AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಫ್ರಂಟ್ ರನ್ನಿಂಗ್ ಮಾಡುತ್ತಿದ್ದ ಮಾಜಿ ಎಕ್ಸಿಸ್ ಎಂಎಫ್ ಮ್ಯಾನೇಜರ್ ವೀರೇಶ್ ಜೋಶಿ ಬಂಧನ; ಏನಿದು ಫ್ರಂಟ್ ರನ್ನಿಂಗ್?

Ex Axis Mutual Fund's chief trader Viresh Joshi arrested by ED: ಎಕ್ಸಿಸ್ ಮ್ಯುಚುವಲ್ ಫಂಡ್​ನ ಮಾಜಿ ಮ್ಯಾನೇಜರ್ ಹಾಗೂ ಮುಖ್ಯ ಟ್ರೇಡರ್ ಆಗಿದ್ದ ವೀರೇಶ್ ಜೋಷಿ ಅವರನ್ನು ಬಂಧಿಸಲಾಗಿದೆ. ಮುಂಬೈನ ಪಿಎಂಎಲ್​ಎ ಕೋರ್ಟ್ ಜೋಷಿಯನ್ನು ಇಡಿ ಕಸ್ಟಡಿಗೆ ಒಪ್ಪಿಸಿದೆ. 2018ರಿಂದ 2021ರ ಅವಧಿಯಲ್ಲಿ ನಡೆದ ಟ್ರೇಡಿಂಗ್ ವೇಳೆ ಜೋಷಿ ಅವರು ಫ್ರಂಟ್ ರನ್ನಿಂಗ್ ಮಾಡಿದ್ದಾರೆನ್ನುವ ಆರೋಪ ಇದೆ.

ಫ್ರಂಟ್ ರನ್ನಿಂಗ್ ಮಾಡುತ್ತಿದ್ದ ಮಾಜಿ ಎಕ್ಸಿಸ್ ಎಂಎಫ್ ಮ್ಯಾನೇಜರ್ ವೀರೇಶ್ ಜೋಶಿ ಬಂಧನ; ಏನಿದು ಫ್ರಂಟ್ ರನ್ನಿಂಗ್?
ಷೇರು ಮಾರುಕಟ್ಟೆ
ಸುಗ್ಗನಹಳ್ಳಿ ವಿಜಯಸಾರಥಿ
|

Updated on:Aug 05, 2025 | 3:13 PM

Share

ನವದೆಹಲಿ, ಆಗಸ್ಟ್ 3: ಎಕ್ಸಿಸ್ ಮ್ಯುಚುವಲ್ ಫಂಡ್ ಸಂಸ್ಥೆಯ ಮಾಜಿ ಫಂಡ್ ಮ್ಯಾನೇಜರ್ ಹಾಗೂ ಚೀಫ್ ಟ್ರೇಡರ್ ವೀರೇಶ್ ಜೋಷಿ (Viresh Joshi) ಅವರನ್ನು ಜಾರಿ ನಿರ್ದೇಶನಾಲಯದವರು ಬಂಧಿಸಿದ್ದಾರೆ. ಮನಿ ಲಾಂಡರಿಂಗ್ ಕಾಯ್ದೆ ಅಡಿ ಅವರ ಬಂಧನವಾಗಿರುವುದು ತಿಳಿದುಬಂದಿದೆ. ಟ್ರೇಡಿಂಗ್ (trading) ಚಟುವಟಿಕೆಯಲ್ಲಿ ಫ್ರಂಟ್ ರನ್ನಿಂಗ್ (Front Running) ಮೂಲಕ ನೂರಾರು ಕೋಟಿ ರೂ ವಂಚನೆ ಎಸಗಿರುವ ಗಂಭೀರ ಆರೋಪ ವೀರೇಶ್ ಜೋಷಿ ಮೇಲಿದೆ.

ಪಿಎಂಎಲ್​ಎ ವಿಶೇಷ ನ್ಯಾಯಾಲಯವು ವೀರೇಶ್ ಜೋಷಿ ಅವರನ್ನು ಆಗಸ್ಟ್ 8ರವರೆಗೆ ತಮ್ಮ ಕಸ್ಟಡಿಗೆ ಒಪ್ಪಿಸಿದೆ ಎಂದು ಜಾರಿ ನಿರ್ದೇಶನಾಲಯವು ಭಾನುವಾರ ಹೇಳಿಕೆ ನೀಡಿದೆ.

ಇದನ್ನೂ ಓದಿ: ಭಾರತದಲ್ಲಿ ಅನುಮೋದಿತ ಸೆಮಿಕಂಡಕ್ಟರ್ ಯೋಜನೆಗಳಿಂದ 2,400 ಕೋಟಿ ಚಿಪ್ ತಯಾರಿಕೆ ಸಾಧ್ಯ; ಬೇರೆ ದೇಶಗಳಿಗೆ ಹೋಲಿಸಿದರೆ?

ಏನಿದು ಫ್ರಂಟ್ ರನ್ನಿಂಗ್?

ಬ್ರೋಕರ್ ಆದವರು ಅಥವಾ ಟ್ರೇಡರ್ ಆದವರು ವೃತ್ತಿಪರ ಮಾಹಿತಿಯನ್ನು ವೈಯಕ್ತಿಕವಾಗಿ ದುರ್ಬಳಕೆ ಮಾಡಿಕೊಂಡು ಲಾಭ ಮಾಡಿಕೊಳ್ಳುವುದಕ್ಕೆ ಫ್ರಂಟ್ ರನ್ನಿಂಗ್ ಎನ್ನುತ್ತಾರೆ.

ಉದಾಹರಣೆಗೆ, ಷೇರು ಉದ್ಯಮದಲ್ಲಿ ಆಯಕಟ್ಟಿನ ಸ್ಥಾನದಲ್ಲಿರುವ ವ್ಯಕ್ತಿಗೆ ತಮ್ಮ ಕೆಲ ಪ್ರಮುಖ ಕ್ಲೈಂಟ್​ಗಳು ನಿರ್ದಿಷ್ಟ ದೊಡ್ಡ ಮೊತ್ತದ ಷೇರುಗಳ ವಹಿವಾಟು ನಡೆಸುವ ಸಾಧ್ಯತೆ ಬಗ್ಗೆ ಮೊದಲೇ ಮಾಹಿತಿ ಗೊತ್ತಿರುತ್ತದೆ. ಇದರಿಂದ ಷೇರು ಏರುವ ಅಥವಾ ಇಳಿಯುವ ಬಗ್ಗೆ ಅವರಿಗೆ ಅರಿವು ಇರುತ್ತದೆ. ಈ ಹಂತದಲ್ಲಿ ಆತ ವೈಯಕ್ತಿಕವಾಗಿ ಷೇರು ವಹಿವಾಟು ನಡೆಸಿ ಲಾಭ ಮಾಡಿಕೊಳ್ಳುವ ಅವಕಾಶ ಇರುತ್ತದೆ. ಇದನ್ನೇ ಫ್ರಂಟ್ ರನ್ನಿಂಗ್ ಎನ್ನುತ್ತಾರೆ.

ವೀರೇಶ್ ಜೋಷಿ ಎಕ್ಸಿಸ್ ಮ್ಯುಚುವಲ್ ಫಂಡ್ ಸಂಸ್ಥೆಯಲ್ಲಿ ಫಂಡ್ ಮ್ಯಾನೇಜರ್ ಆಗಿದ್ದಾಗ 2018ರಿಂದ 2021ರವರೆಗೆ ಈ ರೀತಿ ಫ್ರಂಟ್ ರನ್ನಿಂಗ್ ಮಾಡಿದ್ದರು ಎನ್ನುವ ಆರೋಪ ಇದೆ. 2024ರ ಡಿಸೆಂಬರ್ ತಿಂಗಳಲ್ಲಿ ಮುಂಬೈ ಪೊಲೀಸ್ ಇವರ ಮೇಲೆ ಮನಿ ಲಾಂಡರಿಂಗ್ ಕೇಸ್ ದಾಖಲಿಸಿತ್ತು.

ಇದನ್ನೂ ಓದಿ: ಷೇರು vs ಚಿನ್ನ vs ರಿಯಲ್ ಎಸ್ಟೇಟ್; ಕಳೆದ 20 ವರ್ಷದಲ್ಲಿ ಯಾವುದರಿಂದ ಸಿಕ್ಕಿದೆ ಹೆಚ್ಚು ಲಾಭ? ಇಲ್ಲಿದೆ ಡೀಟೇಲ್ಸ್

ವೀರೇಶ್ ಜೋಷಿ ಮಾಡಿದ್ದೇನು?

ವೀರೇಶ್ ಜೋಷಿ ಅವರು 2 ಲಕ್ಷ ಕೋಟಿ ರೂ ಫಂಡ್ ನಿರ್ವಹಿಸುವ ಎಕ್ಸಿಸ್ ಮ್ಯುಚುವಲ್ ಫಂಡ್​ನಲ್ಲಿ ಫಂಡ್ ಮ್ಯಾನೇಜರ್ ಆಗಿದ್ದರಿಂದ ಹೂಡಿಕೆ ಎಲ್ಲಿ ಮಾಡಲಾಗುತ್ತದೆ, ಅಥವಾ ಎಲ್ಲಿಂದ ಹೂಡಿಕೆ ಹಿಂಪಡೆಯಲಾಗುತ್ತದೆ ಎಂಬುದನ್ನು ನಿರ್ಧರಿಸುವ ಸ್ಥಾನದಲ್ಲಿ ಇದ್ದವರು. ಟ್ರೇಡಿಂಗ್ ಮಾಡುವ ಮುನ್ನ ಅವರು ಈ ಮಾಹಿತಿಯನ್ನು ಬ್ರೋಕರ್​ಗಳಿಗೆ ನೀಡುತ್ತಿದ್ದರು. ಆ ಬ್ರೋಕರ್​ಗಳು ಇವರು ಹೇಳಿದ ಷೇರುಗಳನ್ನು ಮುಂಚಿತವಾಗಿ ಮಾರುವುದೋ ಅಥವಾ ಕೊಳ್ಳುವುದೋ ಮಾಡುತ್ತಿದ್ದರು. ಬಳಿಕ ಮ್ಯುಚುವಲ್ ಫಂಡ್ ಸಂಸ್ಥೆಯು ಹೆಚ್ಚಿನ ಬೆಲೆಯಲ್ಲಿ ಆ ಷೇರುಗಳನ್ನು ಖರೀದಿಸುತ್ತಿತ್ತು. ಇದರಿಂದ ಬ್ರೋಕರ್​ಗಳಿಗೆ ಭರ್ಜರಿ ಲಾಭ ಅಗುತ್ತಿತ್ತು. ಈ ರಹಸ್ಯ ಮಾಹಿತಿ ನೀಡಿದ್ದಕ್ಕೆ ಪ್ರತಿಯಾಗಿ ಬ್ರೋಕರ್​ಗಳಿಂದ ವೀರೇಶ್ ಜೋಷಿಗೆ ಕಮಿಷನ್ ಅಥವಾ ಲಂಚದ ಹಣ ಸಿಗುತ್ತಿತ್ತು ಎನ್ನುವುದು ಆರೋಪ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Published On - 6:17 pm, Sun, 3 August 25

ಅಸ್ಥಿ ವಿಸರ್ಜನೆಗೂ ಪರದಾಟ: ಬೆಂಗಳೂರು ಏರ್​​ಪೋರ್ಟ್​​ನಲ್ಲಿ ಕುಟುಂಬ ಗೋಳಾಟ
ಅಸ್ಥಿ ವಿಸರ್ಜನೆಗೂ ಪರದಾಟ: ಬೆಂಗಳೂರು ಏರ್​​ಪೋರ್ಟ್​​ನಲ್ಲಿ ಕುಟುಂಬ ಗೋಳಾಟ
NHMನಲ್ಲಿ 30000 ಹುದ್ದೆಗಳ ಮರು ನೇಮಕಾತಿ ಬಗ್ಗೆ ಸಚಿವ ದಿನೇಶ್ ಹೇಳಿದ್ದೇನು?
NHMನಲ್ಲಿ 30000 ಹುದ್ದೆಗಳ ಮರು ನೇಮಕಾತಿ ಬಗ್ಗೆ ಸಚಿವ ದಿನೇಶ್ ಹೇಳಿದ್ದೇನು?
ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ತುಮಕೂರು: ಎಟಿಎಂ ಮಷಿನನ್ನೇ ಹೊತ್ತಯ್ದು ಕಸದ ಬುಟ್ಟಿ ಬಳಿ ಬಿಟ್ಟ ಕಳ್ಳರು!
ತುಮಕೂರು: ಎಟಿಎಂ ಮಷಿನನ್ನೇ ಹೊತ್ತಯ್ದು ಕಸದ ಬುಟ್ಟಿ ಬಳಿ ಬಿಟ್ಟ ಕಳ್ಳರು!