Gold Silver Price on 23rd November 2022 | ಬೆಂಗಳೂರು: ದೇಶೀಯ ಮಾರುಕಟ್ಟೆಗಳ ವಹಿವಾಟಿನಲ್ಲಿ ತುಸು ಚೇತರಿಕೆ, ರೂಪಾಯಿ ಮೌಲ್ಯ ವೃದ್ಧಿ ನಡುವೆ ಚಿನ್ನದ ದರ (Gold Price) ಇಂದೂ ಇಳಿಕೆಯಾಗಿದೆ. ಬೆಳ್ಳಿ ದರ (Silver Price) ತುಸು ಏರಿಕೆಯಾಗಿದೆ. ದೇಶೀಯ ಬುಲಿಯನ್ ಮಾರುಕಟ್ಟೆಯಲ್ಲಿ (Bullion Market) ಕಳೆದ ಕೆಲವು ದಿನಗಳಿಂದ ಏರಿಳಿಕೆಯ ಟ್ರೆಂಡ್ ಕಂಡುಬಂದಿದ್ದು, ಹಾಗೆಯೇ ಮುಂದುವರಿಯುತ್ತಿದೆ. ಹಿಂದಿನ ದಿನದ ವಹಿವಾಟಿನ ಅಂತ್ಯದಲ್ಲಿ ಉಭಯ ಲೋಹಗಳ ದರ ಇಳಿಕೆಯಾಗಿತ್ತು. ಬೆಂಗಳೂರು, ಮುಂಬೈ, ದೆಹಲಿ, ಕೋಲ್ಕತ್ತ, ಚೆನ್ನೈ ಸೇರಿದಂತೆ ದೇಶದ ಪ್ರಮುಖ ನಗರಗಳ ಇಂದಿನ ಚಿನ್ನ, ಬೆಳ್ಳಿ ದರ ವಿವರ ಇಲ್ಲಿದೆ.
ಬೆಂಗಳೂರು ಸೇರಿ ಪ್ರಮುಖ ನಗರಗಳ ದರ ವಿವರ
ಗುಡ್ ರಿಟರ್ನ್ಸ್ ಮಾಹಿತಿ ಪ್ರಕಾರ, 22 ಕ್ಯಾರೆಟ್ನ 10 ಗ್ರಾಂ ಚಿನ್ನದ 150 ರೂ. ಇಳಿಕೆಯಾಗಿ 48,350 ರೂಪಾಯಿ ಆಗಿದೆ. 24 ಕ್ಯಾರೆಟ್ ಚಿನ್ನದ ಬೆಲೆ 170 ರೂ. ಇಳಿಕೆಯಾಗಿ 52,750 ರೂ. ಆಗಿದೆ. ಒಂದು ಕೆಜಿ ಬೆಳ್ಳಿ ದರ 600 ರೂ. ಹೆಚ್ಚಳವಾಗಿ 61,200 ರೂಪಾಯಿ ಆಗಿದೆ.
ಇದನ್ನೂ ಓದಿ: Gold Price Today: ಆಭರಣ ಪ್ರಿಯರಿಗೆ ಸಿಹಿ ಸುದ್ದಿ; ಚಿನ್ನ ಬೆಳ್ಳಿ ದರ ಮತ್ತೆ ಇಳಿಕೆ
ಬೆಂಗಳೂರು, ಚೆನ್ನೈ, ಹೈದರಾಬಾದ್ ಸೇರಿ ಪ್ರಮುಖ ನಗರಗಳಲ್ಲಿ 22 ಕ್ಯಾರೆಟ್ ಚಿನ್ನದ ಇಂದಿನ ಬೆಲೆ ಹೀಗಿದೆ. ಚೆನ್ನೈ- 49,050 ರೂ. ಮುಂಬೈ- 48,350 ರೂ, ದೆಹಲಿ- 48,500 ರೂ, ಕೊಲ್ಕತ್ತಾ- 48,350 ರೂ, ಬೆಂಗಳೂರು- 48,350 ರೂ, ಹೈದರಾಬಾದ್- 48,350 ರೂ, ಕೇರಳ- 48,350 ರೂ, ಪುಣೆ- 48,350 ರೂ, ಮಂಗಳೂರು- 48,350 ರೂ, ಮೈಸೂರು- 48,350 ರೂ. ಆಗಿದೆ.
24 ಕ್ಯಾರೆಟ್ ಚಿನ್ನದ ಇಂದಿನ ಬೆಲೆ ಹೀಗಿದೆ:
ಚೆನ್ನೈ- 53,510 ರೂ, ಮುಂಬೈ- 52,750 ರೂ, ದೆಹಲಿ- 52,900 ರೂ, ಕೊಲ್ಕತ್ತಾ- 52,750 ರೂ, ಬೆಂಗಳೂರು- 52,750 ರೂ, ಹೈದರಾಬಾದ್- 52,750 ರೂ, ಕೇರಳ- 52,750 ರೂ, ಪುಣೆ- 52,750 ರೂ, ಮಂಗಳೂರು- 52,750 ರೂ, ಮೈಸೂರು- 52,750 ರೂ. ಆಗಿದೆ.
ಇಂದಿನ ಬೆಳ್ಳಿಯ ದರ:
ಪ್ರಮುಖ ನಗರಗಳ 1 ಕೆಜಿ ಬೆಳ್ಳಿ ದರ ಹೀಗಿದೆ; ಬೆಂಗಳೂರು- 67,000 ರೂ, ಮೈಸೂರು- 67,000 ರೂ., ಮಂಗಳೂರು- 67,000 ರೂ., ಮುಂಬೈ- 61,200 ರೂ, ಚೆನ್ನೈ- 67,000 ರೂ, ದೆಹಲಿ- 61,200 ರೂ, ಹೈದರಾಬಾದ್- 67,000 ರೂ, ಕೊಲ್ಕತ್ತಾ- 61,200 ರೂ. ಆಗಿದೆ.
ಇನ್ನಷ್ಟು ವಾಣಿಜ್ಯ ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ