
ನವದೆಹಲಿ, ಮಾರ್ಚ್ 15: ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ 2026-27ರ ಹಣಕಾಸು ವರ್ಷಕ್ಕೆ ಫಾಸ್ಟ್ಯಾಗ್ ಶುಲ್ಕವನ್ನು (FASTag annual pass) ಪರಿಷ್ಕರಿಸಿದೆ. ಕಮರ್ಷಿಯಲ್ ಅಲ್ಲದ ವಾಹನಗಳ ವಾರ್ಷಿಕ ಫಾಸ್ಟ್ಯಾಗ್ ಪಾಸ್ ಶುಲ್ಕದಲ್ಲಿ ಅಲ್ಪ ಏರಿಕೆ ಆಗಿದೆ. ಖಾಸಗಿ ಕಾರುಗಳು, ಜೀಪ್, ವ್ಯಾನ್ಗಳ ಮಾಲೀಕರು ವಾರ್ಷಿಕ ಪಾಸ್ನ ಬೆಲೆ 3,000 ರೂನಿಂದ 3,075 ರೂಗೆ ಏರಿಸಲಾಗಿದೆ. ಮುಂಬರುವ ಹಣಕಾಸು ವರ್ಷದಿಂದ, ಅಂದರೆ 2026ರ ಏಪ್ರಿಲ್ 1ರಿಂದ ಹೊಸ ದರಗಳು ಜಾರಿಗೆ ಬರುತ್ತವೆ.
2025ರಲ್ಲಿ ಸ್ವಾತಂತ್ರ್ಯೋತ್ಸವ ದಿನದಂದು ಫಾಸ್ಟ್ಯಾಗ್ ವಾರ್ಷಿಕ ಪಾಸ್ನ ಸ್ಕೀಮ್ ಆರಂಭವಾಯಿತು. ನಾನ್-ಕಮರ್ಷಿಯಲ್ ಬಳಕೆಗೆ ನೊಂದಾಯಿಸಲಾದ ಖಾಸಗಿ ವಾಹನಗಳ ಮಾಲೀಕರಿಗೆ ಅನುಕೂಲವಾಗಲೆಂದು ಈ ಯೋಜನೆ ಚಾಲನೆಗೆ ತರಲಾಗಿದೆ. ಹೆದ್ದಾರಿಯಲ್ಲಿ ಹೆಚ್ಚೆಚ್ಚು ಓಡಾಡುವ ಇಂಥ ವಾಹನ ಮಾಲೀಕರಿಗೆ ವಾರ್ಷಿಕ ಪಾಸ್ ಬಹಳ ಅನುಕೂಲವಾಗುತ್ತದೆ.
ಇದನ್ನೂ ಓದಿ: Salary Hike: ಸರ್ಕಾರಿ ಉದ್ಯೋಗಿಗಳಿಗೆ ಶೇ 35ರಷ್ಟು ವೇತನ ಏರಿಕೆಯಾ?
ವಾರ್ಷಿಕ್ ಫಾಸ್ಟ್ಯಾಗ್ ಪಾಸ್ ಪಡೆದರೆ ರಾಷ್ಟ್ರೀಯ ಹೆದ್ದಾರಿಗಳಲ್ಲಿ 200 ಬಾರಿ ಟೋಲ್ ಪ್ಲಾಜಾದಲ್ಲಿ ಪ್ರವೇಶ ಪಡೆಯಬಹುದು. ಈ ಪಾಸ್ ಒಂದು ವರ್ಷ ಸಿಂಧು ಇರುತ್ತದೆ. ಯಾವುದೇ ಟೋಲ್ ಪ್ಲಾಜಾ ಆದರೂ ಉಚಿತವಾಗಿ ಹಾದು ಹೋಗಬಹುದು. ಕೆಲ ಟೋಲ್ ಪ್ಲಾಜಾಗಳಲ್ಲಿ ದರ ಹೆಚ್ಚಿರಲಿ, ಅಥವಾ ಕಡಿಮೆ ಇರಲಿ, ಅದು ಈ ವಾರ್ಷಿಕ ಪಾಸ್ನಲ್ಲಿ ಗಣನೆಗೆ ಬರುವುದಿಲ್ಲ. ಒಂದು ವರ್ಷದೊಳಗೆ ಹಾದು ಹೋಗುವ ಟೋಲ್ ಪ್ಲಾಜಾಗಳ ಸಂಖ್ಯೆ 200 ದಾಟುವಂತಿಲ್ಲ.
ವಾರ್ಷಿಕ ಪಾಸ್ ಪಡೆದರೆ ಪದೇ ಪದೇ ಫಾಸ್ಟ್ಯಾಗ್ ರೀಚಾರ್ಜ್ ಮಾಡುವುದು ತಪ್ಪುತ್ತದೆ. ಈ ಪಾಸ್ ಸ್ಕೀಮ್ ಆರಂಭವಾಗಿ ಇನ್ನೂ ಒಂದು ವರ್ಷ ಆಗಿಲ್ಲ, ಆಗಲೇ ಸಾಕಷ್ಟು ಜನಬಳಕೆ ಪಡೆಯುತ್ತಿದೆ. 50 ಲಕ್ಷಕ್ಕೂ ಹೆಚ್ಚು ಜನರು ಫಾಸ್ಟ್ಯಾಗ್ ವಾರ್ಷಿಕ ಪಾಸ್ ಖರೀದಿ ಮಾಡಿದ್ದಾರೆ. ರಾಷ್ಟ್ರೀಯ ಹೆದ್ದಾರಿಗಳಲ್ಲಿ ಖಾಸಗಿ ಕಾರುಗಳ ಶೇ. 20ರಷ್ಟು ಟೋಲ್ ಟ್ರಾನ್ಸಾಕ್ಷನ್ಗಳು ವಾರ್ಷಿಕ ಪಾಸ್ ಬಳಸಿ ಆಗುತ್ತಿವೆ ಎಂದು ದತ್ತಾಂಶಗಳು ಹೇಳುತ್ತವೆ.
ಇದನ್ನೂ ಓದಿ: ಪ್ಲೇಸ್ಟೋರ್ನಲ್ಲಿ ಚ್ಯಾಟ್ಜಿಪಿಟಿ, ಫ್ಲಿಪ್ಕಾರ್ಟ್ ಅನ್ನು ಮೀರಿಸಿದ ಎಲ್ಪಿಜಿ ಬುಕಿಂಗ್ ಆ್ಯಪ್
ರಾಜಮಾರ್ಗ್ ಯಾತ್ರಾ ಆ್ಯಪ್ ಹಾಗೂ ಹೆದ್ದಾರಿ ಪ್ರಾಧಿಕಾರ ಮತ್ತು ರಸ್ತೆ ಸಾರಿಗೆ ಸಚಿವಾಲಯದ ಅಧಿಕೃತ ವೆಬ್ಸೈಟ್ಗಳಲ್ಲಿ ಫಾಸ್ಟ್ಯಾಗ್ ವಾರ್ಷಿಕ ಪಾಸ್ ಅನ್ನು ಪಡೆಯಬಹುದು. ಈ ವೆಬ್ಸೈಟ್ ಅಥವಾ ಆ್ಯಪ್ಗೆ ಹೋಗಿ, ಫಾಸ್ಟ್ಯಾಗ್ ಜೋಡಿತ ಅಕೌಂಟ್, ವಾಹನ ನೊಂದಣಿ ವಿವರ ಮತ್ತು ನೊಂದಾಯಿತ ಮೊಬೈಲ್ ನಂಬರ್ ಮೂಲಕ ಲಾಗಿನ್ ಆಗಬೇಕು. ವಾರ್ಷಿಕ ಪಾಸ್ಗೆ ಪೇಮೆಂಟ್ ಮಾಡಿದ ಬಳಿಕ ಅದು ಆ್ಯಕ್ಟಿವೇಟ್ ಆಗುತ್ತದೆ.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ