
ರಾಷ್ಟ್ರೀಯ ಗೋಕುಲ್ ಮಿಷನ್ (Rashtriya Gokul Mission – RGM), ಭಾರತ ಸರ್ಕಾರದ ಪಶುಸಂಗೋಪನೆ ಮತ್ತು ಹೈನುಗಾರಿಕೆ ಇಲಾಖೆಯು ದೇಶಿ ತಳಿಯ ಹಸು ಹಾಗೂ ಎಮ್ಮೆಗಳ ಸಂರಕ್ಷಣೆ, ಹಾಲಿನ ಉತ್ಪಾದನೆ ಹೆಚ್ಚಳ ಮತ್ತು ರೈತರ ಆದಾಯವನ್ನು ದ್ವಿಗುಣಗೊಳಿಸುವ ಉದ್ದೇಶದಿಂದ ಜಾರಿಗೆ ತಂದಿರುವ ಅತ್ಯಂತ ಮಹತ್ವಾಕಾಂಕ್ಷೆಯ ಯೋಜನೆಯಾಗಿದೆ. ಈ ಯೋಜನೆಯಡಿ ಹೈನುಗಾರಿಕೆಯನ್ನು ಲಾಭದಾಯಕ ಉದ್ಯಮವನ್ನಾಗಿ ಪರಿವರ್ತಿಸಲು ಮತ್ತು ಹೊಸ ತಂತ್ರಜ್ಞಾನಗಳನ್ನು ಅಳವಡಿಸಿಕೊಳ್ಳಲು ರೈತರಿಗೆ ಹಾಗೂ ಉದ್ಯಮಿಗಳಿಗೆ ಬಂಪರ್ ಸಬ್ಸಿಡಿ ಮತ್ತು ಪ್ರೋತ್ಸಾಹಧನಗಳನ್ನು ನೀಡಲಾಗುತ್ತಿದೆ.
ರಾಷ್ಟ್ರೀಯ ಗೋಕುಲ್ ಮಿಷನ್ ಅಡಿಯಲ್ಲಿ ಮುಖ್ಯವಾಗಿ 3 ರೀತಿಯ ದೊಡ್ಡ ಮಟ್ಟದ ಆರ್ಥಿಕ ಪ್ರಯೋಜನಗಳು ಲಭ್ಯವಿವೆ. ಬ್ರೀಡ್ ಮಲ್ಟಿಪ್ಲಿಕೇಶನ್ ಫಾರ್ಮ್‌ಗಳಿಗೆ ಸಬ್ಸಿಡಿ, ಐವಿಎಫ್ ತಂತ್ರಜ್ಞಾನಕ್ಕೆ ಪ್ರೋತ್ಸಾಹಧನ, ಲಿಂಗ ಆಧಾರಿತ ವೀರ್ಯಾಣು ಬಳಕೆಗೆ ಸಹಾಯಧನ ಸಿಗುತ್ತದೆ.
ನೀವು ಕನಿಷ್ಠ 200 ಹಸು ಅಥವಾ ಎಮ್ಮೆಗಳ ಅತ್ಯಾಧುನಿಕ ಡೇರಿ ಫಾರ್ಮ್ (Breed Multiplication Farms) ಸ್ಥಾಪಿಸಲು ಬಯಸಿದರೆ, ಕೇಂದ್ರ ಸರ್ಕಾರದಿಂದ ಭಾರಿ ಹಣಕಾಸಿನ ನೆರವು ಸಿಗುತ್ತದೆ. ಒಟ್ಟು ಯೋಜನಾ ವೆಚ್ಚದ (Project Cost) 50% ಕ್ಯಾಪಿಟಲ್ ಸಬ್ಸಿಡಿ ಸಿಗುತ್ತದೆ.
ಒಬ್ಬ ಉದ್ಯಮಿಗೆ ಗರಿಷ್ಠ 2 ಕೋಟಿ ರೂಪಾಯಿವರೆಗೆ ಸಬ್ಸಿಡಿ ಲಭ್ಯವಿದೆ. ಉಳಿದ 50% ಹಣಕ್ಕೆ ಬ್ಯಾಂಕ್ ಲೋನ್ ಪಡೆದರೆ, AHIDF ಯೋಜನೆಯಡಿ 3% ಬಡ್ಡಿ ರಿಯಾಯಿತಿ (Interest Subvention) ಕೂಡ ಸಿಗುತ್ತದೆ.
ಇದನ್ನೂ ಓದಿ: ಎಥೆನಾಲ್ ಮಿಶ್ರಿತ ಪೆಟ್ರೋಲ್ ಬಗ್ಗೆ ತಪ್ಪು ಕಲ್ಪನೆಗಳು; ಸರ್ಕಾರ ಒಂದೊಂದಕ್ಕೂ ನೀಡಿದ ಉತ್ತರ ಇಲ್ಲಿದೆ
ಹೆಚ್ಚು ಹಾಲು ಕೊಡುವ ತಳಿಗಳನ್ನು ಉತ್ಪಾದಿಸಲು ಐವಿಎಫ್ (In-Vitro Fertilization) ತಂತ್ರಜ್ಞಾನ ಬಳಸುವ ರೈತರಿಗೆ ಸರ್ಕಾರ ಸಹಾಯ ಮಾಡುತ್ತದೆ.
ಐವಿಎಫ್ ತಂತ್ರಜ್ಞಾನದ ಮೂಲಕ ಯಶಸ್ವಿಯಾಗಿ ಕರು ಜನಿಸಿದರೆ, ಪ್ರತಿ ಗರ್ಭಧಾರಣೆಗೆ (Assured Pregnancy) ರೈತರಿಗೆ 5,000 ರೂ. ಪ್ರೋತ್ಸಾಹಧನ ನೀಡಲಾಗುತ್ತದೆ.
ಕೇವಲ ಹೆಣ್ಣು ಕರುಗಳೇ (ಆಕಳು) ಜನಿಸುವಂತೆ ಮಾಡುವ ಅತ್ಯಾಧುನಿಕ ‘ಸೆಕ್ಸ್ ಸಾರ್ಟೆಡ್ ಸೆಮೆನ್’ (Sex-Sorted Semen) ತಂತ್ರಜ್ಞಾನಕ್ಕೆ ಸರ್ಕಾರ ಪ್ರೋತ್ಸಾಹ ನೀಡುತ್ತದೆ.
ಈ ವೀರ್ಯಾಣು ಬಳಕೆಯ ವೆಚ್ಚದ ಮೇಲೆ ರೈತರಿಗೆ 50% ವರೆಗೆ ಸಬ್ಸಿಡಿ ಸಿಗುತ್ತದೆ. ಇದರಿಂದ ಡೈರಿ ಫಾರ್ಮ್‌ಗಳಲ್ಲಿ ಗಂಡು ಕರುಗಳ ಸಂಖ್ಯೆ ಕಡಿಮೆಯಾಗಿ, ಹಾಲಿನ ಉತ್ಪಾದನೆ ಹೆಚ್ಚುತ್ತದೆ.
ದೊಡ್ಡ ಮಟ್ಟದ ತಳಿ ಗುಣಾಕಾರ ಫಾರ್ಮ್ (200 ದನಗಳ ಫಾರ್ಮ್) ಮಾಡಲು ಕನಿಷ್ಠ 5 ಎಕರೆ ಸ್ವಂತ ಅಥವಾ ಲೀಸ್ ಭೂಮಿ ಹೊಂದಿರಬೇಕು ಹಾಗೂ ಮೇವಿನ ವ್ಯವಸ್ಥೆ ಇರಬೇಕು.
ಇದನ್ನೂ ಓದಿ: ನಿಮ್ಮ ಮನೆಗೆ ಸೌರ ಫಲಕಗಳನ್ನು ಅಳವಡಿಸಲು ಕೇಂದ್ರ ಸರ್ಕಾರದ ಯಾವ ಯೋಜನೆ ಬೆಸ್ಟ್? ಅರ್ಜಿ ಸಲ್ಲಿಸುವುದು ಹೇಗೆ?
ಬ್ರೀಡಿಂಗ್ ಫಾರ್ಮ್ ಮತ್ತು ದೊಡ್ಡ ಸಬ್ಸಿಡಿಗಾಗಿ ನೀವು ಆನ್‌ಲೈನ್ ಮೂಲಕವೇ ಅರ್ಜಿ ಸಲ್ಲಿಸಬೇಕಾಗುತ್ತದೆ.
ಸಣ್ಣ ಮಟ್ಟದ ಐವಿಎಫ್ (IVF) ಸೌಲಭ್ಯ ಅಥವಾ ಕೃತಕ ಗರ್ಭಧಾರಣೆ ಸಬ್ಸಿಡಿಗಳ ಪ್ರಯೋಜನ ಪಡೆಯಲು ರೈತರು ತಮ್ಮ ಹತ್ತಿರದ ಸರ್ಕಾರಿ ಪಶು ಆಸ್ಪತ್ರೆ, ಸ್ಥಳೀಯ ಹಾಲಿನ ಒಕ್ಕೂಟ (KMF/ಬಮುಲ್/ಕೆಮುಲ್ ಇತ್ಯಾದಿ) ಅಥವಾ ಪಶುಸಂಗೋಪನಾ ಇಲಾಖೆಯ ಅಧಿಕಾರಿಗಳನ್ನು ನೇರವಾಗಿ ಸಂಪರ್ಕಿಸಬಹುದು.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ