ಭಾರತದಲ್ಲಿ ಮೊಬೈಲ್ ತಯಾರಿಕಾ ಘಟಕಗಳ ಸಂಖ್ಯೆ 10 ವರ್ಷದಲ್ಲಿ 2ರಿಂದ 300ಕ್ಕೆ ಹೆಚ್ಚಳ: ಪ್ರಗತಿ ಕಥೆ ಬಿಚ್ಚಿಟ್ಟ ವೈಷ್ಣವ್
Union minister Dr Ashwini Vaishnaw on Indian manufacturing sector: ಭಾರತದಲ್ಲಿ ಕಳೆದ 10 ವರ್ಷದಲ್ಲಿ ಮೊಬೈಲ್ ತಯಾರಿಕಾ ಕಾರ್ಯ ಬಹಳ ಪ್ರಗತಿ ಕಂಡಿದೆ ಎಂದು ಕೇಂದ್ರ ಎಲೆಕ್ಟ್ರಾನಿಕ್ಸ್ ಸಚಿವ ಡಾ. ಎ ವೈಷ್ಣವ್ ಹೇಳಿದ್ದಾರೆ. ಎಕ್ಸ್ ಅಕೌಂಟ್ನಲ್ಲಿ ಸರಣಿ ಪೋಸ್ಟ್ಗಳನ್ನು ಹಾಕಿರುವ ಅವರು, 2014ರಲ್ಲಿ ಇದ್ದ ಸ್ಥಿತಿಗೂ ಈಗ ಇರುವ ಸ್ಥಿತಿಗೂ ಹೋಲಿಕೆ ಮಾಡಿದ್ದಾರೆ. 2014ರಲ್ಲಿ ದೇಶದಲ್ಲಿ ಎರಡು ಮಾತ್ರವೇ ಮೊಬೈಲ್ ತಯಾರಿಕಾ ಘಟಕಗಳಿದ್ದವು. ಇವತ್ತು 300ಕ್ಕೂ ಹೆಚ್ಚು ಮ್ಯಾನುಫ್ಯಾಕ್ಚರಿಂಗ್ ಯೂನಿಟ್ಗಳಿವೆ ಎಂದಿದ್ದಾರೆ.

ನವದೆಹಲಿ, ಫೆಬ್ರುವರಿ 4: ನರೇಂದ್ರ ಮೋದಿ ನೇತೃತ್ವದಲ್ಲಿ ಕೇಂದ್ರದಲ್ಲಿ ಸರ್ಕಾರ ರಚನೆಯಾದಾಗಿನಿಂದ ಹೆಚ್ಚು ಕೇಳಿಬರುತ್ತಿರುವ ಮೂಲ ಮಂತ್ರ ಎಂದರೆ ಅದು ಮ್ಯಾನುಫ್ಯಾಕ್ಚರಿಂಗ್ನದ್ದು. ಪಿಎಲ್ಐ ಇತ್ಯಾದಿ ಹಲವು ಸ್ಕೀಮ್ಗಳು ದೇಶದ ಉತ್ಪಾದನಾ ವಲಯಕ್ಕೆ ಭರ್ಜರಿ ಪುಷ್ಟಿ ಕೊಟ್ಟಿವೆ. 13 ಸೆಕ್ಟರ್ಗಳಲ್ಲಿ ಪಿಎಲ್ಐ ಸ್ಕೀಮ್ ಇದೆ. ಅದರಲ್ಲೂ ಮೊಬೈಲ್ ಫೋನ್ ಮತ್ತು ಎಲೆಕ್ಟ್ರಾನಿಕ್ ವಸ್ತುಗಳ ತಯಾರಿಕೆಗೆ ಸರ್ಕಾರ ಬಹಳ ಮುತುವರ್ಜಿ ತೋರಿದೆ. ಇದರಿಂದ ಭಾರತದಲ್ಲಿ ಮೊಬೈಲ್ ಫೋನ್ ತಯಾರಿಕೆಯ ಪ್ರಯತ್ನ ಬಹುತೇಕ ಪೂರ್ಣವಾಗಿ ಯಶಸ್ವಿಯಾಗಿದೆ. ಕೇಂದ್ರ ಎಲೆಕ್ಟ್ರಾನಿಕ್ಸ್ ಸಚಿವ ಡಾ. ಅಶ್ವನಿ ವೈಷ್ಣವ್ ಅವರು ಮೊಬೈಲ್ ಮ್ಯಾನುಫ್ಯಾಕ್ಚರಿಂಗ್ನ ಯಶಸ್ಸಿನ ಕಥೆಯನ್ನು ಬಿಚ್ಚಿಟ್ಟಿದ್ದಾರೆ.
‘ಮೊಬೈಲ್ ಮತ್ತು ಎಲೆಕ್ಟ್ರಾನಿಕ್ಸ್ ಮ್ಯಾನುಫ್ಯಾಕ್ಚರಿಂಗ್ನಲ್ಲಿ ಭಾರತ ಗಣನೀಯ ಪ್ರಗತಿ ತೋರಿದೆ. 2014ರಲ್ಲಿ ಎರಡನೇ ಎರಡು ಮೊಬೈಲ್ ತಯಾರಿಕಾ ಘಟಕಗಳಿದ್ದವು. ಇವತ್ತು 300ಕ್ಕೂ ಹೆಚ್ಚು ಘಟಕಗಳಿವೆ. ಈ ಸೆಕ್ಟರ್ ಬಹಳ ವೇಗದಲ್ಲಿ ಬೆಳೆದಿದೆ’ ಎಂದು ಎ ವೈಷ್ಣವ್ ತಮ್ಮ ಎಕ್ಸ್ ಪೋಸ್ಟ್ನಲ್ಲಿ ತಿಳಿಸಿದ್ದಾರೆ.
ಇದನ್ನೂ ಓದಿ: ನಿಮ್ಮ ಬಿಟ್ಕಾಯಿನ್ ಖರೀದಿ, ಮಾರಾಟ ಸೇರಿ ಎಲ್ಲಾ ಕ್ರಿಪ್ಟೋ ವಹಿವಾಟುಗಳ ಮೇಲೆ ಸರ್ಕಾರದ ಕಣ್ಣು
2013-14ರಲ್ಲಿ ಭಾರತದಲ್ಲಿ ತಯಾರಾದ ಮೊಬೈಲ್ ಫೋನ್ಗಳ ಮೌಲ್ಯ 18,900 ಕೋಟಿ ರೂ. ಈಗ 2023-24ರಲ್ಲಿ 4.22 ಲಕ್ಷ ಕೋಟಿ ರೂ ಮೌಲ್ಯದ ಮೊಬೈಲ್ ಫೋನ್ಗಳ ಮ್ಯಾನುಫ್ಯಾಕ್ಚರಿಂಗ್ ಭಾರತದಲ್ಲಿ ಆಗಿದೆ. 2014ರಲ್ಲಿ ಭಾರತದಿಂದ ರಫ್ತಾದ ಸ್ಮಾರ್ಟ್ಫೋನ್ಗಳ ಸಂಖ್ಯೆ ನಗಣ್ಯವಾಗಿತ್ತು. ಈಗ ಇವುಗಳ ರಫ್ತು ಮೌಲ್ಯ 1.29 ಲಕ್ಷ ಕೋಟಿ ರೂ ಆಗಿದೆ’ ಎಂದು ಸಚಿವರು ಅಂಕಿ ಅಂಶಗಳ ಸಮೇತ ಹೇಳಿದ್ದಾರೆ.
ಮೊಬೈಲ್ ಫೋನ್ ಮ್ಯಾನುಫ್ಯಾಕ್ಚರಿಂಗ್ನಿಂದ 12 ಲಕ್ಷ ಉದ್ಯೋಗ ಸೃಷ್ಟಿ…
ಕಳೆದ 10 ವರ್ಷದಲ್ಲಿ ಮೊಬೈಲ್ ಫೋನ್ ತಯಾರಿಕಾ ಘಟಕಗಳಿಂದ ದೇಶದಲ್ಲಿ 12 ಲಕ್ಷ ನೇರ ಮತ್ತು ಪರೋಕ್ಷ ಉದ್ಯೋಗಗಳು ಸೃಷ್ಟಿಯಾಗಿವೆ ಎಂದು ಹೇಳಿದ ಅವರು, ಮೇಕ್ ಇನ್ ಇಂಡಿಯಾ ಯೋಜನೆ ಅಡಿಯಲ್ಲಿ ಭಾರತದಲ್ಲಿ ತಯಾರಾಗುತ್ತಿರುವ ಎಲೆಕ್ಟ್ರಾನಿಕ್ ಐಟಂಗಳ ಪಟ್ಟಿ ನೀಡಿದ್ದಾರೆ.
ಇದನ್ನೂ ಓದಿ: ಅಮೆರಿಕದ DOGE ಇಲಾಖೆಗೆ 22 ವರ್ಷದ ಆಕಾಶ್ ಬೋಬ್ಬಾ; ಇಲಾನ್ ಮಸ್ಕ್ ನಡೆಗೆ ನೆಟ್ಟಿಗರು ಅಚ್ಚರಿ
4. Under PM @narendramodi Ji’s leadership, our electronics industry already makes the following components and sub-assemblies under ‘Make in India’:
▶️Chargers ▶️Battery Packs ▶️Mechanics of all types ▶️USB Cable ▶️Keypads ▶️Display Assembly ▶️Camera module ▶️Lithium Ion Cells…
— Ashwini Vaishnaw (@AshwiniVaishnaw) February 4, 2025
ಸಚಿವರು ನೀಡಿರುವ ಮಾಹಿತಿ ಪ್ರಕಾರ, ಭಾರತದಲ್ಲಿ ಚಾರ್ಜರ್ಗಳು, ಬ್ಯಾಟರಿ ಪ್ಯಾಕ್ಗಳು, ಯುಎಸ್ಬಿ ಕೇಬಲ್, ಕೀಪ್ಯಾಡ್, ಡಿಸ್ಪ್ಲೇ ಅಸೆಂಬ್ಲಿ, ಕ್ಯಾಮರಾ ಮಾಡ್ಯೂಲ್, ಲಿಥಿಯಂ ಅಯಾನ್ ಸೆಲ್, ಸ್ಪೀಕರ್, ಮೈಕ್ರೋಫೋನ್, ಮೆಕ್ಯಾನಿಕ್ಸ್ ಹೀಗೆ ಹಲವು ಎಲೆಕ್ಟ್ರಾನಿಕ್ ಐಟಂಗಳು ನಿರ್ಮಾಣ ಆಗುತ್ತಿವೆ.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ