಭತ್ಯೆ ನೀಡುವ ಸಲುವಾಗಿ, ಸರ್ಕಾರವು ‘ಅಟಲ್ ಬೀಮಿತ್ ವ್ಯಕ್ತಿ ಕಲ್ಯಾಣ ಯೋಜನೆ’ ಎಂಬುದನ್ನು ಆರಂಭಿಸಿದೆ. ಈ ಯೋಜನೆ ಅಡಿಯಲ್ಲಿ 50,000ಕ್ಕೂ ಹೆಚ್ಚು ಜನರು ಪ್ರಯೋಜನ ಪಡೆದಿದ್ದಾರೆ. ನೌಕರರ ರಾಜ್ಯ ವಿಮಾ ನಿಗಮ (ಇಎಸ್ಐಸಿ) ಅಡಿಯಲ್ಲಿ ಈ ಯೋಜನೆ ದೊರೆಯುತ್ತದೆ. ಕೊವಿಡ್​- 19 ಗಮನದಲ್ಲಿಟ್ಟುಕೊಂಡು ಸರ್ಕಾರವು ‘ಅಟಲ್ ಬೀಮಿತ್ ವ್ಯಕ್ತಿ ಕಲ್ಯಾಣ್ ಯೋಜನೆ’ಯನ್ನು 30 ಜೂನ್ 2022ರವರೆಗೆ ವಿಸ್ತರಿಸಿದೆ. ಈ ಮೊದಲು ಇದು 30ನೇ ಜೂನ್ 2021ರ ವರೆಗೆ ಇತ್ತು. ಅಟಲ್ ಬೀಮಿತ್ ವ್ಯಕ್ತಿ ಕಲ್ಯಾಣ ಯೋಜನೆ ಅಡಿಯಲ್ಲಿ ನಿರುದ್ಯೋಗಿಗಳಿಗೆ ಉದ್ಯೋಗ ನಷ್ಟದ ಸಂದರ್ಭದಲ್ಲಿ ಹಣಕಾಸಿನ ಸಹಾಯಕ್ಕಾಗಿ ಭತ್ಯೆಯನ್ನು ನೀಡಲಾಗುತ್ತದೆ. ನಿರುದ್ಯೋಗಿ ವ್ಯಕ್ತಿಯು 3 ತಿಂಗಳವರೆಗೆ ಈ ಭತ್ಯೆಯ ಲಾಭವನ್ನು ಪಡೆಯಬಹುದು. ಅವರು ಸರಾಸರಿ ಸಂಬಳದ ಶೇ 50ರಷ್ಟು ಕ್ಲೇಮ್ ಮಾಡಬಹುದು. ನಿರುದ್ಯೋಗಿಯಾದ 30 ದಿನಗಳ ನಂತರ, ಈ ಯೋಜನೆಗೆ ಸೇರುವ ಮೂಲಕ ಕ್ಲೇಮ್ ಪಡೆಯಬಹುದು.

ಈ ಯೋಜನೆಯ ಲಾಭ ಪಡೆಯಲು, ESICಗೆ ಸಂಬಂಧಿಸಿದ ಉದ್ಯೋಗಿಗಳು ಯಾವುದೇ (ESIC) ಶಾಖೆಗೆ ಭೇಟಿ ನೀಡುವ ಮೂಲಕ ಅರ್ಜಿ ಸಲ್ಲಿಸಬಹುದು. ಇದರ ನಂತರ, ಅರ್ಜಿಯನ್ನು ಇಎಸ್‌ಐಸಿ ದೃಢೀೀಕರಿಸುತ್ತದೆ ಮತ್ತು ಅದು ಸರಿಯಾಗಿದ್ದರೆ ಮೊತ್ತವನ್ನು ಸಂಬಂಧಪಟ್ಟ ಉದ್ಯೋಗಿಯ ಖಾತೆಗೆ ಕಳುಹಿಸಲಾಗುತ್ತದೆ.

ಯೋಜನೆಯನ್ನು ಯಾರು ಪಡೆಯಬಹುದು? 1. ಪ್ರತಿ ತಿಂಗಳು ವೇತನದಿಂದ PF/ESI ಕಡಿತಗೊಳಿಸುವ ಖಾಸಗಿ ವಲಯದ ಕಂಪೆನಿಯಲ್ಲಿ (ಸಂಘಟಿತ ವಲಯ) ಉದ್ಯೋಗದಲ್ಲಿದ್ದವರು ಈ ಯೋಜನೆ ಲಾಭವನ್ನು ಪಡೆದುಕೊಳ್ಳಬಹುದು. 2. ಖಾಸಗಿ ಕಂಪನಿಗಳು ಮತ್ತು ಕಾರ್ಖಾನೆಗಳಲ್ಲಿ ಕೆಲಸ ಮಾಡುವ ಉದ್ಯೋಗಿಗಳಿಗೆ ESI ಲಾಭ ಲಭ್ಯವಿದೆ. ಇದಕ್ಕಾಗಿ ಒಂದು ESI ಕಾರ್ಡ್ ಮಾಡಿಕೊಡಲಾಗುತ್ತದೆ. 3. ಉದ್ಯೋಗಿಗಳು ಈ ಕಾರ್ಡ್ ಅಥವಾ ಕಂಪೆನಿಯಿಂದ ತಂದ ಡಾಕ್ಯುಮೆಂಟ್ ಆಧಾರದ ಮೇಲೆ ಯೋಜನೆ ಲಾಭವನ್ನು ಪಡೆಯಬಹುದು. ಮಾಸಿಕ ಆದಾಯ ರೂ.21,000 ಅಥವಾ ಅದಕ್ಕಿಂತ ಕಡಿಮೆ ಇರುವ ಉದ್ಯೋಗಿಗಳಿಗೆ ಇಎಸ್‌ಐ ಲಾಭ ಲಭ್ಯವಿದೆ.

ಯೋಜನೆಗೆ ನೋಂದಾಯಿಸುವುದು ಹೇಗೆ? 1. ಯೋಜನೆಯ ಲಾಭ ಪಡೆಯಲು ಮೊದಲು ESIC ವೆಬ್‌ಸೈಟ್‌ಗಾಗಿ ಅಟಲ್ ಬಿಮಿತ್ ವ್ಯಕ್ತಿ ಕಲ್ಯಾಣ ಕಲ್ಯಾಣ ಯೋಜನೆಯ ಫಾರ್ಮ್ ಅನ್ನು ಡೌನ್‌ಲೋಡ್ ಮಾಡಿಕೊಳ್ಳಬೇಕು. 2. ನೇರ ಲಿಂಕ್ ಇಲ್ಲಿದೆ: https://www.esic.nic.in/attachments/circularfile/93e904d2e3084d65fdf77932. ಈಗ ಫಾರ್ಮ್ ಅನ್ನು ಭರ್ತಿ ಮಾಡಿ ಮತ್ತು ಅದನ್ನು ESICಯ ಹತ್ತಿರದ ಶಾಖೆಗೆ ಸಲ್ಲಿಸಬೇಕು. 3. ಫಾರ್ಮ್, ನ್ಯಾಯಾಂಗೇತರ ಮುದ್ರಾಂಕ ಪತ್ರದ ಜತೆಗೆ ರೂ. 20ರ ನೋಟರಿ ಅಫಿಡವಿಟ್ ಸಲ್ಲಿಸಬೇಕು. 4. ಇದರಲ್ಲಿ AB-1ರಿಂದ AB-4 ನಮೂನೆಗಳನ್ನು ಸಲ್ಲಿಸಲಾಗುತ್ತದೆ.

ಒಂದು ವೇಳೆ ಉದ್ಯೋಗಿಯು ತನ್ನ ತಪ್ಪು ನಡವಳಿಕೆಯಿಂದಾಗಿ ಕೆಲಸವನ್ನು ಕಳೆದುಕೊಂಡರೆ ಯಾವುದೇ ಪ್ರಯೋಜನ ದೊರೆಯುವುದಿಲ್ಲ ಎಂಬುದನ್ನು ಗಮನಿಸಬೇಕು. ತಮ್ಮ ತಪ್ಪು ನಡವಳಿಕೆಯಿಂದ ಕೆಲಸ ಕಳೆದುಕೊಂಡವರು ಈ ಭತ್ಯೆಯನ್ನು ಪಡೆಯಲು ಸಾಧ್ಯವಿಲ್ಲ. ಅಲ್ಲದೇ, ತಮ್ಮ ವಿರುದ್ಧ ಕ್ರಿಮಿನಲ್ ಮೊಕದ್ದಮೆ ಹೊಂದಿರುವ ಅಥವಾ ಸ್ವಯಂ ನಿವೃತ್ತಿ ಯೋಜನೆ (ವಿಆರ್‌ಎಸ್) ತೆಗೆದುಕೊಂಡ ಉದ್ಯೋಗಿಗಳು ಕೂಡ ಯೋಜನೆಯ ಲಾಭ ಪಡೆಯಲು ಸಾಧ್ಯವಿಲ್ಲ.

ಇದನ್ನೂ ಓದಿ: ESIC: ಕಾರ್ಮಿಕ ವಿಮಾ ನಿಗಮದ ನಿರುದ್ಯೋಗ ಪ್ರಯೋಜನ 2022ರ ಜೂನ್ 30ರ ತನಕ ವಿಸ್ತರಣೆ

(ESIC Provides 50 Percent Of Salary As Unemployment Allowance Here Is The Details)